Homeಫ್ಯಾಕ್ಟ್‌ಚೆಕ್ಫ್ಯಾಕ್ಟ್ ಚೆಕ್: ಕೇರಳದಲ್ಲಿ ಹಿಂದೂ ದೇವಾಲಯ ನಿಯಂತ್ರಿಸುವ ಅಧಿಕಾರ ಅನ್ಯಧರ್ಮಿಯರಿಗೆ ಎಂಬುದು ಸುಳ್ಳು..

ಫ್ಯಾಕ್ಟ್ ಚೆಕ್: ಕೇರಳದಲ್ಲಿ ಹಿಂದೂ ದೇವಾಲಯ ನಿಯಂತ್ರಿಸುವ ಅಧಿಕಾರ ಅನ್ಯಧರ್ಮಿಯರಿಗೆ ಎಂಬುದು ಸುಳ್ಳು..

ಕೇರಳ ಸರ್ಕಾರವು ಹೊಸ ಕಾನೂನನ್ನು ತಂದಿದ್ದು, ಅದರಂತೆ ಹಿಂದೂ ದೇವಾಲಯಗಳನ್ನು ಮುಸ್ಲಿಮರು ಹಾಗೂ ಕ್ರಿಸ್ಚಿಯನ್ನರು ನಿಯಂತ್ರಿಸಬಹುದು, ಮಂದಿರದ ಮುಖ್ಯಸ್ಥರಾಗಿ ಮುಸ್ಲಿಮರು ಅಥವಾ ಕ್ರಿಸ್ಚಿಯನ್ನರು ಕೂಡಾ ಇರಬಹುದು ಎಂಬ ಬರಹವಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

- Advertisement -
- Advertisement -

ಹಿಂದೂ ದೇವಾಲಯಗಳನ್ನು ಮುಸ್ಲಿಮರು ಹಾಗೂ ಕ್ರೈಸ್ತರು ಕೂಡ ನಿಯಂತ್ರಿಸಬಹುದಾದ ಹೊಸ ಕಾನೂನನ್ನು ಕೇರಳ ಸರ್ಕಾರ ತಂದಿದೆ ಎಂಬ ಹೇಳಿಕೆಯೊಂದಿಗಿರುವ ಚಿತ್ರವೊಂದು ವೈರಲ್‌ ಆಗಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕೇರಳ ದೇವಸ್ವಂ ನೇಮಕಾತಿ ಮಂಡಳಿಯ ಅಧ್ಯಕ್ಷ ರಾಜಗೋಪಾಲನ್ ನಾಯರ್ ಇದನ್ನು ಅಲ್ಲಗೆಳೆದು, ದೇವಾಲಯದ ನಿರ್ವಹಣೆ ಸೇರಿದಂತೆ ಎಲ್ಲಾ ನೌಕರರು ಹಿಂದೂ ಧರ್ಮಕ್ಕೆ ಸೇರಿದವರಾಗಿರಬೇಕು ಎಂಬ ಕಾನೂನು ಇದೆ ಎಂದು ಸ್ಪಷ್ಟ ಪಡಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದೇನು?

“ಕೇರಳ ಸರ್ಕಾರವು ಹೊಸ ಕಾನೂನನ್ನು ತಂದಿದ್ದು, ಅದರಂತೆ ಹಿಂದೂ ದೇವಾಲಯಗಳನ್ನು ಮುಸ್ಲಿಮರು ಹಾಗೂ ಕ್ರಿಸ್ಚಿಯನ್ನರು ನಿಯಂತ್ರಿಸಬಹುದು, ಮಂದಿರದ ಮುಖ್ಯಸ್ಥರಾಗಿ ಮುಸ್ಲಿಮರು ಅಥವಾ ಕ್ರಿಸ್ಚಿಯನ್ನರು ಕೂಡಾ ಇರಬಹುದು” ಎಂಬ ಬರಹವಿರುವ ಚಿತ್ರಗಳು ಹರಿದಾಡುತ್ತಿದೆ.

ಫ್ಯಾಕ್ಟ್ ಚೆಕ್:

ಮೊದಲನೆಯದಾಗಿ ವೈರಲ್ ಸಂದೇಶದಲ್ಲಿ ಹರಿದಾಡುತ್ತಿರುವಂತೆ ಕೇರಳ ಸರ್ಕಾರ ಇತ್ತೀಚೆಗೆ ದೇವಾಲಯ ನಿರ್ವಹಣೆಗೆ ಸಂಬಂಧಿಸಿದ ಯಾವುದೇ ಆದೇಶಗಳನ್ನು ಮಾಡಿಲ್ಲ.

ವೈರಲ್‌ ಪೋಸ್ಟ್‌ ಬಗ್ಗೆ ಪ್ರತಿಕ್ರಿಸಿರುವ ದೇವಸ್ವಂ ನೇಮಕಾತಿ ಮಂಡಳಿಯ ಅಧ್ಯಕ್ಷ ರಾಜಗೋಪಾಲನ್ ನಾಯರ್ “ಕೇರಳದ ದೇವಾಲಯಗಳನ್ನು ನಿಯಂತ್ರಿಸುವ ಮೂರು ಕಾನೂನುಗಳಿವೆ. ಈ ಎಲ್ಲಾ ಕೆಲಸ/ಕಾರ್ಯಗಳಲ್ಲಿ ನೌಕರರು ಮತ್ತು ನಿರ್ವಹಣಾಕಾರರು ಹಿಂದೂ ಧರ್ಮದವರೇ ಇರಬೇಕು ಎಂಬ ನಿರ್ದಿಷ್ಟ ನಿಬಂಧನೆ ಇದೆ.” ತಿಳಿಸಿದ್ದಾರೆ.

ಕೇರಳ ರಾಜ್ಯದ ದೇವಾಲಯಗಳನ್ನು ಯಾರು ನಿಯಂತ್ರಿಸುತ್ತಾರೆ ಎಂಬುದಕ್ಕೆ ನಿರ್ದಿಷ್ಟ ನಿಬಂಧನೆಗಳಿದ್ದು, ಅದು ಹೀಗಿದೆ:

‘ಕೇರಳದ ದೇವಸ್ವಂ ಮಂಡಳಿಗಳು ಮತ್ತು ದೇವಾಲಯಗಳ ಆಡಳಿತ’ ಎಂಬ ಶೀರ್ಷಿಕೆಯ ಶೋಧಗಂಗದಲ್ಲಿ ಪ್ರಕಟವಾದ ಅಧ್ಯಾಯದ ಪ್ರಕಾರ, ಎಲ್ಲಾ ದೇವಾಲಯಗಳನ್ನು ಸಾಮಾಜಿಕ-ಧಾರ್ಮಿಕ ಟ್ರಸ್ಟ್‌ಗಳಾದ ಸರ್ಕಾರಿ ನಿಯಂತ್ರಿತ ದೇವಸ್ವಂಗಳು ಅಥವಾ ಖಾಸಗಿ ಸಂಸ್ಥೆಗಳು / ಕುಟುಂಬಗಳು ನಿರ್ವಹಿಸುತ್ತವೆ. ಅವುಗಳ ಸದಸ್ಯರು ಹಿಂದೂಗಳೇ ಆಗಿರುತ್ತಾರೆ. ಕೇರಳದಲ್ಲಿ ಐದು ವಿಭಿನ್ನ ದೇವಸ್ವಂ ಮಂಡಳಿಗಳಿವೆ. ಎಲ್ಲಾ ಐದು ದೇವಸ್ವಂ ಮಂಡಳಿಗಳು ಹಿಂದೂ ಸದಸ್ಯರನ್ನು ಹೊಂದಿವೆ.

ದೇವಾಲಯ ನಿರ್ವಹಣಾ ಆದೇಶಕ್ಕೆ ಸಂಬಂಧಿಸಿದಂತೆ ಕೇರಳ ಸರ್ಕಾರ ಇತ್ತೀಚೆಗೆ ಹೊರಡಿಸಿದ ಆದೇಶದ ಯಾವುದೇ ವರದಿಗಳು ದೊರೆಯದಿದ್ದರೂ, 2018ರಲ್ಲಿ ದಿ ಹಿಂದೂ ಪತ್ರಿಕೆ ವರದಿ ಮಾಡಿದ್ದ ಲೇಖನದಲ್ಲಿ ದೇವಸ್ವಂ ಮಂಡಳಿಯ ಮುಖ್ಯಸ್ಥರು ಹಿಂದೂಗಳೆ ಆಗಿರಬೇಕು ಎನ್ನುವುದು ಸ್ಪಷ್ಟವಾಗಿ ಹೇಳಿದೆ.

ದಿ ಹಿಂದೂ ಲೇಖನದ ಪ್ರಕಾರ, 1950 ರ ತಿರುವಾಂಕೂರು-ಕೊಚ್ಚಿನ್ ಹಿಂದೂ ಧಾರ್ಮಿಕ ಸಂಸ್ಥೆಗಳ ಕಾಯ್ದೆ XV (ಟಿಸಿಆರ್ಐ) ಯಡಿಯಲ್ಲಿ ರಚಿಸಲಾದ ಸ್ವಾಯತ್ತ ಸಂಸ್ಥೆಯಾದ ತಿರುವಾಂಕೂರು ದೇವಸ್ವಂ ಮಂಡಳಿ ಮತ್ತು ಕೊಚ್ಚಿನ್ ದೇವಸ್ವಂ ಮಂಡಳಿಗಳಿಗೆ ಆಯುಕ್ತರನ್ನಾಗಿ ಹಿಂದೂಗಳನ್ನು ಮಾತ್ರ ನೇಮಕ ಮಾಡಲಿದೆ ಎಂದು ಕೇರಳ ಸರ್ಕಾರ ಕೇರಳ ಹೈಕೋರ್ಟ್‌ಗೆ ತಿಳಿಸಿದೆ.

ತಿರುವಾಂಕೂರು-ಕೊಚ್ಚಿನ್ ಹಿಂದೂ ಧಾರ್ಮಿಕ ಸಂಸ್ಥೆಗಳ ಕಾಯ್ದೆ 1950 ಕ್ಕೆ ತಿದ್ದುಪಡಿ ಮೂಲಕ ಹಿಂದೂಯೇತರರನ್ನು ದೇವಸ್ವಂ ಆಯುಕ್ತರನ್ನಾಗಿ ನೇಮಕ ಮಾಡಲು ಕೇರಳ ಸರ್ಕಾರ ಅವಕಾಶ ಮಾಡಿಕೊಟ್ಟಿದೆ ಎಂದು ಆರೋಪಿಸಿ ಬಿಜೆಪಿ ಮುಖಂಡ ಪಿ.ಎಸ್.ಶ್ರೀಧರನ್ ಪಿಳ್ಳೈ ಎಂಬವರು 2018ರಲ್ಲಿ ಸಲ್ಲಿಸಿದ ರಿಟ್ ಅನ್ನು ನ್ಯಾಯಾಲಯವು ಆಲಿಸಿತ್ತು, ಆಗ ಕೇರಳ ಸರ್ಕಾರ ಈ ಬಗ್ಗೆ ಉತ್ತರಿಸುತ್ತಾ ಮೇಲಿನಂತೆ ಹೇಳಿದೆ.

2018ರಲ್ಲಿ ಕೇರಳ ಸರ್ಕಾರ ನೀಡಿದ ತೀರ್ಪಿನ ಪ್ರತಿ

2018 ರ ವಿವಾದಕ್ಕೆ ಸಂಬಂಧಿಸಿದಂತೆ ಪತ್ರಿಕ್ರಿಯಿಸಿದ್ದ ರಾಜಗೋಪಾಲನ್, “ತಿದ್ದುಪಡಿಯಲ್ಲಿ ಒಂದು ಗೊಂದಲವಿದೆ. ಮಂಡಳಿಗಳ ನೇಮಕಕ್ಕೆ ಸಂಬಂಧಿಸಿದಂತೆ ಕೆಲವರು ಉದ್ದೇಶಪೂರ್ವಕವಾಗಿ ಈ ಗೊಂದಲವನ್ನು ಸೃಷ್ಟಿಸಿದ್ದರು. ಆದರೆ, ಮಂಡಳಿಗೆ ನೇಮಕವಾಗುವ ಆಯುಕ್ತರು ಸೇರಿದಂತೆ ಎಲ್ಲಾ ಉದ್ಯೋಗಿಗಳು ಹಿಂದೂಗಳಾಗಿರಬೇಕು ಎಂದು ಆಯುಕ್ತರನ್ನು ನೇಮಕ ಮಾಡಲು ಮಾಡಿದ ನಿಬಂಧನೆಗಳಲ್ಲಿ ಮಂಡಳಿಯು ನಿರ್ದಿಷ್ಟವಾಗಿ ಹೇಳಿದೆ. ಆಯುಕ್ತರಷ್ಟೇ ಅಲ್ಲದೆ ಎಲ್ಲಾ ಉದ್ಯೋಗಿಗಳೂ ಹಿಂದೂಗಳೇ ಆಗಿರಲಿದ್ದಾರೆ” ಎಂದು ಅವರು ಹೇಳಿದ್ದರು.

ವೈರಲ್‌ ಆಗುತ್ತಿರುವ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾಗುತ್ತಿರುವ ಹೇಳಿಕೆ ಸುಳ್ಳಾಗಿದ್ದು, ಕೇರಳದ ಎಲ್ಲಾ ದೇವಾಲಯಗಳನ್ನು ಹಿಂದೂಗಳು ಮಾತ್ರ ನಿಯಂತ್ರಿಸುತ್ತಾರೆ. ಪ್ರಸ್ತುತ ಆಯುಕ್ತರು ಕೂಡ ಹಿಂದೂ ಎಂದು ದೇವಸ್ವಂ ಮಂಡಳಿಗೆ ಸಂಬಂಧಿಸಿದ ಮೂಲಗಳು ತಿಳಿಸಿವೆ.

ಕಾನೂನು ಏನು ಹೇಳುತ್ತದೆ?

ತಿರುವಾಂಕೂರು-ಕೊಚ್ಚಿನ್ ಹಿಂದೂ ಧಾರ್ಮಿಕ ಸಂಸ್ಥೆಗಳ ಕಾಯ್ದೆ 1950 ರ ಸೆಕ್ಷನ್ 29 (1), ದೇವಸ್ವಂ ಇಲಾಖೆಯು ಹಿಂದೂ ಅಧಿಕಾರಿಗಳನ್ನು ಒಳಗೊಂಡಿರಬೇಕು ಎಂದು ಹೇಳಿದೆ.

“1097 ರಲ್ಲಿ ರಚಿಸಲಾದ ದೇವಸ್ವಂ ಇಲಾಖೆಯು ಮುಂದುವರಿಯುತ್ತದೆ ಮತ್ತು ಕಾಲಕಾಲಕ್ಕೆ ಮಂಡಳಿಯು ನಿರ್ಧರಿಸುವಂತಹ ಹಿಂದೂ ಅಧಿಕಾರಿಗಳು ಮತ್ತು ಇತರ ಸೇವಕರನ್ನು ಒಳಗೊಂಡಿರುತ್ತದೆ” ಎಂದು ಅದು ಹೇಳಿದೆ.

ಇದಲ್ಲದೆ, ಮಂಡಳಿಯ ನಾಮನಿರ್ದೇಶನ ಅರ್ಹತೆಗೆ ಸಂಬಂಧಿಸಿದಂತೆ “ಒಬ್ಬ ವ್ಯಕ್ತಿಯು ತಿರುವಾಂಕೂರು-ಕೊಚ್ಚಿನ್ ರಾಜ್ಯದ ಖಾಯಂ ನಿವಾಸಿಯಾಗಿರಬೇಕು. ಹಿಂದೂ ಧರ್ಮವನ್ನು ಪ್ರತಿಪಾದಿಸದ ಹೊರತು ಮಂಡಳಿಯ ಸದಸ್ಯನಾಗಿ ನಾಮನಿರ್ದೇಶನ ಅಥವಾ ಚುನಾವಣೆಗೆ ಅರ್ಹನಾಗಿರುವುದಿಲ್ಲ.” ಎಂದು ಕಾಯಿದೆಯ ಸೆಕ್ಷನ್ 6 ರಲ್ಲಿ ಹೇಳಲಾಗಿದೆ.

ಹಾಗಾಗಿ ಸ್ಪಷ್ಟವಾಗಿ ಹೇಳುವುದಾದರೆ, ಕೇರಳ ಸರ್ಕಾರವು ಹಿಂದೂ ಅಲ್ಲದವರಿಗೆ ರಾಜ್ಯದ ದೇವಾಲಯಗಳನ್ನು ನಿಯಂತ್ರಿಸಲು ಅನುವು ಮಾಡಿಕೊಡುವ ಹೊಸ ಕಾನೂನನ್ನು ಜಾರಿಗೆ ತಂದಿದೆ ಎಂಬುವುದು ಸುಳ್ಳಾಗಿದ್ದು, ಆ ರೀತಿಯ ಯಾವುದೇ ಕಾನೂನುಗಳನ್ನು ಕೇರಳ ಸರ್ಕಾರ ರೂಪಿಸಿಲ್ಲ.


ಫ್ಯಾಕ್ಟ್‌ಚೆಕ್: ಈ ಆಕ್ರೋಶ ಭರಿತ ಜನರ ಗುಂಪು ಕೇರಳದ ಮುಸ್ಲಿಮರದ್ದೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ನೀವು ಮುಂದೆ ಬರಲು ಸಿದ್ಧರಿದ್ದೀರಾ, ಅಥವಾ ಟ್ವೀಟ್ ಮಾಡುತ್ತಲೇ ಇರುತ್ತೀರಾ?’; ಮೋಹನ್ ದಾಸ್ ಪೈಗೆ ರಾಮಲಿಂಗಾರೆಡ್ಡಿ ಓಪನ್ ಚಾಲೆಂಜ್..!

ಬೆಂಗಳೂರಿನಲ್ಲಿ ಬಿಎಂಟಿಸಿ (BMTC) ಬಸ್‌ಗಳ ಕೊರತೆಯನ್ನು ಎತ್ತಿ, ಖಾಸಗಿ ಕಂಪನಿಗಳಿಗೆ ನಗರ ಬಸ್ ಸೇವೆಗೆ ಅವಕಾಶ ನೀಡಬೇಕು ಎಂದು ಸಲಹೆ ನೀಡಿದ್ದ, ಮೋಹನ್ ದಾಸ್ ಪೈ ಹೇಳಿಕೆಗೆ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ...

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....