ಪಶ್ವಿಮ ಬಂಗಾಳದ ಮುರ್ಶಿದಾಬಾದ್‌ನಲ್ಲಿ ಮುಸ್ಲಿಮರು ಹಿಂದೂ ದೇವತೆ ಕಾಳಿ ಮಾತೆಯ ವಿಗ್ರಹ ಸುಟ್ಟಿದ್ದಾರೆ ಹಾಗೂ ದೇವಸ್ಥಾನ ಧ್ವಂಸಗೊಳಿಸಿ ಹಿಂದೂ ದೇವತೆಗಳಿಗೆ ಅಪಮಾನ ಮಾಡಿದ್ಧಾರೆ ಎಂದು ಪ್ರತಿಪಾದಿಸಿ ಸಾಮಾಜಿಕ ಜಾಲತಾಣದಲ್ಲಿ ಸುಟ್ಟ ದೇವತೆಯ ಮೂರ್ತಿಯೊಂದರ ಚಿತ್ರ ವೈರಲ್ ಆಗುತ್ತಿದೆ.
ಇದೇ ಪೋಟೋಗಳನ್ನು ಟ್ವೀಟರ್‌ನಲ್ಲಿ ಹಂಚಿಕೊಂಡಿರುವ ಬಿಜೆಪಿ ಸಂಸದ ಅರ್ಜುನ್ ಸಿಂಗ್ ಎಂಬುವರು, ಪಶ್ಚಿಮ ಬಂಗಾಳದ ಮುರ್ಶಿದಾಬಾದ್‌ನಲ್ಲಿ ಈ ಘಟನೆ ನಡೆದಿದೆ. ಮಮತಾ ಬ್ಯಾನರ್ಜಿ ಅವರ ಆಡಳಿತದಲ್ಲಿ ಮುಸ್ಲಿಂ ಸಮುದಾಯದ ಜನರು ಕಾಳಿ ಮಾತೆಯ ವಿಗ್ರಹಕ್ಕೆ ಬೆಂಕಿ ಇಟ್ಟಿದ್ದಾರೆ. ಇದು ಮುಖ್ಯಮಂತ್ರಿ ದೀದಿಯ ಜಿಹಾದಿ ರಾಜಕೀಯಕ್ಕೆ ಉದಾಹರಣೆಯಾಗಿದೆ ಎಂದು ಅವರು ಆರೋಪಿಸಿದ್ದರು.
The jihadi nature of Didi's politics is now hell bent on destroying Hindu religion and culture.
See how one religious group has attacked and destroyed a temple and burned the idol of Maa Kali in Murshidabad area of West Bengal.Shameful. pic.twitter.com/lTnyiV9ctV
— Arjun Singh (@ArjunsinghWB) September 1, 2020
ಹಲವಾರು ಸಾಮಾಜಿಕ ಜಾಲತಾಣ ಬಳಕೆದಾರರೂ ಕೂಡಾ ಇದೇ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಆ ಪೋಸ್ಟ್‌ನ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.
Rigveda, the most valuable treasure of the #ancient world has been preserved in the form of #manuscripts in #India and handed down over centuries from generation to generation. #ExploreHeritageDiscoverYourself @prahladspatel @secycultureGOI @PMOIndia @PIBCulture @pspoffice pic.twitter.com/Gv0qDNtN5e
— Ministry of Culture (@MinOfCultureGoI) September 2, 2020
ಪೋಸ್ಟ್‌ನ ಆರ್ಕವೈ ಮಾಡಲಾದ ಆವೃತ್ತಿಯನ್ನು ಇಲ್ಲಿ ಕಾಣಬಹುದು.
ಪ್ರತಿಪಾದನೆ: ಮುಸ್ಲಿಮರು ಕಾಳಿ ದೇವರ ವಿಗ್ರಹ ಸುಟ್ಟು, ದೇವಸ್ಥಾನ ದ್ವಂಸಗೊಳಿದ್ದಾರೆ.
ಸತ್ಯಾಂಶ: ಕಾಳಿ ದೇವಸ್ಥಾನವನ್ನು ಯಾವುದೇ ಗುಂಪು ದ್ವಂಸ ಮಾಡಿಲ್ಲ. ದೇವಸ್ಥಾನದಲ್ಲಿ ಆಕಸ್ಮಿಕವಾಗಿ ಬೆಂಕಿ ಅವಘಡ ಸಂಭವಿಸಿದ್ದು, ಆ ಸಮಯದಲ್ಲಿ ವಿಗ್ರಹ ಸುಟ್ಟಿತ್ತು. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿರುವ ಪ್ರತಿಪಾದನೆ ತಪ್ಪಾಗಿದೆ.
ಅರ್ಜುನ್ ಸಿಂಗ್ ಅರೋಪಿಸಿ ಮಾಡಿರುವ ಟ್ವೀಟ್‌ಅನ್ನು ಪ್ರತಿಕ್ರಿಯಿಸಿ ರೀಟ್ವೀಟ್ ಮಾಡಿರುವ ಮುರ್ಶಿದಾಬಾದ್ ಪೊಲೀಸರು ಇದಕ್ಕೆ ಸ್ಪಷ್ಟನೆ ನೀಡಿದ್ದು, “ಮುಸ್ಲಿಮರು ಈ ದೇಗುಲಕ್ಕೆ ಬೆಂಕಿ ಇಟ್ಟರು ಎಂಬ ಆಪಾದನೆಯನ್ನು ಸುಳ್ಳು. ದೇವಾಲಯಕ್ಕೆ ಆಕಸ್ಮಿಕವಾಗಿ ಬೆಂಕಿ ಬಿದ್ದಿದ್ದು, ಆ ಸಂದರ್ಭದಲ್ಲಿ ದೇವರ ವಿಗ್ರಹ ಸುಟ್ಟಿದೆ. ಅಲ್ಲದೆ, ದೇವಸ್ಥಾನದಲ್ಲಿ ಹಲವು ವಸ್ತುಗಳು ಸುಟ್ಟುಹೋಗಿವೆ” ಎಂದು ಹೇಳಿದ್ದಾರೆ.
ಇದನ್ನೂ ಓದಿ: ಫ್ಯಾಕ್ಟ್‌ಚೆಕ್: ಹಜ್ ಯಾತ್ರೆಯಲ್ಲಿ ಪಾಕಿಸ್ತಾನಿ ಉಗ್ರಗಾಮಿಗಳನ್ನು ಅಮೀರ್ ಖಾನ್ ಭೇಟಿಯಾಗಿಲ್ಲ.

As stated by mandir committee it was a fire accident. Temple authorities are taking necessary action. Local police and administration coordinating.
Do not share to anyone without verifying personally.
You may contact mandir committee for further details. pic.twitter.com/YTZJFwjWiE— Murshidabad Police (@MurshidabadPol1) September 1, 2020
ಒಟ್ಟಾರೆಯಾಗಿ ಹೇಳುವುದಾದರೆ, ಕಾಳಿ ದೇವಾಲಯಕ್ಕೆ ಆಕಸ್ಮಿಕವಾಗಿ ಹೊತ್ತಿಕೊಂಡ ಬೆಂಕಿಯಿಂದ ದೇವಾಲಯ ಸುಟ್ಟಿದ್ದು, ಮುಸ್ಲೀಮರು ದೇವಸ್ಥಾನವನ್ನು ದ್ವಂಸ ಮಾಡಿದ್ದಾರೆ ಎಂಬ ಬಿಜೆಪಿ ನಾಯಕರ ವಾದ ಸುಳ್ಳಾಗಿದೆ.


