‘ಉತ್ತರ ಪ್ರದೇಶದ ದುರ್ಗಾಪೂಜಾ ಪೆಂಡಾಲ್ ಮೇಲೆ ದಾಳಿ ಮಾಡಿದ ಮುಸ್ಲಿಮರ ವಿರುದ್ದ ಪ್ರತೀಕಾರ ತೀರಿಸಿಕೊಳ್ಳುವ ಹಿಂದೂಗಳು’ ಎಂದು ಪ್ರತಿಪಾದಿಸಿ ಗಲಭೆ ನಡೆಸುತ್ತಿರುವ ವೀಡಿಯೊವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಪ್ರತಾಪ್‌ಗಢ್ ಜಿಲ್ಲೆಯ ಲಾಲ್‌ಗಂಜ್ ಪಟ್ಟಣದ ಸಮೀಪವಿರುವ ದುರ್ಗಾ ಮಂಟಪದ ಮೇಲೆ ಮುಸ್ಲಿಂ ಗುಂಪು ಇತ್ತೀಚೆಗೆ ದಾಳಿ ಮಾಡಿದೆ ಎಂದು ಈ ವಿಡಿಯೊ ಜೊತೆಗಿನ ಪೋಸ್ಟ್ ಪ್ರತಿಪಾದಿಸುತ್ತದೆ.

ಮುಸ್ಲಿಮರ ದಾಳಿಗೆ ಪ್ರತೀಕಾರವಾಗಿ ಹಿಂದೂಗಳು ಮುಸ್ಲಿಮರ ವಾಹನಗಳನ್ನು ಧ್ವಂಸ ಮಾಡುತ್ತಿರುವುದು ಕಂಡುಬಂದಿದೆ ಎಂದು ಕೂಡಾ ಈ ಪೋಸ್ಟ್‌ನಲ್ಲಿ ಹೇಳಲಾಗಿದೆ. ಪೋಸ್ಟ್‌ನ ಆರ್ಕೈವ್ ಇಲ್ಲಿ ನೋಡಬಹುದು.
ಇದನ್ನೂ ಓದಿ: ಸಾವರ್ಕರ್ ಕ್ಷಮಾದಾನ ಅರ್ಜಿ- ಗಾಂಧಿ ಸಲಹೆ ನೀಡಿದ್ದರೇ ?
ವೀಡಿಯೋವನ್ನು ಕೂಲಂಕುಷವಾಗಿ ಗಮನಿಸಿದಾಗ, ಛತ್ತೀಸ್‌ಗಢ ವಾಹನದ ನೋಂದಣಿ ಸಂಖ್ಯೆಯನ್ನು ಜನಸಮೂಹವು ಧ್ವಂಸಗೊಳಿಸುತ್ತಿರುವ ವಾಹನಗಳಲ್ಲಿ ಕಾಣಬಹುದಾಗಿದೆ. ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು ವೀಡಿಯೊಗಳನ್ನು ಹುಡುಕಿದಾಗ, ಛತ್ತೀಸ್‌ಗಢದ ಕವರ್ಧಾ ಪಟ್ಟಣದಲ್ಲಿ ಇತ್ತೀಚಿನ ಕೋಮು ಹಿಂಸಾಚಾರದ ದೃಶ್ಯಗಳು ಎಂದು ವಿವರಿಸುವ ಹಲವಾರು ಸಾಮಾಜಿಕ ಜಾಲತಾಣಗಳ ಪೋಸ್ಟ್‌ಗಳನ್ನು ನೋಡಬಹುದಾಗಿದೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಈ ವೀಡಿಯೊಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಗಾಗಿ ಹುಡುಕಾಡಿದಾಗ, ‘ದೈನಿಕ್ ಭಾಸ್ಕರ್’ ಪ್ರಕಟಿಸಿದ ಸುದ್ದಿಯೊಂದು ಲಭಿಸಿದ್ದು, ಅದರಲ್ಲಿ ಧ್ವಂಸಗೊಳಿಸಿದ ವಾಹನಗಳ ದೃಶ್ಯಗಳನ್ನು ನೋಡಬಹುದು. ಈ ವರದಿಯು, 05 ಅಕ್ಟೋಬರ್ 2021 ರಂದು ಛತ್ತೀಸ್‌ಗಢದ ಕಭಿರ್‌ಧಾಮ್ ಜಿಲ್ಲೆಯ ಕವರ್ಧಾ ಪಟ್ಟಣದಲ್ಲಿ ದೊಣ್ಣೆಗಳೊಂದಿಗೆ ಬಂದಿದ್ದ ದೊಡ್ಡ ಗುಂಪು ರಸ್ತೆಯಲ್ಲಿದ್ದ ವಾಹನಗಳನ್ನು ಧ್ವಂಸಗೊಳಿಸಿದೆ ಎಂದು ವರದಿ ಮಾಡಿದೆ.

ಈ ಘಟನೆಯ ಸಂಪೂರ್ಣ ವಿವರಗಳ ಹಲವಾರು ವರದಿಗಳು, ವಿಡಿಯೊ ವರದಿಗಳು ಪ್ರಕಟವಾಗಿವೆ. ಅವುಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಈ ವರದಿಗಳು, “ಲೋಹರಾ ಚೌಕ್ ಪ್ರದೇಶದಿಂದ ಧಾರ್ಮಿಕ ಧ್ವಜಗಳನ್ನು ತೆಗೆದುಹಾಕುವ ಬಗ್ಗೆ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ನಡುವೆ ಸಂಘರ್ಷ ಏರ್ಪಟ್ಟಿದ್ದವು. ಈ ಸಂಘರ್ಷದ ನಂತರ 03 ಅಕ್ಟೋಬರ್ 2021 ರಂದು ಕವರ್ಧಾದಲ್ಲಿ ಕೋಮುಗಲಭೆ ಪ್ರಾರಂಭವಾಯಿತು”. ನಂತರ 05 ಅಕ್ಟೋಬರ್ 2021 ರಂದು ವಿಶ್ವ ಹಿಂದೂ ಪರಿಷತ್ ಘೋಷಿಸಿದ ಬಂದ್ ವೇಳೆ, ಆ ಗುಂಪು ಮುಸ್ಲಿಮರು ಇರುವ ಪ್ರದೇಶಗಳಿಗೆ ಪ್ರವೇಶಿಸಿ ರಸ್ತೆಯಲ್ಲಿ ನಿಲ್ಲಿಸಿದ ವಾಹನಗಳನ್ನು ಧ್ವಂಸಗೊಳಿಸಿತು” ಎಂದು ಹೇಳುತ್ತವೆ.
ಇದನ್ನೂ ಓದಿ: ಫ್ಯಾಕ್ಟ್ ಚೆಕ್: ‘ಊದುಪಾವೈ’ ಔಷಧೀಯ ಸಸ್ಯದ ಕಥೆ ಓದಿ ನಕ್ಕುಬಿಡಿ!
ವೈರಲ್ ವಿಡಿಯೊ ಉತ್ತರ ಪ್ರದೇಶದ ಪ್ರತಾಪ್‌ಘರ್ ಜಿಲ್ಲೆಯಲ್ಲಿ ನಡೆದ ಕೋಮುಗಲಭೆಯ ದೃಶ್ಯಗಳೆಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದಾಗ, ಉತ್ತರ ಪ್ರದೇಶ ಪೊಲೀಸ್ ಫ್ಯಾಕ್ಟ್-ಚೆಕ್ ತಂಡವು 13 ಅಕ್ಟೋಬರ್ 2021 ರಂದು ಟ್ವೀಟ್ ಮೂಲಕ ಸ್ಪಷ್ಟೀಕರಣವನ್ನು ನೀಡಿದೆ.

ವಿಡಿಯೋದಲ್ಲಿರುವ ಘಟನೆ ನಡೆದಿರುವುದು ಛತ್ತೀಸ್‌ಗಢದ ಕವರ್ಧಾ ಪಟ್ಟಣದಲ್ಲಿ ಹೊರತು ಉತ್ತರ ಪ್ರದೇಶದ ಪ್ರತಾಪ್‌ಗಢ ಜಿಲ್ಲೆಯಲ್ಲಲ್ಲ ಎಂದು ಉತ್ತರ ಪ್ರದೇಶ ಪೊಲೀಸರು ಸ್ಪಷ್ಟಪಡಿಸಿದ್ದಾರೆ. “ಪ್ರತಾಪ್‌ಗಢದ ಲಾಲ್‌ಗಂಜ್ ಪ್ರದೇಶದ ಬಳಿ ದುರ್ಗಾಪೂಜಾ ಪೆಂಡಾಲ್ ಮೇಲೆ ಮುಸ್ಲಿಂ ಗುಂಪು ಯಾವುದೆ ದಾಳಿ ನಡೆಸಿಲ್ಲ” ಎಂದು ಪ್ರತಾಪ್‌ಗಢ ಪೊಲೀಸರು ಟ್ವೀಟ್ ಮಾಡಿದ್ದಾರೆ.
दिनांक 05.10.2021 को कवर्धा, छत्तीसगढ़ में हुई घटना को भ्रामक रूप से उ०प्र० प्रतापगढ़ की घटना के रूप में दुष्प्रचारित किये जाने के सम्बन्ध में @pratapgarhpol द्वारा खण्डन कर मुकदमा पंजीकृत किया गया है।#UPPAgainstFakeNews#UPPolicehttps://t.co/dIZihWukAL https://t.co/swS2i6Bkkp https://t.co/hdrK4xIZyG pic.twitter.com/o0Dvnq0PU0
— UPPOLICE FACT CHECK (@UPPViralCheck) October 13, 2021
ಸಂಕ್ಷಿಪ್ತವಾಗಿ ಹೇಳುವುದಾದರೆ, ಛತ್ತೀಸ್‌ಗಢದ ಕವರ್ಧಾ ಕೋಮು ಹಿಂಸಾಚಾರದ ವೀಡಿಯೊವನ್ನು ಉತ್ತರ ಪ್ರದೇಶದ ದುರ್ಗಾ ಪೆಂಡಾಲ್ ಮೇಲೆ ದಾಳಿ ಮಾಡಿದ ಮುಸ್ಲಿಂಮರ ವಿರುದ್ದ ಪ್ರತೀಕಾರ ತೀರಿಸಿಕೊಳ್ಳುತ್ತಿರುವ ಹಿಂದೂಗಳ ಗುಂಪಿನ ದೃಶ್ಯ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ.
ಇದನ್ನೂ ಓದಿ: ಫ್ಯಾಕ್ಟ್ ಚೆಕ್: ಭಾರತೀಯ ರೈತರು ರಾಷ್ಟ್ರಧ್ವಜ ಅಪಮಾನಿಸಿಲ್ಲ


