ರಕ್ತದಲ್ಲಿ ತೊಯ್ದಿರುವ ಮಹಿಳೆಯೋರ್ವಳು ಮಾತನಾಡಿರುವ ವೀಡಿಯೋವೊಂದು ಸಾಂಆಜಿಕ ಜಾಲತಾಣದಲ್ಲಿ ವೈರಲಾಗಿದ್ದು ಅದರಲ್ಲಿ, RSS ಕಾರ್ಯಕರ್ತರು ಮುಸ್ಲಿಂ ವೈಧ್ಯೆಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪವನ್ನು ಮಾಡಲಾಗಿತ್ತು.

ಈ ಬಗ್ಗೆ, ದಿ ಕ್ವಿಂಟ್ ಫ್ಯಾಕ್ಟ್ ಚೆಕ್ ಮಾಡಿದ್ದು, ವಿಡಿಯೋದಲ್ಲಿರುವ ಮಹಿಳೆ ಮತ್ತು ಅವರ ತಂಡವು ನಾಯಿಗಳನ್ನು ಹಿಡಿಯುತ್ತಿದ್ದ ಸಂದರ್ಭದಲ್ಲಿ ಸ್ಥಳೀಯರಿಂದ ಹಲ್ಲೆಗೊಳಗಾಗಿದ್ದಾರೆ ಎಂದು ಅದು ತಿಳಿಸಿದೆ.
ಈ ಬಗ್ಗೆ ವಿಡಿಯೊದಲ್ಲಿರುವ ಮಹಿಳೆಯೆ ಮಹಿತಿ ನೀಡಿದ್ದಾರೆ. ಮಹಿಳೆಯು ದೆಹಲಿ ಮೂಲದ ‘ನೈಬರ್ ವೂಫ್’ ಸಂಸ್ಥಾಪಕಿ ಆಯೆಷಾ ಕ್ರಿಸ್ಟಿನಾ ಎಂಬವರಾಗಿದ್ದಾರೆ. ಈ ಘಟನೆಗೆ ಯಾವುದೇ ಧಾರ್ಮಿಕ ಆಯಾಮವಿಲ್ಲವೆಂದು ಸ್ವತಃ ಮಹಿಳೆಯೆ ಹೇಳಿದ್ದಾರೆ.
“ಪ್ರಧಾನಿ ಮೋದಿ ಮತ್ತು ಆಡಳಿತ ಪಕ್ಷದ ಬೆಂಬಲವನ್ನು ಹೊಂದಿರುವ ಹಿಂದೂ ಉಗ್ರಗಾಮಿ ಸಂಘಟನೆ ಆರ್‌ಎಸ್‌ಎಸ್, ಮುಸ್ಲಿಮರು ಕೊರೊನಾ ವೈರಸ್ ಹರಡುತ್ತಿದ್ದಾರೆಂಬ ಆರೋಪ ಹೊರಿಸಿ ಮುಸ್ಲಿಂ ವೈದ್ಯೆ ಆಯೆಷಾ ಅವರ ಮೇಲೆ ಹಲ್ಲೆ ನಡೆಸಿದೆ. ಇದು ಭಾರತವು ಮುಸ್ಲಿಮರ ವಿರುದ್ಧ ನಡೆಸುತ್ತಿರುವ ತೀವ್ರತರದ ಧ್ವೇಷ ಅಭಿಯಾನಕ್ಕೆ ಸಾಕ್ಷಿಯಾಗಿದೆ” ಎಂದು ಟ್ವಿಟರ್ ಬಳಕೆದಾರರೊಬ್ಬರು ಟ್ವೀಟ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇದನ್ನು ಹಲವಾರು ಟ್ವಿಟ್ಟರ್ ಬಳಕೆದಾರರು ಇದೇ ರೀತಿಯ ಹೇಳಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಂಡಿದ್ದಾರೆ.


ಫ್ಯಾಕ್ಟ್‌ಚೆಕ್:
ಬೀದಿ ನಾಯಿಗಳ ಸಂರಕ್ಷಣೆಗಾಗಿ ಕೆಲಸ ಮಾಡುತ್ತಿರುವ Neighbourhood Woof ಎಂಬ ಎನ್‌ಜಿಒ ಸದಸ್ಯರು ಜುಲೈ 3 ರಂದು ದೆಹಲಿಯ ರಾಣಿ ಬಾಗ್‌ನ ರಾಶಿ ನಗರದ ಕೆಲವು ನಿವಾಸಿಗಳಿಂದ ಹಲ್ಲೆಗೆ ಒಳಗಾಗಿದ್ದೇವೆ ಎಂದು ಆರೋಪಿಸಿದ್ದಾರೆ.
ಈ ಘಟನೆಯ ನಂತರ, ಈ ವಿಡಿಯೋವನ್ನು ಆರ್‌ಎಸ್‌ಎಸ್ ಸದಸ್ಯರು ಹಲ್ಲೆ ಮಾಡಿದ್ದಾರೆ ಎಂದು ಹೇಳಿ ಹಂಚಿಕೊಳ್ಳಲಾಗುತ್ತಿದೆ.
ಎನ್‌ಜಿಒ ಸದಸ್ಯರು ಈ ಹಿಂದೆ ಘಟನೆಯ ವಿವರಗಳಿರುವ ವೀಡಿಯೊವನ್ನು ಬಿಡುಗಡೆ ಮಾಡಿದ್ದರು. ಆದರೆ, ಧಾರ್ಮಿಕ ಕಾರಣದಿಂದಾಗಿ ದಾಳಿಗೆ ಒಳಗಾಗಿರುವುದಾಗಿ ಅವರು ಎಲ್ಲಿಯೂ ಉಲ್ಲೇಖಿಸಿಲ್ಲ.
ಈ ಘಟನೆಯ ವಿಚಾರವಾಗಿ ಆಯೆಷಾ ಕ್ರಿಸ್ಟಿನಾ ಅವರನ್ನು ಸಂಪರ್ಕಿಸಿದಾಗ, ಈ ಘಟನೆಗೆ ಯಾವುದೇ ಧಾರ್ಮಿಕ ಆಯಾಮವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
“ಅವರು ಯಾರೇ ಆಗಿರಬಹುದು, ಇದನ್ನು ಧಾರ್ಮಿಕ ಉದ್ದೇಶದಿಂದ ಹರಡುತ್ತಿದ್ದಾರೆ. ಅವರ ಆಲೋಚನೆ ಮತ್ತು ಕಾರ್ಯಸೂಚಿ ಬಹಳ ಸ್ಪಷ್ಟವಾಗಿದೆ. ಆದ್ದರಿಂದ, ನಾನು ಅಂತಹ ಜನರೊಂದಿಗೆ ತೊಡಗಿಸಿಕೊಳ್ಳಲು ಸಹ ಬಯಸುವುದಿಲ್ಲ” ಎಂದು ಅವರು ಹೇಳಿದ್ದಾರೆ.
ಇದರ ನಡುವೆ, ಹಲ್ಲೆನಡೆಸಿದ ನಿವಾಸಿಗಳ ವಿರುದ್ಧ ಐಪಿಸಿ ಸೆಕ್ಷನ್ 323 (ಸ್ವಯಂಪ್ರೇರಣೆಯಿಂದ ನೋವನ್ನುಂಟುಮಾಡುವುದು), 341 (ತಪ್ಪಾದ ಸಂಯಮ), 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ದೂರು ದಾಖಲಿಸಲಾಗಿದೆ ಎಂದು ಜುಲೈ 4 ರ ಪತ್ರಿಕಾ ಪ್ರಕಟಣೆಯಲ್ಲಿ ದೆಹಲಿ ಪೊಲೀಸರು ತಿಳಿಸಿದ್ದಾರೆ.
“ತಡರಾತ್ರಿಯ ಸಮಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎನ್‌ಜಿಓದವರ ಗುರುತಿನ ಚೀಟಿಗಳನ್ನು ಸ್ಥಳೀಯ ನಿವಾಸಿಗಳು ಕೇಳಿದ್ದು, ನಂತರ ಎನ್‌ಜಿಒ ಮತ್ತು ಸ್ಥಳೀಯರ ನಡುವಿನ ವಾಗ್ವಾದ ತಾರಕ್ಕೇರಿದೆ. ಇದರ ನಂತರ, ಎನ್‌ಜಿಒ ಸದಸ್ಯರು ತಮ್ಮ ಕಾರಿನಲ್ಲಿ ಅಲ್ಲಿಂದ ಹೊರಡಲು ಅನುವಾದಾಗ 3 ಸ್ಥಳೀಯ ನಿವಾಸಿಗಳು ಅವರ ಕಾರಿಗೆ ಡಿಕ್ಕಿ ಹೊಡೆದಿದ್ದಾರೆ. ಇದರಿಂದಾಗಿ ಅವರಿಗೆ ಕೆಲವು ಸಣ್ಣಪುಟ್ಟ ಗಾಯಗಳಾಗಿವೆ” ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ದೆಹಲಿಯ ರಿಷಿ ನಗರದಲ್ಲಿ ಈ ಘಟನೆ ನಡೆದಿರುವುದು ನಿಜವಾಗಿದ್ದರೂ, ಅದನ್ನು ಪ್ರಸಾರ ಮಾಡಿರುವ ಉದ್ದೇಶ ಮತ್ತು ನೀಡಿರುವ ಕಾರಣ ಸುಳ್ಳು ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: ದೆಹಲಿ ಗಲಭೆ: 16 ಆರ್‌ಎಸ್‌ಎಸ್ ಆರೋಪಿಗಳ ವಿರುದ್ಧ ದೆಹಲಿ ಪೊಲೀಸ್ ಚಾರ್ಜ್‌ಶೀಟ್


