Homeಮುಖಪುಟಕಾಂಗ್ರೆಸ್ ಅಧ್ಯಕ್ಷ ಸ್ಥಾನ; ಕುಟುಂಬದ ಹೊರಗಿನವರಿಗೆ ಆದ್ಯತೆ: ಪ್ರಿಯಾಂಕಾ ಗಾಂಧಿ

ಕಾಂಗ್ರೆಸ್ ಅಧ್ಯಕ್ಷ ಸ್ಥಾನ; ಕುಟುಂಬದ ಹೊರಗಿನವರಿಗೆ ಆದ್ಯತೆ: ಪ್ರಿಯಾಂಕಾ ಗಾಂಧಿ

ಆಗಸ್ಟ್ 13ರಂದು ಪ್ರಕಟಗೊಂಡಿರುವ 'ಇಂಡಿಯಾ ಟುಮಾರೋ: ಕಾನ್ವರ್ಸೇಷನ್ಸ್ ವಿತ್ ದಿ ನೆಕ್ಸ್ಟ್ ಜನರೇಷನ್ ಆಫ್ ಪೊಲಿಟಿಕಲ್ ಲೀಡರ್ಸ್' ಎಂಬ ಕೃತಿಯಲ್ಲಿ ನೀಡಿರುವ ಸಂದರ್ಶನದಲ್ಲಿ ಪ್ರಿಯಾಂಕಾ ಗಾಂಧಿ ಈ ಮಾತನ್ನು ಹೇಳಿದ್ದಾರೆ.

- Advertisement -
- Advertisement -

ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಲ್ಲಿ ಖಾಲಿಯಿರುವ ಅಧ್ಯಕ್ಷ ಸ್ಥಾನವನ್ನು ಭರ್ತಿ ಮಾಡಬೇಕು ಎಂಬ ಕೂಗು ಪಕ್ಷದ ಒಳಗಡೆಯೇ ಬಲವಾಗಿ ಕೇಳಿಬರುತ್ತಿರುವ ಸಂದರ್ಭದಲ್ಲಿ, ನಮ್ಮ ಕುಟುಂಬದ ಹೊರಗಿನವರಿಗೆ ಆಧ್ಯತೆ ಎಂದು ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದ ಬಗೆಗೆ ಕುಟುಂಬ ರಾಜಕಾರಣದ ಟೀಕೆಯು ಹಲವು ವರ್ಷಗಳಿಂದ ಕೇಳಿಬರುತ್ತಿದ್ದು, ಈಗ ಅದಕ್ಕೆ ಅಂತ್ಯ ಹಾಡಬೇಕು ಎನ್ನುವಂತೆ ರಾಹುಲ್ ಗಾಂಧಿಯವರ ಅಭಿಪ್ರಾಯಕ್ಕೆ ತಮ್ಮ ಸಹಮತವನ್ನು ಪ್ರಿಯಾಂಕಾ ವ್ಯಕ್ತಪಡಿಸಿದ್ದಾರೆ.

ಆಗಸ್ಟ್ 13 ರಂದು ಪ್ರಕಟಗೊಂಡಿರುವ ಪ್ರದೀಪ್ ಛಿಬ್ಬರ್ ಮತ್ತು ಹರ್ಷ್ ಶಾ ಬರೆದಿರುವ ‘ಇಂಡಿಯಾ ಟುಮಾರೋ: ಕಾನ್ವರ್ಸೇಷನ್ಸ್ ವಿತ್ ದಿ ನೆಕ್ಸ್ಟ್ ಜನರೇಷನ್ ಆಫ್ ಪೊಲಿಟಿಕಲ್ ಲೀಡರ್ಸ್’ ಎಂಬ ಕೃತಿಯಲ್ಲಿ ನೀಡಿರುವ ಸಂದರ್ಶನದಲ್ಲಿ ಪ್ರಿಯಾಂಕಾ ಗಾಂಧಿ ಅಧ್ಯಕ್ಷ ಸ್ಥಾನದ ಕುರಿತು ಹೇಳಿದ್ದಾರೆ.

ಈ ಪುಸ್ತಕದಲ್ಲಿ ಪ್ರಿಯಾಂಕಾ ಗಾಂಧಿ ಅಲ್ಲದೇ, ರಾಹುಲ್ ಗಾಂಧಿ, ಆದಿತ್ಯ ಠಾಕ್ರೆ, ಆಖಿಲೇಶ್ ಯಾದವ್, ರಾಜ್ಯವರ್ಧನ್ ರಾಥೋಡ್, ಸುಪ್ರಿಯಾ ಸುಳೆ ಮುಂತಾದವರ ಸಂದರ್ಶನವೂ ಇದೆ.

ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರ ಸಂದರ್ಶನವನ್ನು 2019 ರ ಮಧ್ಯಪ್ರದೇಶ ಮತ್ತು ರಾಜಸ್ಥಾನ ಚುನಾವಣೆಗೂ ಮೊದಲು ನಡೆಸಲಾಗಿತ್ತು.

ನಮ್ಮ ಕುಟುಂಬದ ಹೊರಗಿನವರು ಅಧ್ಯಕ್ಷರಾಗಬೇಕು ಎಂಬ ಮಾತನ್ನು ರಾಹುಲ್ ಗಾಂಧಿ ರಾಜಿನಾಮೆ ಪತ್ರದಲ್ಲಿ ಹೇಳದಿದ್ದರೂ, ಹಲವು ಸಂದರ್ಭದಲ್ಲಿ ಈ ಮಾತನ್ನು ನಿರ್ದಿಷ್ಟವಾಗಿ ಹೇಳಿದ್ದಾರೆ. ಈ ಅಭಿಪ್ರಾಯಕ್ಕೆ ನನ್ನ ಸಂಪೂರ್ಣ ಸಹಮತವಿದೆ ಎಂದು ಪ್ರಿಯಾಂಕಾ ಹೇಳಿದ್ದಾರೆ.

ನಮ್ಮ ಕುಟುಂಬದ ಹೊರತಾಗಿ ಯಾರೇ ಅಧ್ಯಕ್ಷರಾದರೂ ಅವರೇ ನಮಗೆ ಬಾಸ್. ಅಧ್ಯಕ್ಷರು ನಾಳೆ ದಿನ ನನ್ನನ್ನು ಉತ್ತರಪ್ರದೇಶಕ್ಕೆ ಹೋಗುವುದು ಬೇಡ, ಅಂಡಾಮಾನ್ ನಿಕೋಬಾರ್‌ಗೆ ಹೋಗು ಎಂದೂ ಹೇಳಿದರೆ ನಾನು ಅವರ ಮಾತನ್ನು ಕೇಳಲೇಬೇಕು ಎಂದು ತಮ್ಮ ಸಂದರ್ಶನದಲ್ಲಿ ಹೇಳಿದ್ದಾರೆ.

ಈ ವಿಷಯಗಳೊಟ್ಟಿಗೆ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಹತ್ಯೆಗಳು ತಮ್ಮ ಬಾಲ್ಯದ ಮೇಲೆ ತುಂಬಾ ಪರಿಣಾಮ ಬೀರಿದೆ ಎಂದೂ ಹೇಳಿದ್ದಾರೆ. ಇದರೊಂದಿಗೆ ಕಾಂಗ್ರೆಸ್ ಪಕ್ಷದ ಇಂದಿನ ಸ್ಥಿತಿಯ ಬಗ್ಗೆ ಸ್ಪಷ್ವವಾಗಿ ಮಾತನಾಡಿದ್ದಾರೆ.

‘ಒಬ್ಬ ರಾಜಕಾರಣಿಯಾಗಿ ನಾನು ಜನರ ತೀರ್ಪನ್ನು ಗೌರವಿಸುತ್ತೇನೆ. ಮೋದಿ ನೇತೃತ್ವದ ಸರ್ಕಾರಕ್ಕೆ ಇನ್ನೊಂದು ಅವಕಾಶ ಕೊಡಬೇಕೆಂದು ಜನರು ಬಯಸಿದರು. ನಮಗೂ ಇನ್ನೊಂದು ಅವಕಾಶ ಕೊಡಿ. ಕಾಂಗ್ರೆಸ್ ಪಕ್ಷವು ಒಮ್ಮತದಿಂದ ದೇಶವನ್ನು ಮುನ್ನಡೆಸಲು ಬಯಸುತ್ತದೆ’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

‘ಆರ್‌ಎಸ್‌ಎಸ್ ಮತ್ತು ಬಿಜೆಪಿ ಕಠೋರ ಮನಸ್ಥಿತಿ ಹೊಂದಿದೆ. ಇದನ್ನು ದೇಶದ ಜನರ ಮೇಲೆ ಹೇರುತ್ತಿದೆ. ತನ್ನ ಸಿದ್ಧಾಂತದ ಹೇರಿಕೆಯಿಂದಾಗಿ ಬಿಜೆಪಿ ವಿರುದ್ಧ ಜನರ ಆಕ್ರೋಷ ಹೆಚ್ಚಾಗುತ್ತಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಯ ಸೋಲಿಗೆ ಇದೇ ಕಾರಣವಾಗಲಿದೆ’ ಎಂದೂ ಹೇಳಿದ್ದಾರೆ.


ಇದನ್ನೂ ಓದೆ: ಹೊಸ ಅಧ್ಯಕ್ಷರು ಆಯ್ಕೆಯಾಗುವವರೆಗೂ ಸೋನಿಯಾ ಗಾಂಧಿ ಮುಂದುವರೆಯಲಿದ್ದಾರೆ: ಕಾಂಗ್ರೆಸ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

2ಜಿ ತರಂಗಾಂತರ ತೀರ್ಪಿನ ಸ್ಪಷ್ಟನೆ ಕೋರಿದ್ದ ಕೇಂದ್ರದ ಅರ್ಜಿ ತಿರಸ್ಕರಿಸಿದ ಸುಪ್ರೀಂ ಕೋರ್ಟ್ ರಿಜಿಸ್ಟ್ರಿ

0
2ಜಿ ತರಂಗಾಂತರ ಹಂಚಿಕೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 2012ರಲ್ಲಿ ನೀಡಿರುವ ತೀರ್ಪಿನ ಸ್ಪಷ್ಟನೆ ಕೋರಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಲು ಸುಪ್ರೀಂ ಕೋರ್ಟ್‌ನ ರಿಜಿಸ್ಟ್ರಾರ್ ನಿರಾಕರಿಸಿದ್ದಾರೆ. ಕೆಲ ಸಂದರ್ಭಗಳಲ್ಲಿ ಸಾರ್ವಜನಿಕ ಹರಾಜು ಹೊರತುಪಡಿಸಿ...