Homeಆರೋಗ್ಯವಂಶವಾಹಿಗಳ (ಜೀನ್ಸ್) ತಿಳಿವಳಿಕೆ ಮೂಡಿಸುತ್ತಿರುವ ಹೊಸ ಸತ್ಯಗಳು: ಹರ್ಷಕುಮಾರ್ ಕುಗ್ವೆ

ವಂಶವಾಹಿಗಳ (ಜೀನ್ಸ್) ತಿಳಿವಳಿಕೆ ಮೂಡಿಸುತ್ತಿರುವ ಹೊಸ ಸತ್ಯಗಳು: ಹರ್ಷಕುಮಾರ್ ಕುಗ್ವೆ

ಈ ಡಿಎನ್‍ಎ ಸಂಶೋಧನೆಗಳು ಮನುಷ್ಯನಿಗೆ ಮನುಷ್ಯ ಗತಚರಿತ್ರೆಯ ಕುರಿತು ಇರುವ ತಪ್ಪು ಕಲ್ಪನೆಗಳನ್ನು ಬುಡಮೇಲು ಮಾಡಬಲ್ಲವು. ಹಾಗೆಯೇ ಚರಿತ್ರೆಯ ಸರಿಯಾದ ತಿಳುವಳಿಕೆಗೆ ಅಧಿಕೃತತೆಯ ಮುದ್ರೆ ಒತ್ತಬಲ್ಲವು, ಇಲ್ಲವೇ ಮನುಕುಲ ಸಾಗಿಬಂದ ದಾರಿಯಲ್ಲಿ ಚಾರಿತ್ರಿಕ ಸತ್ಯಗಳನ್ನು ಕಂಡುಕೊಳ್ಳಲು ಕರಾರುವಕ್ಕಾದ ತಿಳಿವನ್ನು ಸಹ  ನಮಗೆ ನೀಡಬಲ್ಲವು.

- Advertisement -
- Advertisement -

ಕಳೆದ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಎರಡು ಪ್ರತಿಷ್ಠಿತ ಅಂತರರಾಷ್ಟ್ರೀಯ ವಿಜ್ಞಾನ ಪತ್ರಿಕಗೆಳಾದ ‘ಸೈನ್ಸ್’ ಮತ್ತು ‘ಸೆಲ್’ ಪತ್ರಿಕೆಗಳು ಭಾರತೀಯರ ಪುರಾತನ ಇತಿಹಾಸಕ್ಕೆ ಸಂಬಂಧಿಸಿದ ಬಹುಮುಖ್ಯವಾದ ಎರಡು ವರದಿಗಳನ್ನು ಪ್ರಕಟಿಸಿದವು. ದುರದೃಷ್ಟವಶಾತ್ ಇದು ನಮ್ಮ ಮಾಧ್ಯಮಗಳಲ್ಲಿ ಮತ್ತು ಅಕಡೆಮಿಕ್ ವಲಯಗಳಲ್ಲಿ ಎಷ್ಟು ಪ್ರಾಮುಖ್ಯತೆ ಪಡೆದುಕೊಳ್ಳಬೇಕಿತ್ತೋ ಅಷ್ಟನ್ನು ಪಡೆದುಕೊಳ್ಳಲೇ ಇಲ್ಲ. ಇದರಲ್ಲಿ ಹಲವು ಪಟ್ಟಭದ್ರ ಹಿತಾಸಕ್ತಿಗಳು ಕೆಲಸ ಮಾಡಿರುವುದು ಮೇಲ್ನೋಟಕ್ಕೇ ತಿಳಿಯುತ್ತದೆ.

ಭಾರತದ ಪ್ರಾಚೀನ ಇತಿಹಾಸದ ಬಗ್ಗೆ ಇದುವರೆಗೂ ಇತಿಹಾಸಕಾರರಲ್ಲಿ ಒಮ್ಮತವಿಲ್ಲ. ಇಲ್ಲಿ ಎಡ-ಬಲ ದೃಷ್ಟಿಕೋನಗಳು ಇತಿಹಾಸ ರಚನೆಯ ಮೇಲೆ ಗಾಢವಾದ ಪ್ರಭಾವ ಹೊಂದಿವೆ. ಬಲಪಂಥೀಯ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಲೆಲ್ಲಾ ಬಹಳ ಆದ್ಯತೆಯ ಮೇಲೆ ಇತಿಹಾಸ ರಚನೆಯ ಅಂಗಗಳ ಮೇಲೆ ಕೆಂಗಣ್ಣು ಬೀರುತ್ತದೆ. ಹಿಂದೆ 2002-03ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಆರ್‌ಎಸ್‍ಎಸ್ ಸೂತ್ರಧಾರಿಗಳು ಉನ್ನತ ಮಟ್ಟದ ಇತಿಹಾಸದ ಅಂಗಗಳಲ್ಲಿದ್ದ, ತಮ್ಮ ದೃಷ್ಟಿಕೋನಕ್ಕೆ ಸರಿ ಹೊಂದದವರನ್ನೆಲ್ಲಾ ಬದಲಿಸಿದ್ದರು. ಈಗ ನರೇಂದ್ರ ಮೋದಿಯ ಅಧಿಕಾರದಲ್ಲಿ ಇನ್ನೂ ಹತ್ತು ಹೆಜ್ಜೆ ಮುಂದೆ ಹೋಗಿದ್ದಾರೆ. ವೇದಕಾಲದಲ್ಲಿ ಇತ್ತೆಂದು ಹೇಳಲಾಗುವ ‘ಸರಸ್ವತಿ’ ನದಿಯ ಕುರಿತು ಸಂಶೋಧನೆ ನಡೆಸಲು ಇವರು ಕೈಗೊಂಡಿರುವ ಕ್ರಮ ಇದಕ್ಕೆ ಇತ್ತೀಚಿನ ನಿದರ್ಶನ.

ಆದರೆ ಇದುವರೆಗೆ ಯಾವುದನ್ನು ಇತಿಹಾಸಕಾರರಿಂದ, ಪ್ರಾಕ್ತನಶಾತ್ರಜ್ಞರಿಂದ, ಭಾಷಾತಜ್ಞರಿಂದ ಮಾಡಲು ಸಾಧ್ಯವಿರಲಿಲ್ಲವೋ ಅದನ್ನು ಇಂದಿನ ತಳಿ ವಿಜ್ಞಾನ ಬಹುತೇಕ ಸಾಧಿಸಿದೆ ಎನ್ನಬಹುದು. ಅದು ಮನುಷ್ಯನ ಇತಿಹಾಸಕ್ಕೆ ವಿಜ್ಞಾನದ ಸ್ಪರ್ಶ ನೀಡಿಯಾದರೂ ಅಲ್ಲಗಳೆಯಲಾಗದಂತಹ ಮಾನವ ಇತಿಹಾಸವನ್ನು ನಿರೂಪಿಸುವ ಕೆಲಸ. ವಂಶವಾಹಿಗಳ ಸಂಶೋಧನೆಯಲ್ಲಿ ಇದು ಇಂದು ಸಾಧ್ಯವಾಗಿದೆ.

ವಂಶವಾಹಿಗಳ (ಜೀನ್ಸ್) ಕುರಿತ ಮನುಷ್ಯನ ತಿಳಿವಳಿಕೆಗೆ ಶತಮಾನಗಳ ಇತಿಹಾಸವಿದ್ದರೂ ಅವುಗಳಲ್ಲಿ ಅಡಗಿರುವ ಅಗಾಧ ಮಾಹಿತಿಯನ್ನು ಮನುಕುಲದ ಇತಿಹಾಸ ಶೋಧನೆಗೆ ಬಳಸುವ ಪ್ರಕ್ರಿಯೆ ಶುರುವಾಗಿದ್ದು ಮಾತ್ರ ತೀರಾ ಇತ್ತೀಚೆಗೆ. ನಮ್ಮ ಜೀವಕೋಶಗಳ ನ್ಯೂಕ್ಲಿಯಸ್ ಒಳಗಿನ ವರ್ಣತಂತುಗಳನ್ನು ರೂಪಿಸಿರುವ ನಾಲ್ಕು ರಾಸಾಯನಿಕ ನ್ಯೂಕ್ಲಿಯೋಟೈಡ್‍ಗಳಿಂದ (ಎ-ಸಿ-ಟಿ-ಜಿ- ಅಡೆನೈನ್, ಸೈಟೊಸಿನ್, ಥೈಮೈನ್, ಗುವಾನಿನ್) ರಚಿತವಾದ ಸುರುಳಿಯಾಕಾರದ ಡಿಎನ್‍ಎ ಎಳೆಗಳು ತಮ್ಮೊಳಗೆ ಲಕ್ಷಾಂತರ ವರ್ಷಗಳ ಇತಿಹಾಸವನ್ನೇ ಅಡಗಿಸಿಕೊಂಡಿರುತ್ತವೆ ಎಂಬುದು ವಿಸ್ಮಯವೆನಿಸಿದರೂ ಸತ್ಯ ಸಂಗತಿ. ಇದನ್ನು ಮನುಷ್ಯ ಸರಿಯಾಗಿ ಮನವರಿಕೆ ಮಾಡಿಕೊಂಡಿದ್ದು ಕೇವಲ ಎರಡು ದಶಕಗಳ ಈಚೆಗೆ ಎನ್ನಬಹುದು. 2001ರಲ್ಲಿ ವಿಜ್ಞಾನಿಗಳು ಮಾನವ ಜಿನೋಮ್ ಯೋಜನೆಯ (ಜಿನೋಮ್ ಎಂದರೆ ಒಂದು ಜೀವಿಯ ವಂಶವಾಹಿಗಳ ಒಟ್ಟು ಜೋಡಣೆ) ಮೂಲಕ ಅಧ್ಯಯನ ನಡೆಸಲು ತೊಡಗಿದಂದಿನಿಂದ ನಂತರದ ಈ ಎರಡು ದಶಕಗಳಲ್ಲಿ ಅಗಾಧ ಮಾಹಿತಿಯನ್ನು ತಳಿ ವಿಜ್ಞಾನಿಗಳು ಕಲೆಹಾಕಿದ್ದಾರೆ. ಕಳೆದ ಏಳೆಂಟು ವರ್ಷಗಳಲ್ಲಿ ಪ್ರಪಂಚದ ಬಹುತೇಕ ಎಲ್ಲಾ ಜನಾಂಗೀಯ ಹಾಗೂ ಪ್ರಾದೇಶಿಕ ಭಿನ್ನತೆಗಳ ಜನರ ಡಿಎನ್‍ಎ ಮಾದರಿಗಳನ್ನು ಸಂಗ್ರಹಿಸಿ ಅಧ್ಯಯನಕ್ಕೆ ಒಳಪಡಿಸಿದ್ದಾರೆ. ಅವು ಒದಗಿಸಿರುವ ಮಾಹಿತಿ, ತಿಳುವಳಿಕೆಯನ್ನು ತಳಿ ವಿಜ್ಞಾನಿ ಡೇವಿಡ್ ರೀಚ್ ಡಿಎನ್‍ಎಯನ್ನು ಮನುಷ್ಯನ ಗತ ಇತಿಹಾಸದ ವಿವಿಧ ಹಂತಗಳ ಕುರಿತು ಮಾಹಿತಿಯನ್ನು ಒದಗಿಸುವ ‘ಪುರಾತನ ಡಿಎನ್‍ಎ’ ಎಂದೇ ಕರೆದಿದ್ದಾರೆ. ಈ ‘ಪುರಾತನ ಡಿಎನ್‍ಎ’ ನಮ್ಮ ಗತ ಇತಿಹಾಸವನ್ನು ಶೋಧಿಸಿ ಒರೆಗೆ ಹಚ್ಚಲು ಬೇಕಾದ ಅಮೂಲ್ಯ ಸಾಮಗ್ರಿಯನ್ನು ಒದಗಿಸುತ್ತದೆ. ಸದ್ಯದ ಮಟ್ಟಿಗೆ ಇಡೀ ಜಗತ್ತಿನಲ್ಲಿ ಮನುಷ್ಯನ ಚರಿತ್ರೆಯಲ್ಲಿ ನಡೆದಿರುವ ಎಲ್ಲಾ ವಲಸೆಗಳ ಇತಿಹಾಸವನ್ನು, ವಲಸೆಗಳ ಸ್ವರೂಪಗಳನ್ನು, ಜನಾಂಗೀಯ ಸಂಬಂಧಗಳನ್ನು ಸ್ಪಷ ರೂಪದಲ್ಲಿ ಮುಂದಿಡಲು ಈ ‘ಪುರಾತನ ಡಿಎನ್‍ಎ’ ಯಶಸ್ವಿಯಾಗಿದೆ ಎನ್ನಬಹುದು.

ಈ ಡಿಎನ್‍ಎ ಸಂಶೋಧನೆಗಳು ಮನುಷ್ಯನಿಗೆ ಮನುಷ್ಯ ಗತಚರಿತ್ರೆಯ ಕುರಿತು ಇರುವ ತಪ್ಪು ಕಲ್ಪನೆಗಳನ್ನು ಬುಡಮೇಲು ಮಾಡಬಲ್ಲವು. ಹಾಗೆಯೇ ಚರಿತ್ರೆಯ ಸರಿಯಾದ ತಿಳುವಳಿಕೆಗೆ ಅಧಿಕೃತತೆಯ ಮುದ್ರೆ ಒತ್ತಬಲ್ಲವು, ಇಲ್ಲವೇ ಮನುಕುಲ ಸಾಗಿಬಂದ ದಾರಿಯಲ್ಲಿ ಚಾರಿತ್ರಿಕ ಸತ್ಯಗಳನ್ನು ಕಂಡುಕೊಳ್ಳಲು ಕರಾರುವಕ್ಕಾದ ತಿಳಿವನ್ನು ಸಹ  ನಮಗೆ ನೀಡಬಲ್ಲವು.

ಭಾರತದ ಮಟ್ಟಿಗೆ ಹೇಳುವುದಾದರೆ ಇದುವರೆಗೆ ನಡೆದಿರುವ ಪುರಾತನ ಡಿಎನ್‍ಎ ಸಂಶೋಧನೆಗಳು ಭಾರತದ ಪ್ರಾಚೀನ ಜನಾಂಗೀಯ ವಲಸೆಗಳ ಕುರಿತು, ಇಲ್ಲಿ ಸಂಭವಿಸಿರುವ ಜನಾಂಗೀಯ ಸಂಕರಗಳ ಕುರಿತು, ಯಾವಜನಾಂಗೀಯ, ಭಾಷಿಕ ಸಮುದಾಯಗಳು ಯಾರ ಮೇಲೆ ಯಾವ ಕಾಲಘಟ್ಟದಲ್ಲಿ ಆಕ್ರಮಣಕಾರಿಯಾಗಿ ವರ್ತಿಸಿದವು ಎಂಬ ಕುರಿತು, ಇಲ್ಲಿ ಜಾತಿಗಳು ಯಾವಾಗ, ಹೇಗೆ ಹುಟ್ಟಿಕೊಂಡವು ಎಂಬ ಕುರಿತು, ಈ ಜಾತಿಕಟ್ಟು ಕಟ್ಟಳೆಗಳು ಉಂಟು ಮಾಡಿರುವ ಜೈವಿಕ ಪರಿಣಾಮಗಳ ಕುರಿತು, ಹೀಗೆ ನಾನಾ ಚಾರಿತ್ರಿಕ ಸಂಗತಿಗಳ ಕುರಿತು ಬೆಳಕು ಚೆಲ್ಲಿವೆ. ಈ ಸಂಶೋಧನೆಗಳ ಬೆಳಕಿನಲ್ಲಿ ನಾವು ನಮ್ಮ ದೇಶದ ಚರಿತ್ರೆಯನ್ನು ಮತ್ತಷ್ಟು ನಿಖರವಾಗಿ ಕಟ್ಟಿಕೊಳ್ಳಬಹುದಾಗಿದೆ.

ಕಳೆದ ಒಂದು ದಶಕಕ್ಕೂ ಹೆಚ್ಚಿನ ಕಾಲಾವಧಿಯಲ್ಲಿ ನಡೆದಿರುವ ಭಾರತೀಯರ ಕುರಿತ ಡಿಎನ್‍ಎ ಸಂಶೋಧನಗೆಳನ್ನು ಆಳವಾಗಿ ಅಧ್ಯಯನ ನಡೆಸಿ ಅದರ ಸಾರವನ್ನು ಸೊಗಸಾಗಿ ನಿರೂಪಿಸಿದವರು ಟೋನಿ ಜೋಸೆಫ್. ಅವರುತಮ್ಮ ‘ಅರ್ಲಿ ಇಂಡಿಯನ್ಸ್” ಎಂಬ ಕೃತಿಯಲ್ಲಿ ಈ ತಳಿ ವಿಜ್ಞಾನ ಭಾರತೀಯರ ಇತಿಹಾಸದ ಕುರಿತು ಏನು ಹೇಳುತ್ತದೆ ಎಂಬುದನ್ನು ಸರಳವಾಗಿ ವಿವರಿಸಿದ್ದಾರೆ. ಹಾಗೆಯೇ ಈ ಎಲ್ಲಾ ಸಂಶೋಧನೆಗಳಲ್ಲಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡಿರುವ ಡೇವಿಡ್ ರೀಚ್ ಬರೆದ “ಹೂ ವಿ ಆರ್ ಅಂಡ್ ಹೌ ವಿ ಗಾಟ್ ಹಿಯರ್’ ಎಂಬ ಕೃತಿಯಲ್ಲಿ ಇಡೀಜಗತ್ತಿನ ವಲಸೆಗಳ ಕುರಿತು ಡಿಎನ್‍ಎ ಸಂಶೋಧನೆ ಅರುಹಿದ ಮಾಹಿತಿಗಳನ್ನು ನೀಡಿದ್ದಾರೆ. ಇದರಲ್ಲಿ ಭಾರತದ ಪ್ರಾಚೀನ ಕಾಲದ ವಲಸೆಗಳ ಕುರಿತು ಸಹ ವಿವರವಾಗಿ ಒಂದು ಅಧ್ಯಾಯದಲ್ಲಿ ಬರೆದಿದ್ದಾರೆ.

ಈ ಪುಸ್ತಕ ಪ್ರಕಟವಾದ ನಂತರದಲ್ಲಿಯೇ ಆರಂಭದಲ್ಲಿ ಹೇಳಿದ ವರದಿಗಳು ಬಿಡುಗಡೆಯಾಗಿರುವುದು.

ಇಂದು ನಮ್ಮ ಸಮಾಜದಲ್ಲಿನ ಅನೇಕ ಸಂಕ್ಷೋಭೆಗಳಿಗೆ, ಜನಾಂಗೀಯ ಮತ್ತು ಧಾರ್ಮಿಕ ಹಿಂಸೆಗಳಿಗೆ ಭಾರತದ ‘ಚರಿತ್ರೆಯನ್ನು ತಿರುಚಿ, ವಿಕೃತಗೊಳಿಸಿ’ ಅವುಗಳನ್ನೇ ಸತ್ಯವೆಂದು ಜನರಿಗೆ ನಂಬಿಸಿರುವುದು ಮುಖ್ಯಕಾರಣ. ಬಲಪಂಥೀಯ ಶಕ್ತಿಗಳು ಚರಿತ್ರೆಯನ್ನು ಒಂದು ಹತಾರವಾಗಿ ಬಳಸಿಕೊಂಡ ಪರಿ ಇದು. ಹೀಗಾಗಿ ಜನರಿಗೆ ಚರಿತ್ರೆಯ ಕುರಿತ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ವಾಸ್ತವ ಚರಿತ್ರೆಯನ್ನು ಹೇಳುವುದು ಬಹಳ ಮುಖ್ಯ. ಈ ನಿಟ್ಟಿನಲ್ಲಿ ಇತ್ತೀಚಿನ ಡಿಎನ್‍ಎ ಸಂಶೋಧನೆಗಳು ಹೆಚ್ಚಿನ ಬಲವನ್ನು ನೀಡಿವೆ. ಅವುಗಳನ್ನು ಜನರ ಬಳಿಗೆ ಹೇಗೆ ಕೊಂಡೊಯ್ಯುತ್ತೇವೆ ಎನ್ನುವುದೇ ಈಗ ನಮ್ಮ ಮುಂದಿರುವ ಪ್ರಶ್ನೆ.

(ಮುಂದಿನ ವಾರದ ನ್ಯಾಯಪಥ ಸಂಚಿಕೆಯಲ್ಲಿ ನಿರೀಕ್ಷಿಸಿ: ಡೇವಿಡ್ ರೀಚ್ ಅವರ ಜೊತೆಗೆ ಗಣೇಶ್ ದೇವಿ ಸಂವಾದ)


ಇದನ್ನು ಓದಿ: ದಿನವೊಂದರಲ್ಲಿ 62,538 ಪ್ರಕರಣಗಳ ವರದಿ: 20 ಲಕ್ಷ ದಾಟಿದ ಭಾರತ…

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಯಾವ ಸಂಘಗಳೇ ಆಗಲಿ ಸಂವಿಧಾನದ ಮುಂದೆ ಯಾರೂ ದೊಡ್ಡವರಲ್ಲ’: ಪ್ರಿಯಾಂಕ್ ಖರ್ಗೆ

ಬೆಂಗಳೂರು: ‘ಯಾವ ಸಂಘಗಳೇ ಆಗಲಿ ಸಂವಿಧಾನದ ಮುಂದೆ ಯಾರೂ ದೊಡ್ಡವರಲ್ಲ, ಯಾರೂ ನಿಯಮಗಳಿಗೆ ಅತೀತರಲ್ಲ’ ಎಂದು ಆರ್.ಎಸ್.ಎಸ್ ವಿರುದ್ಧ ಸಚಿವ ಪ್ರಿಯಾಂಕ್ ಖರ್ಗೆ ಮತ್ತೆ ಗುಡುಗಿದ್ದಾರೆ.  ರಾಜ್ಯದ ಗಮನ‌ ಸೆಳೆದಿದ್ದ ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ...

“ಮಾಸ್ಕ್ ಧರಿಸಿದರೂ ಪ್ರಯೋಜನವಿಲ್ಲ”: ದೆಹಲಿ ವಾಯುಮಾಲಿನ್ಯದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್

ದೆಹಲಿಯ ವಾಯುಮಾಲಿನ್ಯ 'ಗಂಭೀರ ಮಟ್ಟ' ತಲುಪಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟ್, ಮಾಸ್ಕ್‌ ಧರಿಸಿದರೂ ಯಾವುದೇ ಪ್ರಯೋಜನವಿಲ್ಲದಂತಾಗಿದೆ. ವಕೀಲರು ವರ್ಚುವಲ್ ಮೂಲಕ ನ್ಯಾಯಾಲಯಕ್ಕೆ ಹಾಜರಾದರೆ ಸಾಕು ಎಂದು ಹೇಳಿದೆ. ವಿವಿಧ ಪ್ರಕರಣಗಳಲ್ಲಿ...

ಛತ್ತೀಸ್‌ಗಢ| ಇಬ್ಬರು ಉನ್ನತ ಕಮಾಂಡರ್‌ಗಳು ಸೇರಿದಂತೆ ಆರು ಜನ ಮಾವೋವಾದಿಗಳ ಎನ್‌ಕೌಂಟರ್‌

ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ನವೆಂಬರ್ 11 ರಂದು ಭದ್ರತಾ ಸಿಬ್ಬಂದಿಯೊಂದಿಗೆ ನಡೆದ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟ ಆರು ಮಾವೋವಾದಿಗಳಲ್ಲಿ ಮಾವೋವಾದಿ ನಾಯಕಿ, ಹಿರಿಯ ಕಾರ್ಯಕರ್ತ ಪಾಪಾ ರಾವ್ ಅವರ ಪತ್ನಿ ಊರ್ಮಿಳಾ ಮತ್ತು ಬುಚಣ್ಣ...

ಗ್ರೆನೇಡ್ ದಾಳಿಗೆ ಸಂಚು ರೂಪಿಸಿದ್ದ, ಪಾಕ್ ಐಎಸ್ಐ ಬೆಂಬಲಿತ ಗುಂಪು: ವಿದೇಶಿ ಮೂಲದ 10 ಹ್ಯಾಂಡ್ಲರ್‌ಗಳ ಬಂಧನ

ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಮಹತ್ವದ ಪ್ರಗತಿ ಸಾಧಿಸಿರುವ ಲುಧಿಯಾನ ಕಮಿಷನರೇಟ್ ಪೊಲೀಸರು, ಪಾಕಿಸ್ತಾನದ ಇಂಟರ್-ಸರ್ವೀಸಸ್ ಇಂಟೆಲಿಜೆನ್ಸ್ (ಐಎಸ್ಐ) ಬೆಂಬಲಿತ ಗ್ರೆನೇಡ್ ದಾಳಿ ಘಟಕದ 10 ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಅವರಿಂದ ಸ್ಪೋಟಕಗಳನ್ನು ವಶಕ್ಕೆ ಪಡೆದಿದ್ದಾರೆ.  ನವೆಂಬರ್...

ಗಾಜಾದಲ್ಲಿ ಮುಂದುವರೆದ ಪ್ಯಾಲೆಸ್ತೀನಿಯನ್ ಮಕ್ಕಳ ಕಾಣೆ ಪ್ರಕರಣ: ಮಕ್ಕಳ ಹಕ್ಕುಗಳ ಗುಂಪು

ಬುಧವಾರ ಪ್ಯಾಲೆಸ್ತೀನಿಯನ್ ಹಕ್ಕುಗಳ ಗುಂಪಿನ ವರದಿಯ ಪ್ರಕಾರ, ಇತ್ತೀಚಿನ ತಿಂಗಳುಗಳಲ್ಲಿ ಗಾಜಾದಿಂದ ಕನಿಷ್ಠ ಆರು ಮಕ್ಕಳು ಕಣ್ಮರೆಯಾಗಿದ್ದಾರೆ ಎಂದು 'ಮಕ್ತೂಬ್‌ ಮೀಡಿಯಾ' ವರದಿ ಮಾಡಿದೆ. ಕಾಣೆಯಾದ ಮಕ್ಕಳ ಕುಟುಂಬಗಳು ಈ ಪ್ರದೇಶದಲ್ಲಿನ ತನ್ನ ಮಿಲಿಟರಿ...

ರೂ. 15 ಲಕ್ಷ ಲಂಚ ಪಡೆದ ಪ್ರಕರಣ : ನ್ಯಾಯಾಧೀಶನ ಮೇಲೆ ಕೇಸ್, ಕೋರ್ಟ್ ಗುಮಾಸ್ತ ಅರೆಸ್ಟ್

ವಾಣಿಜ್ಯ ಮೊಕದ್ದಮೆಯೊಂದರಲ್ಲಿ ಅನುಕೂಲಕರ ಆದೇಶವನ್ನು ಪಡೆಯಲು 15 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಮತ್ತು ಸ್ವೀಕರಿಸಿದ ಆರೋಪದ ಮೇಲೆ ಮುಂಬೈ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಮಜಗಾಂವ್ ಸಿವಿಲ್ ಮತ್ತು ಸೆಷನ್ಸ್...

ಅಲಿಘರ್| ಶಾಲೆಯಲ್ಲಿ ‘ವಂದೇ ಮಾತರಂ’ ಹಾಡುವುದಕ್ಕೆ ಆಕ್ಷೇಪಿಸಿದ ಶಿಕ್ಷಕನ ಅಮಾನತು

ಉತ್ತರ ಪ್ರದೇಶದ ಶಾಹಪುರ್ ಕುತುಬ್‌ನ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ 'ವಂದೇ ಮಾತರಂ' ಹಾಡುವುದನ್ನು ಆಕ್ಷೇಪಿಸಿದ ಆರೋಪದ ಮೇಲೆ ಸರ್ಕಾರಿ ಶಾಲಾ ಶಿಕ್ಷಕನನ್ನು ಅಮಾನತುಗೊಳಿಸಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ರಾಷ್ಟ್ರಗೀತೆಯ ನಂತರ ವಂದೇಮಾತರಂ...

ಚಿತ್ತಾಪುರದಲ್ಲಿ RSS ಪಥಸಂಚಲನಕ್ಕೆ ಷರತ್ತುಬದ್ಧ ಅನುಮತಿ ನೀಡಿದ ಹೈಕೋರ್ಟ್

ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ಆರ್‌ಎಸ್ಎಸ್ ಪಥಸಂಚಲನಕ್ಕೆ ಕರ್ನಾಟಕ ಹೈಕೋರ್ಟ್ ನ ಕಲಬುರಗಿ ಪೀಠ ಷರತ್ತುಬದ್ಧ ಅನುಮತಿ ನೀಡಿದೆ. ಇದರಿಂದ ತೀವ್ರ ಪ್ರತಿಷ್ಠೆಯ ವಿಷಯವಾಗಿದ್ದ ಚಿತ್ತಾಪುರ ಆರ್‌ಎಸ್‌ಎಸ್ ಪಥಸಂಚಲನಕ್ಕೆ ದಿನಾಂಕ ನಿಗದಿಯಾಗಿದೆ. ನವೆಂಬರ್ 16ರ‌ ಭಾನುವಾರ...

ಯಡಿಯೂರಪ್ಪ ವಿರುದ್ದದ ಪೋಕ್ಸೋ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್ ನಕಾರ

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣವನ್ನು ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ. ಈ ಮೂಲಕ ನ್ಯಾಯಮೂರ್ತಿ ಎಂ.ಐ ಅರುಣ್ ಅವರು, ವಿಚಾರಣಾ ನ್ಯಾಯಾಲಯ ಸಂಜ್ಞೇ (cognisance)ಪರಿಗಣಿಸಿ ಯಡಿಯೂರಪ್ಪ ಅವರಿಗೆ ಸಮನ್ಸ್ ಜಾರಿ...

ಗುಜರಾತ್| ಗೋಹತ್ಯೆ ಮಾಡಿದ್ದಕ್ಕಾಗಿ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ನ್ಯಾಯಾಲಯ; ರೂ.18 ಲಕ್ಷ ದಂಡ

ಗುಜರಾತ್‌ನ ಅಮ್ರೇಲಿಯಲ್ಲಿರುವ ಸೆಷನ್ಸ್ ನ್ಯಾಯಾಲಯವು, ಗುಜರಾತ್ ಪ್ರಾಣಿ ಸಂರಕ್ಷಣಾ ಕಾಯ್ದೆಯಡಿ ಗೋಹತ್ಯೆ ಮಾಡಿದ್ದಕ್ಕಾಗಿ ಮೂವರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯದಲ್ಲಿ ಗೋ ಕುಟುಂಬಕ್ಕೆ ಸೇರಿದ ಪ್ರಾಣಿಗಳ ಹತ್ಯೆಯನ್ನು ಕಾನೂನು...