Homeಫ್ಯಾಕ್ಟ್‌ಚೆಕ್ಫ್ಯಾಕ್ಟ್‌ಚೆಕ್: ಭೂಮಿಪೂಜೆಯಂದು ಇಂಗ್ಲೆಂಡ್‌ ಪ್ರಧಾನಿ ರಾಮನ ವಿಗ್ರಹಕ್ಕೆ ಅಭಿಷೇಕ ಮಾಡಿದರೆ?

ಫ್ಯಾಕ್ಟ್‌ಚೆಕ್: ಭೂಮಿಪೂಜೆಯಂದು ಇಂಗ್ಲೆಂಡ್‌ ಪ್ರಧಾನಿ ರಾಮನ ವಿಗ್ರಹಕ್ಕೆ ಅಭಿಷೇಕ ಮಾಡಿದರೆ?

ಚುನಾವಣೆಗೂ ಮುಂಚೆ ಪ್ರಧಾನಿ ಬೋರಿಸ್ ಜಾನ್ಸನ್ ಇಂಗ್ಲೆಂಡ್ ಗೃಹ ಸಚಿವೆ ಪ್ರೀತಿ ಪಟೇಲ್ ಅವರೊಂದಿಗೆ ವಾಯುವ್ಯ ಲಂಡನ್‌ನ ಹಿಂದೂ ದೇವಾಲಯಕ್ಕೆ ಭೇಟಿ ನೀಡಿದ್ದರು.

- Advertisement -
- Advertisement -

ಆಗಸ್ಟ್ 5 ರಂದು ಅಯೋಧ್ಯೆಯ ರಾಮ ಮಂದಿರದ “ಭೂಮಿ ಪೂಜೆ”ಯ ಹಿನ್ನಲೆಯಲ್ಲಿ ಇಂಗ್ಲೆಂಡ್ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ಶ್ರೀರಾಮ ಅಭಿಷೇಕ ಮಾಡಿದ್ದಾಗಿ ಟ್ವೀಟ್‌ ಮಾಡಿದ್ದಾರೆ ಎಂಬ ಸಂದೇಶ ವೈರಲ್ ಆಗಿದೆ.

ವೈರಲ್ ಆದ ಟ್ವೀಟ್‌ನಲ್ಲಿ “ನಾನು ಭಾರತೀಯ ಸಂಸ್ಕೃತಿಯ ದೊಡ್ಡ ಅಭಿಮಾನಿಯಾಗಿದ್ದೇನೆ. ಹಾಗಾಗಿ ಆಗಸ್ಟ್ 5 ರಂದು ನನ್ನ ನಿವಾಸದಲ್ಲಿ ಗೃಹ ಸಚಿವರೊಂದಿಗೆ ಶ್ರೀ ರಾಮ ಅಭಿಷೇಕ ಮಾಡಿದೆ” ಎಂದು ಬರೆಯಲಾಗಿತ್ತು.

ಈ ವರದಿ ಬರೆಯುತ್ತಿರುವ ಹೊತ್ತಿಗೆ ಈ ಟ್ವೀಟ್ 14.5 ಸಾವಿರ ಬಾರಿ ರಿಟ್ವೀಟ್ ಆಗಿದೆ ಮತ್ತು 62.3 ಸಾವಿರ ಲೈಕ್‌‌ಗಳು ಗಳಿಸಿದೆ.

ಮೇಲಿರುವ ಚತ್ರವನ್ನು ಬಳಸಿಕೊಂಡು ಹಲವಾರು ಜನರು ಇದೇ ರೀತಿಯ ಟ್ವೀಟ್ ಮಾಡಿದ್ದಾರೆ.

ಕೇವಲ ಟ್ವಿಟ್ಟರ್ ಮಾತ್ರವಲ್ಲದೆ ಫೇಸ್‌ಬುಕ್‌‌ನಲ್ಲಿ ಕೂಡಾ ಈ ರೀತಿಯ ಪೋಸ್ಟ್‌ಗಳು ಹರಿದಾಡಿವೆ. ಅದರಲ್ಲಿ ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಆಗಸ್ಟ್‌ 5 ರಂದು ರಾಮ ಅಭಿಷೇಕ ಮಾಡಿದರು ಎಂದು ಹೇಳಲಾಗಿದೆ.

Let's call Boris Johnson to drill some culture where needed!

Posted by Diwakar Acharya on Friday, August 7, 2020

Honourable PM of UK Mr. Boris Johnson..

Posted by Vimal Dwivedi on Friday, August 7, 2020

ಫ್ಯಾಕ್ಟ್‌‌ಚೆಕ್

ಈ ವೈರಲ್ ಪೋಸ್ಟ್ ಸುಳ್ಳಾಗಿದೆ. ಯಾಕೆಂದರೆ ಈ ಟ್ವೀಟ್ ಮಾಡಿರುವ ಟ್ವಿಟ್ಟರ್‌ ಖಾತೆಯು ಇಂಗ್ಲೆಂಡ್ ಪ್ರಧಾನಿಯದ್ದಲ್ಲ. ಆ ಖಾತೆ ನಕಲಿಯಾಗಿದ್ದು, ಅದನ್ನು ಟ್ವಿಟ್ಟರ್‌ ಪರಿಶೀಲಿಸಿಲ್ಲ. ಅದು ಬ್ಲುಟಿಕ್ ಸಹ ಹೊಂದಿಲ್ಲ.

ನಕಲಿ ಟ್ವಿಟರ್ ವಿವರ

ವೈರಲ್ ಟ್ವೀಟ್ ಅನ್ನು ಪೋಸ್ಟ್ ಮಾಡಿದ ಖಾತೆಯು ಇದು ‘ಅನಧಿಕೃತ ಖಾತೆ’ ಎಂದು ಅದರಲ್ಲೇ ಸ್ಪಷ್ಟವಾಗಿ ಉಲ್ಲೇಖಿಸಿದೆ, ಅದಲ್ಲದೆ ಅದನ್ನು ಕಳೆದ ತಿಂಗಳು ರಚಿಸಲಾಗಿದೆ.

ಖಾತೆಯ ಸ್ಕ್ರೀನ್‌ಶಾಟ್ ಕೆಳಗಿದೆ.

ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಅವರ ಅಧಿಕೃತ ಖಾತೆಗೆ ಇದಾಗಿದೆ.

ವೈರಲ್ ಆಗಿರುವ ಫೋಟೋ 

ವೈರಲ್ ಟ್ವೀಟ್ ಜೊತೆಯಲ್ಲಿರುವ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮಾಡಿ ಹುಡುಕಿದಾಗ, ಇದು ಡಿಸೆಂಬರ್ 9, 2019 ರಂದು ಇಂಗ್ಲೆಂಡ್ ಕನ್ಸರ್ವೇಟಿವ್ ಪಕ್ಷದ ಫೇಸ್‌ಬುಕ್ ಪುಟದಲ್ಲಿ ಮಾಡಲಾದ ಪೋಸ್ಟ್ ಒಂದರ ಚಿತ್ರ ಎಂದು ತಿಳಿದು ಬಂದಿದೆ. ಆ ಪೋಸ್ಟ್‌ನಲ್ಲಿ ಇದ್ದ ಹಲವು ಚಿತ್ರಗಳಲ್ಲಿ ಈ ವೈರಲ್ ಚಿತ್ರವೂ ಒಂದಾಗಿದೆ.

ಪೋಸ್ಟ್‌ನಲ್ಲಿರುವ ಶೀರ್ಷಿಕೆಯ ಪ್ರಕಾರ, ಬೋರಿಸ್ ಜಾನ್ಸನ್ ಇಂಗ್ಲೆಂಡ್ ಗೃಹ ಸಚಿವೆ ಪ್ರೀತಿ ಪಟೇಲ್ ಅವರೊಂದಿಗೆ ವಾಯುವ್ಯ ಲಂಡನ್‌ನ ಹಿಂದೂ ದೇವಾಲಯಕ್ಕೆ ಭೇಟಿ ನೀಡಿದ್ದರು.

“ಈ ದೇವಾಲಯವು ನಮ್ಮ ದೇಶದ ಬಹುದೊಡ್ಡ ಉಡುಗೊರೆಗಳಲ್ಲಿ ಒಂದಾಗಿದೆ. ಅದರಲ್ಲಿ ವಾಸಿಸುವ ಅದ್ಭುತ ಸಮುದಾಯ ಮನೋಭಾವದಿಂದ ಇದು ಜೀವಂತವಾಗಿದೆ. ನೀವು ಮಾಡುವ ಮಹತ್ತರವಾದ ದತ್ತಿ ಕಾರ್ಯಗಳ ಮೂಲಕ ನೀವು ನಮ್ಮ ಸಮಾಜಕ್ಕೆ ಮರಳಿ ನೀಡುತ್ತಿದ್ದೀರಿ. ನಿಮ್ಮನ್ನು ಹೊಂದಿರುವ ಲಂಡನ್ ಮತ್ತು ಇಂಗ್ಲೆಂಡ್ ಅದೃಷ್ಟವಂತರು” ಎಂದು ಅಂದು ಬೋರಿಸ್ ಹೇಳಿದ್ದಾರೆ.

Last night Boris Johnson visited the Hindu temple of Neasden in north-west London with Priti Patel."This temple is one…

Posted by Conservatives on Sunday, December 8, 2019

ದೇವಾಲಯದ ಬಗ್ಗೆ ಇಲ್ಲಿ ನೋಡಬಹುದು.

ಈ ಮಾಹಿತಿಯ ಆಧಾರದ ಮೇಲೆ ಕೀವರ್ಡ್ ಬಳಸಿ ಹುಡುಕಾಟ ನಡೆಸಿದಾಗ ಈ ಕಾರ್ಯಕ್ರಮದ ಹಲವಾರು ಸುದ್ದಿಗಳನ್ನು ನೋಡಬಹುದಾಗಿದೆ.

ದಿ ಹಿಂದೂ ವರದಿಯ ಪ್ರಕಾರ, ಬೋರಿಸ್ ಜಾನ್ಸನ್ ಅವರು ಹೊಸ ಭಾರತವನ್ನು ನಿರ್ಮಿಸುವ ಉದ್ದೇಶದಿಂದ ಪ್ರಧಾನಿ ಮೋದಿ ಅವರೊಂದಿಗೆ ಪಾಲುದಾರರಾಗುವುದಾಗಿ ವಾಗ್ದಾನ ಮಾಡಿದ್ದರು. ಅದರ ಹಿನ್ನಲೆಯಲ್ಲಿ, ಅವರು ಮತ್ತು ಅವರ ಪಾಲುದಾರ ಕ್ಯಾರಿ ಸೈಮಂಡ್ಸ್ ಕಳೆದ ವರ್ಷ ಸಾರ್ವತ್ರಿಕ ಚುನಾವಣೆಗೆ ಮುಂಚಿತವಾಗಿ ಭಾರತೀಯ ವಲಸೆಗಾರರ ​​ಮತಗಳನ್ನು ಸೆಳೆಯಲು ಇಂಗ್ಲೆಂಡಿನ ಪ್ರಸಿದ್ಧ ಹಿಂದೂ ದೇವಾಲಯಕ್ಕೆ ಭೇಟಿ ನೀಡಿದ್ದರು.

ಯುಕೆ ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಕೂಡ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಭೇಟಿಯಲ್ಲಿ ದೇವಾಲಯದ ಅಧಿಕಾರಿಗಳ ಟ್ವೀಟ್ ಕೆಳಗಿನಂತಿದೆ.

ಅದಲ್ಲದೆ ಈ ದೇವಾಲಯವು ರಾಮನ ದೇವಾಲಯ ಅಲ್ಲ. ಇದು 1781 ರಲ್ಲಿ ಜನಿಸಿದ್ದ “ಭಗವಾನ್ ಸ್ವಾಮಿನಾರಾಯಣ” ದೇವಾಲಯವಾಗಿದೆ. ಇದಲ್ಲದೆ, ದೇವಾಲಯದ ವೆಬ್‌ಸೈಟ್‌ನಲ್ಲಿ ಹೇಳಿರುವಂತೆ ಭಗವಾನ್ ಸ್ವಾಮಿನಾರಾಯಣ್ ಅವರ ಹದಿಹರೆಯದ ರೂಪವಾದ ಶ್ರೀ ನೀಲಕಂಠ ವರ್ಣಿ ರೂಪದಲ್ಲಿ ಅವರು ಪೂಜಿಸಲ್ಪಡುತ್ತಿದ್ದಾರೆ.

ಇಂಗ್ಲೆಂಡ್ ಪ್ರಧಾನಿ ದೇವಾಲಯಕ್ಕೆ ಭೇಟಿ ನೀಡಿ ಮಾತನಾಡಿದ್ದನ್ನು ಕೆಳಗಿನ ವಿಡಿಯೋದಲ್ಲಿ ನೋಡಬಹುದಾಗಿದೆ.


ಓದಿ: ರಾಮ ಮಂದಿರದ ಜಾಹಿರಾತು ಹಾಕದಂತೆ ಒತ್ತಡ ಹಾಕಿದ್ದು ಮುಸ್ಲಿಂ ಸಂಘಟನೆಗಳು ಮಾತ್ರವೆ?
 


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

31 ವರ್ಷಗಳ ಹಳೇ ಸಾಲ ತೀರಿಸಲು 1200 ಕಿ.ಮೀ ಪ್ರಯಾಣಿಸಿದ ಕೇರಳದ ಇಸ್ಮಾಯಿಲ್

"ನನ್ನ ಕಣ್ಣುಗಳಿಂದ ಆನಂದಬಾಷ್ಪಗಳು ಉದುರಿದವು. ನನ್ನ ಮನಸ್ಸಿಗೆ ಅದೆಷ್ಟು ನೆಮ್ಮದಿ ಸಿಕ್ಕಿತೆಂದರೆ, ಅದನ್ನು ವಿವರಿಸಲು ಪದಗಳೇ ಸಾಲದು. ಆತನಿಗೂ ಅಷ್ಟೇ ದೊಡ್ಡ ಸಮಾಧಾನ." ಹೀಗೆ ಭಾವುಕರಾಗಿ ನುಡಿಯುತ್ತಾರೆ ಮೊಹಮ್ಮದ್ ಇಸ್ಮಾಯಿಲ್. 1995ರಲ್ಲಿ ಸೌದಿ...

ಬಂಡಾಯದ ಬಳಿಕ ಟಿಎಂಸಿಗೆ ಮತ್ತೊಂದು ಸವಾಲು : ಪಕ್ಷದ ಬ್ಯಾಂಕ್ ಖಾತೆಗಳು ಫ್ರೀಝ್

ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದ ಮೂರು ಬ್ಯಾಂಕ್ ಖಾತೆಗಳಲ್ಲಿರುವ 440 ಕೋಟಿ ರೂಪಾಯಿ ಹಣವನ್ನು ಭಾಗಶಃ ಬಳಸಲು ಕಲ್ಕತ್ತಾ ಹೈಕೋರ್ಟ್ ಅನುಮತಿ ನೀಡಿದ ಮರುದಿನವೇ, ಪಶ್ಚಿಮ ಬಂಗಾಳ ಪೊಲೀಸರು...

ಮಂದಿರ ನಿರ್ಮಾಣದ ಕ್ರೆಡಿಟ್‌ಗೆ ಇದ್ದ ಯಜಮಾನಿಕೆ, ಕೊಳ್ಳೆ ಹೊಡೆದಾಗ ಯಾಕಿಲ್ಲ ಸೇವಕರೇ?

ಬಾಲರಾಮನ ಪ್ರಾಣಪ್ರತಿಷ್ಠಾಪನೆಗೆ ಮುನ್ನ ಪ್ರಧಾನಿಯವರು 11 ದಿನಗಳ ಕಾಲ ಕಠಿಣ ಉಪವಾಸ ವ್ರತ ಆಚರಿಸಿದ್ದರು, ಕೇವಲ ಎಳನೀರು ಕುಡಿದರು, ನೆಲದ ಮೇಲೆ ಮಲಗಿದರು ಎಂದು ಇಡೀ ದೇಶಕ್ಕೆ ಸಾರಲಾಗಿತ್ತು. ಅಯೋಧ್ಯೆಯಿಂದ ಹೊಸ ಕಾಲದ...

‘ಫ್ರೀ ಪ್ಯಾಲೆಸ್ತೀನ್’ ಘೋಷಣೆಯನ್ನು ತಮಾಷೆ ಮಾಡಿದ ಸೈಫ್ ಅಲಿ ಖಾನ್ – ನಿರೂಪಕಿ ಅನುಪಮಾ ಚೋಪ್ರಾ

ಸ್ಪ್ಯಾನಿಷ್ ನಟ ಜೇವಿಯರ್ ಬಾರ್ಡೆಮ್ ಅವರ "ಫ್ರೀ ಪ್ಯಾಲೆಸ್ತೀನ್" ಹೇಳಿಕೆ ಕುರಿತು ಸೈಫ್ ಅಲಿ ಖಾನ್ ಮತ್ತು ಚಲನಚಿತ್ರ ಪತ್ರಕರ್ತೆ ಅನುಪಮಾ ಚೋಪ್ರಾ ನಗುತ್ತಿರುವ ಕ್ಲಿಪ್ ಆನ್‌ಲೈನ್‌ನಲ್ಲಿ ವೈರಲ್ ಆಗಿದ್ದು, ನಟನ ಅಸೂಕ್ಷ್ಮ...

ತೆಲಂಗಾಣ : ಪೋಕ್ಸೋ ಪ್ರಕರಣದ ಆರೋಪಿಯಿಂದ ಸಂತ್ರಸ್ತೆ ಸೇರಿ 6 ಜನರ ಹತ್ಯೆ

ಪೋಕ್ಸೋ ಪ್ರಕರಣದ ಆರೋಪಿಯೊಬ್ಬ ಸಂತ್ರಸ್ತೆ ಸೇರಿದಂತೆ ಒಟ್ಟು ಆರು ಜನರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶಾಬಾದ್ ಮಂಡಲದಲ್ಲಿ ಶುಕ್ರವಾರ (ಜು.10) ರಾತ್ರಿ ನಡೆದಿದೆ. 28 ವರ್ಷ ವಯಸ್ಸಿನ...

‘ನನ್ನನ್ನು ಮೌನಗೊಳಿಸಲು, ನೀವು ನನ್ನನ್ನು ಕೊಲ್ಲಬೇಕಾಗುತ್ತದೆ’: ಟಿಎಂಸಿ ಬಿಕ್ಕಟ್ಟಿನ ನಡುವೆ ಬಿಜೆಪಿ ವಿರುದ್ಧ ಮಮತಾ ಬ್ಯಾನರ್ಜಿ ಆಕ್ರೋಶ  

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) ಪಕ್ಷದಲ್ಲಿ ಆಂತರಿಕ ಬಿಕ್ಕಟ್ಟು ತಾರಕಕ್ಕೇರಿರುವ ಬೆನ್ನಲ್ಲೇ, ಪಕ್ಷದ ಸುಪ್ರೀಮೋ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇತ್ತೀಚಿನ ತಿಂಗಳುಗಳಲ್ಲೇ ಅತ್ಯಂತ ಪ್ರಬಲವಾದ ರಾಜಕೀಯ...

ಸುಪ್ರೀಂ ಕೋರ್ಟ್‌ನಲ್ಲಿ ಜಡ್ಜ್‌ಗಳನ್ನೇ ‘ನ್ಯಾಯಾಂಗ ಸೇವಕರು’ ಎಂದ ಅರ್ಜಿದರ

ಸುಪ್ರೀಂ ಕೋರ್ಟ್‌ನಲ್ಲಿ ಶುಕ್ರವಾರ ಅತ್ಯಂತ ನಾಟಕೀಯ ಹಾಗೂ ಆಘಾತಕಾರಿ ದೃಶ್ಯವೊಂದು ತೆರೆದುಕೊಂಡಿದೆ. ಪ್ರಕರಣವೊಂದರ ವಿಚಾರಣೆ ವೇಳೆ ಖುದ್ದಾಗಿ ಹಾಜರಾಗಿದ್ದ ಅರ್ಜಿದಾರನೊಬ್ಬ, ಲಕ್ನೋದ ಪೊಲೀಸ್ ಅಧಿಕಾರಿಯೊಬ್ಬರ ವಿರುದ್ಧ ಎಫ್‌ಐಆರ್ (FIR) ದಾಖಲಿಸಲು ನಾನು ನ್ಯಾಯಪೀಠಕ್ಕೆ...

ಮದ್ಯದ ಅಮಲಿನಲ್ಲಿ ಸಾರಿಗೆ ಬಸ್‌ ಅಪಹರಿಸಿದ ವ್ಯಕ್ತಿ; 21 ಕಿ.ಮೀ. ಪ್ರಯಾಣದ ನಂತರ ಅಪಘಾತ

ತೆಲಂಗಾಣದ ಜನಗಾಂವ್ ಬಸ್ ನಿಲ್ದಾಣದಲ್ಲಿ ನಿಂತಿದ್ದ ತೆಲಂಗಾಣ ರಾಜ್ಯ ರಸ್ತೆ ಸಾರಿಗೆ ನಿಗಮದ (ಟಿಜಿಎಸ್‌ಆರ್‌ಟಿಸಿ) ಬಸ್‌ ಅನ್ನು ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕದ್ದಿದ್ದಾನೆ. ನಂತರ ಅದನ್ನು ಸುಮಾರು 21 ಕಿ.ಮೀ. ದೂರ ಓಡಿಸಿ,...

ಬೆಂಗಳೂರಿನಲ್ಲಿ: ರಸ್ತೆ ಬದಿ ವಾರಗಟ್ಟಲೆ ವಾಹನ ನಿಲ್ಲಿಸಿದರೆ ಜಪ್ತಿ ಮಾಡಿ ‘ಹರಾಜು’ ಹಾಕಲಿದೆ ಸರ್ಕಾರ!

ಸಿಲಿಕಾನ್ ಸಿಟಿಯ ಟ್ರಾಫಿಕ್ ದಟ್ಟಣೆಗೆ ಮುಕ್ತಿ ಹಾಡಲು ಮತ್ತು ಪಾದಚಾರಿಗಳ ಹಕ್ಕನ್ನು ರಕ್ಷಿಸಲು ರಾಜ್ಯ ಸರ್ಕಾರ ಈಗ ಅತ್ಯಂತ ಕಠಿಣ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ ಬದಿ ಹಾಗೂ ಫುಟ್‌ಪಾತ್‌ಗಳಲ್ಲಿ ತಿಂಗಳುಗಟ್ಟಲೆ ಧೂಳು ತಿನ್ನುತ್ತಾ...

ಸರ್ಕಾರಿ ಶಾಲೆಗಳಲ್ಲಿ 86 ಲಕ್ಷ ವಿದ್ಯಾರ್ಥಿಗಳ ಕುಸಿತ, ಖಾಸಗಿ ಶಾಲೆಗಳತ್ತ ಮುಖ ಮಾಡಿದ 88 ಲಕ್ಷ ಮಕ್ಕಳು: ಕಳವಳಕಾರಿ ವರದಿ

ನವದೆಹಲಿ: ದೇಶದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆಗಳು ಕಂಡುಬರುತ್ತಿದ್ದು, ಸರ್ಕಾರಿ ಶಾಲೆಗಳ ದಾಖಲಾತಿಯಲ್ಲಿ ಭಾರಿ ಕುಸಿತ ಉಂಟಾಗಿದೆ. 2023–24 ಮತ್ತು 2025–26ರ ಶೈಕ್ಷಣಿಕ ವರ್ಷಗಳ ನಡುವಿನ ಅವಧಿಯಲ್ಲಿ ದೇಶಾದ್ಯಂತ ಸರ್ಕಾರಿ ಶಾಲೆಗಳಲ್ಲಿ...