Homeಅಂತರಾಷ್ಟ್ರೀಯತೈಲ ಸೋರಿಕೆ ಬಿಕ್ಕಟ್ಟು ಉಲ್ಬಣ; 'ಪರಿಸರ ತುರ್ತು ಪರಿಸ್ಥಿತಿ' ಘೋಷಿಸಿದ ಮಾರಿಷಸ್

ತೈಲ ಸೋರಿಕೆ ಬಿಕ್ಕಟ್ಟು ಉಲ್ಬಣ; ‘ಪರಿಸರ ತುರ್ತು ಪರಿಸ್ಥಿತಿ’ ಘೋಷಿಸಿದ ಮಾರಿಷಸ್

3,800 ಟನ್ ಇಂಧನವನ್ನು ಸಾಗಿಸುತ್ತಿದ್ದ ಇದು, ಬ್ಲೂ ಬೇ ಮೆರೈನ್ ಪಾರ್ಕ್‌ನ ವೈಡೂರ್ಯದ ಸಮೀಪವಿರುವ, ಅಂತರರಾಷ್ಟ್ರೀಯ ಮಟ್ಟದಲ್ಲಿ ಪಟ್ಟಿ ಮಾಡಲಾದ ಸಂರಕ್ಷಣಾ ತಾಣವಾದ ಪಾಯಿಂಟ್ d'Esny ಯಲ್ಲಿ ಬಂಡೆಗೆ ಡಿಕ್ಕಿ ಹೊಡೆದಿದೆ. 

- Advertisement -
- Advertisement -

ಮಾರಿಷಸ್‌ನ ಪ್ರಧಾನ ಮಂತ್ರಿ ಪರಿಸರ ತುರ್ತು ಪರಿಸ್ಥಿತಿಯನ್ನು ಘೋಷಿಸಿದ್ದು, ತುರ್ತು ನೆರವು ನೀಡುವಂತೆ ಫ್ರಾನ್ಸ್‌ಗೆ ಮನವಿ ಮಾಡಿದ್ದಾರೆ.

“ಪರಿಸರ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ” ಎಂದು ಪ್ರಧಾನಿ ಪ್ರವೀಂದ್ ಜುಗ್ನಾಥ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಶುಕ್ರವಾರ  ಪೋಸ್ಟ್ ಮಾಡಿದ್ದಾರೆ.

ಎರಡು ವಾರಗಳ ಹಿಂದೆ ಘಟಿಸಿದ ಅವಘಡ ಬೃಹತ್ ವಾಹಕ ಎಂ.ವಿ.ವಾಕಾಶಿಯೊದಿಂದ ಇಂಧನ ಸೋರಿಕೆಯನ್ನು ತಡೆಯುವ ಪ್ರಯತ್ನಗಳಿಗೆ ಫಲ ಸಿಕ್ಕಿಲ್ಲ. ಇದು ಸಮುದ್ರ ಪ್ರದೇಶದ ನೀರನ್ನು ಕಲುಷಿತಗೊಳಿಸುತ್ತಿದೆ.

ಜಪಾನಿನ ಕಂಪನಿಯೊಂದಕ್ಕೆ ಸೇರಿದ ಆದರೆ ಪನಾಮಿಯನ್-ಆರಂಭಿಸಿದ ಟ್ಯಾಂಕರ್ 3,800 ಟನ್ ಇಂಧನವನ್ನು ಸಾಗಿಸುತ್ತಿತ್ತು. ಇದು, ಬ್ಲೂ ಬೇ ಮೆರೈನ್ ಪಾರ್ಕ್‌ನ ವೈಡೂರ್ಯದ ಸಮೀಪವಿರುವ, ಅಂತರರಾಷ್ಟ್ರೀಯ ಮಟ್ಟದಲ್ಲಿ ಪಟ್ಟಿ ಮಾಡಲಾದ ಸಂರಕ್ಷಣಾ ತಾಣವಾದ ಪಾಯಿಂಟ್ d’Esny ಯಲ್ಲಿ ಬಂಡೆಗೆ ಡಿಕ್ಕಿ ಹೊಡೆದಿದೆ. ಭಾರೀ ಪ್ರಮಾಣ ಇಂಧನ ಸೋರಿಕೆಯಾಗಿದೆ ಎಂದು ಪರಿಸರ ಸಚಿವಾಲಯವು ತಿಳಿಸಿದೆ.

ಮಾರಿಷಸ್ ಹಸಿರು ಪ್ರವಾಸೋದ್ಯಮ ತಾಣವಾಗಿ ತನ್ನ ಖ್ಯಾತಿಯನ್ನು ನಿರ್ಮಿಸಿದ್ದ ಸ್ಥಳಗಳಲ್ಲಿ ಇಂಧನ ಸೋರಿಕೆಯು ಭಾರೀ ಹಾನಿ ಉಂಟುಮಾಡಿದೆ. ವೈಮಾನಿಕ ಚಿತ್ರಗಳು ಹಾನಿಯ ಪ್ರಮಾಣವನ್ನು ತೋರಿಸುತ್ತಿದ್ದು, ನೀಲಿ ಸಮುದ್ರಗಳು ತೈಲ ಸೋರಿಕೆಯಿಂದ ಕಪ್ಪು ಬಣ್ಣಕ್ಕೆ ತಿರುಗಿದೆ.

“ವಕಾಶಿಯೊ ಮುಳುಗುವಿಕೆ ಮಾರಿಷಸ್‌ಗೆ ಅಪಾಯವನ್ನು ತಂದಿಡುತ್ತದೆ. ಹಡಗುಗಳನ್ನು ಮರುಹೊಂದಿಸಲು ನಮ್ಮ ದೇಶಕ್ಕೆ ಕೌಶಲ್ಯ ಮತ್ತು ಪರಿಣತಿ ಇಲ್ಲ. ಆದ್ದರಿಂದ ನಾನು ಫ್ರಾನ್ಸ್‌ನ ಸಹಾಯವನ್ನು ಕೋರಿದ್ದೇನೆ” ಎಂದಿದ್ದಾರೆ.

ಜುಲೈ 25 ರಂದು ಹಡಗಿನಲ್ಲಿದ್ದ ಇಪ್ಪತ್ತು ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.

ಮಾರಿಷಸ್‌ನ ಆರ್ಥಿಕತೆಯ ಬೆನ್ನೆಲುಬಾಗಿರುವ ರಾಷ್ಟ್ರದ ಕರಾವಳಿಯಲ್ಲಿ ಇನ್ನೂ ಹೆಚ್ಚಿನ ಸೋರಿಕೆ ಹಾನಿಯನ್ನುಂಟುಮಾಡುತ್ತದೆ ಎಂದು ಪರಿಸರ ವಿಜ್ಞಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಾರಿಷಸ್, ಆಹಾರಕ್ಕಾಗಿ ಮತ್ತು ಪ್ರವಾಸೋದ್ಯಮಕ್ಕಾಗಿ ತನ್ನ ಸಮುದ್ರಗಳ ಮೇಲೆ ಹೆಚ್ಚಾಗಿ ಅವಲಂಬಿತವಾಗಿದೆ.


ಇದನ್ನೂ ಓದಿ: ನಮ್ಮ ಸಹಕಾರಕ್ಕೆ ಯಾವುದೆ ಷರತ್ತುಗಳಿಲ್ಲ: ಮಾರಿಷಸ್‌ಗೆ ಪ್ರಧಾನಿ ಮೋದಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಮಾರಾಟವಾಗಲು ನಿರಾಕರಿಸಿದ್ದಕ್ಕೆ ಜೈಲಿನಲ್ಲಿ ಹೊಡೆದು, ಚಿತ್ರಹಿಂಸೆ ನೀಡಿದ್ದರು: ಟಿಎಂಸಿ ನಾಯಕ ಸಾಕೇತ್ ಗೋಖಲೆ

0
ಬಿಜೆಪಿಗೆ ಸೇರಲು ಅಥವಾ ಮಾರಾಟವಾಗಲು ನಿರಾಕರಿಸಿದ್ದಕ್ಕಾಗಿ ಜೈಲಿನಲ್ಲಿ ನನಗೆ ಹೊಡೆದು ಚಿತ್ರಹಿಂಸೆ ನೀಡಲಾಗಿತ್ತು ಎಂದು ರಾಜ್ಯಸಭಾ ಸದಸ್ಯ, ಟಿಎಂಸಿ ನಾಯಕ ಸಾಕೇತ್ ಗೋಖಲೆ ಹೇಳಿದ್ದಾರೆ. ದಿ ವೈರ್‌ ಪ್ರಕಟಿಸಿದ ಹಿರಿಯ ವಕೀಲ ಕಪಿಲ್ ಸಿಬಲ್...