Homeನಿಜವೋ ಸುಳ್ಳೋFact check: ಭಾವುಕರಾಗಿ ಅಳುವ 93ರ ಈ ವೃದ್ದ ಕೊರೊನಾದಿಂದ ಚೇತರಿಸಿದ ವ್ಯಕ್ತಿಯೇ?

Fact check: ಭಾವುಕರಾಗಿ ಅಳುವ 93ರ ಈ ವೃದ್ದ ಕೊರೊನಾದಿಂದ ಚೇತರಿಸಿದ ವ್ಯಕ್ತಿಯೇ?

- Advertisement -
- Advertisement -

ತನ್ನ ಪ್ರೇಯಸಿಗೆ ಬರೆದ ಹಳೆಯ ಪ್ರೇಮ ಪತ್ರ ಓದುತ್ತಾ ದುಃಖಿಸುವ ವೃದ್ದರೊಬ್ಬರ ಫೋಟೋವೊಂದನ್ನು ಕೊರೊನಾ ಸೋಕಿನಿಂದ ಚೇತರಿಕೆ ಹೊಂದಿದ ಇಟಲಿಯ ವ್ಯಕ್ತಿ ಎಂದು ಪ್ರತಿಪಾದಿಸಿ ಸಾಮಾಜಿಕ ಜಾಲತಾಣದಲ್ಲಿ ಹರಡಲಾಗಿದೆ.

ಈ ಚಿತ್ರ ಐದು ವರ್ಷದ ಹಿಂದಿನ ಚಿತ್ರವಾಗಿದ್ದು, ವಾಸ್ತವದಲ್ಲಿ ಆ ವ್ಯಕ್ತಿ ಇಟಲಿಯವರಲ್ಲ. ಚಿತ್ರದಲ್ಲಿ, ಕೊಲೊರಾಡೋ ಮೂಲದ ಬಿಲ್ ಮೂರ್‌ ಎಂಬ ಎರಡನೇ ಮಹಾಯುದ್ಧದಲ್ಲಿ ಭಾಗವಹಿಸಿದ ಮಾಜಿ ಸೈನಿಕ ತಾನು ಮದುವೆಯಾಗಲು ನಿಶ್ಚಿತ ಮಾಡಿಕೊಂಡಿದ್ದ ಪ್ರೇಯಸಿಗೆ ಬರೆದ ಪತ್ರವನ್ನು ಓದುತ್ತಾ ಭಾವುಕನಾಗುವುದು ಕಾಣಬಹುದಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲಾದ ಸಂದೇಶದಲ್ಲಿ, “93 ವರ್ಷದ ವ್ಯಕ್ತಿಯಲ್ಲಿ ವೆಂಟಿಲೇಟರ್ ಬಿಲ್ಲು ಕಟ್ಟುವಂತೆ ಹೇಳಿದಾಗ, ಇದುವರೆಗೆ ಯಾವುದೆ ಬಿಲ್ಲು ಪಡೆಯದೆ ಉಚಿತವಾಗಿ ಉಸಿರಾಡಿಸಿದ ದೇವರ ಅನುಗ್ರಹವನ್ನು ನೆನೆದು ಭಾವುಕನಾಗುತ್ತಾನೆ” ಎಂದು ಬಿತ್ತರಿಸಲಾಗಿದೆ.

ನಾನು ಬಿಲ್ಲು ಕಟ್ಟುತ್ತೇನೆ. ಹಣದ ಬಗ್ಗೆ ಚಿಂತೆಯಿಲ್ಲ. ಆದರೆ 93 ವರ್ಷಗಳ ಕಾಲ ಯಾವುದೇ ಹಣವಿಲ್ಲದೇ ನನಗೆ ಉಸಿರಾಡಲು ಅವಕಾಶ ಮಾಡಿಕೊಟ್ಟ ದೇವರ ಋಣವನ್ನು ಹೇಗೆ ತೀರಿಸಲಿ ಎಂದು ಭಾವುಕರಾಗಿದ್ದಾರೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.

? After the 93 year old man in Italy got better in the hospital, he was told to pay for the ventilator for one day, and…

Posted by Nermeen Mohamed Ezzat on Thursday, April 2, 2020

 

ಅಲ್ಲದೇ ಹಲವಾರು ಜನರು ಇದನ್ನು ಹೀಗೆಯೆ ಹಂಚಿಕೊಂಡಿದ್ದಾರೆ. ನೋಡಲು ಇಲ್ಲಿ ಕ್ಲಿಕ್ ಮಾಡಿ.

ಮೂರ್ ಅವರ ಚಿತ್ರ, ಇದೇ ರೀತಿಯ ನಿರೂಪಣೆಯೊಂದಿಗೆ ಇನ್‌ಸ್ಟಾಗ್ರಾಮ್ ಶೀರ್ಷಿಕೆಯಂತೆ ಕಾಣುವ ಸ್ಕ್ರೀನ್‌ಶಾಟ್ ಒಂದು ಬಿಜೆಪಿಯ ಮುಖಂಡ ಮತ್ತು ನಟ ಪರೇಶ್ ರಾವಲ್ ಅವರು ಟ್ವೀಟ್ ಮಾಡಿದ್ದಾರೆ. ತನ್ನ ಟ್ವೀಟ್‌ನಲ್ಲಿ ಅವರು, “ಮಾನವ ಜನಾಂಗವಾದ ನಾವು ಅರ್ಥಮಾಡಿಕೊಳ್ಳುತ್ತಿದ್ದೇವೆ ಎಂದು ಭಾವಿಸುತ್ತೇನೆ” ಎಂದು ಬರೆದಿದ್ದರು.

ಅಲ್ಲದೆ ಇನ್ನೂ ಕೆಲವರು ಇದನ್ನು ಟ್ವೀಟ್ ಮಾಡಿದ್ದರು.

 

ಇಟಲಿಯಲ್ಲಿ ಎರಡು ಕೊರೊನಾ ಪ್ರಕರಣಗಳು ವರದಿಯಾದ ನಂತರ, ಇಟಲಿಯೂ ಜನವರಿ 31 ರಿಂದ ಕೊರೊನಾ ತುರ್ತು ಪರಿಸ್ಥಿತಿಯನ್ನು ಘೋಷಿಸಿತು. ಇದುವರೆಗೆ ಇಟಲಿಯಲ್ಲಿ ಕೊರೊನಾ ಸೋಂಕಿನಿಂದ 19,468 ಸಾವುಗಳು ಮತ್ತು 32,534 ಚೇತರಿಕೆಯಾಗಿದ್ದಾರೆಂದು ವರದಿಯಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಚಿತ್ರವೂ ವೈರಲಾಗುತ್ತಿರುವುದರಿವಂದ “ಭೂಮ್ ಲೈವ್” ಚಿತ್ರದ ಬಗ್ಗೆ ಫ್ಯಾಕ್ಟ್ ಚೆಕ್ ನಡೆಸಿ, ಚಿತ್ರವು ಐದು ವರ್ಷ ಹಳೆಯದಾಗಿದೆ ಮತ್ತು ಇದು ಇಟಲಿಯಲ್ಲಿ ನಡೆದ ಘಟನೆಯಲ್ಲ ಎಂದು ಕಂಡುಕೊಂಡಿದೆ.

ಇದರ ಮೂಲ ಚಿತ್ರವನ್ನು ಮಾರ್ಚ್ 2015 ರಿಂದ ಎಬಿಸಿ ನ್ಯೂಸ್ ಎಂಬ ಸುದ್ದಿಜಾಲದ ವರದಿಯಲ್ಲಿ ಅಪ್‌ಲೋಡ್ ಮಾಡಲಾಗಿತ್ತು. ಚಿತ್ರದಲ್ಲಿರವುದು ನಾನ್‌ಜೆಜೆನೇರಿಯನ್ ಕೊಲೊರಾಡೋ ಮೂಲದ ಎರಡನೇ ಮಹಾಯುದ್ಧದ ಮಾಜಿಸೈನಿಕ ಬಿಲ್ ಮೂರ್. ಯುದ್ಧದ ಸಮಯದಲ್ಲಿ ತನ್ನ ಪ್ರೇಯಸಿಗೆ ಅವರು ಬರೆದ ಪತ್ರ ಕಂಡುಬಂದಿದೆ ಎಂದು ತಿಳಿಸಿದ ನಂತರ ಅವರು ಭಾವುಕರಾಗಿದ್ದರು.

“1944 ರಲ್ಲಿ 20 ವರ್ಷ ಬಿಲ್ ಮೂರ್ ಅವರು ಬರ್ನಾಡಿಯನ್ ಎಂಬ ಯುವತಿಗೆ ಬರೆದ ಪತ್ರವನ್ನು 70 ವರ್ಷಗಳ ನಂತರ ಕಂಡು ಹಿಡಿದು ಓದಿದಾಗ ಮೂರ್ ಭಾವುಕರಗಿದ್ದರು. ವರದಿಯ ವೀಡಿಯೊದಲ್ಲಿ 52 ಸೆಕೆಂಡುಗಳ ನಂತರ ಮೂರ್‌ ಅಂಚೆಚೀಟಿ ಒಡೆಯುವುದನ್ನು ಕಾಣಬಹುದು.

ಇವರಿಗೂ ಕೊರೊನಾದಿಂದ ಗುಣಮುಖರಾದ ರೋಗಿಗೂ ಯಾವುದೇ ಸಂಬಂಧವಿಲ್ಲ. ತಪ್ಪಾಗಿ ಇವರ ಚಿತ್ರವನ್ನು ಬಳಸಿಕೊಳ್ಳಲಾಗಿದೆ ಅಷ್ಟೆ.

ಅಧೀಕೃತ ವರದಿಯಂತೆ ಇಟಲಿಯ ಆರೋಗ್ಯ ರಕ್ಷಣಾ ವ್ಯವಸ್ಥೆಯು ವೆಚ್ಚಗಳನ್ನು ಒಳಗೊಂಡಿದೆ. ರಾಷ್ಟ್ರೀಯ ಆರೋಗ್ಯ ಸೇವೆ (ಎನ್‌ಎಚ್‌ಎಸ್) ಅಡಿಯಲ್ಲಿ ಇಟಲಿಯ ಸಾರ್ವಜನಿಕವಾಗಿ ಧನಸಹಾಯ ಪಡೆದ ಆರೋಗ್ಯ ನೀತಿ ಸಾರ್ವತ್ರಿಕತೆಯನ್ನು ಒಳಗೊಳ್ಳುತ್ತದೆ ಮತ್ತು ಸ್ವಯಂಚಾಲಿತವಾಗಿ ಎಲ್ಲಾ ನಾಗರಿಕರು ಮತ್ತು ಕಾನೂನುಬದ್ಧ ವಿದೇಶಿ ನಿವಾಸಿಗಳು ಈ ವರ್ಗಕ್ಕೆ ಸೇರುತ್ತಾರೆ.

ಮತ್ತೊಂದು ವರದಿಯ ಪ್ರಕಾರ, ಆರೋಗ್ಯ ವ್ಯವಸ್ಥೆಯಲ್ಲಿ ಖಾಸಗಿ ಆರೋಗ್ಯ ವಿಮೆ ಸೀಮಿತ ಪಾತ್ರ ವಹಿಸುತ್ತದೆ. ಇಟಲಿಯಲ್ಲಿ ಖಾಸಗಿ ಆರೋಗ್ಯ ವಿಮೆ ಎರಡು ವಿಧದ ಕಾರ್ಪೊರೇಟ್ ಆಗಿದೆ, ಇದಕ್ಕಾಗಿ ಕಂಪನಿಗಳು ಸ್ವಂತ ಉದ್ಯೋಗಿಗಳನ್ನು ಮತ್ತು ಕೆಲವೊಮ್ಮೆ ಅವರ ಕುಟುಂಬಗಳನ್ನು ಒಳಗೊಳ್ಳುತ್ತವೆ. ಕಾರ್ಪೊರೇಟ್ ಅಲ್ಲದ ವ್ಯಕ್ತಿಗಳು ತಮ್ಮ ಅಥವಾ ತಮ್ಮ ಕುಟುಂಬಗಳಿಗೆ ವಿಮೆಯನ್ನು ಖರೀದಿಸಬಹುದು. ಆದ್ದರಿಂದ ಇಟಲಿಯಲ್ಲಿ ಆರೋಗ್ಯ ಸೇವೆಗಳ ವಿಮೆಯನ್ನು ಪಡೆದ ನಂತರ ರೋಗಿಗಳು ವೈಯಕ್ತಿಕವಾಗಿ ಪಾವತಿಸುವ ಸಾಧ್ಯತೆ ಕಡಿಮೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು ಬಿಸಿಯೂಟ ಯೋಜನೆಯಿಂದ ಹೊರಕ್ಕೆ : ಸಂಸತ್ತಿಗೆ ತಿಳಿಸಿದ ಕೇಂದ್ರ

ಕಳೆದ ಐದು ವರ್ಷಗಳಲ್ಲಿ 84 ಸಾವಿರ ಸರ್ಕಾರಿ ಶಾಲೆಗಳು 'ಪ್ರಧಾನಮಂತ್ರಿ ಪೋಷಣ್ ಯೋಜನೆ'ಯಿಂದ (ಮಧ್ಯಾಹ್ನದ ಬಿಸಿಯೂಟ) ಹೊರ ಬಿದ್ದಿವೆ. 2020-21ರಲ್ಲಿ 11.19 ಲಕ್ಷ ಇದ್ದ ಶಾಲೆಗಳ ಸಂಖ್ಯೆ 2024-25ರಲ್ಲಿ 10.35ಕ್ಕೆ ಕುಸಿದಿದೆ ಎಂದು...

ಭೀಮಾ ಕೋರೆಗಾಂವ್ ಪ್ರಕರಣ: ಗೌತಮ್ ನವಲಖಾಗೆ ಜಾಮೀನಿನ ಮೇಲೆ ದೆಹಲಿಗೆ ತೆರಳಲು ಅನುಮತಿ ನೀಡಿದ ಬಾಂಬೆ ಹೈಕೋರ್ಟ್

ಭೀಮಾ ಕೋರೆಗಾಂವ್ ಯುಎಪಿಎ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರಗಿರುವ ಮಾನವ ಹಕ್ಕುಗಳ ಕಾರ್ಯಕರ್ತ ಗೌತಮ್ ನವಲಖಾ ಅವರಿಗೆ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ನವದೆಹಲಿಯಲ್ಲಿ ವಾಸಿಸಲು ಬಾಂಬೆ ಹೈಕೋರ್ಟ್ ಬುಧವಾರ ಅನುಮತಿ ನೀಡಿದೆ. ಆದಾಗಲೂ, ಮಾನವ...

ಕಾರವಾರ ನೌಕಾ ಪ್ರದೇಶದ ಸುತ್ತಮುತ್ತ ಆತಂಕ ಮೂಡಿಸಿದ ‘ಸೀಗಲ್‌’ ಪಕ್ಷಿ; ಚೀನಾ ನಿರ್ಮಿತ ಜಿಪಿಎಸ್ ಸಾಧನ ಪತ್ತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಕರಾವಳಿ ಪ್ರದೇಶದ ಬಳಿ, ಸೂಕ್ಷ್ಮ ನೌಕಾ ವಲಯದ ಬಳಿ ಚೀನಾ ನಿರ್ಮಿತ ಜಿಪಿಎಸ್ ಟ್ರ್ಯಾಕಿಂಗ್ ಸಾಧನವೊಂದು 'ಸೀಗಲ್' (ಸಮುದ್ರಹಕ್ಕಿ) ಪಕ್ಷಿಗೆ ಅಳವಡಿಸಿರುವುದು ಕಂಡುಬಂದ ನಂತರ ಭದ್ರತಾ ಸಂಸ್ಥೆಗಳು...

ಅಣು ಶಕ್ತಿಯ ಖಾಸಗೀಕರಣ : ‘ಶಾಂತಿ’ ಮಸೂದೆಗೆ ಲೋಕಸಭೆ ಅಸ್ತು

ಭಾರತದ ಅಣು ವಿದ್ಯುತ್ ಕ್ಷೇತ್ರದಲ್ಲಿ ಖಾಸಗಿ ವಲಯದ ಪ್ರವೇಶಕ್ಕೆ ದಾರಿ ಮಾಡಿಕೊಡುವ, 'ಭಾರತದ ಪ್ರಗತಿಗಾಗಿ ಅಣು ಶಕ್ತಿಯ ಸುಸ್ಥಿರ ಉತ್ಪಾದನೆ (ಎಸ್‌ಎಚ್‌ಎಎನ್‌ಟಿಐ– ಶಾಂತಿ ಮಸೂದೆ) ಮಸೂದೆಯನ್ನು ಲೋಕಸಭೆ ಬುಧವಾರ (ಡಿ.17) ಅಂಗೀಕರಿಸಿತು. ವಿಪಕ್ಷಗಳ ಸದಸ್ಯರು...

ಮಾದಕ ದ್ರವ್ಯ ಸೇವನೆ, ಲೈಂಗಿಕ ಕಿರುಕುಳಕ್ಕೆ 3 ಲಕ್ಷ ರೂ. ದಂಡ ವಸೂಲಿ: ಬೆಂಗಳೂರಿನ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ​​ವಿರುದ್ಧ ಪ್ರಕರಣ ದಾಖಲು

ಬೆಂಗಳೂರು: ಪಶ್ಚಿಮ ಬೆಂಗಳೂರಿನ ದೊಡ್ಡಬೆಲೆ ಬಳಿಯ ವಸತಿ ಸಂಕೀರ್ಣವೊಂದರ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ವಿರುದ್ಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿರುವ ನಿವಾಸಿಗಳಿಂದ ದಂಡ ವಸೂಲಿ ಮಾಡಿದ ಮತ್ತು ಅಪರಾಧಗಳನ್ನು ಮುಚ್ಚಿಟ್ಟ ಆರೋಪದ ಮೇಲೆ ಕುಂಬಳಗೋಡು...

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...