Homeದಿಟನಾಗರಫ್ಯಾಕ್ಟ್‌ಚೆಕ್: ನ್ಯೂಯಾರ್ಕ್‌ನ ’ಟೈಮ್ಸ್‌ ‌ಸ್ಕ್ವೇರ್’ನಲ್ಲಿ ರಾಮನ ಚಿತ್ರ ಬಿತ್ತರಿಸಲಾಗಿದೆಯೆ?

ಫ್ಯಾಕ್ಟ್‌ಚೆಕ್: ನ್ಯೂಯಾರ್ಕ್‌ನ ’ಟೈಮ್ಸ್‌ ‌ಸ್ಕ್ವೇರ್’ನಲ್ಲಿ ರಾಮನ ಚಿತ್ರ ಬಿತ್ತರಿಸಲಾಗಿದೆಯೆ?

- Advertisement -
- Advertisement -

ಆಗಸ್ಟ್ 5 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮ ಮಂದಿರದ ಭೂಮಿ ಪೂಜಾ ಸಮಾರಂಭಕ್ಕೆ ಮುಂಚಿತವಾಗಿ ಅಮೆರಿಕಾದ ನ್ಯೂಯಾರ್ಕ್ ನಗರದಲ್ಲಿರುವ ಟೈಮ್ಸ್ ಸ್ಕ್ವೇರ್‌ನಲ್ಲಿ ಅವುಗಳ ಜಾಹಿರಾತನ್ನು ಪ್ರದರ್ಶಿಸಲಾಗುತ್ತಿದೆ ಎಂದು ಹೇಳುವ ಚಿತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಚಿತ್ರದಲ್ಲಿ ರಾಮನ ಚಿತ್ರಗಳನ್ನು ಹೊತ್ತ ಜಾಹಿರಾತು ಫಲಕವನ್ನು ತೋರಿಸಲಾಗುತ್ತಿದೆ.

ಆಗಸ್ಟ್ 5 ರಂದು ಟೈಮ್ಸ್ ಸ್ಕ್ವೇರ್ ಅಯೋಧ್ಯೆಯಲ್ಲಿರುವ ರಾಮ ಮತ್ತು ರಾಮ ಮಂದಿರದ 3 ಡಿ ಚಿತ್ರಗಳನ್ನು ಪ್ರದರ್ಶಿಸುತ್ತದೆ ಎಂಬುದು ನಿಜವಾದರು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಚಿತ್ರವನ್ನು ಫೋಟೋಶಾಪ್ ಮಾಡಿ ಆನ್‌ಲೈನ್ ಜನರೇಟರ್ ಬಳಸಿ ರಚಿಸಲಾಗಿದೆ.

ಹಲವಾರು ಫೇಸ್‌ಬುಕ್ ಬಳಕೆದಾರರು ಈ ಚಿತ್ರವನ್ನು ಹಂಚುತ್ತಿದ್ದಾರೆ.

ಫ್ಯಾಕ್ಟ್‌‌ಚೆಕ್‌‌:

ಮಂದಿರದ ಶಂಕು ಸ್ಥಾಪನೆ ಸಮಾರಂಭದ ಜಾಹೀರಾತುಗಳನ್ನು ಅಮೆರಿಕದಲ್ಲಿ ಬಿತ್ತರಿಸಲಾಗಿಲ್ಲ. ಆಗಸ್ಟ್‌ 5 ರಂದು ಕಾರ್ಯಕ್ರಮ ನಡೆಯುವಾಗ ಅದರ ಪ್ರಸಾರವನ್ನು ಅಲ್ಲಿ ಬಿತ್ತರಿಸಲಾಗುತ್ತದೆ.

“ಟೈಮ್ಸ್ ಸ್ಕ್ವೇರ್ ಜನರೇಟರ್” ಎಂಬ ಕೀವರ್ಡ್‌‌ಗಳೊಂದಿಗೆ ಗೂಗಲ್‌ನಲ್ಲಿ ಚಿತ್ರವನ್ನು ರಿವರ್ಸ್ ಮಾಡಿ ಹುಡುಕಿದರೆ, “Makeweet.com” ಎಂಬ ವೆಬ್‌ಸೈಟ್‌ನಲ್ಲಿ ವೈರಲ್ ಚಿತ್ರದಲ್ಲಿ ಬಳಸಲಾದ ನಿಖರವಾದ ಟೆಂಪ್ಲೇಟ್ ಅನ್ನು ಕಾಣಬಹುದಾಗಿದೆ.

ಈ ವೆಬ್‌ಸೈಟ್‌ನಲ್ಲಿ ಇರುವುದು ಫೋಟೋಶಾಪ್‌ಗೆ ಒಳಗಾಗಿರುವ ವೈರಲ್ ಚಿತ್ರವೆ ಎಂದು ಮತ್ತಷ್ಟು ಗಮನಿಸಿದರೆ ಅದರ ಸತ್ಯಾಸತ್ಯತೆಯನ್ನು ನೋಡಬಹುದಾಗಿದೆ. ಉದಾಹರಣೆಗೆ ಆನ್‌ಲೈನ್ ಟೆಂಪ್ಲೇಟ್‌ನಲ್ಲಿ ಹಸಿರು ಬಣ್ಣದ ಜಾಹೀರಾತು ಫಲಕ ಎಡಭಾಗದಲ್ಲಿದೆ, ಆದರೆ ಇದು ವೈರಲ್ ಚಿತ್ರದಲ್ಲಿ ಬಲಭಾಗದಲ್ಲಿದೆ.

ಇದಲ್ಲದೆ, ಹಳದಿ ಬಾಟಲಿಯ ಜಾಹೀರಾತು ಆನ್‌ಲೈನ್ ಟೆಂಪ್ಲೇಟ್‌ನಲ್ಲಿ ಎಡಭಾಗದಲ್ಲಿದೆ, ಆದರೆ ವೈರಲ್ ಚಿತ್ರದಲ್ಲಿ ಬಲಭಾಗದಲ್ಲಿದೆ. ಎರಡೂ ಚಿತ್ರಗಳಲ್ಲಿ ರಸ್ತೆಯಲ್ಲಿ ಕಂಡುಬರುವ ಕಾರುಗಳು ಕೂಡಾ ಬಲಭಾಗದಲ್ಲಿರವುದು ಎಡಭಾಗದಲ್ಲಿದೆ.

ಇದೇ ಟೆಂಪ್ಲೇಟ್ ಬಳಸಿ ನಮ್ಮದೇ ಆದ ಚಿತ್ರವನ್ನು ರಚಿಸಬಹುದಾಗಿದೆ. ವೈರಲ್ ಆಗಿರುವ ಚಿತ್ರದಂತೆ ನಮ್ಮ ಚಿತ್ರವನ್ನು ಕೂಡಾ ಸ್ಕ್ರೀನ್‌ನಲ್ಲಿ ತೋರುವ ಹಾಗೆ ನಾವೆ ರಚಿಸಿದ್ದೇವೆ ನೋಡಿ.

ಇಷ್ಟೇ ಅಲ್ಲದೆ ವೈರಲ್‌ ಚಿತ್ರದಲ್ಲಿ ಬಳಸಲಾದ ಚಿತ್ರಗಳಲ್ಲಿ ಒಂದನ್ನು ಅಲಾಮಿಯ ಸ್ಟಾಕ್‌ ಚಿತ್ರಗಳ ಸಂಗ್ರಹದಿಂದ ಪಡೆಯಲಾದ ಚಿತ್ರವಾಗಿದೆ. ಹಳದಿ ಬಣ್ಣದಲ್ಲಿ ಹೈಲೈಟ್ ಮಾಡಿದ ಬರಹ “ಅಲಾಮಿ ಸ್ಟಾಕ್ ಫೋಟೋ” ಎಂದು ಬರೆದಿದ್ದನ್ನು ಗಮನಸಬಹುದಾಗಿದೆ.

ಅಲಾಮಿ ಈ ಚಿತ್ರವನ್ನು “ಶ್ರೀ ವಡಪತಿರಾ ಕಲಿಯಮ್ಮನ್ ಹಿಂದೂ ದೇವಾಲಯ. ವಿಷ್ಣುವಿನ ಅವತಾರ. ಭಗವಾನ್ ರಾಮ 7 ನೇ ಅವತಾರ, ಸಿಂಗಾಪುರ” ಎಂಬ ಶೀರ್ಷಿಕೆಯೊಂದಿಗೆ ಅಪ್‌ಲೋಡ್ ಮಾಡಿತ್ತು.

ಇವುಗಳಿಂದ ಸ್ಪಷ್ಟವಾಗುವುದೇನೆಂದರೆ, ಆನ್‌ಲೈನ್ ಜನರೇಟರ್ ಬಳಸಿ ರಚಿಸಲಾದ ಚಿತ್ರವು ಅಮೆರಿಕಾದ ಟೈಮ್ಸ್ ಸ್ಕ್ವೇರ್ನಲ್ಲಿ ರಾಮನ ಚಿತ್ರವನ್ನು ಬಿತ್ತರಿಸಲಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ತಪ್ಪಾಗಿ ವೈರಲ್ ಮಾಡಲಾಗುತ್ತಿದೆ.

ಕೃಪೆ: ದಿಕ್ವಿಂಟ್


ಓದಿ: ರೇವಾದಲ್ಲಿ ಪ್ರಧಾನಿ ಮೋದಿ ಉದ್ಘಾಟಿಸಿದ್ದು ಏಷ್ಯಾದ ಅತಿದೊಡ್ಡ ಸೌರ ವಿದ್ಯುತ್ ಸ್ಥಾವರವೆ? ಫ್ಯಾಕ್ಟ್‌ಚೆಕ್


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...