Homeಫ್ಯಾಕ್ಟ್‌ಚೆಕ್ಫ್ಯಾಕ್ಟ್‌‌ಚೆಕ್: ಝಾಕಿರ್‌ ನಾಯಕ್‌ಗೆ ಮಲೇಷಿಯನ್ ಪೌರತ್ವ ನೀಡಲಾಗಿದೆಯೆ?

ಫ್ಯಾಕ್ಟ್‌‌ಚೆಕ್: ಝಾಕಿರ್‌ ನಾಯಕ್‌ಗೆ ಮಲೇಷಿಯನ್ ಪೌರತ್ವ ನೀಡಲಾಗಿದೆಯೆ?

ಧರ್ಮಗಳ ನಡುವೆ ದ್ವೇಷವನ್ನು ಹುಟ್ಟುಹಾಕುತ್ತಿದ್ದಾರೆಂಬ ಆರೋಪ ಹೊತ್ತಿರುವ ಝಾಕಿರ್‌ ನಾಯಕ್ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಯ ವಾಂಟೆಡ್ ಪಟ್ಟಿಯಲ್ಲಿದ್ದಾರೆ.

- Advertisement -
- Advertisement -

ವಿವಾದಾತ್ಮಕ ಬೋಧಕ ಝಾಕಿರ್ ನಾಯಕ್‌ಗೆ ಮಲೇಷ್ಯಾದಲ್ಲಿ ಪೌರತ್ವ ನೀಡಲಾಗಿದೆ ಎಂಬ ಹೇಳಿಕೆಯಿರುವ ಚಿತ್ರವೊಂದು 2017 ರಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಧರ್ಮಗಳ ನಡುವೆ ದ್ವೇಷವನ್ನು ಹುಟ್ಟುಹಾಕುತ್ತಿದ್ದಾರೆಂಬ ಆರೋಪ ಹೊತ್ತಿರುವ ಝಾಕಿರ್‌ ನಾಯಕ್ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಯ ವಾಂಟೆಡ್ ಪಟ್ಟಿಯಲ್ಲಿದ್ದಾರೆ.

ಝಾಕಿರ್ ನಾಯಕ್ ಅವರಿಗೆ ಮಲೇಷ್ಯಾ ಸಂಪೂರ್ಣ ಪೌರತ್ವ ನೀಡಿದೆ ಎಂಬ ಹೇಳಿಕೆಯೊಂದಿಗೆ ಈ ಚಿತ್ರ 2017 ರಿಂದ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. “Drzakirnaikofficial” ಎಂಬ ಬಳಕೆದಾರರ ಹೆಸರಿನಲ್ಲಿ ಕಾರ್ಯನಿರ್ವಹಿಸುವ Instagram ಪುಟವು ಸೆಪ್ಟೆಂಬರ್ 2019 ರಲ್ಲಿ ಚಿತ್ರವನ್ನು ಅಪ್‌ಲೋಡ್ ಮಾಡಿತ್ತು. ಅಂದಿನಿಂದ ಇದು 39 ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಗಳಿಸಿದೆ.

ಆರ್ಕೈವ್‌ ಇಲ್ಲಿದೆ.

ಆದರೆ ಈ ಚಿತ್ರವು 2020 ರ ಆಗಸ್ಟ್‌ನಿಂದ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ ತೊಡಗಿದೆ. ಫೇಸ್‌ಬುಕ್ ಹಾಗೂ ಟ್ವಿಟರ್‌ ನಂತಹ ಸಾಮಾಜಿಕ ಜಾಲತಾಣ ವೇದಿಕೆಗಳಲ್ಲಿ ಹಲವರು ಜನರು ಇದನ್ನು ಶೇರ್‌ ಮಾಡುತ್ತಿದ್ದಾರೆ.

ಆರ್ಕೈವ್ ಇಲ್ಲಿದೆ. 

ಫ್ಯಾಕ್ಟ್‌‌ಚೆಕ್‌

ಈ ಚಿತ್ರವು ”ಪಾರ್ಟಿ ಬೂಮಿಪುಟೆರಾ ಪರ್ಕಾಸಾ ಮಲೇಷ್ಯಾ” ಪಕ್ಷವನ್ನು ಸ್ಥಾಪಿಸಿದ ಮಲೇಷಿಯಾದ ಬಲಪಂಥೀಯ ರಾಜಕೀಯ ಮುಖಂಡ ಇಬ್ರಾಹಿಂ ಅಲಿ ಮತ್ತು ಮಲಯ ಮೂಲದ ಸಂಸ್ಥೆ ”ಪೆರ್ಟುಬುಹಾನ್ ಪ್ರಿಬುಮಿ ಪೆರ್ಕಾಸಾ” ಝಾಕಿರ್ ನಾಯಕ್‌ಗೆ 2017 ರಂದು ‘ವಾರಿಯರ್ ಪ್ರಶಸ್ತಿ’ ನೀಡಿ ಗೌರವಿಸಿದಾಗಿನ ಚಿತ್ರವಾಗಿದೆ.

ರಿವರ್ಸ್ ಇಮೇಜ್ ಮೂಲಕ ಈ ಚಿತ್ರವನ್ನು ಹುಡುಕಾಡಿದಾಗ ಮಲಯ ಭಾಷೆಯ ದಿನಪತ್ರಿಕೆ ”ಬೆರಿಟಾ ಹರಿಯನ್”  ವರದಿಯೊಂದರಲ್ಲಿ ಈ ಚಿತ್ರವನ್ನು ಬಳಸಲಾಗಿದೆ. ಅದು 16 ಏಪ್ರಿಲ್, 2017 ರ ಚಿತ್ರವಾಗಿದೆ ಎಂದು ಈ ಮೂಲಕ ತಿಳಿಯಬಹುದು.

ಈ ಲೇಖನದಲ್ಲಿ ”ಝಾಕಿರ್ ನಾಯಕ್‌ಗೆ ಪರ್ಕಾಸಾ ನೆಗರಾ ಸ್ಥಳೀಯ ಹೀರೋ ಸ್ಟಾರ್‌, ಇದು ಮಲೇಷ್ಯಾದ ಸ್ಥಳೀಯ ಸಂಘಟನೆ ಪೆರ್ಕಾಸಾದ ಅತ್ಯುನ್ನತ ಪ್ರಶಸ್ತಿ” ಎಂದು ಲೇಖನದಲ್ಲಿ ತಿಳಿಸಲಾಗಿದೆ.

ಸಮಾರಂಭವು ಮಲೇಷ್ಯಾ ವಿಶ್ವವಿದ್ಯಾಲಯದಲ್ಲಿ ನಡೆದ ‘ಇಜ್ತಿಮಕ್ 150 ಮಲೇಷಿಯಾ ಇಸ್ಲಾಮಿಕ್ ಸ್ಕಾಲರ್ಸ್‌’ ಎಂಬ ಕಾರ್ಯಕ್ರಮದ ಭಾಗವಾಗಿದ್ದು, ಅದರಲ್ಲಿ ‘ಇಸ್ಲಾಮೋಫೋಬಿಯಾವನ್ನು ನಿಭಾಯಿಸುವುದು’ ಎಂಬ ವಿಷಯದ ಕುರಿತು ಝಾಕಿರ್‌ ನಾಯಕ್ ಮಾತನಾಡಿದ್ದರು.

ಈ ಚಿತ್ರವನ್ನು ಇಂಗ್ಲಿಷ್ ಭಾಷೆಯ ಮಲಯೇಶಿಯನ್ ಪತ್ರಿಕೆ ನ್ಯೂ ಸ್ಟ್ರೈಟ್ಸ್ ಟೈಮ್ಸ್ ಪ್ರೆಸ್ (ಎನ್‌ಎಸ್‌ಟಿಪಿ) ಛಾಯಾಗ್ರಾಹಕ ಮೊಹಮ್ಮದ್ ಯುಸ್ನಿ ಆರಿಫಿನ್‌ಗೆ ಕ್ಲಿಕ್ಕಿಸಿದ್ದರು.

ಝಾಕಿರ್ ನಾಯಕ್ ಮಲೇಷಿಯನ್ ನಾಗರಿಕನಾ?

ಢಾಕಾ ಕೆಫೆಯ ಮೇಲೆ ನಡೆದ ದಾಳಿಯಲ್ಲಿ ಆರೋಪಿಗಳು ಝಾಕಿರ್‌ ನಾಯಕ್ ಭಾಷಣಗಳಿಂದ ಪ್ರೇರಿತರಾಗಿದ್ದಾರೆಂದು ತಿಳಿದುಬಂದ ನಂತರ ಝಾಕಿರ್ ನಾಯಕ್ ಜುಲೈ 2016 ರಲ್ಲಿ ಮಲೇಷ್ಯಾಕ್ಕೆ ಪಲಾಯನ ಮಾಡಿದ್ದರು.

22 ಅಕ್ಟೋಬರ್ 2019 ರ ಆನ್‌ಲೈನ್ ನ್ಯೂಸ್ ಪೋರ್ಟಲ್, ಮಲೇಶಿಯಾಕಿನಿ ಎಂಬ ಸುದ್ದಿಯ ವರದಿಯಲ್ಲಿ, “ವಿವಾದಾತ್ಮಕ ಬೋಧಕ ಡಾ. ಝಾಕಿರ್ ನಾಯಕ್ ಮಲೇಷಿಯಾದ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ ಬಗ್ಗೆ ಯಾವುದೇ ದಾಖಲೆಗಳಿಲ್ಲ” ಎಂದು ಹೇಳಿದೆ.

ಈ ಹೇಳಿಕೆಯನ್ನು ಗೃಹ ಸಚಿವ ಮುಹಿದ್ದೀನ್ ಯಾಸಿನ್ ನೀಡಿದ್ದಾರೆ. ಎನ್ಆರ್ಡಿ 21 ಏಪ್ರಿಲ್ 2016 ರಂದು ಝಾಕಿರ್ ಅಬ್ದುಲ್ ಕರೀಮ್ ನಾಯಕ್ (ಸಾಮಾನ್ಯವಾಗಿ ಡಾ ಝಾಕಿರ್ ಎಂದು ಕರೆಯಲ್ಪಡುವ) ಗೆ ಮೈಪಿಆರ್ ನೀಡಿತು” ಎಂದು ಅವರು ಹೇಳಿದ್ದರು.

ಮಲೇಷ್ಯಾದ ರಾಷ್ಟ್ರೀಯ ನೋಂದಣಿ ಇಲಾಖೆ (ಎನ್‌ಆರ್‌ಡಿ) ಶಾಶ್ವತ ನಿವಾಸಿಗಳಿಗೆ ಮೈಪಿಆರ್ ಕಾರ್ಡ್‌ಗಳನ್ನು ನೀಡುತ್ತದೆ.

ಆಗಸ್ಟ್ 11, 2019 ರಂದು ಮಲೇಷ್ಯಾದ ಕೋಟಾ ಬಹ್ರುನಲ್ಲಿ ಮಾಡಿದ ಭಾಷಣದಲ್ಲಿ ಝಾಕಿರ್‌ ನಾಯಕ್ ಚೀನೀಯರ ವಿರುದ್ಧ ಅವರನ್ನು “ಅತಿಥಿಗಳು” ಎಂದು ಜನಾಂಗೀಯ ಟೀಕೆಗಳನ್ನು ವ್ಯಕ್ತಪಡಿಸಿದ ನಂತರ ಈ ಹೇಳಿಕೆ ಬಂದಿದ್ದವು. ಝಾಕಿರ್‌ ನಾಯಕ್ ಅವರ ಶಾಶ್ವತ ನಿವಾಸಿ ಸ್ಥಾನವನ್ನು ಕಿತ್ತುಕೊಳ್ಳಬಹುದು ಎಂದು ಪ್ರಧಾನಮಂತ್ರಿ ಮಹಾತಿರ್ ಅವರ ಹೇಳಿರುವುದಾಗಿ ಎನ್ಡಿಟಿವಿ ವರದಿ ಮಾಡಿದೆ.

“ಅವರಿಗೆ (ಝಾಕಿರ್‌ ನಾಯಕ್) ಪಿಆರ್ ಸ್ಥಾನಮಾನವಿದೆ. ಅವರು ರಾಷ್ಟ್ರದ ನೆಮ್ಮದಿಗೆ ಹಾನಿಕಾರಕವಾದದ್ದನ್ನು ಮಾಡಿದರೆ ನಾವು ಅದನ್ನು ಕಿತ್ತುಕೊಳ್ಳಬಹುದು. ಈ ಕ್ಷಣದಲ್ಲಿ, ಅವರು ಅದನ್ನು ಮಾಡುತ್ತಿದ್ದಾನೋ ಇಲ್ಲವೋ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅವರು ಅದನ್ನು ಮಾಡುತ್ತಿದ್ದರೆ, ಅವರ ಪಿಆರ್ ಸ್ಥಾನಮಾನವನ್ನು ನಾವು ಕಿತ್ತುಕೊಳ್ಳುವುದು ಅವಶ್ಯಕ.” ಎಂದು ಪ್ರಧಾನ ಮಂತ್ರಿ ಮಹಾತಿರ್‌ ಹೇಳಿದ್ದರು.

ಆದರೆ, ಮಲೇಷ್ಯಾ ಸರ್ಕಾರವು ನಾಯಕ್‌ಗೆ ಪೌರತ್ವ ನೀಡಿದ ಬಗ್ಗೆ ಯಾವುದೇ ವರದಿಗಳಿಲ್ಲ. ಸ್ಪಷ್ಟವಾಗಿ ಹೇಳಬೇಕಾದರೆ ಹಳೆಯ ಚಿತ್ರವನ್ನು ಸಂದರ್ಭಕ್ಕೆ ಹೊರತಾಗಿ ಹಂಚಿಕೊಳ್ಳಲಾಗಿದೆ.


ಓದಿ:  ಹಿಂದೂ ದೇವಾಲಯದಲ್ಲಿ ಏಸು ಫೋಟೊ ಇಟ್ಟು ಪೂಜೆ ಮಾಡಲು SP ದಿವ್ಯಾ ಸಾರಾ ಥಾಮಸ್ ಒತ್ತಾಯಿಸಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: ನೋಟಿಸ್ ನೀಡಿದರೆ ಸಾಲದು, ಹೊರಗಿಟ್ಟ ಮತದಾರರ ಲೆಕ್ಕ ಕೊಡಿ ಚುನಾವಣಾ ಆಯೋಗಕ್ಕೆ ಜಾಗೃತ ಕರ್ನಾಟಕ ಒತ್ತಾಯ

ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಭಾಗವಾಗಿ ಲಕ್ಷಾಂತರ ಮತದಾರರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆಗಳನ್ನು ನಡೆಸಿದ ನಂತರ, ಅಂತಿಮವಾಗಿ ಎಷ್ಟು ಜನರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ...

ಗಣೇಶ ಮೆರವಣಿಗೆ ಡಿಜೆ ವಿಚಾರಕ್ಕೆ ಗಲಾಟೆ : ದಲಿತರ ಮೇಲೆ ಹಲ್ಲೆ, ಜಾತಿ ನಿಂದನೆ; 31 ಜನರ ಮೇಲೆ ಎಫ್‌ಐಆರ್

ಗಣೇಶ ಮೆರವಣಿಗೆಯ ಡಿಜೆ ವಿಚಾರಕ್ಕೆ ನಡೆದ ಗಲಾಟೆಯಲ್ಲಿ ದಲಿತರ ಮೇಲೆ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದ ಆರೋಪದ ಮೇಲೆ 31 ಜನರ ವಿರುದ್ಧ ಕೊಪ್ಪಳದ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ....

ಚಿಕ್ಕಬಳ್ಳಾಪುರ: ಮೂಲ ಗಣಿತ, ಕನ್ನಡ ಬಾರದ 7ನೇ ತರಗತಿ ವಿದ್ಯಾರ್ಥಿಗಳು: 180 ಶಿಕ್ಷಕರಿಗೆ ನೋಟಿಸ್‌ ಜಾರಿ

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 7ನೇ ತರಗತಿಯ ಕೆಲವು ವಿದ್ಯಾರ್ಥಿಗಳಿಗೆ ಮೂಲ ಗಣಿತದ ಲೆಕ್ಕಗಳನ್ನು ಮಾಡಲು ಮತ್ತು ಕನ್ನಡ ಅಕ್ಷರಗಳನ್ನು ಬರೆಯಲು ಬರುವುದಿಲ್ಲ ಎಂಬುದು ತಿಳಿದುಬಂದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯು 180 ಸರ್ಕಾರಿ ಶಾಲೆಗಳ ಶಿಕ್ಷಕರಿಗೆ...

ಕರಾವಳಿಯನ್ನು ‘ಕೋಮುವಾದದ ಪ್ರಯೋಗಶಾಲೆ’ ಮಾಡಿದ್ದ ಬಿಜೆಪಿಗೆ ನಮ್ಮ ಅಭಿವೃದ್ಧಿ ಕಂಡು ಅಸ್ತಿತ್ವದ ಭಯ: ಪ್ರಿಯಾಂಕ್ ಖರ್ಗೆ

ಮಂಗಳೂರಿನಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆ ಹಾಗೂ ಕರಾವಳಿಯ ಮೂರು ಜಿಲ್ಲೆಗಳಿಗೆ ₹32,611 ಕೋಟಿ ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಅನುಮೋದನೆ ನೀಡಿರುವುದನ್ನು ಬಿಜೆಪಿ ಟೀಕಿಸಿರುವ ಬೆನ್ನಲ್ಲೇ, ಗೃಹ ಸಚಿವ ಪ್ರಿಯಾಂಕ್ ಖರ್ಗೆ...

KPSC ಅಕ್ರಮ: ಮೀಟರ್ ಬಡ್ಡಿ ದಂಧೆಯಿಂದ ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನದವರೆಗೆ – ಅಧ್ಯಕ್ಷ ಸಾಹುಕಾರ್ ಬಿಜೆಪಿ ಅವಧಿಯಲ್ಲಿ ನೇಮಕ, ಕಾಂಗ್ರೆಸ್ ಆಡಳಿತದಲ್ಲಿ ರಕ್ಷಣೆ

ಶಿವಶಂಕರಪ್ಪ ಸಾಹುಕಾರ್ ಅವರ ಈ ಇಡೀ ಕಥನವು ಕರ್ನಾಟಕದ ಕಾರ್ಯಾಂಗ ಮತ್ತು ರಾಜಕೀಯ ವ್ಯವಸ್ಥೆಯಲ್ಲಿ ಭ್ರಷ್ಟಾಚಾರ ಎಷ್ಟು ಆಳವಾಗಿ ಬೇರೂರಿದೆ ಎಂಬುದಕ್ಕೆ ಸಾಕ್ಷಿಯಾಗಿದೆ. ಬಿಜೆಪಿ ಸರ್ಕಾರವು ನಿಯಮಗಳನ್ನು ಗಾಳಿಗೆ ತೂರಿ, ಒಬ್ಬ ಕನಿಷ್ಠ...

ಟಿಎಂಸಿ ಪಕ್ಷದ ಹೆಸರು, ಚಿಹ್ನೆ ಫ್ರೀಝ್ : ಚು. ಆಯೋಗದ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಮಮತಾ ಬ್ಯಾನರ್ಜಿ

ತೃಣಮೂಲಕ ಕಾಂಗ್ರೆಸ್ (ಟಿಎಂಸಿ) ಪಕ್ಷದ ಚಿಹ್ನೆ ಮತ್ತು ಹೆಸರನ್ನು ಭಾರತೀಯ ಚುನಾವಣಾ ಆಯೋಗ ಫ್ರೀಝ್ ಮಾಡಿರುವುದನ್ನು ಪ್ರಶ್ನಿಸಿ, ಪಕ್ಷದ ಸಂಸ್ಥಾಪಕಿ ಹಾಗೂ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸುಪ್ರೀಂ ಕೋರ್ಟ್‌...

ನಂದಿಗ್ರಾಮದ ಬೆನ್ನಲ್ಲೇ ರೆಜಿನಗರ ಅಭ್ಯರ್ಥಿಯಿಂದಲೂ ನಾಮಪತ್ರ ವಾಪಸ್ : ಬಂಗಾಳ ಉಪ ಚುನಾವಣೆ ಕಣದಲ್ಲಿ ಮಮತಾ ಬ್ಯಾನರ್ಜಿ ಬಣಕ್ಕೆ ಮತ್ತೊಂದು ಹಿನ್ನಡೆ

ಪಶ್ಚಿಮ ಬಂಗಾಳದ ಉಪಚುನಾವಣಾ ಕಣದಲ್ಲಿ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಮತ್ತೊಂದು ಹಿನ್ನಡೆಯಾಗಿದೆ. ನಂದಿಗ್ರಾಮದ ಬಳಿಕ ರೆಜಿನಗರ ವಿಧಾನಸಭಾ ಕ್ಷೇತ್ರದಲ್ಲೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಅಭ್ಯರ್ಥಿ ತನ್ನ ನಾಮಪತ್ರವನ್ನು ವಾಪಸ್ ಪಡೆದಿದ್ದಾರೆ...

ಅಮಾನವೀಯ ಕೃತ್ಯ : ಮಹಿಳೆಗೆ ಥಳಿಸಿ, ಕೂದಲು ಹಿಡಿದು ಎಳೆದೊಯ್ದ ಪೊಲೀಸ್ ಸಿಬ್ಬಂದಿ

ತೆಲಂಗಾಣದ ಹಫೀಝ್‌ಪೇಟ್ ರೈಲ್ವೆ ನಿಲ್ದಾಣದಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಮಹಿಳೆಗೆ ಥಳಿಸಿ, ಆಕೆಯ ತಲೆಕೂದಲು ಹಿಡಿದು ಎಳೆದೊಯ್ದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ತೀವ್ರ ಆಕ್ರೋಶ ವ್ಯಕ್ತವಾಗಿದೆ. ಶುಕ್ರವಾರ (ಸೆ.18) ರಾತ್ರಿ ರೈಲ್ವೆ...

ರಾಮಮಂದಿರ ದೇಣಿಗೆ ಕಳವು ಪ್ರಕರಣ: ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ವಿಸ್ತರಣೆ

ರಾಮಮಂದಿರದಲ್ಲಿ ದೇಣಿಗೆ ಹಣ ಕಳವು ಮಾಡಿದ ಆರೋಪದ ಮೇಲೆ ಬಂಧಿಸಲಾಗಿರುವ ಎಲ್ಲಾ ಎಂಟು ಆರೋಪಿಗಳ ನ್ಯಾಯಾಂಗ ಬಂಧನವನ್ನು ಸೆಪ್ಟೆಂಬರ್ 21ರವರೆಗೆ ವಿಸ್ತರಿಸಲಾಗಿದೆ ಎಂದು ಅವರ ವಕೀಲರು (ಸೆ.18) ತಿಳಿಸಿದ್ದಾರೆ. ಅಯೋಧ್ಯೆಯ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯದ...

ಬಂಗಾಳದಲ್ಲಿ ಬಿಜೆಪಿ ದ್ವೇಷ ರಾಜಕಾರಣ: ಮಾಮತಾ ಬ್ಯಾನರ್ಜಿ ಬೆಂಬಲ ಘೋಷಿಸಿದ ಬೆನ್ನಲ್ಲೇ ನಂದಿಗ್ರಾಮ ಕಾಂಗ್ರೆಸ್ ಅಭ್ಯರ್ಥಿ ಬಂಧನ

ಪಶ್ಚಿಮ ಬಂಗಾಳದ ಪೂರ್ವ ಮೇದಿನಿಪುರ ಜಿಲ್ಲೆಯ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ್ ಅವರನ್ನು ಹಳೆಯ ಪ್ರಕರಣವೊಂದರಲ್ಲಿ ಶುಕ್ರವಾರ (ಸೆ.18) ಬಂಧಿಸಲಾಗಿದೆ ಎಂದು ಪೂರ್ವ ಮೇದಿನಿಪುರ ಜಿಲ್ಲಾ ಪೊಲೀಸ್...