Homeಫ್ಯಾಕ್ಟ್‌ಚೆಕ್FACT CHECK : ಇಸ್ರೇಲ್ ದಾಳಿಯಿಂದ ತಪ್ಪಿಸಿಕೊಳ್ಳಲು ಪ್ಯಾಲೆಸ್ತೀನಿಯರು ಭಾರತದ ಧ್ವಜ ಹಿಡಿದ್ರಾ?

FACT CHECK : ಇಸ್ರೇಲ್ ದಾಳಿಯಿಂದ ತಪ್ಪಿಸಿಕೊಳ್ಳಲು ಪ್ಯಾಲೆಸ್ತೀನಿಯರು ಭಾರತದ ಧ್ವಜ ಹಿಡಿದ್ರಾ?

- Advertisement -
- Advertisement -

ಇಸ್ರೇಲ್ ದಾಳಿಯಿಂದ ತಪ್ಪಿಸಿಕೊಳ್ಳಲು ಪ್ಯಾಲೆಸ್ತೀನಿಯರು ಭಾರತದ ಧ್ವಜ ಹಿಡಿಯುತ್ತಿದ್ದಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ಹರಿದಾಡುತ್ತಿದೆ.

ಹೈದರಾಬಾದ್‌ನ ಬಿಜೆಪಿ ಶಾಸಕ ಹಾಗೂ ಹಿಂದುತ್ವವಾದಿ ಟೈಗರ್ ರಾಜಾ ಸಿಂಗ್ ಹೆಸರಿನಲ್ಲಿರುವ ಎಕ್ಸ್‌ ಖಾತೆಯಲ್ಲಿ ಅಕ್ಟೋಬರ್ 4ರಂದು ವಿಡಿಯೋ ಹಂಚಿಕೊಂಡು “ಪ್ಯಾಲೆಸ್ತೀನಿಯರು ಭಾರತದ ತ್ರಿವರ್ಣ ಧ್ವಜ ಹಿಡಿದು ದೇಶದಿಂದ ಪಲಾಯನ ಮಾಡುತ್ತಿದ್ದಾರೆ. ಏಕೆಂದರೆ, ಇಸ್ರೇಲ್ ಭಾರತದ ತ್ರಿವರ್ಣ ಧ್ವಜದ ಮೇಲೆ ದಾಳಿ ಮಾಡುವುದಿಲ್ಲ. ಇಸ್ರೇಲ್ ಮಾತ್ರವಲ್ಲ, ಈಗ ಜಗತ್ತಿನಲ್ಲಿ ಯಾವ ದೇಶಕ್ಕೂ ತ್ರಿವರ್ಣ ಧ್ವಜದ ಮೇಲೆ ದಾಳಿ ಮಾಡಲು ಧೈರ್ಯ ಇಲ್ಲ. ಇದು ತ್ರಿವರ್ಣ ಧ್ವಜದ ಮತ್ತು ಮೋದಿಯವರ ಶಕ್ತಿ” ಎಂದು ಬರೆದುಕೊಳ್ಳಲಾಗಿತ್ತು.

ಇನ್ನೂ ಕೆಲ ಎಕ್ಸ್‌, ಫೇಸ್‌ಬುಕ್ ಖಾತೆಗಳಲ್ಲಿ ಇದೇ ಬರಹದೊಂದಿಗೆ ವಿಡಿಯೋ ಹಂಚಿಕೊಳ್ಳಲಾಗಿದೆ.

ಫ್ಯಾಕ್ಟ್‌ಚೆಕ್ : ವೈರಲ್ ವಿಡಿಯೋ ಪ್ಯಾಲೆಸ್ತೀನಿಯರು ಭಾರತದ ಧ್ವಜ ಹಿಡಿದಿರುವುದಲ್ಲ. ಅದು 2023ರಲ್ಲಿ ಭಾರತೀಯ ಯಾತ್ರಾರ್ಥಿಗಳು ಇರಾಕ್‌ನ ಮುಸ್ಲಿಮರ ಪವಿತ್ರ ಸ್ಥಳ ಕರ್ಬಲಾಗೆ ನಡೆದುಕೊಂಡು ಹೋದ ಅಥವಾ ‘ಅರ್ಬಯೀನ್ ವಾಕ್‌’ನ ದೃಶ್ಯವಾಗಿದೆ.

‘ಅರ್ಬಯೀನ್ ವಾಕ್‌’ ಎಂದರೆ ನಲ್ವತ್ತನೇ ನಡಿಗೆ ಎಂದರ್ಥ. ಮುಸ್ಲಿಮರು, ವಿಶೇಷವಾಗಿ ಶಿಯಾ ಮುಸ್ಲಿಮರು ಇಮಾಮ್ ಹುಸೇನ್ ಅವರು ಹುತಾತ್ಮರಾದ 40ನೇ ದಿನದಂದು, ಇರಾಕ್‌ನ ಕರ್ಬಾಲಾದಲ್ಲಿರುವ ಅವರ ಸಮಾಧಿಯ ಬಳಿಗೆ ನಡೆದುಕೊಂಡು ಹೋಗುತ್ತಾರೆ.

ವೈರಲ್ ವಿಡಿಯೋ ಕುರಿತು ನಾವು ಇನ್ನಷ್ಟು ಮಾಹಿತಿ ಹುಡುಕಿದಾಗ, ನಮಗೆ ಅದು ಅರ್ಬಯೀನ್ ವಾಕ್‌ನ ದೃಶ್ಯ ಎಂಬುವುದು ಖಚಿತವಾಗಿದೆ.

ಆಗಸ್ಟ್ 31, 2023ರಂದು ಭಾರತದ ಮೂಲದ ಇನ್‌ಸ್ಟಾಗ್ರಾಂ ಖಾತೆ ಫಲಕ್ ಹಕ್‌ನಲ್ಲಿ ವಿಡಿಯೋ ಹಂಚಿಕೊಳ್ಳಲಾಗಿತ್ತು. ಅದರಲ್ಲಿ ‘ನಜಾಫ್-ಅಲ್‌-ಅಶ್ರಾ’ ಎಂದು ಸ್ಥಳವನ್ನು ಉಲ್ಲೇಖಿಸಲಾಗಿತ್ತು. ‘ಅರ್ಬಯೀನ್ ವಾಕ್-2023’ ಎಂದು ವಿಡಿಯೋಗೆ ಕ್ಯಾಪ್ಶನ್ ಕೊಡಲಾಗಿತ್ತು. ಇಲ್ಲಿ ನಜಾಫ್ ಎಂಬುವುದು ಇರಾಕ್‌ನಲ್ಲಿರುವ ಮುಸ್ಲಿಮರ ಮತ್ತೊಂದು ಪವಿತ್ರ ಸ್ಥಳವಾಗಿದೆ.

ಈ ನಜಾಫ್‌ನಲ್ಲಿ ಪ್ರವಾದಿ ಮುಹಮ್ಮದ್ ಅವರ ಅಳಿಯಾ ಹಾಗೂ ಇಸ್ಲಾಮಿನ ನಾಲ್ಕನೇ ಖಲೀಫಾ ಇಮಾಮ್ ಅಲೀ ಅವರ ಸಮಾಧಿಯಿದೆ. ಇಲ್ಲಿಂದ ಸುಮಾರು 70 ಕಿ.ಮೀ ದೂರದಲ್ಲಿ ಕರ್ಬಲಾದಲ್ಲಿ ಅಲೀ ಅವರ ಮಗ ಹಝ್ರತ್ ಹುಸೇನ್ ಅವರ ಸಮಾಧಿಯಿದೆ. ಹಝ್ರತ್ ಹುಸೇನ್ ಮುಹಮ್ಮದ್ ಪೈಗಂಬರ್ ಅವರ ಮೊಮ್ಮಗ. ಅವರು ಹುತಾತ್ಮರಾದ ದಿನದಂದು ಮೊಹರಂ ಆಚರಣೆ ಮಾಡಲಾಗುತ್ತದೆ. ಶಿಯಾ ಮುಸ್ಲಿಮರಿಗೆ ನಜಾಫ್ ಮತ್ತು ಕರ್ಬಲಾ ಎರಡೂ ಜಾಗಗಳು ಅತ್ಯಂತ ಪವಿತ್ರವಾಗಿದೆ.

ಸೆಪ್ಟೆಂಬರ್ 8, 2023 ರಲ್ಲಿ ಎನ್‌ಡಿಟಿವಿ ಪ್ರಕಟಿಸಿದ್ದ ವರದಿಯಲ್ಲಿ, “2023ರ ಅರ್ಬಯೀನ್ ವಾಕ್ ಸೆಪ್ಟೆಂಬರ್ 6ರಂದು ಕರ್ಬಲಾದಲ್ಲಿ ಕೊನೆಗೊಂಡಿದ್ದು, ಭಾರತದಿಂದ ಸುಮಾರು 1 ಲಕ್ಷ ಶಿಯಾ ಮುಸ್ಲಿಮರು ನಡಿಗೆಯಲ್ಲಿ ಪಾಲ್ಗೊಳ್ಳಲು ಕರ್ಬಲಾಕ್ಕೆ ತೆರಳಿದ್ದರು” ಎಂದು ಹೇಳಲಾಗಿತ್ತು.

ಎನ್‌ಡಿವಿ ಸುದ್ದಿಯ ಜೊತೆ ವ್ಯಕ್ತಿಯೊಬ್ಬರು ಮಗುವನ್ನು ಹಿಡಿದುಕೊಂಡಿರುವುದು ಮತ್ತು ಆ ಮಗು ಭಾರತದ ತ್ರಿವರ್ಣ ಧ್ವಜ ಹೊದ್ದುಕೊಂಡಿದ್ದ ಫೋಟೋ ಸೇರಿಸಿತ್ತು.

ಅಲ್ಲದೆ, 6 ಸೆಪ್ಟೆಂಬರ್ 2023ರಂದು ಎನ್‌ಡಿವಿ ತನ್ನ ಯೂಟ್ಯೂಬ್‌ ಚಾನೆಲ್‌ನಲ್ಲಿ ನಜಾಫ್‌ನಿಂದ ಗ್ರೌಂಡ್‌ ರಿಪೋರ್ಟ್ ಕುರಿತ ವಿಡಿಯೋ ಅಪ್ಲೋಡ್ ಮಾಡಿತ್ತು. ಅದರಲ್ಲಿ ದೆಹಲಿ ಮೂಲದ ವ್ಯಕ್ತಿಯೊಬ್ಬರು ಭಾರತದ ತ್ರಿವರ್ಣ ಧ್ವಜ ಹಿಡಿದು ಮಾತನಾಡಿರುವುದು ಇದೆ.

ಭಾರತದ ಧ್ವಜ ಏಕೆ?

ಜಗತ್ತಿನಲ್ಲಿ ನಾಲ್ಕೈದು ಮುಸ್ಲಿಮರ ಪ್ರಮುಖ ಪವಿತ್ರ ಸ್ಥಳಗಳಿವೆ. ಅಲ್ಲಿಗೆ ವಿಶ್ವದ ಮೂಲೆ ಮೂಲೆಗಳಿಂದ ಮುಸ್ಲಿಮರು ತೆರಳುತ್ತಾರೆ. ಮಕ್ಕಾ, ಮದೀನಾ, ಕರ್ಬಲಾ, ನಜಾಫ್ ಮತ್ತು ಬೈತುಲ್ ಮುಕದ್ದಸ್ ಅಥವಾ ಜೆರುಸಲೇಂನ ಮಸ್ಜಿದುಲ್ ಅಕ್ಸಾ ಆ ಪ್ರಮುಖ ಧಾರ್ಮಿಕ ಕೇಂದ್ರಗಳಾಗಿವೆ.

ಸಾಮಾನ್ಯವಾಗಿ ಮಕ್ಕಾಗೆ ಹಜ್‌-ಉಮ್ರಾಗೆ ತೆರಳಿದಾಗ, ನಜಾಫ್-ಕರ್ಬಲಾಗೆ ತೆರಳಿದಾಗ ಆಯಾ ದೇಶದ ಜನರು ತಮ್ಮ ದೇಶದ ಮೇಲಿನ ಪ್ರೀತಿಯಿಂದ ಮತ್ತು ಜನರ ನಡುವೆ ಒಬ್ಬರಿಗೊಬ್ಬರನ್ನು ಸುಲಭವಾಗಿ ಗುರುತಿಸಲು ರಾಷ್ಟ್ರ ಧ್ವಜಗಳನ್ನು ಹಿಡಿಯುತ್ತಾರೆ. ಅದೇ ರೀತಿ ಭಾರತೀಯರು ಕೂಡ ತಮ್ಮ ದೇಶದ ತ್ರಿವರ್ಣ ಧ್ವಜ ಹಿಡಿದು ನಡೆಯುತ್ತಾರೆ.

ಆದ್ದರಿಂದ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋ ಇಸ್ರೇಲ್‌ ದಾಳಿಯಿಂದ ರಕ್ಷಿಸಿಕೊಳ್ಳಲು ಪ್ಯಾಲೆಸ್ತೀಯರು ಭಾರತ ಧ್ವಜ ಹಿಡಿದಿರುವುದಕ್ಕೆ ಸಂಬಂಧಿಸಿದ್ದಲ್ಲ. ಅದು ಅರ್ಬಯೀನ್ ನಡಿಗೆಯ ವೇಳೆ ಭಾರತೀಯ ಶಿಯಾ ಮುಸ್ಲಿಮರು ಇರಾಕ್‌ನ ಕರ್ಬಲಾ ಕಡೆಗೆ ಧ್ವಜ ಹಿಡಿದು ಸಾಗಿದ ದೃಶ್ಯವಾಗಿದೆ.

ಇದನ್ನೂ ಓದಿ : FACT CHECK : ಶಿವಲಿಂಗ ಧ್ವಂಸ ಘಟನೆಗೆ ಕೋಮು ಬಣ್ಣ ಬಳಿದ ಬಲಪಂಥೀಯರು

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗ್ರಾಮೀಣ ಭಾಗದ ಶಾಲಾ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ 7.5% ಮೀಸಲಾತಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸಿಗೆ ಬಲ ತುಂಬುವ ನಿಟ್ಟಿನಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇಕಡಾ 7.5 ರಷ್ಟು ಮೀಸಲಾತಿ ಕಲ್ಪಿಸುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ಪಶ್ಚಿಮ ಬಂಗಾಳದ ಪ್ರವಾಸೋದ್ಯಮ ಜಾಹೀರಾತಿನಲ್ಲಿ ಐಫೆಲ್ ಟವರ್, ಈಜಿಪ್ಟ್ ಪಿರಮಿಡ್: ಆದರೆ ಬಂಗಾಳವೇ ನಾಪತ್ತೆ!

ಪಶ್ಚಿಮ ಬಂಗಾಳವನ್ನು ಜಾಗತಿಕ ಪ್ರವಾಸೋದ್ಯಮ ಭೂಪಟದಲ್ಲಿ ಮುನ್ನೆಲೆಗೆ ತರುವ ಉದ್ದೇಶದಿಂದ ಬಿಡುಗಡೆ ಮಾಡಲಾದ ರಾಜ್ಯದ ಹೊಸ ಪ್ರವಾಸೋದ್ಯಮ ಜಾಹೀರಾತು ಈಗ ತೀವ್ರ ಟೀಕೆ ಹಾಗೂ ಅಪಹಾಸ್ಯಕ್ಕೆ ಈಡಾಗಿದೆ. ಈ ಜಾಹೀರಾತನ್ನು ಒಮ್ಮೆ ಗಮನಿಸಿದರೆ...

ಅಮೆರಿಕದಲ್ಲಿ ಮೋಹನ್‌ ಭಾಗವತ್ ಸೌಹಾರ್ದತೆ ಮಾತು; ಮಹಾರಾಷ್ಟ್ರದ ಗಾರ್ಬಾ-ದಾಂಡಿಯಾ ಕಾರ್ಯಕ್ರಮಗಳಲ್ಲಿ ಮುಸ್ಲಿಮರಿಗೆ ನಿಷೇಧ ಹೇರಿದ ವಿಎಚ್‌ಪಿ

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ನ್ಯೂಯಾರ್ಕ್‌ನಲ್ಲಿ ಮಾಡಿದ ಭಾಷಣದಲ್ಲಿ ಧಾರ್ಮಿಕ ಸೌಹಾರ್ದತೆ, ಪರಸ್ಪರ ಗೌರವ ಮತ್ತು ಪ್ರತಿಯೊಂದು ಸಮುದಾಯದ ಗುರುತಿನ ರಕ್ಷಣೆ ಕುರಿತು ಮಾತನಾಡಿದ ಕೆಲವೇ ದಿನಗಳ...

ಸೈಬರ್ ವಂಚನೆಗೊಳಗಾದ ಸಂತ್ರಸ್ತರಿಗೆ ನೆರವು: ಕರ್ನಾಟಕದಲ್ಲಿ ಶೀಘ್ರವೇ ‘ಇ-ಶೂನ್ಯ ಎಫ್‌ಐಆರ್’ ಜಾರಿ

ಸೈಬರ್ ವಂಚನೆಗೊಳಗಾದ ಸಂತ್ರಸ್ತರು ಇನ್ನು ಮುಂದೆ ದೂರು ದಾಖಲಿಸಲು ಪೊಲೀಸ್ ಠಾಣೆಗಳಿಗೆ ಅಲೆಯಬೇಕಿಲ್ಲ. ಸೈಬರ್ ಅಪರಾಧ ಪ್ರಕರಣಗಳ ಎಫ್‌ಐಆರ್ ದಾಖಲಾತಿಯನ್ನು ಚುರುಕುಗೊಳಿಸುವ ಹಾಗೂ ಜನಸ್ನೇಹಿಯಾಗಿಸುವ ಉದ್ದೇಶದಿಂದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ...

ತಲೆ ಮರೆಸಿಕೊಂಡಿದ್ದ ಸ್ವತಂತ್ರ ಭಾರದ್ವಾಜ್‌ ಅರೆಸ್ಟ್ : ಪೋಕ್ಸೋ ಅಡಿ ಮತ್ತೊಂದು ಪ್ರಕರಣ ದಾಖಲು

ದೆಹಲಿಯ ಜಂತರ್ ಮಂತರ್‌ನಲ್ಲಿ ಜುಲೈನಲ್ಲಿ ನಡೆದ ಸಿಜೆಪಿ ಪ್ರತಿಭಟನೆ ವೇಳೆ ವಿದ್ಯಾರ್ಥಿ ಹೋರಾಟಗಾರ್ತಿ ನಿಶು ಆಝಾದ್ ಅವರ ತಂದೆಯ ಮೇಲೆ ಹಲ್ಲೆ ನಡೆಸಿದ ಆರೋಪ ಹೊತ್ತಿರುವ ಹಿಂದುತ್ವ ಸೋಶಿಯಲ್ ಮೀಡಿಯಾ 'ಇನ್‌ಫ್ಲುಯೆನ್ಸರ್' ಸ್ವತಂತ್ರ...

ಆರ್‌ಎಸ್ಎಸ್ ಬೆಂಬಲಿತ ಗುಂಪುಗಳಿಂದ ದೇಣಿಗೆ ಸ್ವೀಕರಿಸದಿರಲು ಅಮೆರಿಕದ ರಾಜಕಾರಣಿಗಳಿಂದ ಪ್ರತಿಜ್ಞೆ

ಅಮೆರಿಕದ ಸುಮಾರು 90 ಜನಪ್ರತಿನಿಧಿಗಳು ಮತ್ತು ರಾಜಕೀಯ ಅಭ್ಯರ್ಥಿಗಳು ರಾಷ್ಟ್ರೀಯ ಸ್ವಯಂಸೇವಕ ಸಂಘಕ್ಕೆ (RSS) ಬೆಂಬಲಿತ ಗುಂಪುಗಳಿಂದ ರಾಜಕೀಯ ದೇಣಿಗೆಗಳನ್ನು ಸ್ವೀಕರಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾರೆ. ಹಿಂದುತ್ವ ಸಂಘಟನೆಯ ಮುಖ್ಯಸ್ಥ ಮೋಹನ್ ಭಾಗವತ್...

KPSC ಪರೀಕ್ಷಾ ಅಕ್ರಮ: ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ, ರಾಜಕೀಯ ಪಕ್ಷ ನೋಡದೆ ನಿರ್ದಾಕ್ಷಿಣ್ಯ ಕ್ರಮ – ಸಚಿವ ಪ್ರಿಯಾಂಕ್ ಖರ್ಗೆ

ಕೆಪಿಎಸ್‌ಸಿ (KPSC) ಪರೀಕ್ಷಾ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಅತ್ಯಂತ ಗಂಭೀರವಾಗಿದ್ದು, ಇದರಲ್ಲಿ ಭಾಗಿಯಾಗಿರುವ ಯಾರನ್ನೇ ಆಗಲಿ ರಕ್ಷಿಸುವ ಪ್ರಶ್ನೆಯೇ ಇಲ್ಲ. ಆರೋಪಿಗಳು ಎಷ್ಟೇ ಪ್ರಭಾವಶಾಲಿಗಳಾಗಿದ್ದರೂ ಅಥವಾ ಯಾವುದೇ ರಾಜಕೀಯ ಪಕ್ಷಕ್ಕೆ...

ಉತ್ತರ ಪ್ರದೇಶ: ಸಹಾರನ್‌ಪುರ ಕಲೆಕ್ಟರೇಟ್ ಮಸೀದಿ ಧ್ವಂಸ, ‘ಬುಲ್ಡೋಜರ್ ರಾಜಕಾರಣ’ಕ್ಕೆ ವಿಪಕ್ಷಗಳಿಂದ ಖಂಡನೆ!

ಸಹಾರನ್‌ಪುರ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಸಹಾರನ್‌ಪುರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿದ್ದ ಮಸೀದಿಯನ್ನು ಶನಿವಾರ (ಸೆಪ್ಟೆಂಬರ್ 5) ಮುಂಜಾನೆ ಭಾರಿ ಪೊಲೀಸ್ ಭದ್ರತೆಯೊಂದಿಗೆ ಬುಲ್ಡೋಜರ್ ಬಳಸಿ ಧ್ವಂಸಗೊಳಿಸಲಾಗಿದೆ. ಈ ಕಾರ್ಯಾಚರಣೆಗೆ ವ್ಯಾಪಕ ಆಕ್ರೋಶ...

ಗೌರಿ ಹತ್ಯೆಯಾಗಿ 9 ವರ್ಷ : ಹೋರಾಟಗಾರರು-ಒಡನಾಡಿಗಳಿಂದ ಗೌರವ ನಮನ

ದಿಟ್ಟ ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್‌ ಅವರ 9ನೇ ವರ್ಷದ ಹುತಾತ್ಮ ದಿನದ ಅಂಗವಾಗಿ ಇಂದು (ಸೆ.5) ಬೆಳಿಗ್ಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಅವರ ಸಮಾಧಿ ಬಳಿ ‘ಗೌರಿ ನಮನ ಕಾರ್ಯಕ್ರಮ‘ ನಡೆಯಿತು. ಗೌರಿ ಅವರ...

ರಾಯಚೂರಿನಲ್ಲಿ ದಲಿತರ ಸರಣಿ ಕೊಲೆ: ಸಂತ್ರಸ್ತರ ಮನೆಗೆ ಸಚಿವ ಕೆ.ಎಚ್. ಮುನಿಯಪ್ಪ ಭೇಟಿ

ರಾಯಚೂರು ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ದಲಿತರ ಮೇಲಿನ ಸರಣಿ ದೌರ್ಜನ್ಯ ಮತ್ತು ಕೊಲೆ ಪ್ರಕರಣಗಳು ಜನಾಕ್ರೋಶಕ್ಕೆ ಕಾರಣವಾಗಿವೆ. ಈ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಸಚಿವ ಕೆ.ಎಚ್. ಮುನಿಯಪ್ಪ ಅವರು ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ...