PUBG ನಿಷೇಧವು ಭಾರತದ ಆರ್ಥಿಕತೆಯನ್ನು ಇನ್ನಷ್ಟು ಹಾಳು ಮಾಡುತ್ತದೆ ಎಂದು ಅರ್ಥಶಾಸ್ತ್ರಜ್ಞ ಮತ್ತು ನೊಬೆಲ್ ಪ್ರಶಸ್ತಿ ವಿಜೇತ ಅಮರ್ಥ್ಯ ಸೇನ್ ಹೇಳಿದ್ದಾರೆ ಎಂದು ಹಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಕೆಲ ಪೋಸ್ಟ್‌ಗಳನ್ನು ಹಂಚಿಕೊಂಡಿದ್ದಾರೆ.
ಭಾರತದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯವು PUBG ಸೇರಿದಂತೆ 118 ಚೀನೀ ಮೊಬೈಲ್ ಆ್ಯಪ್‌ಗಳನ್ನು ನಿಷೇಧಿಸಿದ ಹಿನ್ನೆಲೆಯಲ್ಲಿ ಈ ಸಂದೇಶವು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
“ನೊಬೆಲ್ ವಿಜೇತ ಅರ್ಥಶಾಸ್ತ್ರಜ್ಞ ಅಮರ್ಥ್ಯ ಸೇನ್: #PUBG ಅನ್ನು ನಿಷೇಧಿಸುವುದರಿಂದ ಭಾರತೀಯ ಆರ್ಥಿಕತೆಯು ಹೆಚ್ಚು ಹಾಳಾಗುತ್ತದೆ” ಎಂಬ ಹೇಳಿಕೆಯಿರುವ ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಗುತ್ತಿದೆ.
ತ್ರಿಪುರದ ಮಾಜಿ ಗವರ್ನರ್ ತಥಾಗತ ರಾಯ್ ಅವರು ಹೀಗೆ ಹೇಳಿದವರಿಗೆ ಚಪ್ಪಲಿಯಿಂದ ಹೊಡೆಯಬೇಕು ಎಂಬರ್ಥದ ಫೋಟೊ ಇರುವ ಪೋಸ್ಟ್ ಅನ್ನು ಷೇರ್ ಮಾಡಿದ್ದಾರೆ.
Appropriate! https://t.co/oLQnMCUMHK
— Tathagata Roy (@tathagata2) September 6, 2020
ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ಇದೇ ಪೋಸ್ಟನ್ನು ಹಂಚಿಕೊಂಡಿದ್ದಾರೆ.
Nobel winner economist amartya sen:banning of #PUBG will more ruin the indian economy.
Me: pic.twitter.com/NPEB6Bsg7c— ???JAI SHREE RAAM??? team AIVA (@deshmata) September 6, 2020
ರಚ್ನಾ ಶ್ರೀವಾಸ್ತವ್ ಎಂಬುವವರು ಹಂಚಿಕೊಂಡಿರುವ ಈ ಪೋಸ್ಟ್ ಸುಳ್ಳು ಹರಡುತ್ತದೆ ಎಂಬ ಕಾರಣಕ್ಕೆ ಅದನ್ನು ಫೇಸ್‌ಬುಕ್ ನಿರ್ಬಂಧಿಸಿದೆ.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಜಿಡಿಪಿ ಪಾತಾಳದಲ್ಲಿದ್ದರೂ ಸುಳ್ಳು ಹೇಳುತ್ತಿರುವ ಕರ್ನಾಟಕ ಬಿಜೆಪಿ..
ಫ್ಯಾಕ್ಟ್ ಚೆಕ್:
“Amartya Sen PUBG” ಎಂಬ ಕೀವರ್ಡ್ ಹುಡುಕಾಡವು ನಮ್ಮನ್ನು ಭಾರತ್ ನ್ಯೂಸ್ ಎಂಬ ಬ್ಲಾಗ್‌ಗೆ ಕರೆದೊಯ್ಯಿತು. ಅಲ್ಲಿ ಇದರ ಕುರಿತ ಲೇಖನವೊಂದು ಸೆಪ್ಟಂಬರ್ 4 ರಂದು ಪ್ರಕಟವಾಗಿದೆ ಎಂದು ದಿ ಕ್ವಿಂಟ್ ವರದಿ ಮಾಡಿದೆ.
“PUBGಯನ್ನು ನಿಷೇಧಗೊಳಿಸುವ ಮೂಲಕ ಮೋದಿ ದೇಶದ ಆರ್ಥಿಕತೆಯನ್ನು ಮತ್ತಷ್ಟು ಹಿಂದಕ್ಕೆ ತಳ್ಳಿದ್ದಾರೆ: ಅಮರ್ತ್ಯ ಸೇನ್” ಎಂಬ ಶೀರ್ಷಿಕೆಯಡಿಯಲ್ಲಿ ಈ ಲೇಖನವು ಪ್ರಕಟವಾಗಿದೆ. ಅಮರ್ತ್ಯ ಸೇನ್ ಅಂತಹ ಹೇಳಿಕೆ ನೀಡಿದ್ದಾರೆ ಎಂದು ಬ್ಲಾಗ್‌ಪೋಸ್ಟ್ ಹೇಳಿಕೊಂಡಿದೆ. ಭಾರತದಲ್ಲಿ ಚೀನಾದ ಆ್ಯಪ್‌ಗಳನ್ನು ನಿಷೇಧಿಸಿರುವುದನ್ನು ಅಮರ್ಥ್ಯ ಸೇನ್ ಹೇಗೆ ಖಂಡಿಸಿದ್ದಾರೆ ಎಂಬುದರ ಕುರಿತು ಲೇಖನವು ಹೇಳುತ್ತದೆ. ಆದರೆ ಈ ಲೇಖನವನ್ನು ಅಲ್ಲಿಂದ ತೆಗೆದುಹಾಕಲಾಗಿದೆ ಎಂಬುದು ಗಮನಾರ್ಹ
ಈ ಮೇಲೆ ಬಳಸಲಾದ ಕೀವರ್ಡ್‌ಗಳನ್ನು ಬಳಸಿ, ಮತ್ತಷ್ಟು ಹುಡುಕಾಟ ನಡೆಸಿದಾಗ, ಅವರು ಇಂತಹ ಹೇಳಿಕೆ ನೀಡಿರುವ ಯಾವುದೇ ಅಧಿಕೃತ ಮಾಹಿತಿ ದೊರೆತಿಲ್ಲ.
ಇದಲ್ಲದೆ, ಅಮರ್ಥ್ಯ ಸೇನ್ ಅವರ ಮಗಳು, ಅಂಟಾರಾ ದೇವ್ ಸೇನ್, “ನನ್ನ ತಂದೆ ಇಂತಹ ಯಾವುದೇ ಹೇಳಿಕೆ ನೀಡಿಲ್ಲ. ಇದು ಸಂಪೂರ್ಣ ಸುಳ್ಳು ಸೃಷ್ಟಿಯಾಗಿದೆ” ಎಂದು ತಿಳಿಸಿದ್ದಾರೆ.
ಹಾಗಾಗಿ, “ಭಾರತೀಯ ಆರ್ಥಿಕತೆಯ ಮೇಲೆ PUBG ನಿಷೇಧದ ಪರಿಣಾಮ ಭೀರುತ್ತದೆ” ಎಂಬ ಯಾವುದೇ ಹೇಳಿಕೆಯನ್ನು ಅಮರ್ಥ್ಯ ಸೇನ್ ನೀಡಿಲ್ಲ. ಇದು ಸಂಪೂರ್ಣ ಸುಳ್ಳು ಎಂದು ತಿಳಿದುಬಂದಿದೆ. ಆದರೆ ಇದನ್ನು ಪರಿಶೀಲಿಸದೆ ಹಲವರು ಹಂಚಿಕೊಂಡು ಗೊಂದಲ ಸೃಷ್ಟಿಸಿದ್ದಾರೆ.
ಇದನ್ನೂ ಓದಿ: ಕೇರಳದ ಹಿಂದೂ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ? ಇಲ್ಲಿದೆ ಫ್ಯಾಕ್ಟ್‌ಚೆಕ್ ವಿವರ


