Homeದಿಟನಾಗರರಾಮ ಮಂದಿರದ ಜಾಹಿರಾತು ಹಾಕದಂತೆ ಒತ್ತಡ ಹಾಕಿದ್ದು ಮುಸ್ಲಿಂ ಸಂಘಟನೆಗಳು ಮಾತ್ರವೆ?

ರಾಮ ಮಂದಿರದ ಜಾಹಿರಾತು ಹಾಕದಂತೆ ಒತ್ತಡ ಹಾಕಿದ್ದು ಮುಸ್ಲಿಂ ಸಂಘಟನೆಗಳು ಮಾತ್ರವೆ?

- Advertisement -
- Advertisement -

ನ್ಯೂಯಾರ್ಕ್ ಮೂಲದ ಜಾಹೀರಾತು ಸಂಸ್ಥೆಯೊಂದು ರಾಮನ ಚಿತ್ರಗಳನ್ನು ಟೈಮ್ಸ್ ಸ್ಕ್ವೇರ್‌ನಲ್ಲಿ ಜಾಹೀರಾತು ಫಲಕಗಳಲ್ಲಿ ಪ್ರಸಾರ ಮಾಡಲು ನಿರಾಕರಿಸಿದ ನಂತರ, ಹಲವಾರು ಸುದ್ದಿ ವೆಬ್‌ಸೈಟ್‌ಗಳು, ಇದು ಅಮೆರಿಕಾದಲ್ಲಿನ “ಮುಸ್ಲಿಂ ಗುಂಪುಗಳು” ನಡೆಸಿದ ಅಭಿಯಾನದ ಫಲಿತಾಂಶವಾಗಿದೆ ಎಂದು ವರದಿ ಮಾಡಿವೆ.

ಆದರೆ ನಿಜವೇನೆಂದರೆ ಈ ವರದಿಗಳಿಗೆ ವಿರುದ್ದವಾಗಿ ಜಾಹೀರಾತುಗಳನ್ನು ಹಾಕದಂತೆ ಪ್ರತಿಭಟಿಸಿರುವವರಲ್ಲಿ ಹಿಂದೂಗಳು ಸೇರಿದಂತೆ ಎಲ್ಲಾ ಧರ್ಮಗಳ ನಾಗರಿಕ ಹಕ್ಕುಗಳ ಸಂಘಟನೆಯ ಜನರು ಇದ್ದರು ಎಂಬುವುದಾಗಿದೆ.

ಒಪಿಇಂಡಿಯಾ ಮತ್ತು ಇಂಡಿಯಾ.ಕಾಂನಂತಹ ಸುದ್ದಿ ಸಂಸ್ಥೆಗಳು ನಾಸ್ಡಾಕ್ ಬಿಲ್‌ಬೋರ್ಡ್ ಅನ್ನು ನಿರ್ವಹಿಸುವ ಜಾಹೀರಾತು ಕಂಪನಿಯಾದ ಬ್ರಾಂಡೆಡ್ ಸಿಟೀಸ್ ನೆಟ್ವರ್ಕ್ ಮುಸ್ಲಿಂ ಸಂಘಟನೆಗಳು ಇದರ ವಿರುದ್ಧ ಅರ್ಜಿಯನ್ನು ಸಲ್ಲಿಸಿದ ನಂತರ ಬಿಲ್‌ಬೋರ್ಡ್ ನೀಡಲು ನಿರಾಕರಿಸಿದೆ ಎಂದು ವರದಿಗಳನ್ನು ಪ್ರಕಟಿಸಿತು.

ದಕ್ಷಿಣ ಏಷ್ಯಾದ ನಾಗರಿಕ ಹಕ್ಕುಗಳ ಗುಂಪುಗಳ ಒಕ್ಕೂಟದ ಪ್ರತಿಭಟನೆಯಿಂದಾಗಿ ಜಾಹೀರಾತುಗಳನ್ನು ಹಾಕಲು ಕಂಪನಿ ನಿರಾಕರಿಸಿದ ನಂತರ ಸುಳ್ಳು ಹೇಳಿಕೆಗಳನ್ನು ಒಳಗೊಂಡ ಸುದ್ದಿಗಳನ್ನು ಈ ವೆಬ್‌ಸೈಟ್‌ಗಳು ವರದಿ ಮಾಡುತ್ತುದೆ.

ನಡೆದದ್ದೇನು ಅಥವಾ ಧ್ವೇಷ ಅಭಿಯಾನ ನಡೆಸುವ ವೆಬ್‌ಸೈಟ್ ಹೇಳಿದ್ದೇನು?

ಬಲಪಂಥೀಯ ವೆಬ್‌ಸೈಟ್‌ಗಳಾದ ಒಪಿಂಡಿಯಾ ಮತ್ತು ಇಂಡಿಯಾ.ಕಾಮ್ ತಮ್ಮ ವರದಿಗಳಲ್ಲಿ ಹೀಗೆ ಬರೆದಿದೆ “ಭಾರತೀಯ ಅಲ್ಪಸಂಖ್ಯಾತರ ವಕೀಲರ ನೆಟ್‌ವರ್ಕ್- (ಇಮಾನ್‌ನೆಟ್), ಜಸ್ಟಿಸ್ ಫಾರ್ ಆಲ್, ಕೊಯಿಲಿಷನ್ ಆಫ್ ಅಮೆರಿಕನ್ ಫಾರ್‌ ಪ್ಲೂರಲಿಸಂ ಇನ್ ಇಂಡಿಯಾ (ಸಿಎಪಿಐ), ಉತ್ತರ ಅಮೆರಿಕಾದ ಭಾರತೀಯ ಮುಸ್ಲಿಂ ಸಂಘ (ನೈಮಾ), ಇಸ್ಲಾಮಿಕ್ ಸರ್ಕಲ್ ಆಫ್ ನಾರ್ಥ್ ಅಮೆರಿಕಾ-ಸೋಷಿಯಲ್ ಜಸ್ಟಿಸ್ (ಐಸಿಎನ್‌ಎಎಸ್‌ಜೆ) ಮತ್ತು ದಿ ಇಂಟರ್‌ನ್ಯಾಷನಲ್ ಸೊಸೈಟಿ ಫಾರ್ ಪೀಸ್ ಅಂಡ್ ಜಸ್ಟೀಸ್ ಈ ಅರ್ಜಿಯನ್ನು ಸಲ್ಲಿಸಿ ಜಾಹೀರಾತು ಫಲಕಗಳಲ್ಲಿ ರಾಮನ ಚಿತ್ರ ಬಾರದಂತೆ ತಡೆ ಹಿಡಿದಿದ್ದಾರೆ”.

ಆದರೆ ಈ ಕ್ರಮವನ್ನು ವಿರೋಧಿಸುವ ಇತರ ಸಂಘಟನೆಗಳ ಬಗ್ಗೆ ವರದಿಯು ಮೌನವಾಗಿದೆ. ಆ ಮೂಲಕ ಕೇವಲ ಮುಸ್ಲಿಂ ಸಂಘಟನೆಗಳನ್ನು ಮಾತ್ರ ತನ್ನ ದ್ವೇಷ ಪ್ರಚಾರದ ಗುರಿಯಾಗಿಸಿಕೊಂಡಿದೆ.

ಕಂಪನಿಯು ಜಾಹಿರಾತು ಹಾಕುವುದನ್ನು ನಿರಾಕರಿಸಿರುವುದು “ಜಿಹಾದಿ ಪಡೆಗಳಿಗೆ” ತಲೆಬಾಗುವುದನ್ನು ಸಂಕೇತಿಸುತ್ತದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಈ ವರದಿಯನ್ನು ಉಲ್ಲೇಖಿಸಿ ಹೇಳಲಾಗುತ್ತಿದೆ.

ಬಿಲ್‌ಬೋರ್ಡ್ ವಿರುದ್ದ ಪ್ರತಿಭಟಿಸಿದ ನಾಗರಿಕ ಹಕ್ಕುಗಳ ಸಂಘಟನೆ

ಜುಲೈ 31 ರಂದು ಅಮೆರಿಕಾದ ಹಲವಾರು ನಾಗರಿಕ ಹಕ್ಕುಗಳ ಸಂಘಟನೆಗಳಾದ ಅಮೆರಿಕನ್ ಇಂಡಿಯನ್ ಪಬ್ಲಿಕ್ ಅಫೇರ್ಸ್ ಕಮಿಟಿ (ಎಐಪಿಎಸಿ) ನ್ಯೂಯಾರ್ಕ್ ನಗರದ ಮೇಯರ್‌ಗೆ ಆಗಸ್ಟ್ 5 ರಂದು ಟೈಮ್ಸ್ ಸ್ಕ್ವೇರ್‌ನಲ್ಲಿ “ಇಸ್ಲಾಮೋಫೋಬಿಕ್” ಬಿಲ್‌ಬೋರ್ಡ್ ಅನ್ನು ಪ್ರದರ್ಶಿಸುವುದನ್ನು ತಡೆಯುವಂತೆ ಕೇಳಿಕೊಂಡಿದ್ದವು.

ಟೈಮ್ಸ್ ಸ್ಕ್ವೇರ್ನಲ್ಲಿ ಹಾಕಲಾಗುವ ಜಾಹೀರಾತುಗಳ ಪ್ರದರ್ಶನವು “ನಂಬಿಕೆಯ ಆಚರಣೆಯಲ್ಲ ಆದರೆ ದ್ವೇಷದ ಆಚರಣೆಯಾಗಿದೆ” ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಇವುಗಳಲ್ಲಿ ಕೊಯಿಲಿಷನ್ ಅಗೈನ್ಸ್ಟ್‌ ಫ್ಯಾಸಿಸಂ ಇನ್ ಇಂಡಿಯಾ (ಸಿಎಎಫ್‌ಐ), ಹಿಂದೂಸ್ ಫಾರ್‌ ಹ್ಯೂಮನ್ ರೈಟ್ (ಎಚ್‌ಎಫ್‌ಹೆಚ್ಆರ್), ಗ್ಲೋಬಲ್ ಇಂಡಿಯನ್ ಪ್ರೋಗ್ರೆಸ್ಸಿವ್ ಅಲೈಯನ್ಸ್ (ಜಿಪಿಎ), ಅಸೋಸಿಯೇಷನ್ ಆಫ್ ಇಂಡಿಯನ್ ಮುಸ್ಲಿಸ್, ಸಾಧನಾ: ಕೊಲಿಷನ್ ಆಫ್ ಪ್ರೋಗ್ರೆಸಿವ್‌ ಹಿಂದೂಸ್ ಮತ್ತು ಇತರವು ಸೇರಿವೆ.

ಹಿಂದೂಸ್ ಫಾರ್‌ ಹ್ಯೂಮನ್ ರೈಟ್ (ಎಚ್‌ಎಫ್‌ಹೆಚ್‌ಆರ್) ಸಂಘಟನೆಯ ಸಹ-ಸಂಸ್ಥಾಪಕಿ ಮತ್ತು ಮಂಡಳಿಯ ಸದಸ್ಯೆ ಸುನೀತಾ ವಿಶ್ವನಾಥ್ ಅವರು “ಕೆಲವನ್ನು ಹೊರತುಪಡಿಸಿ ಎಲ್ಲಾ ಸಂಘಟನೆಗಳು ಮುಸ್ಲಿಮರದ್ದಲ್ಲ. ನಾವೆಲ್ಲರೂ ನ್ಯೂಯಾರ್ಕ್ ಚುನಾಯಿತ ಅಧಿಕಾರಿಗಳಿಗೆ ಜಾಹೀರಾತು ಫಲಕಗಳ ಮಾಲೀಕರ ಮೇಲೆ ಒತ್ತಡ ಹೇರಿದ್ದೇವೆ ಮತ್ತು ನಮ್ಮ ಧ್ವನಿಯನ್ನು ಗಟ್ಟಿಯಾದ ರೀತಿಯಲ್ಲಿ ಎತ್ತಿದ್ದೇವೆ” ಎಂದಿದ್ದಾರೆ

“ವಿವಿಧ ರೀತಿಯ ಭಾರತೀಯ ವಲಸೆಗಾರರು ಭಾರತೀಯ ಪ್ರಜಾಪ್ರಭುತ್ವಕ್ಕಾಗಿ ಮಾತನಾಡಲು ಒಂದಾಗಬೇಕು ಮತ್ತು ಸಂಘಪರಿವಾರವನ್ನು ಸೋಲಿಸಲು ಸಹಾಯ ಮಾಡಬೇಕು. ಪ್ರತಿರೋಧ ಚಳವಳಿಯು ಹಿಂದೂ ಎಂದು ಗುರುತಿಸುವವರು ಸೇರಿದಂತೆ ಎಲ್ಲರನ್ನೂ ಸೇರಿಸುವ ಅಗತ್ಯವಿದೆ” ಎಂದು ಸುನಿತಾ ವಿಶ್ವನಾಥ್ ಹೇಳಿದ್ದಾರೆ.

ಒಕ್ಕೂಟದ ಭಾಗವಾಗಿದ್ದ ಗ್ಲೋಬಲ್ ಇಂಡಿಯಾ ಪ್ರೋಗ್ರೆಸ್ಸಿವ್ ಅಲೈಯನ್ಸ್ (ಜಿಐಪಿಎ) ಯ ಪ್ರತಿನಿಧಿ ಪ್ರತಿಭಟನೆಗಳು ಭಾರತೀಯ-ಅಮೇರಿಕನ್ ವಲಸೆಗಾರರಿಂದಲೇ ಹೊರತು ಯಾವುದೇ ಒಂದು ನಿರ್ದಿಷ್ಟ ನಂಬಿಕೆ ಅಥವಾ ಧರ್ಮದ ಜನರಿಂದ ಅಲ್ಲ ಎಂದು ಹೇಳಿದರು.

ಆಗಸ್ಟ್ 5 ರಂದು ನ್ಯೂಯಾರ್ಕ್‌ನ ಟೈಮ್ಸ್‌ ಸ್ಕ್ವೇರ್‌ನಲ್ಲಿ ರಾಮ ಮಂದಿರದ ಜಾಹಿರಾತು ಹಾಕದಿರುವಂತೆ ನಾಗರಿಕ ಹಕ್ಕುಗಳ ಗುಂಪು ಒತ್ತಡ ಹಾಕಿದ್ದರಿಂದ ಜಾಹೀರಾತು ಸಂಸ್ಥೆ ಜಾಹಿರಾತು ಪ್ರಸಾರ ಮಾಡಲು ನಿರಾಕರಿಸಿತು. ಆದರೆ ಈ ಪ್ರತಿಭಟನೆಯು ವಿವಿಧ ನಾಗರಿಕ ಹಕ್ಕುಗಳ ಗುಂಪುಗಳ ಸಾಮೂಹಿಕ ಪ್ರಯತ್ನವಾಗಿತ್ತು ಹಾಗೂ ಅದು ಕೇವಲ ಮುಸ್ಲಿಮರ ಗುಂಪುಗಳದ್ದು ಮಾತ್ರವಾಗಿರಲಿಲ್ಲ.

ಕೃಪೆ: ದಿ ಕ್ವಿಂಟ್


ಓದಿ: ಫ್ಯಾಕ್ಟ್‌ಚೆಕ್: ನ್ಯೂಯಾರ್ಕ್‌ನ ’ಟೈಮ್ಸ್‌ ‌ಸ್ಕ್ವೇರ್’ನಲ್ಲಿ ರಾಮನ ಚಿತ್ರ ಬಿತ್ತರಿಸಲಾಗಿದೆಯೆ?


ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ವಿವರಿಸಲು ಸಮಯಾವಕಾಶ ಕೋರಿ ಪ್ರಧಾನಿಗೆ ಖರ್ಗೆ ಪತ್ರ

0
ಲೋಕಸಭೆ ಚುನಾವಣೆಯ ಕಾಂಗ್ರೆಸ್ ಪ್ರಣಾಳಿಕೆ 'ನ್ಯಾಯಪತ್ರ'ದ ಕುರಿತು ಪ್ರಧಾನಿ ಮೋದಿ ಸರಣಿ ಹೇಳಿಕೆಗಳನ್ನು ಕೊಡುತ್ತಿದ್ದು, ಈ ಹಿನ್ನೆಲೆ ಪ್ರಣಾಳಿಕೆಯ ಕುರಿತು ವಿವರಿಸಲು ಸಮಯ ಕೋರಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪತ್ರ ಬರೆದಿದ್ದಾರೆ. ಖರ್ಗೆ...