ಮೊಬೈಲ್ ಕಿತ್ತುಕೊಂಡಿದ್ದಕ್ಕೆ ಮಗುವೊಂದು ಬ್ಯಾಟ್‌ನಿಂದ ತನ್ನ ತಾಯಿಯ ತಲೆಗೆ ಹೊಡೆದ ವಿಡಿಯೋವೊಂದು ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು.
ವಿಡಿಯೋ ಹಂಚಿಕೊಂಡ ಅನೇಕರು “ಇದು ನಿಮ್ಮ ಮನೆಯಲ್ಲೂ ಸಂಭವಿಸಬಹುದು” ಎಂದು ಬರೆದುಕೊಂಡಿದ್ದರು. ಕೆಲ ಮಾಧ್ಯಮಗಳು ಕೂಡ ವಿಡಿಯೋ ಹಂಚಿಕೊಂಡಿತ್ತು.
ವಿಡಿಯೋದಲ್ಲಿ ಬೆಡ್ ಮೇಲೆ ಕುಳಿತು ಮೊಬೈಲ್ ಒತ್ತುತ್ತಿದ್ದ ಮಗುವಿನ ಕೈಯಿಂದ ಮೊಬೈಲ್ ಕಿತ್ತುಕೊಳ್ಳುವ ತಾಯಿ ಗದರಿಸುತ್ತಾರೆ, ಓದುವಂತೆ ಸೂಚಿಸುತ್ತಾರೆ. ತಾಯಿಯ ಬೈಗುಳಕ್ಕೆ ಮಗು ಪಕ್ಕದಲ್ಲಿರುವ ಪುಸ್ತಕ ಎತ್ತಿಕೊಂಡು ಓದಲು ಶುರು ಮಾಡುತ್ತದೆ. ತಾಯಿ ನೆಲದಲ್ಲಿ ಕುಳಿತು ಊಟ ಮಾಡುತ್ತಿರುತ್ತಾರೆ. ಸ್ವಲ್ಪ ಹೊತ್ತಿನ ಬಳಿಕ ಮಗು ಪಕ್ಕದಲೇ ಇದ್ದ ಕ್ರಿಕೆಟ್ ಬ್ಯಾಟ್ ತೆಗೆದುಕೊಂಡು ತಾಯಿಯ ತಲೆಗೆ ಹೊಡೆಯುವ ದೃಶ್ಯವಿದೆ.
ಫ್ಯಾಕ್ಟ್‌ಚೆಕ್ : ವೈರಲ್ ವಿಡಿಯೋ ನಿಜವಾದುದ್ದು ಅಲ್ಲ, ಅದೊಂದು ಸ್ಕ್ರಿಪ್ಟೆಡ್ ವಿಡಿಯೋ ಆಗಿದೆ. ಮೊಬೈಲ್ ದುಷ್ಪರಿಣಾಮಗಳ ಕುರಿತು ಮಾಡಿದ ಜಾಗೃತಿ ವಿಡಿಯೋ.
‘ಐಡಿಯಾಸ್ ಫ್ಯಾಕ್ಟರಿ’ ಎಂಬ ಫೇಸ್‌ಬುಕ್ ಪೇಜ್ ನಿಯಮಿತವಾಗಿ ಇಂತಹ ವಿಡಿಯೋಗಳನ್ನು ಮಾಡುತ್ತಿರುತ್ತದೆ. ವಿಡಿಯೋ ಪೋಸ್ಟ್ ಮಾಡುವಾಗ “ಇದು ಸ್ಕ್ರಿಪ್ಟೆಡ್ ವಿಡಿಯೋ, ಮನೋರಂಜನೆ ಮತ್ತು ಶೈಕ್ಷಣಿಕ” ಉದ್ದೇಶಕ್ಕೆ ಮಾಡಲಾಗಿದೆ ಎಂದು ಸೂಚನೆಯನ್ನೂ ಪೇಜ್‌ನಲ್ಲಿ ನೀಡುತ್ತದೆ.
ತಾಯಿಯ ತಲೆಗೆ ಮಗು ಬ್ಯಾಟ್‌ನಿಂಡ ಹೊಡೆದ ವಿಡಿಯೋಗು “ಇದು ಸ್ಕ್ರಿಪ್ಟೆಡ್ ವಿಡಿಯೋ” ಎಂದು ಫೇಸ್‌ಬುಕ್ ಪೇಜ್ ಸೂಚನೆ ಹಾಕಿತ್ತು.

ಅಕ್ಟೋಬರ್ 1ರಂದು ಕೂಡ ವೈರಲ್ ವಿಡಿಯೋ ರೀತಿಯದ್ದೇ ಮತ್ತೊಂದು ವಿಡಿಯೋವನ್ನ ಐಡಿಯಾಸ್ ಫ್ಯಾಕ್ಟರಿ ಹಂಚಿಕೊಂಡಿತ್ತು. ಅದರಲ್ಲೂ ಮೊಬೈಲ್ ದುಷ್ಪರಿಣಾಮಗಳ ಕುರಿತ ದೃಶ್ಯವೊಂದನ್ನು ತೋರಿಸಿತ್ತು. ಆ ವಿಡಿಯೋ ಮತ್ತು ವೈರಲ್ ಆಗುತ್ತಿರುವ ವಿಡಿಯೋ ಒಂದೇ ಜಾಗದಲ್ಲಿ ಶೂಟ್ ಮಾಡಲಾಗಿತ್ತು. ಎರಡೂ ವಿಡಿಯೋಗಳಲ್ಲೂ ಟಿವಿ, ಫೋಟೋ ಒಂದೇ ರೀತಿ ಇರುವುದನ್ನು ನೋಡಬಹುದು.

ಒಟ್ಟಿನಲ್ಲಿ ಐಡಿಯಾಸ್ ಫ್ಯಾಕ್ಟರಿ ಎಂಬ ಫೇಸ್‌ಬುಕ್ ಪೇಜ್ ಜಾಗೃತಿ, ಮನೋರಂಜನೆ ಮತ್ತು ಶೈಕ್ಷಣಿಕ ಉದ್ದೇಶಕ್ಕೆ ಮಾಡಿದ ಸ್ಕ್ರಿಪ್ಟೆಡ್ ವಿಡಿಯೋ ನಿಜ ಎಂಬಂತೆ ವೈರಲ್ ಆಗಿದೆ.
ಇದನ್ನೂ ಓದಿ : FACT CHECK : ಇಸ್ರೇಲ್ ದಾಳಿಯಿಂದ ತಪ್ಪಿಸಿಕೊಳ್ಳಲು ಪ್ಯಾಲೆಸ್ತೀನಿಯರು ಭಾರತದ ಧ್ವಜ ಹಿಡಿದ್ರಾ?


