ಶಿಮ್ಲಾ ಸೇರಿದಂತೆ ಹಿಮಾಚಲ ಪ್ರದೇಶದ ವಿವಿದೆಡೆ ಕೋಮು ದ್ವೇಷದ ಘಟನೆಗಳು ಸುದ್ದಿಯಾಗುತ್ತಿರುವ ನಡುವೆ, ಸೆಪ್ಟೆಂಬರ್ 27, 2024ರಂದು ಕಾಂಗ್ರಾ ಜಿಲ್ಲೆಯ ನಗ್ರೋಟಾದಲ್ಲಿನ ದೇವಾಲಯವೊಂದರ ಶಿವಲಿಂಗ ಭಗ್ನಗೊಂಡ ರೀತಿಯಲ್ಲಿ ಪತ್ತೆಯಾಗಿತ್ತು.
ಈ ಕುರಿತು ಸಿಟಿ ನ್ಯೂಸ್ ಹಿಮಾಚಲ್ ಎಂಬ ಸ್ಥಳೀಯ ಸುದ್ದಿ ಸಂಸ್ಥೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದ ವಿಡಿಯೋ ಕ್ಲಿಪ್‌ವೊಂದು ವ್ಯಾಪಕವಾಗಿ ವೈರಲ್ ಆಗಿತ್ತು. ವಿಡಿಯೋದಲ್ಲಿ ದೇವಸ್ಥಾಯಕ್ಕೆ ಹಾನಿ ಮಾಡಿದ ದೃಶ್ಯವಿತ್ತು. ವಿಡಿಯೋ ಕುರಿತು ವಿವರಿಸಿದ್ದ ಸುದ್ದಿ ಸಂಸ್ಥೆಯ ವರದಿಗಾರ “ಯಾರೋ ದುಷ್ಕರ್ಮಿಗಳ ಕೃತ್ಯ” ಎಂದಿದ್ದರು.
हिमाचल नगरोटा बगवां गांधी ग्राउंड के साथ लगते शिव बाबा भोलेनाथ की शिवलिंग को कुछ शरारती तत्वों द्वारा तोड़ दिया गया : पुलिस ने दिया कार्रवाई का आश्वासन ।#HimachalPradesh #nagrotahimachal pic.twitter.com/ZVz3HnXAaP
— City News Himachal (@city_news_in) September 27, 2024
ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದ ಪೊಲೀಸರು “ಘಟನೆಯ ಕುರಿತು ತನಿಖೆ ಕೈಗೊಂಡಿದ್ದೇವೆ, ಸಿಸಿಟಿವಿ ವಿಡಿಯೋಗಳನ್ನು ಪರಿಶೀಲನೆ ನಡೆಸುತ್ತಿದ್ದೇವೆ” ಎಂದಿದ್ದರು.
ರಾಜ್ಯದಲ್ಲಿ ಜನಸಂಖ್ಯೆಯ ಬದಲಾವಣೆಯೇ ದೇವಸ್ಥಾನ ಅಪವಿತ್ರಗೊಳ್ಳಲು ಕಾರಣ ಎಂದು ವಿಡಿಯೋ ಹಂಚಿಕೊಳ್ಳಲಾಗಿತ್ತು.
ಸೆಪ್ಟೆಂಬರ್ 27, 2024ರಂದು ಎಕ್ಸ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದ ಬಲಪಂಥೀಯ ಬಳಕೆದಾರ ರೌಶನ್ ಸಿನ್ಹಾ (@MrSinha) ಹಿಮಾಚಲ ಪ್ರದೇಶದಲ್ಲಿ ದುಷ್ಕರ್ಮಿಗಳನ್ನು ಶಿವಲಿಂಗವನ್ನು ಧ್ವಂಸಗೊಳಿಸಿದ್ದಾರೆ. ದೇವಭೂಮಿ ಹಿಮಾಚಲದಲ್ಲಿ ಹಿಂದೆ ಇದು ಸಾಮಾನ್ಯ ವಿಷಯವಾಗಿರಲಿಲ್ಲ. ಆದರೆ, ಅದು ಹೊಸ ಸಾಮಾನ್ಯ ವಿಷಯವಾಗಿದೆ. ಜನಸಂಖ್ಯಾ ಬದಲಾವಣೆಯು ನಿಜ ಮತ್ತು ಭಯಾನಕವಾಗಿದೆ” ಎಂದು ಬರೆದುಕೊಂಡಿದ್ದರು.
Himachal Pradesh: A Shivling is vandalised by miscreants.
Such News were not common in Devbhoomi Himachal Pradesh but now it will become a new normal.
Demographic change is real & scary.. pic.twitter.com/mlK1Uajoys
— Mr Sinha (@MrSinha_) September 27, 2024
ದೀಪಕ್ ಶರ್ಮಾ (SonofBharat7) ಎಂಬ ಮತ್ತೋರ್ವ ಬಲಂಥೀಯ ಎಕ್ಸ್ ಬಳಕೆದಾರ ಸೆಪ್ಟೆಂಬರ್ 27ರಂದು ವಿಡಿಯೋ ಹಂಚಿಕೊಂಡು ” ಹಿಮಾಚಲ ಪ್ರದೇಶದಲ್ಲಿ 20 ವರ್ಷ ಹಳೆಯ ಶಿವಲಿಂಗ ಧ್ವಂಸಗೊಂಡಿದೆ. ದೇವಭೂಮಿಯು ಇಂತಹ ರಾಕ್ಷಸರಿಂದ ಮುಕ್ತವಾಗಿತ್ತು. ಆದರೆ, ಯಾವಾಗಿನಿಂದ ಮೃಗಗಳು ಇಲ್ಲಿ ತಮ್ಮ ದುಷ್ಟ ಕಣ್ಣುಗಳನ್ನು ನೆಟ್ಟಿತೋ, ಅಂದಿನಿಂದ ಇಂತಹ ಘಟನೆಗಳು ಹೆಚ್ಚುತ್ತಿವೆ. ಹಿಮಾಚಲದ ಜನರೇ.. ಪ್ರತಿ ರಾಕ್ಷಸರಿಗೂ ತಕ್ಕ ಪಾಠ ಕಲಿಸುವವರೆಗೆ ನಿಲ್ಲಬೇಡಿ, ಬೇಕಾದರೆ ಇಡೀ ದೇಶವೇ ನಿಮ್ಮೊಂದಿಗಿದೆ” ಎಂದು ಬರೆದುಕೊಂಡಿದ್ದರು.
हिमाचल प्रदेश में
20 साल पुराने शिवलिंग को तोड़ दिया…देवभूमि ऐसे राक्षसों से बची हुईं थी
लेकिन जबसे दरिंदों नें वहां अपनी गन्दी नज़र
डाली तबसे इस तरह की घटनायें बढ़ गयीं हैंहिमाचल वालों.. जबतक एक एक राक्षस को सबक न मिले तबतक रुकना नहीं, जरूरत पड़ी तो पूरा देश साथ है✊ pic.twitter.com/1Lrt93GULr
— Deepak Sharma (@SonOfBharat7) September 27, 2024
ಬಿಜೆಪಿ ನಾಯಕ ಮತ್ತು ಅಸ್ಸಾಂ ನಗರ ವ್ಯವಹಾರಗಳ ಸಚಿವ ಅಶೋಕ್ ಸಿಂಘಾಲ್ (@TheAshokSinghal)ಅವರು ಸೆಪ್ಟೆಂಬರ್ 28ರಂದು ಎಕ್ಸ್‌ನಲ್ಲಿ ವಿಡಿಯೋ ಹಂಚಿಕೊಂಡು “ಇಂದು ಹಿಮಾಚಲ ಪ್ರದೇಶದಲ್ಲಿ ದುಷ್ಕರ್ಮಿಗಳು ಶಿವಲಿಂಗವನ್ನು ಧ್ವಂಸಗೊಳಿಸಿದ್ದಾರೆ. ಮಾತೆ ಕಾಮಕ್ಯಳ ಭೂಮಿಯಲ್ಲಿ ಇದು ನಾಳೆಯೂ ನಡೆಯಬಹುದು. ಅದಕ್ಕಾಗಿಯೇ ನಾವು ನಮ್ಮ ಜಾತಿ, ಮತ, ಮಗಳನ್ನು ರಕ್ಷಿಸಿಕೊಳ್ಳಬೇಕು. ನಮ್ಮ ಗುರುತು, ಭೂಮಿ ಮತ್ತು ಪರಂಪರೆಯನ್ನು ಯಾವುದೇ ಬೆಲೆ ತೆತ್ತಾದರೂ ರಕ್ಷಿಸುವ ನಮ್ಮ ಸಂಕಲ್ಪದಲ್ಲಿ ದೃಢವಾಗಿ ನಿಲ್ಲಬೇಕು. ಜನಸಂಖ್ಯಾಶಾಸ್ತ್ರವು ವಿಧಿಯಾಗಿದೆ” ಎಂದು ಬರೆದುಕೊಂಡಿದ್ದರು.
A Shivling has been vandalised by miscreants in Himachal Pradesh today. It could happen in the land of Maa Kamakhya tomorrow.
This is why we must stand firm in our resolve to protect our ‘Jati, Mati, Bheti’—our identity, land, and heritage—at all costs.
Demography is destiny. pic.twitter.com/CqkPp6JVSC
— Ashok Singhal (@TheAshokSinghal) September 28, 2024
ಎಲ್ಲಾ ಪೋಸ್ಟ್‌ಗಳಲ್ಲಿ ಜನಸಂಖ್ಯೆ ಬದಲಾವಣೆ ಎಂದು ಉಲ್ಲೇಖಿಸುವ ಮೂಲಕ, ಇಲ್ಲಿ ಮುಸ್ಲಿಂ ಜನಸಂಖ್ಯೆ ಹೆಚ್ಚಾಗಿದೆ. ಅದುವೇ ಈ ಘಟನೆಗೆ ಕಾರಣ ಎಂದು ಪರೋಕ್ಷವಾಗಿ ಹೇಳಲಾಗಿದೆ.
ದೇವಾಲಯದ ಅಪವಿತ್ರತೆಯ ಸುದ್ದಿ ವೈರಲ್ ಆದ ನಂತರ, ಸೆಪ್ಟೆಂಬರ್ 27, 2024 ರಂದು ಹಲವಾರು ಹಿಂದುತ್ವವಾದಿ ಸಂಘಟನೆಗಳು ನಗ್ರೋಟಾದ ಶಾಸಕ ರಘುಬೀರ್ ಸಿಂಗ್ ಬಾಲಿ ನೇತೃತ್ವದಲ್ಲಿ ಗಾಂಧಿ ಮೈದಾನದಲ್ಲಿ ಮುಸ್ಲಿಂ ವಿರೋಧಿ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿತ್ತು. ನ್ಯೂಸ್ 24 ಹಿಮಾಚಲದ ಅಧಿಕೃತ ಫೇಸ್‌ಬುಕ್ ಪೇಜ್‌ನಲ್ಲಿ ಅದನ್ನು ನೇರ ಪ್ರಸಾರ ಮಾಡಲಾಗಿತ್ತು.
ಫ್ಯಾಕ್ಟ್‌ಚೆಕ್ : ಶಿವಲಿಂಗ ಧ್ವಂಸಗೊಳಿಸಿ, ದೇವಾಲಯವನ್ನು ಅಪವಿತ್ರಗೊಳಿಸಲಾಗಿದೆ ಎಂಬ ಸುದ್ದಿ ಕೋಮು ಆಯಾಮ ಪಡೆಯುತ್ತಿದ್ದಂತೆ ಕಂಗ್ರಾ ಡಿಎಸ್‌ಪಿ ಅಂಕಿತ್ ಶರ್ಮಾ ಘಟನೆ ಕುರಿತು ಹೇಳಿಕೆ ಕೊಟ್ಟಿದ್ದರು.
ಸಿಸಿಟಿವಿ ಕ್ಯಾಮಾರಗಳ ಪರಿಶೀಲನೆ ಬಳಿಕ, ಶಿವಲಿಂಗವನ್ನು ಧ್ವಂಸಗೊಳಿಸಿ, ದೇವಸ್ಥಾನವನ್ನು ಅಪವಿತ್ರಗೊಳಿಸಿದ ಆರೋಪದ ಮೇಲೆ 35 ವರ್ಷದ ನಿಶಾ ದೇವಿ ಎಂಬಾಕೆಯ ಮೇಲೆ ಬಿಎನ್‌ಎಸ್ ಸೆಕ್ಷನ್ 298ರ ಅಡಿ ನಗ್ರೋಟಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದ್ದರು.
ಮುಂಜಾನೆ 3:30 ರಿಂದ 4:00 ಗಂಟೆಯ ನಡುವೆ ಈ ಕೃತ್ಯ ನಡೆದಿದೆ. ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ ನಿಶಾ ದೇವಿಯನ್ನು ಯೋಲ್‌ನಲ್ಲಿ ಬಂಧಿಸಿದ್ದಾರೆ. ಮಹಿಳೆ ಈಗಾಗಲೇ ವಿವಿಧ ಪೊಲೀಸ್ ಠಾಣೆಗಳಲ್ಲಿ ಇದೇ ರೀತಿಯ ಆರೋಪಗಳನ್ನು ಎದುರಿಸುತ್ತಿದ್ದಾರೆ. 2020ರಲ್ಲಿ, ಅವರು ಧರ್ಮಶಾಲಾದ ಫತೇಪುರದ ದೇವಸ್ಥಾನದಲ್ಲಿ ಶಿವಲಿಂಗವನ್ನು ಹಾನಿಗೊಳಿಸಿದ್ದರು. ದೇವಸ್ಥಾನಗಳಲ್ಲಿ ವಿಗ್ರಹಗಳಿಗೆ ಹಾನಿ ಮಾಡುತ್ತಲೇ ಇರುತ್ತಾರೆ. ಮಹಿಳೆ ಮಾನಸಿಕವಾಗಿ ವಿಭಿನ್ನ ಸಾಮರ್ಥ್ಯ ಹೊಂದಿರುವವಳು. ಪೊಲೀಸರು ಕಾನೂನು ರೀತಿಯ ಕ್ರಮ ಕೈಗೊಳ್ಳಲಿದ್ದಾರೆ” ಎಂದು ಡಿಎಸ್‌ಪಿ ವಿವರಿಸಿದ್ದರು.
ಅನಂತ್ ಜ್ಞಾನ್ ಎಂಬ ಸ್ಥಳೀಯ ಹಿಂದಿ ಮಾಧ್ಯಮವು ಸೆಪ್ಟೆಂಬರ್ 27, 2024 ರಂದು ಸಿಸಿಟಿವಿ ದೃಶ್ಯವೊಂದನ್ನು ಅಪ್ಲೋಡ್ ಮಾಡಿತ್ತು. ಅದರಲ್ಲಿ ಶಾಲು ಹೊದ್ದು ವ್ಯಕ್ತಿಯೊಬ್ಬರು ಮಧ್ಯರಾತ್ರಿ 03:39 ರಿಂದ 03:44 ರವರೆಗೆ ದೇವಸ್ಥಾನದ ಒಳಗೆ ಮತ್ತು ಹೊರಗೆ ಹೋಗುತ್ತಿರುವುದನ್ನು ನೋಡಬಹುದು “ನಗ್ರೋಟಾದಲ್ಲಿ ಶಿವಲಿಂಗಕ್ಕೆ ಹಾನಿ ಮಾಡಿದ ವ್ಯಕ್ತಿ ಮಹಿಳೆ” ಎಂದು ಫೇಸ್‌ಬುಕ್ ಪೋಸ್ಟ್‌ನಲ್ಲಿ ಬರೆಯಲಾಗಿತ್ತು.
ಘಟನೆಯ ಕುರಿತ ಪಂಜಾಬ್ ಕೇಸರಿ ಹಿಮಾಚಲ ಸುದ್ದಿ ಸಂಸ್ಥೆಯ ವರದಿಯನ್ನೂ ನಾವು ಪರಿಶೀಲಿಸಿದ್ದೇವೆ. ಅದರಲ್ಲಿ “ಕಳೆದ ಗುರುವಾರ ರಾತ್ರಿ ಗಾಂಧಿ ಮೈದಾನದ ಬಳಿ ಶಿವಲಿಂಗಕ್ಕೆ ಹಾನಿಗೊಳಿಸಿದ ಪ್ರಕರಣದಲ್ಲಿ ಪೊಲೀಸರು ದೊಡ್ಡ ಯಶಸ್ಸನ್ನು ಸಾಧಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಆರೋಪಿ ಮಹಿಳೆಯನ್ನು ಒಂದು ದಿನದ ನಂತರ ಯೋಲ್ ಬಳಿ ಬಂಧಿಸಿದ್ದಾರೆ. ಆರೋಪಿ ಮಹಿಳೆಯನ್ನು ನಿಶಾದೇವಿ ಎಂದು ಗುರುತಿಸಲಾಗಿದ್ದು, ಅವರು ಯೋಲ್ ಕಡೆಗೆ ಹೋಗುತ್ತಿದ್ದರು. ಮಹಿಳೆಯ ಮಾನಸಿಕ ಸ್ಥಿತಿ ಸರಿಯಿಲ್ಲ ಎಂದು ಪೊಲೀಸರು ತಿಳಿಸಿದ್ದು, ಸಿಸಿಟಿವಿ ದೃಶ್ಯಗಳಲ್ಲಿ ಕಂಡುಬಂದ ಮಹಿಳೆ ಅದೇ ಬಟ್ಟೆಯನ್ನು ಧರಿಸಿ ಕೈಯಲ್ಲಿ ಅದೇ ಚೀಲವನ್ನು ಹಿಡಿದಿರುವುದು ಪೊಲೀಸರಿಗೆ ಗೊತ್ತಾಗಿದೆ. ಪೊಲೀಸರ ಅನುಮಾನ ದೃಢಪಟ್ಟಿದೆ” ಎಂದು ತಿಳಿಸಲಾಗಿತ್ತು.
ಒಟ್ಟಿನಲ್ಲಿ, ಶಿವಲಿಂಗ ಧ್ವಂಸ ಮತ್ತು ದೇವಸ್ಥಾನವನ್ನು ಅಪವಿತ್ರಗೊಳಿಸಿದ ಪ್ರಕರಣದ ಆರೋಪಿ ನಿಶಾ ದೇವಿ ಎಂಬಾಕೆಯಾಗಿದ್ದು, ಮಾನಸಿಕ ಅಸ್ವಸ್ಥೆ ಎಂದು ಪೊಲೀಸರು ತಿಳಿಸಿದ್ದಾರೆ. ಆದ್ದರಿಂದ ಪ್ರಕರಣದಲ್ಲಿ ಯಾವುದೇ ಕೋಮು ಆಯಾಮ ಇಲ್ಲ.
ಇದನ್ನೂ ಓದಿ : FACT CHECK : ಬೆಂಗಳೂರು ಬಳಿ ಗುಹೆಯಲ್ಲಿ 188 ವರ್ಷದ ವ್ಯಕ್ತಿ ಪತ್ತೆ? ವೈರಲ್ ವಿಡಿಯೋದ ಸತ್ಯಾಸತ್ಯತೆ ಏನು?


