Homeಮುಖಪುಟದೇಶದ್ರೋಹ ಎನ್ನಲಾಗುವುದಿಲ್ಲ: ಯುಎಪಿಎ ಅಡಿ ಬಂಧಿತರಾಗಿದ್ದ ಕೇರಳದ ಯುವಕರಿಗೆ ಜಾಮೀನು

ದೇಶದ್ರೋಹ ಎನ್ನಲಾಗುವುದಿಲ್ಲ: ಯುಎಪಿಎ ಅಡಿ ಬಂಧಿತರಾಗಿದ್ದ ಕೇರಳದ ಯುವಕರಿಗೆ ಜಾಮೀನು

ಸರ್ಕಾರದ ನೀತಿಗಳನ್ನು ತಪ್ಪು ಕಾರಣಕ್ಕಾಗಿ ವಿರೋಧಿಸಿದರೂ ಅದನ್ನು ದೇಶದ್ರೋಹ ಎಂದು ಹೇಳಲಾಗುವುದಿಲ್ಲ. ಪ್ರತಿಭಟಿಸುವ ಹಕ್ಕನ್ನು ಸಂವಿಧಾನವು ನೀಡಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

- Advertisement -
ಬಂಧಿತರ ವಿರುದ್ಧದ 12 ರೀತಿಯ ಸಾಕ್ಷ್ಯಗಳನ್ನು ಎನ್‌ಐಎ ನ್ಯಾಯಾಲಯ ಪರಿಶೀಲಿಸಿ, ಆ ಸಾಕ್ಷಿಗಳು ಅವರಿಗೆ ಜಾಮೀನು ನಿರಾಕರಿಸುವಷ್ಟು ಸಾಕಾಗುವುದಿಲ್ಲ ಎಂದು ಅಭಿಪ್ರಾಯಪಟ್ಟಿದೆ. ತಲಾ ಒಂದು ಲಕ್ಷ ರೂ.ಗಳ ಜಾಮೀನು ಬಾಂಡ್‌ ನೀಡುವ ಷರತ್ತುಗಳೊಂದಿಗೆ ಜಾಮೀನು ನೀಡಿದೆ.
ಥ್ವಾಹಾ ಫಾಸಲ್ ಮತ್ತು ಅಲನ್ ಶುಹೈಬ್‌ಗೆ ಕಠಿಣ ಷರತ್ತುಗಳೊಂದಿಗೆ ಜಾಮೀನು ನೀಡಿದ ಎನ್‌ಐಎ ನ್ಯಾಯಾಲಯವು ಪ್ರತಿ ತಿಂಗಳ ಮೊದಲ ಶನಿವಾರ ಆಯಾ ಪೊಲೀಸ್ ಠಾಣೆಗಳಿಗೆ ಹಾಜರಾಗುವಂತೆ, ಅವರ ಪಾಸ್‌ಪೋರ್ಟ್‌ಗಳನ್ನು ಶರಣಾಗಿಸುವಂತೆ ನಿರ್ದೇಶಿಸಿದೆ.

ಇದನ್ನೂ ಓದಿ: “ಹಿಂದಿ ತೆರಿಯಾದು ಪೊಡಾ (ಹಿಂದಿ ಗೊತ್ತಿಲ್ಲ, ಹೋಗೋ)” ಟೀಶರ್ಟ್ ವೈರಲ್;‌ ತಯಾರಿಕರಿಗೆ ಬೆದರಿಕೆ!‌

ಸಾಮಾಜಿಕವಾಗಿ ದಬ್ಬಾಳಿಕೆಗೆ ಒಳಗಾಗಿರಬಹುದಾದ ದುರ್ಬಲ ವರ್ಗದ ಜನರು ಸಾಮಾನ್ಯವಾಗಿ ಮಾವೋವಾದಿ ತತ್ವದೆಡೆಗೆ ಆಕರ್ಷಿತರಾಗುತ್ತಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಭಯೋತ್ಪಾದಕ ಸಂಘಟನೆಯ ಸದಸ್ಯರಂತೆ ಪರಿಗಣಿಸುವುದು ಅಸಾಧ್ಯ ಎಂದು ಎನ್ಐಎ ನ್ಯಾಯಾಲಯದ ನ್ಯಾಯಾಧೀಶ ಅನಿಲ್ ಕೆ ಭಾಸ್ಕರ್ ರವರು ಅಭಿಪ್ರಾಯಪಟ್ಟಿದ್ದಾರೆ.
ಆರೋಪಿಗಳ ವಿರುದ್ಧದ 12 ಸಾಕ್ಷಿಗಳು, ಕರಪತ್ರಗಳು, ಆರೋಪಿಗಳಿಂದ ವಶಪಡಿಸಿಕೊಂಡ ಬರಹಗಳು, ಸಿಪಿಐ (ಮಾವೋವಾದಿ) ಸಂಸ್ಥೆ ನಡೆಸಿದ ಕಾರ್ಯಕ್ರಮಗಳಲ್ಲಿ ಆರೋಪಿಗಳ ಭಾಗವಹಿಸುವಿಕೆ, ಆರೋಪಿಗಳು ಸಿದ್ಧಪಡಿಸಿದ ಬ್ಯಾನರ್‌ಗಳು, ಆರೋಪಿಗಳಿಂದ ವಶಪಡಿಸಿಕೊಂಡ ಸಾಹಿತ್ಯ, ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಅಸ್ಥಿರಗೊಳಿಸುವ ಪ್ರಯತ್ನದ ಬರಹಗಳು ಮತ್ತು ಕೋಡ್ ಭಾಷೆಗಳೊಂದಿಗೆ ಫೈಲ್‌ಗಳನ್ನು ನ್ಯಾಯಾಲಯ ಪರಿಶೀಲಿಸಿದೆ.
ಸರ್ಕಾರದ ನೀತಿಗಳನ್ನು ತಪ್ಪು ಕಾರಣಕ್ಕಾಗಿ ವಿರೋಧಿಸಿದರೂ ಅದನ್ನು ದೇಶದ್ರೋಹ ಎಂದು ಹೇಳಲಾಗುವುದಿಲ್ಲ. ಪ್ರತಿಭಟಿಸುವ ಹಕ್ಕನ್ನು ಸಂವಿಧಾನವು ನೀಡಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ: ಕೇರಳದ ಹಿಂದೂ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ? ಇಲ್ಲಿದೆ ಫ್ಯಾಕ್ಟ್‌ಚೆಕ್‌ ವಿವರ

- Advertisement -

ಪತ್ರಿಕೋದ್ಯಮ ಮತ್ತು ಕಾನೂನಿನ ವಿದ್ಯಾರ್ಥಿಗಳಾದ ಫಜಲ್ ಮತ್ತು ಶುಹೈಬ್ ಸಿಪಿಐ(ಎಂ) ಬ್ರಾಂಚ್ ಕಮಿಟಿಯ ಸದಸ್ಯರು ಆಗಿದ್ದರು. ಇವರ ಬಂಧನ ಎಡಪಂಥೀಯ ಸರ್ಕಾರವಿರುವ ರಾಜ್ಯದಲ್ಲಿ ವ್ಯಾಪಕ ಟೀಕೆಗೆ ಕಾರಣವಾಗಿತ್ತು. ಆದರೆ ಕೇರಳದ ಸಿಪಿಐ (ಎಂ) ಮಾವೋವಾದಿಗಳೊಂದಿಗಿನ ಸಂಪರ್ಕದ ಹಿನ್ನೆಲೆಯಲ್ಲಿ ಇವರನ್ನು ಪಕ್ಷದಿಂದ ಹೊರಹಾಕಿದೆ.

ಅಲನ್ ಮತ್ತು ಥ್ವಾಹಾ ಅವರಿಗೆ ಜಾಮೀನು ನೀಡಿದ್ದನ್ನು ಪ್ರತಿಪಕ್ಷದ ನಾಯಕ ರಮೇಶ್ ಚೆನ್ನಿಥಾಲಾ ಶ್ಲಾಘಿಸಿದ್ದಾರೆ. ಸಿಪಿಎಂನ ದ್ವಿಮುಖ ನೀತಿಗೆ ಇವರಿಬ್ಬರು ಬಲಿಯಾಗಿದ್ದಾರೆ ಎಂದು ಅವರು ಹೇಳಿದರು. ರಾಷ್ಟ್ರೀಯ ಮಟ್ಟದಲ್ಲಿ ಸಿಪಿಎಂ, ಯುಎಪಿಎ ಕಾಯ್ದೆಯನ್ನು ವಿರೋಧಿಸುತ್ತದೆ. ಆದರೆ ತನ್ನದೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗ ಈ ಕಾನೂನನ್ನು ಬೆಂಬಲಿಸಿತು ಎಂದು ಸಿಪಿಎಂ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.


ಇದನ್ನೂ ಓದಿ: ನಿನ್ನೆಯ ಡಿಸ್‌ಲೈಕ್ ದಾಖಲೆ ಮುರಿದ ಪ್ರಧಾನಿ ಮೋದಿಯವರ ಮತ್ತೊಂದು ವೀಡಿಯೋ!!!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...