Homeದಿಟನಾಗರಫ್ಯಾಕ್ಟ್‌‌ಚೆಕ್: ಕೊರೊನಾ ನೆಪದಲ್ಲಿ ಈ ವೈದ್ಯ ಕಿಡ್ನಿ ಕದಿಯುತ್ತಿದ್ದರೆ? ಏನಿದು ಪ್ರಕರಣ?

ಫ್ಯಾಕ್ಟ್‌‌ಚೆಕ್: ಕೊರೊನಾ ನೆಪದಲ್ಲಿ ಈ ವೈದ್ಯ ಕಿಡ್ನಿ ಕದಿಯುತ್ತಿದ್ದರೆ? ಏನಿದು ಪ್ರಕರಣ?

- Advertisement -
- Advertisement -

ಹಳೆಯ ಮೂತ್ರಪಿಂಡ ಕಸಿ ದಂಧೆಯಲ್ಲಿ ಭಾಗಿಯಾಗಿರುವ ವೈದ್ಯರ ಬಂಧನದ ದಶಕದಷ್ಟು ಹಳೆಯ ಸುದ್ದಿಯನ್ನು ಕೊರೊನಾ ವೈರಸ್ ಹೆಸರಲ್ಲಿ ತಪ್ಪಾಗಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿರುವ ವೈರಲ್ ಚಿತ್ರವೊಂದನ್ನು “ಮೂತ್ರಪಿಂಡ ವ್ಯಾಪಾರಕ್ಕಾಗಿ ಕೊರೊನಾ ನೆಪದಲ್ಲಿ 125 ರೋಗಿಗಳನ್ನು ಕೊಂದ ವೈದ್ಯರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ” ಎಂದು ವೈರಲ್ ಮಾಡಲಾಗುತ್ತಿದೆ.

ಆದರೆ ಈ ಚಿತ್ರದಲ್ಲಿ ಇರುವ ವೈದ್ಯ 2004 ರಲ್ಲಿ ಮೊದಲ ಬಾರಿಗೆ ಬಂಧನಕ್ಕೊಳಗಾಗಿದ್ದರು. ಇದರ ನಂತರ ಅವರಿಗೆ 2020 ರ ಜನವರಿಯಲ್ಲಿ 20 ದಿನಗಳ ಪೆರೋಲ್ ದೊರೆತಿದ್ದು, ಆಗ ನಾಪತ್ತೆಯಾಗಿದ್ದ ಅವರನ್ನು ಜುಲೈ 28 ರಂದು ಮತ್ತೆ ಬಂಧಿಸಲಾಯಿತು ಎಂದು ವರದಿಯಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವುದೇನು?

ಮೇಲೆ ತಿಳಿಸಿದಂತೆ ಹಲವಾರು ಜನರು ಇದನ್ನು ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ವೈರಲ್ ಮಾಡಿದ್ದಾರೆ. ಈ ಸಂದೇಶಗಳು ದೆಹಲಿ ಪೊಲೀಸರು ಬಂಧಿಸಿರುವ ಡಾ.ದೇವೇಂದ್ರ ಶರ್ಮಾ ಕರೋನಾ ವೈರಸ್ ರೋಗನಿರ್ಣಯದ ಹೆಸರಿನಲ್ಲಿ ರೋಗಿಗಳ ಮೂತ್ರಪಿಂಡಗಳನ್ನು ಮಾರಾಟ ಮಾಡಿದ್ದಾರೆ.  ತನ್ನ ವಿರುದ್ಧದ ಸಾಕ್ಷ್ಯಗಳನ್ನು ತೊಡೆದುಹಾಕಲು ಈ ವೈದ್ಯ ರೋಗಿಗಳ ಮೃತ ದೇಹಗಳನ್ನು ಮೊಸಳೆಗಳಿಗೆ ಆಹಾರವಾಗಿ ನೀಡಿದ್ದರು ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಫ್ಯಾಕ್ಟ್‌ಚೆಕ್

ಈ ಸಂದೇಶವು ಟೈಮ್ಸ್ ಆಫ್ ಇಂಡಿಯಾ ವರದಿಯ ಚಿತ್ರದೊಂದಿಗೆ ಇದು ಪ್ರಸಾರವಾಗುತ್ತಿದೆ. ಆದರೆ ಇದರಲ್ಲಿ ಕೊರೊನಾ ವೈರಸ್ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ವರದಿಯ ಪ್ರಕಾರ, ಆಯುರ್ವೇದ ವೈದ್ಯ ಡಾ.ದೇವೇಂದ್ರ ಶರ್ಮಾ ಅವರು ಸರಣಿ ಅಪರಾಧಗಳ ಅಪರಾಧಿಯಾಗಿದ್ದು, ಅವರು ಕಿಡ್ನಿ ದಂಧೆ ನಡೆಸುವುದು, ನಕಲಿ ಅನಿಲ ಏಜೆನ್ಸಿ ನಡೆಸುವುದು ಮತ್ತು ಕದ್ದ ವಾಹನಗಳ ಮಾರಾಟ ಮುಂತಾದ ಅಪರಾಧಗಳಲ್ಲಿ ಭಾಗಿಯಾಗಿದ್ದಾರೆ.

ದೇವೇಂದ್ರ ಅವರ ಕ್ರಿಮಿನಲ್ ದಾಖಲೆಯ ವಿವರಗಳನ್ನು ನೀಡುತ್ತಾ, 2004 ರಲ್ಲಿ ಅವರನ್ನು ಮೊದಲು ಬಂಧಿಸಲಾಗಿದ್ದನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇದಾಗಿ ಅವರು 16 ವರ್ಷಗಳ ಕಾಲ ಜೈಲಿನಲ್ಲಿ ಕಳೆದರು. 2020 ರ ಜನವರಿಯಲ್ಲಿ ಉತ್ತಮ ನಡವಳಿಕೆಗಾಗಿ ಅವರು 20 ದಿನಗಳ ಪೆರೋಲ್ ಪಡೆದಿದ್ದರು. ಆದರೆ ಪೆರೋಲ್‌ ಸಮಯದಲ್ಲಿ ಅವರು ನಾಪತ್ತೆಯಾಗಿದ್ದರು. ಜುಲೈ 28 ರಂದು ದೆಹಲಿ ಪೊಲೀಸ್ ಅಪರಾಧ ಶಾಖೆಯು ಅವರನ್ನು ಮತ್ತೆ ಬಂಧಿಸಲಾಯಿತು.

ದಿ ಇಂಡಿಯನ್ ಎಕ್ಸ್‌ಪ್ರೆಸ್ ಮತ್ತು ಎನ್‌ಡಿಟಿವಿ ವರದಿಗಳು ಕೂಡಾ ಇದೇ ರೀತಿಯ ವಿವರಗಳನ್ನು ನೀಡಿವೆ. “ಅವರು ಮೊಸಳೆಗಳನ್ನು ಹೊಂದಿದ್ದ ಕಾಸ್‌ಗಂಜ್‌ನ ಹಜಾರಾ ಕಾಲುವೆಯಲ್ಲಿರುವ ಅಲಿಗಡ್‌ಗೆ ಹೋಗುವ ದಾರಿಯಲ್ಲಿ ಶವಗಳನ್ನು ಎಸೆಯುತ್ತಿದ್ದರು, ಆದ್ದರಿಂದ ಶವಗಳನ್ನು ಹಿಂಪಡೆಯಲು ಯಾವುದೇ ಅವಕಾಶವಿಲ್ಲ” ಎಂದು ಇಂಡಿಯನ್ ಎಕ್ಸ್‌ಪ್ರೆಸ್ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ವರದಿ ಮಾಡಿದೆ.

ದೆಹಲಿ ಪೊಲೀಸ್ ಅಪರಾಧ ಶಾಖೆಯ ಡಿಸಿಪಿ ರಾಕೇಶ್ ಪವೇರಿಯಾ ಅವರು, ‘ಕೊರೊನಾ ವೈರಸ್‌ಗೂ ಈ ಘಟನೆಗೂ ಯಾವುದೆ ಸಂಬಂಧವಿಲ್ಲವೆಂದಿದ್ದಾರೆಂದು’ ದಿ ಕ್ವಿಂಟ್ ವರದಿ ಮಾಡಿದೆ.

ಸ್ಪಷ್ಟವಾಗಿ ಹೇಳುವುದಾದರೆ, ಮೂತ್ರಪಿಂಡದ ದಂಧೆ ನಡೆಸಿದ್ದಕ್ಕಾಗಿ ಶಿಕ್ಷೆಗೊಳಗಾದ ಸರಣಿ ಅಪರಾಧಗಳ ಅಪರಾಧಿಯ ಬಂಧನವನ್ನು ಕೊರೊನಾ ವೈರಸ್ ಹೆಸರಲ್ಲಿ ಸುಳ್ಳು  ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.


ಓದಿ: ಫ್ಯಾಕ್ಟ್‌‌ಚೆಕ್‌: ಈ ಫೋಟೋ ಅಂಗಾಂಗ ಕಳ್ಳಸಾಗಣೆ ದಂಧೆ ನಡೆಸುವವರದ್ದೇ?


ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನೇಹಾ ಕೊಲೆ ಪ್ರಕರಣ: ‘ತನಿಖೆ ದಿಕ್ಕು ತಪ್ಪುತ್ತಿದೆ’ ಎಂದು ಆರೋಪಿಸಿದ್ದ ತಂದೆ ಕ್ಷಮೆಯಾಚನೆ

0
ಹುಬ್ಬಳ್ಳಿಯ ನೇಹಾ ಕೊಲೆ ಪ್ರಕರಣದ ತನಿಖೆ ದಿಕ್ಕು ತಪ್ಪುತ್ತಿದೆ ಎಂದು ಆರೋಪಿಸಿದ್ದ ಆಕೆಯ ತಂದೆ ನಿರಂಜನಯ್ಯ ಹಿರೇಮಠ ಇದೀಗ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ. ಮಾಹಿತಿಯ ಕೊರತೆಯಿಂದ ಮಗಳ ಕೊಲೆ ಪ್ರಕರಣದ ತನಿಖೆ ದಿಕ್ಕು...