ವಿವಾದಾತ್ಮಕ ಬೋಧಕ ಝಾಕಿರ್ ನಾಯಕ್‌ಗೆ ಮಲೇಷ್ಯಾದಲ್ಲಿ ಪೌರತ್ವ ನೀಡಲಾಗಿದೆ ಎಂಬ ಹೇಳಿಕೆಯಿರುವ ಚಿತ್ರವೊಂದು 2017 ರಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಧರ್ಮಗಳ ನಡುವೆ ದ್ವೇಷವನ್ನು ಹುಟ್ಟುಹಾಕುತ್ತಿದ್ದಾರೆಂಬ ಆರೋಪ ಹೊತ್ತಿರುವ ಝಾಕಿರ್ ನಾಯಕ್ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಯ ವಾಂಟೆಡ್ ಪಟ್ಟಿಯಲ್ಲಿದ್ದಾರೆ.
ಝಾಕಿರ್ ನಾಯಕ್ ಅವರಿಗೆ ಮಲೇಷ್ಯಾ ಸಂಪೂರ್ಣ ಪೌರತ್ವ ನೀಡಿದೆ ಎಂಬ ಹೇಳಿಕೆಯೊಂದಿಗೆ ಈ ಚಿತ್ರ 2017 ರಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. “Drzakirnaikofficial” ಎಂಬ ಬಳಕೆದಾರರ ಹೆಸರಿನಲ್ಲಿ ಕಾರ್ಯನಿರ್ವಹಿಸುವ Instagram ಪುಟವು ಸೆಪ್ಟೆಂಬರ್ 2019 ರಲ್ಲಿ ಚಿತ್ರವನ್ನು ಅಪ್‌ಲೋಡ್ ಮಾಡಿತ್ತು. ಅಂದಿನಿಂದ ಇದು 39 ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ.

ಆದರೆ ಈ ಚಿತ್ರವು 2020 ರ ಆಗಸ್ಟ್‌ನಿಂದ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ ತೊಡಗಿದೆ. ಫೇಸ್‌ಬುಕ್ ಹಾಗೂ ಟ್ವಿಟರ್ ನಂತಹ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಹಲವರು ಜನರು ಇದನ್ನು ಶೇರ್ ಮಾಡುತ್ತಿದ್ದಾರೆ.

ಫ್ಯಾಕ್ಟ್‌ಚೆಕ್
ಈ ಚಿತ್ರವು ”ಪಾರ್ಟಿ ಬೂಮಿಪುಟೆರಾ ಪರ್ಕಾಸಾ ಮಲೇಷ್ಯಾ” ಪಕ್ಷವನ್ನು ಸ್ಥಾಪಿಸಿದ ಮಲೇಷಿಯಾದ ಬಲಪಂಥೀಯ ರಾಜಕೀಯ ಮುಖಂಡ ಇಬ್ರಾಹಿಂ ಅಲಿ ಮತ್ತು ಮಲಯ ಮೂಲದ ಸಂಸ್ಥೆ ”ಪೆರ್ಟುಬುಹಾನ್ ಪ್ರಿಬುಮಿ ಪೆರ್ಕಾಸಾ” ಝಾಕಿರ್ ನಾಯಕ್‌ಗೆ 2017 ರಂದು ‘ವಾರಿಯರ್ ಪ್ರಶಸ್ತಿ’ ನೀಡಿ ಗೌರವಿಸಿದಾಗಿನ ಚಿತ್ರವಾಗಿದೆ.
ರಿವರ್ಸ್ ಇಮೇಜ್ ಮೂಲಕ ಈ ಚಿತ್ರವನ್ನು ಹುಡುಕಾಡಿದಾಗ ಮಲಯ ಭಾಷೆಯ ದಿನಪತ್ರಿಕೆ ”ಬೆರಿಟಾ ಹರಿಯನ್” ವರದಿಯೊಂದರಲ್ಲಿ ಈ ಚಿತ್ರವನ್ನು ಬಳಸಲಾಗಿದೆ. ಅದು 16 ಏಪ್ರಿಲ್, 2017 ರ ಚಿತ್ರವಾಗಿದೆ ಎಂದು ಈ ಮೂಲಕ ತಿಳಿಯಬಹುದು.
ಈ ಲೇಖನದಲ್ಲಿ ”ಝಾಕಿರ್ ನಾಯಕ್‌ಗೆ ಪರ್ಕಾಸಾ ನೆಗರಾ ಸ್ಥಳೀಯ ಹೀರೋ ಸ್ಟಾರ್, ಇದು ಮಲೇಷ್ಯಾದ ಸ್ಥಳೀಯ ಸಂಘಟನೆ ಪೆರ್ಕಾಸಾದ ಅತ್ಯುನ್ನತ ಪ್ರಶಸ್ತಿ” ಎಂದು ಲೇಖನದಲ್ಲಿ ತಿಳಿಸಲಾಗಿದೆ.
ಸಮಾರಂಭವು ಮಲೇಷ್ಯಾ ವಿಶ್ವವಿದ್ಯಾಲಯದಲ್ಲಿ ನಡೆದ ‘ಇಜ್ತಿಮಕ್ 150 ಮಲೇಷಿಯಾ ಇಸ್ಲಾಮಿಕ್ ಸ್ಕಾಲರ್ಸ್’ ಎಂಬ ಕಾರ್ಯಕ್ರಮದ ಭಾಗವಾಗಿದ್ದು, ಅದರಲ್ಲಿ ‘ಇಸ್ಲಾಮೋಫೋಬಿಯಾವನ್ನು ನಿಭಾಯಿಸುವುದು’ ಎಂಬ ವಿಷಯದ ಕುರಿತು ಝಾಕಿರ್ ನಾಯಕ್ ಮಾತನಾಡಿದ್ದರು.
ಈ ಚಿತ್ರವನ್ನು ಇಂಗ್ಲಿಷ್ ಭಾಷೆಯ ಮಲಯೇಶಿಯನ್ ಪತ್ರಿಕೆ ನ್ಯೂ ಸ್ಟ್ರೈಟ್ಸ್ ಟೈಮ್ಸ್ ಪ್ರೆಸ್ (ಎನ್‌ಎಸ್‌ಟಿಪಿ) ಛಾಯಾಗ್ರಾಹಕ ಮೊಹಮ್ಮದ್ ಯುಸ್ನಿ ಆರಿಫಿನ್‌ಗೆ ಕ್ಲಿಕ್ಕಿಸಿದ್ದರು.

ಝಾಕಿರ್ ನಾಯಕ್ ಮಲೇಷಿಯನ್ ನಾಗರಿಕನಾ?
ಢಾಕಾ ಕೆಫೆಯ ಮೇಲೆ ನಡೆದ ದಾಳಿಯಲ್ಲಿ ಆರೋಪಿಗಳು ಝಾಕಿರ್ ನಾಯಕ್ ಭಾಷಣಗಳಿಂದ ಪ್ರೇರಿತರಾಗಿದ್ದಾರೆಂದು ತಿಳಿದುಬಂದ ನಂತರ ಝಾಕಿರ್ ನಾಯಕ್ ಜುಲೈ 2016 ರಲ್ಲಿ ಮಲೇಷ್ಯಾಕ್ಕೆ ಪಲಾಯನ ಮಾಡಿದ್ದರು.
22 ಅಕ್ಟೋಬರ್ 2019 ರ ಆನ್‌ಲೈನ್ ನ್ಯೂಸ್ ಪೋರ್ಟಲ್, ಮಲೇಶಿಯಾಕಿನಿ ಎಂಬ ಸುದ್ದಿಯ ವರದಿಯಲ್ಲಿ, “ವಿವಾದಾತ್ಮಕ ಬೋಧಕ ಡಾ. ಝಾಕಿರ್ ನಾಯಕ್ ಮಲೇಷಿಯಾದ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ ಬಗ್ಗೆ ಯಾವುದೇ ದಾಖಲೆಗಳಿಲ್ಲ” ಎಂದು ಹೇಳಿದೆ.
ಈ ಹೇಳಿಕೆಯನ್ನು ಗೃಹ ಸಚಿವ ಮುಹಿದ್ದೀನ್ ಯಾಸಿನ್ ನೀಡಿದ್ದಾರೆ. ಎನ್ಆರ್ಡಿ 21 ಏಪ್ರಿಲ್ 2016 ರಂದು ಝಾಕಿರ್ ಅಬ್ದುಲ್ ಕರೀಮ್ ನಾಯಕ್ (ಸಾಮಾನ್ಯವಾಗಿ ಡಾ ಝಾಕಿರ್ ಎಂದು ಕರೆಯಲ್ಪಡುವ) ಗೆ ಮೈಪಿಆರ್ ನೀಡಿತು” ಎಂದು ಅವರು ಹೇಳಿದ್ದರು.
ಮಲೇಷ್ಯಾದ ರಾಷ್ಟ್ರೀಯ ನೋಂದಣಿ ಇಲಾಖೆ (ಎನ್‌ಆರ್‌ಡಿ) ಶಾಶ್ವತ ನಿವಾಸಿಗಳಿಗೆ ಮೈಪಿಆರ್ ಕಾರ್ಡ್‌ಗಳನ್ನು ನೀಡುತ್ತದೆ.
ಆಗಸ್ಟ್ 11, 2019 ರಂದು ಮಲೇಷ್ಯಾದ ಕೋಟಾ ಬಹ್ರುನಲ್ಲಿ ಮಾಡಿದ ಭಾಷಣದಲ್ಲಿ ಝಾಕಿರ್ ನಾಯಕ್ ಚೀನೀಯರ ವಿರುದ್ಧ ಅವರನ್ನು “ಅತಿಥಿಗಳು” ಎಂದು ಜನಾಂಗೀಯ ಟೀಕೆಗಳನ್ನು ವ್ಯಕ್ತಪಡಿಸಿದ ನಂತರ ಈ ಹೇಳಿಕೆ ಬಂದಿದ್ದವು. ಝಾಕಿರ್ ನಾಯಕ್ ಅವರ ಶಾಶ್ವತ ನಿವಾಸಿ ಸ್ಥಾನವನ್ನು ಕಿತ್ತುಕೊಳ್ಳಬಹುದು ಎಂದು ಪ್ರಧಾನಮಂತ್ರಿ ಮಹಾತಿರ್ ಅವರ ಹೇಳಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ.
“ಅವರಿಗೆ (ಝಾಕಿರ್ ನಾಯಕ್) ಪಿಆರ್ ಸ್ಥಾನಮಾನವಿದೆ. ಅವರು ರಾಷ್ಟ್ರದ ನೆಮ್ಮದಿಗೆ ಹಾನಿಕಾರಕವಾದದ್ದನ್ನು ಮಾಡಿದರೆ ನಾವು ಅದನ್ನು ಕಿತ್ತುಕೊಳ್ಳಬಹುದು. ಈ ಕ್ಷಣದಲ್ಲಿ, ಅವರು ಅದನ್ನು ಮಾಡುತ್ತಿದ್ದಾನೋ ಇಲ್ಲವೋ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅವರು ಅದನ್ನು ಮಾಡುತ್ತಿದ್ದರೆ, ಅವರ ಪಿಆರ್ ಸ್ಥಾನಮಾನವನ್ನು ನಾವು ಕಿತ್ತುಕೊಳ್ಳುವುದು ಅವಶ್ಯಕ.” ಎಂದು ಪ್ರಧಾನ ಮಂತ್ರಿ ಮಹಾತಿರ್ ಹೇಳಿದ್ದರು.
ಆದರೆ, ಮಲೇಷ್ಯಾ ಸರ್ಕಾರವು ನಾಯಕ್‌ಗೆ ಪೌರತ್ವ ನೀಡಿದ ಬಗ್ಗೆ ಯಾವುದೇ ವರದಿಗಳಿಲ್ಲ. ಸ್ಪಷ್ಟವಾಗಿ ಹೇಳಬೇಕಾದರೆ ಹಳೆಯ ಚಿತ್ರವನ್ನು ಸಂದರ್ಭಕ್ಕೆ ಹೊರತಾಗಿ ಹಂಚಿಕೊಳ್ಳಲಾಗಿದೆ.
ಓದಿ: ಹಿಂದೂ ದೇವಾಲಯದಲ್ಲಿ ಏಸು ಫೋಟೊ ಇಟ್ಟು ಪೂಜೆ ಮಾಡಲು SP ದಿವ್ಯಾ ಸಾರಾ ಥಾಮಸ್ ಒತ್ತಾಯಿಸಿಲ್ಲ.


