Homeದಿಟನಾಗರಫ್ಯಾಕ್ಟ್‌ಚೆಕ್: ರಾಜಸ್ಥಾನದ ಪೋಖ್ರಾನ್‌ನಲ್ಲಿನ ಬಾಂಬ್ ಸ್ಫೋಟವನ್ನು ಮಾಧ್ಯಮಗಳು ಮರೆಮಾಡುತ್ತಿವೆಯೆ?

ಫ್ಯಾಕ್ಟ್‌ಚೆಕ್: ರಾಜಸ್ಥಾನದ ಪೋಖ್ರಾನ್‌ನಲ್ಲಿನ ಬಾಂಬ್ ಸ್ಫೋಟವನ್ನು ಮಾಧ್ಯಮಗಳು ಮರೆಮಾಡುತ್ತಿವೆಯೆ?

ರಾಜಸ್ಥಾನದ ಪೋಖ್ರಾನ್‌ನಲ್ಲಿ ಬಾಂಬ್‌ ಸ್ಫೋಟಗೊಂಡಿದ್ದು, ಈ ಸುದ್ದಿಯನ್ನು ಮಾಧ್ಯಮಗಳು ಮರೆಮಾಡುತ್ತಿವೆ ಎಂಬ ಸಂದೇಶವು ವೈರಲಾಗಿದೆ.

- Advertisement -
- Advertisement -

’ರಾಜಸ್ಥಾನದ ಪರಮಾಣು ಸ್ಥಾವರವಿರುವ ಪೋಖ್ರಾನ್‌ನಲ್ಲಿ ಬಾಂಬ್‌ ಸ್ಪೋಟವಾಗಿ ಅಪಘಾತ ಸಂಭವಿಸಿದೆ ಆದರೆ ಯಾವ ಮಾಧ್ಯಮಗಳು ಪ್ರಸಾರ ಮಾಡಿಲ್ಲ’ ಎಂಬ ಹೇಳಿಕೆಯಿರುವ ಮೂರು ಚಿತ್ರಗಳ ಫೋಟೋ ಕೊಲಾಜ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದೇನು? 

ಜುಲೈ 7 ರಂದು ‘ಹಕೂಕ್ ಟಿವಿ’ ಎಂಬ ಯೂಟ್ಯೂಬ್‌ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ ವೀಡಿಯೊದಲ್ಲಿಯೂ ಇದೇ ಚಿತ್ರಗಳನ್ನು ಬಳಸಲಾಗಿತ್ತು.

“ಪೋಖ್ರಾನ್ ಪರಮಾಣು ಸ್ಥಾವರದಲ್ಲಿ ಮೂರು ಬಾಂಬ್‌ಗಳನ್ನು ತಯಾರಿಸಲಾಗುತ್ತಿದ್ದು, ಅದರಲ್ಲಿ ಒಂದು ಸ್ಫೋಟಗೊಂಡಿದೆ” ಎಂದು ವೀಡಿಯೊದಲ್ಲಿನ ನಿರೂಪಣೆಯು ಹೇಳುತ್ತದೆ. ಈ ಸುದ್ದಿಯನ್ನು ಮಾಧ್ಯಮಗಳು ಮರೆಮಾಡುತ್ತಿವೆ ಎಂದು ಅದು ತಿಳಿಸಿದೆ.

ಅಲ್ಲದೆ ಚಿತ್ರಗಳನ್ನು ಟ್ವಿಟ್ಟರ್‌ನಲ್ಲಿ ಕೂಡಾ ಹಂಚಿಕೊಳ್ಳಲಾಗಿದೆ.

ಫ್ಯಾಕ್ಟ್‌ಚೆಕ್

ಮೊದಲನೆಯದಾಗಿ ಪೋಖ್ರಾನ್‌ನಲ್ಲಿ ಯಾವುದೇ ಪರಮಾಣು ಸ್ಥಾವರವಿಲ್ಲ. ಭಾರತ ತನ್ನ ಪರಮಾಣು ಪರೀಕ್ಷೆಗಳನ್ನು ಮೊದಲು 1974 ರಲ್ಲಿ ಮತ್ತು ನಂತರ 1998 ರಲ್ಲಿ ಪೋಖ್ರಾನ್‌ನಲ್ಲಿ ನಡೆದೆ ಅಷ್ಟೆ.

1 ನೇ ಚಿತ್ರ:

ಚಿತ್ರಗಳನ್ನು Yandex ಎಂಬ ಸರ್ಚ್ ಎಂಜಿನ್ ಬಳಸಿ ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಈ ಚಿತ್ರವು 2017 ರದ್ದಾಗಿದ್ದು ಹಾಗೂ ಕಾಬೂಲ್‌ನದ್ದಾಗಿದೆ ಎಂದು ತಿಳಿದು ಬರುತ್ತದೆ. ‘ದಿ ಲೋಕಲ್’ ಎಂಬ ಜರ್ಮನ್ ವೆಬ್‌ಸೈಟ್‌ನ ಲೇಖನದಲ್ಲಿ ಇದೇ ಚಿತ್ರವನ್ನು ಬಳಸಲಾಗಿದೆ.

2017 ರಲ್ಲಿ ಕಾಬೂಲ್ ನಗರವನ್ನು ಬೆಚ್ಚಿಬೀಳಿಸಿದ ಈ ಬಾಂಬ್ ಸ್ಫೋಟದಲ್ಲಿ ಕನಿಷ್ಠ 80 ಜನರು ಸಾವನ್ನಪ್ಪಿದ್ದಾರೆ ಎಂದು ಲೇಖನವು ಉಲ್ಲೇಖಿಸಿದೆ. ಇದೇ ಚಿತ್ರವನ್ನು ಬೇರೆ ವೆಬ್‌ಸೈಟ್‌ಗಳು ಕೂಡಾ ಬಳಸಿದ್ದು ಇದೇ ಸನ್ನಿವೇಶವನ್ನು ಹೇಳಿವೆ. ಚಿತ್ರವು ‘ರಫಿಯುಲ್ಲಾ ಕಲೀಮ್ / ಡಿಪಿಎ’ ಎಂಬವರ ಕೃಪೆ ಎಂದು ಕೂಡಾ ಉಲ್ಲೇಖಿಸಲಾಗಿದೆ.

2 ನೇ ಚಿತ್ರ:

ಈ ಚಿತ್ರವನ್ನು ರಿವರ್ಸ್ ಸರ್ಚ್ ನಡೆಸಿದಾಗ 2015 ರಲ್ಲಿ ಬಿಬಿಸಿಯಲ್ಲಿ ಪ್ರಕಟವಾದ ಲೇಖನ ಕಾಣಸಿಗುತ್ತದೆ. ಲೇಖನದಲ್ಲಿ ಈ ಚಿತ್ರವಿದ್ದು, ಅದನ್ನು ಕೆಂಟ್‌ ನ ಕ್ಲಿಫ್‌ ಎಂಬಲ್ಲಿ ಬ್ರಿಟಿಷ್ ಸೈನ್ಯವು ನಾಶಪಡಿಸಿದ ಬಾಂಬ್ ಎಂದು ಉಲ್ಲೇಖಿಸಿದೆ.

ನಾವು ಚಿತ್ರದ ಬಗ್ಗೆ ಮತ್ತಷ್ಟು ಹುಡುಕಿದಾಗ, ದಿ ಗಾರ್ಡಿಯನ್‌ನಲ್ಲಿ ಕೂಡಾ ಈ ಚಿತ್ರಕ್ಕೆ ‘ರಿಚರ್ಡ್ ವ್ಯಾಟ್ / ಪಿಎ’ ಎಂಬವರಿಗೆ ಕೃಪೆ ಕೊಟ್ಟು ಬ್ರಟಿಷ್‌ ಸೈನ್ಯ ಬಾಂಬನ್ನು ನಾಶಪಡಿಸಿತು ಎಂದು ಉಲ್ಲೇಖಿಸಿದೆ. ಅಲ್ಲದೆ ಈ ಚಿತ್ರವನ್ನು ಕ್ಲಿಕ್ಕಿಸಿದ ಫೋಟೋಗ್ರಾಫರ್‌ ರಿಚರ್ಡ್ ವ್ಯಾಟ್‌ ಅವರ ಟ್ವಿಟ್ಟರ್‌ ಅಕೌಂಟ್‌ನಲ್ಲಿಯೂ ಕೂಡಾ ಈ ಚಿತ್ರವನ್ನು ಕಾಣಬಹುದಾಗಿದೆ.

3 ನೇ ಚಿತ್ರ:

ಈ ಚಿತ್ರವನ್ನು ಕೂಡಾ ರಿವರ್ಸ್ ಸರ್ಚ್ ಮಾಡಿದಾಗ ’ಟೋಲೋ ನ್ಯೂಸ್‌’ನ ಮುಖ್ಯಸ್ಥರ ಟ್ವಿಟರ್ ಹ್ಯಾಂಡಲ್‌ನಿಂದ ಬಂದ ಚಿತ್ರವಾಗಿದೆ. ಇದು ಅಫ್ಘಾನಿಸ್ತಾನ ಮೂಲದ ಸುದ್ದಿ ಚಾನೆಲ್ ಆಗಿದ್ದು, ಈ ಚಿತ್ರಗಳು 2017 ರ ಕಾಬೂಲ್ ದಾಳಿಯ ಚಿತ್ರವಾಗಿದೆ ಟ್ವೀಟ್ ಉಲ್ಲೇಖಿಸಿದೆ.

ಈ ಚಿತ್ರವನ್ನು ಅವರ ಖಾತೆಯಲ್ಲಿ ಪರಿಶೀಲಿಸಲು ಸಾಧ್ಯವಾಗದಿದ್ದರು ಆದರೆ ಅದು 2017ರ ಚಿತ್ರವೆಂದು ಹೇಳಬಹುದು.

ಒಟ್ಟಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಹರಿದಾಡುತ್ತಿರುವಂತೆ ಚಿತ್ರವೂ ಪೋಖ್ರಾನ್‌ ಪ್ರದೇಶದ್ದಲ್ಲ ಎಂದು ಸಾಬೀತಾಗುತ್ತದೆ.


ಓದಿ: ಈ ಫೋಟೊಗಳು ರಾಹುಲ್ ಗಾಂಧಿ ಪ್ರತಿನಿಧಿಸುವ ವಯನಾಡ್‌ನವಲ್ಲ.. ಬದಲಿಗೆ ಬಿಹಾರದವು‌‌; ಫ್ಯಾಕ್ಟ್‌‌ಚೆಕ್‌


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯ ಅಧಿಕೃತ ‘ಎಕ್ಸ್’ ಖಾತೆ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಚುನಾವಣಾ ಆಯೋಗ

0
ವಿವಿಧ ಗುಂಪುಗಳು ಮತ್ತು ವರ್ಗಗಳ ನಡುವೆ ದ್ವೇಷ ಹರಡಲು ಮತ್ತು ಉತ್ತೇಜಿಸಲು ಯತ್ನಿಸುತ್ತಿರುವ ಆರೋಪದ ಮೇಲೆ ಬಿಜೆಪಿಯ ಅಧಿಕೃತ ಎಕ್ಸ್ ಖಾತೆ ವಿರುದ್ಧ ಚುನಾವಣಾ ಆಯೋಗ ಎಫ್‌ಐಆರ್‌ನ್ನು ದಾಖಲಿಸಿದೆ. ಈ ಕುರಿತು ಚುನಾವಣಾ ಆಯೋಗ...