ನಟ ಸುಶಾಂತ್ ಸಿಂಗ್ ರಜಪೂತ್, ಮಾಧುರಿ ದೀಕ್ಷಿತ್ ಅವರ ಹಾಡು ‘ಚಾನೆ ಕೆ ಖೇತ್ ಮೇ’ ಗೆ ನೃತ್ಯ ಮಾಡುತ್ತಿರುವ ವೈರಲ್ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದರಲ್ಲಿ ನಟನು ತನ್ನ ಸೋದರ ಸೊಸೆ ಮಲ್ಲಿಕಾ ಅವರೊಂದಿಗೆ ನೃತ್ಯ ಮಾಡುತ್ತಿದ್ದಾರೆ ಎಂಬ ಸಂದೇಶಗಳು ಸೇರಿ ವ್ಯಾಪಕವಾಗಿ ಹರಿದಾಡುತ್ತಿದೆ.
ಅಷ್ಟೇ ಅಲ್ಲದೆ ಆಜ್‌ತಕ್ ಹಿಂದಿ ಸುದ್ದಿ ವಾಹಿನಿಯ ಕಾರ್ಯನಿರ್ವಾಹಕ ಸಂಪಾದಕಿ ಅಂಜನಾ ಓಂ ಕಶ್ಯಪ್ “ಸುಶಾಂತ್ ಸಿಂಗ್ ರಜಪೂತ್ ಅವರ ಈ ವಿಡಿಯೋವನ್ನೂ ನೋಡಿ. ಮಾವ-ಸೋದರ ಸೊಸೆಯ ಮೋಜು. ಕುಟುಂಬದ ಪ್ರೀತಿ! ಹಿರಿಯ ಸಹೋದರಿ ರಾಣಿಯ ಮಗಳು ಮಲ್ಲಿಕಾ ಸಿಂಗ್ ಅವರೊಂದಿಗೆ ಸುಶಾಂತ್ ನೃತ್ಯ ಮಾಡುತ್ತಿದ್ದಾರೆ” ಎಂದು ಟ್ವೀಟ್ ಮಾಡಿದ್ದಾರೆ.

ಅಷ್ಟೇ ಅಲ್ಲದೆ ಸುಶಾಂತ್ ಸಿಂಗ್ ರಜಪೂತ್ ಕುಟುಂಬದಲ್ಲಿ ಎಲ್ಲರೂ ಚೆನ್ನಾಗಿಯೇ ಇದ್ದರು, “ಅಸಮಾಧಾನ” ದ ಯಾವುದೇ ಲಕ್ಷಣಗಳಿಲ್ಲ ಎಂದು ಹೇಳಲು ಟೈಮ್ಸ್ ನೌ ಈ ವೀಡಿಯೊವನ್ನು ಇಟ್ಟುಕೊಂಡು ಬುಲೆಟಿನ್ ಶೋ ಮಾಡಿತ್ತು.

ಅಲ್ಲದೆ ಇದನ್ನು Times of India ಮತ್ತು Aaj Tak ನಂತಹ ಸುದ್ದಿ ಸಂಸ್ಥೆಗಳು ಕೂಡಾ ವರದಿ ಮಾಡಿವೆ.


ಅಷ್ಟೇ ಅಲ್ಲದೆ ಎಬಿಪಿ ನ್ಯೂಸ್ ಹಿಂದಿ ಮತ್ತು ಇಂಡಿಯಾ ಟಿವಿಯೂ ಸಹ ಈ ವೈರಲ್ ವಿಡಿಯೋವನ್ನು ”ಸುಶಾಂತ್ ಸಿಂಗ್ ಅವರ ಸೋದರ ಸೊಸೆಯೊಂದಿಗಿನ ವಿಡಿಯೋ” ಎಂದು ವರದಿ ಮಾಡಿದೆ, ಆದರೆ ನಂತರ ಅದನ್ನು ತೆಗೆದು ಹಾಕಿದೆ.
ಫ್ಯಾಕ್ಟ್‌ಚೆಕ್
ವಾಸ್ತವವಾಗಿ ವಿಡಿಯೋದಲ್ಲಿ ಇರುವುದು ಸುಶಾಂತ್ ಸಿಂಗ್ ರಜಪೂತ್ ಆಗಿದ್ದರೂ ಅವರ ಜೊತೆ ನೃತ್ಯ ಮಾಡುತ್ತಿರುವುದು ಅವರ ಸೋದರ ಸೊಸೆಯಲ್ಲ, ನೃತ್ಯ ಸಂಯೋಜಕಿ ಮನ್ಪ್ರೀತ್ ಟೂರ್ ಆಗಿದ್ದಾರೆ. ಈ ವಿಡಿಯೊ 2017 ದ್ದಾಗಿದೆ.
ವೈರಲ್ ವೀಡಿಯೊವನ್ನು ರಿವರ್ಸ್ ಸರ್ಚ್ ಮಾಡಿದಾಗ ಅದು ಪಿಂಕ್‌ವಿಲ್ಲ ಎಂಬ ವೆಬ್‌ಸೈಟಿನಲ್ಲಿರುವ ಲೇಖನವನ್ನು ತೋರಿಸಿದೆ. ಇದರಲ್ಲಿ ವಿಡಿಯೊ ಸಹ ಇದೆ. ಇದರ ವರದಿಯಲ್ಲಿ “ಸುಶಾಂತ್ ಯೂಟ್ಯೂಬರ್ ಮತ್ತು ನೃತ್ಯ ಸಂಯೋಜಕಿ ಮನ್ಪ್ರೀತ್ ಟೂರ್ ಅವರೊಂದಿಗೆ ನೃತ್ಯ ಮಾಡುತ್ತಿರುವುದು ಕಂಡುಬಂದಿದೆ. ಈ ಜೋಡಿ ಮಾಧುರಿ ದೀಕ್ಷಿತ್ ಅವರ ಜನಪ್ರಿಯ ಹಾಡು ‘ಚಾನೆ ಕೆ ಖೇತ್ ಮೇ’ ನಲ್ಲಿ ನೃತ್ಯ ಮಾಡುತ್ತಿದ್ದಾರೆ. ಸುಶಾಂತ್ ಉತ್ಸಾಹಭರಿತ ವ್ಯಕ್ತಿತ್ವ ಹೊಂದಿದ್ದನೆಂಬುದಕ್ಕೆ ಈ ವಿಡಿಯೋ ಸಾಕ್ಷಿಯಾಗಿದೆ” ಎಂದು ಬರೆಯಲಾಗಿದೆ.
ನಂತರ ಕೀವರ್ಡ್ ಮೂಲಕ ಹುಡುಕಾಡಿದಾಗ ಜೂನ್ 4 2017 ರಂದು ಮನ್‌ಪ್ರೀತ್ ಟೂರ್ ತಮ್ಮ ಇನ್‌ಸ್ಟಾಗ್ರಾಮ್ ಪ್ರೊಫೈಲ್‌ಗೆ ಅಪ್‌ಲೋಡ್ ಮಾಡಿದ ಚಿತ್ರವನ್ನು ಕಾಣಬಹುದು. ಅದಲ್ಲಿ ಮನ್‌ಪ್ರೀತ್ ಮತ್ತು ಸುಶಾಂತ್ ವೈರಲ್ ವಿಡಿಯೊದಲ್ಲಿ ಇರುವ ಬಟ್ಟೆಯಲ್ಲಿ ಕಾಣಬಹುದಾಗಿದೆ.

ಮನ್‌ಪ್ರೀತ್ ತನ್ನ ನಿನ್ನೆ ತನ್ನ ಇನ್ಸ್ಟ್ರಾಗ್ರಾಮ್‌ನಲ್ಲಿ ಸ್ಪಷ್ಟೀಕರಣವನ್ನು ಸಹ ನೀಡಿದ್ದಾರೆ. “ನಾವು ಪತ್ರಿಕೆಯಲ್ಲಿ ಓದಿದ ಎಲ್ಲವನ್ನೂ ನಂಬಲು ಸಾಧ್ಯವಿಲ್ಲ. ಆದರೆ ಇದನ್ನು ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು” ಎಂಬ ಶೀರ್ಷಿಕೆಯೊಂದಿಗೆ ಅವರು ವೈರಲ್ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ಒಟ್ಟಿನಲ್ಲಿ ಈ ವಿಡಿಯೋ ಸುಶಾಂತ್ ಸಿಂಗ್ ರಜಪೂತ್ ತನ್ನ ಸೋದರ ಸೊಸೆಯೊಂದಿಗೆ ನೃತ್ಯ ಮಾಡುತ್ತಿದ್ದಂತೆ ಎಂದು ಸಾಮಾಜಿಕ ಜಾಲತಾಣದಲ್ಲಿ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.
ಓದಿ: ಫ್ಯಾಕ್ಟ್‌ಚೆಕ್: ಭೂಮಿಪೂಜೆಯಂದು ಇಂಗ್ಲೆಂಡ್ ಪ್ರಧಾನಿ ರಾಮನ ವಿಗ್ರಹಕ್ಕೆ ಅಭಿಷೇಕ ಮಾಡಿದರೆ?


