Homeದಿಟನಾಗರಫ್ಯಾಕ್ಟ್‌ ಚೆಕ್‌: ಭಾರತೀಯ ರೈತರು ರಾಷ್ಟ್ರಧ್ವಜ ಅಪಮಾನಿಸಿಲ್ಲ

ಫ್ಯಾಕ್ಟ್‌ ಚೆಕ್‌: ಭಾರತೀಯ ರೈತರು ರಾಷ್ಟ್ರಧ್ವಜ ಅಪಮಾನಿಸಿಲ್ಲ

- Advertisement -
- Advertisement -

ಉತ್ತರ ಪ್ರದೇಶದ ಲಖಿಂಪುರ್‌ ಖೇರಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರ ಮೇಲೆ ಕಾರು ಹರಿದು ರೈತರು ಹಾಗೂ ಬಿಜೆಪಿ ಕಾರ್ಯಕರ್ತರು ಸಾವನ್ನಪ್ಪಿದ ಘಟನೆ ಬೆಳಕಿಗೆ ಬಂದ ಬಳಿಕ, ಖಾಲಿಸ್ತಾನಿ ಬೆಂಬಲಿಗರ ಗುಂಪು ಭಾರತದ ಭಾವುಟವನ್ನು ಹರಿದಿದ್ದಾರೆ ಎಂಬ ಒಕ್ಕಣೆಯೊಂದಿಗೆ ಒಂದು ಪೋಸ್ಟ್‌‌ ಮಾಡಲಾಗಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ವೈರಲ್‌ ಆಗಿದೆ. ಈ ವಿಡಿಯೋವನ್ನು ಭಾರತದಲ್ಲಿನ ರೈತರ ಹೋರಾಟ ಹಾಗೂ ಉತ್ತರ ಪ್ರದೇಶದ ಘಟನೆಗೆ ತಳುಕು ಹಾಕಲಾಗಿದೆ.

ಉತ್ತರ ಪ್ರದೇಶದಲ್ಲಿ ಪ್ರತಿಭಟಿಸುತ್ತಿರುವ ರೈತರು ಭಾರತದ ಭಾವುಟವನ್ನು ಹಾಗೂ ಹರಿದು ಹಾಕುತ್ತಿರುವುದು ಎಂಬ ಒಕ್ಕಣೆಯೊಂದಿಗೆ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ.

ಈ ವಿಡಿಯೋದ ಹಿಂದಿನ ಸತ್ಯವನ್ನು ಫ್ಯಾಕ್ಟಿ.ಇನ್‌ ಜಾಲತಾಣ ಬಯಲಿಗೆಳೆದಿದೆ. ಪ್ರಧಾನಿ ನರೇಂದ್ರ ಮೋದಿಯವರು ಕಳೆದ ತಿಂಗಳು ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡಿದಾಗ ನ್ಯೂಯಾರ್ಕ್‌ನಲ್ಲಿನ ವಿಶ್ವಸಂಸ್ಥೆಯ ಕಚೇರಿಯ ಹೊರಗೆ ಖಾಲಿಸ್ತಾನಿ ಬೆಂಬಲಿಗರು ನಡೆಸಿದ ಪ್ರತಿಭಟನೆಯ ವಿಡಿಯೋ ಇದಾಗಿದೆ. ಕೆಲವು ಆನ್‌ಲೈನ್‌ ನ್ಯೂಸ್ ಪೋರ್ಟಲ್‌ಗಳು ಇದೇ ಥರದ ವಿಡಿಯೋದ ವರದಿ ಮಾಡಿದ್ದಾರೆ. ಈ ವಿಡಿಯೋ ಭಾರತಕ್ಕೆ ಅಥವಾ ಲಖಿಂಪುರ್‌ ಖೇರಿ ಘಟನೆಗೆ ಸಂಬಂಧಿಸಿದ್ದಲ್ಲ. ಈ ಪೋಸ್ಟ್‌ನಲ್ಲಿ ಪ್ರತಿಪಾದಿಸಿರುವುದು ಸುಳ್ಳಾಗಿದೆ.

ಇದನ್ನೂ ಓದಿರಿ: ಕಿಸಾನ್ ಮಹಾಪಂಚಾಯತ್‌ನಲ್ಲಿ ಮದ್ಯಕ್ಕಾಗಿ ರೈತರ ಕಿತ್ತಾಟವೆಂದು ತಪ್ಪು ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ

ಸಂಬಂಧಪಟ್ಟ ಕೀವರ್ಡ್‌‌ಗಳೊಂದಿಗೆ ಗೂಗಲ್‌ ಸರ್ಚ್ ಮಾಡಿದಾಗ ಇದೇ ವಿಡಿಯೋವನ್ನು ಎನ್‌‌ಆರ್‌ಐ ಹೆರಾಲ್ಡ್‌ ಟ್ಟೀಟ್ ಮಾಡಿ ಶೇ‌ರ್ ಮಾಡಿರುವುದು ಕಂಡುಬಂದಿದೆ. “ಪ್ರಧಾನಿ ನರೇಂದ್ರ ಮೋದಿಯವರ ಭೇಟಿಯ ವೇಳೆ ನ್ಯೂಯಾರ್ಕ್ ನಲ್ಲಿ ಖಲಿಸ್ತಾನಿ ಸಿಖ್ ಬಂಡುಕೋರರು ಭಾರತೀಯ ರಾಷ್ಟ್ರೀಯ ಧ್ವಜವನ್ನು ಹರಿದು ಹಾಕಿ, ಉಗ್ರ ಘೋಷಣೆಗಳನ್ನು ಕೂಗಿದರು” ಎಂಬ ವಿವರಣೆಯನ್ನು ಶೇರ್‌ ಮಾಡಲಾಗಿರುವ ವಿಡಿಯೋಕ್ಕೆ ನೀಡಲಾಗಿದೆ. ‘ಎನ್ ಆರ್ ಐ ಹೆರಾಲ್ಡ್’ ಆಸ್ಟ್ರೇಲಿಯಾ ಮೂಲದ ವೆಬ್ ನ್ಯೂಸ್ ಪೋರ್ಟಲ್ ಆಗಿದ್ದು, ಇದು ಹೆಚ್ಚಾಗಿ ಭಾರತಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಒಳಗೊಂಡಿರುತ್ತದೆ. ಎನ್ ಆರ್ ಐ ಹೆರಾಲ್ಡ್ ಇದೇ ವಿಡಿಯೋವನ್ನು ತಮ್ಮ ಫೇಸ್ ಬುಕ್ ಪೇಜ್‌ನಲ್ಲೂ ಹಂಚಿಕೊಂಡಿದೆ.

ಮೇಲಿನ ಟ್ವೀಟ್‌ನಿಂದ ಒಂದು ಸುಳಿವು ಪಡೆದು ಹುಡುಕಾಡಿದಾಗ, ಕಳೆದ ತಿಂಗಳು (ಸೆಪ್ಟೆಂಬರ್‌ 2021) ಪ್ರಧಾನಿ ನರೇಂದ್ರ ಮೋದಿಯವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಸಂದರ್ಭದಲ್ಲಿ ವಿಶ್ವಸಂಸ್ಥೆಯ ಹೊರಗೆ ಪ್ರತಿಭಟನೆ ನಡೆದಿರುವ ವರದಿಯ ಕೆಲವು ಆನ್‌ಲೈನ್‌ ನ್ಯೂಸ್‌ಗಳು (ಇಲ್ಲಿ ಮತ್ತು ಇಲ್ಲಿ) ದೊರೆತಿವೆ. ಈ ಲೇಖನಗಳು ಪ್ರತಿಭಟನೆಗೆ ಸಂಬಂಧಿಸಿದ ಫೋಟೋಗಳನ್ನೂ ಪ್ರಕಟಿಸಿದ್ದು, ವೈರಲ್‌ ವಿಡಿಯೋದಲ್ಲಿ ಭಾರತದ ರಾಷ್ಟ್ರೀಯ ಧ್ವಜವನ್ನು ಸುಟ್ಟುಹಾಕಿದ ಅದೇ ಇಬ್ಬರು ಪ್ರತಿಭಟನಾಕಾರರನ್ನು ಈ ಚಿತ್ರಗಳಲ್ಲೂ ಕಾಣಬಹುದು.

ಕಳೆದ ತಿಂಗಳು ಮೋದಿಯವರು ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡುವ ಸಂದರ್ಭದಲ್ಲಿ ಈ ಮೇಲೆ ನಮೂದಿಸಲಾಗಿರುವ ಪ್ರತಿಭಟನೆಯ ನೇರಪ್ರಸಾರವನ್ನು ಯೂಟ್ಯೂಬ್‌ ಚಾನೆಲ್‌ವೊಂದು ಮಾಡಿದೆ. ವೈರಲ್‌ ಆಗಿರುವ ವಿಡಿಯೋದಲ್ಲಿರುವ ಇಬ್ಬರು ವ್ಯಕ್ತಿಗಳೇ ಈ ವಿಡಿಯೋದಲ್ಲೂ ಇರುವುದನ್ನು ಕಾಣಬಹುದು. ಅದಲ್ಲದೆ ವಿಶ್ವಸಂಸ್ಥೆಯಲ್ಲಿ ಪ್ರಧಾನಿ ಮೋದಿ ಭಾಷಣ ಮಾಡುವ ವೇಳೆ ಪ್ರತಿಭಟನೆ ನಡೆದಿರುವ ಕುರಿತು ಮುಖ್ಯವಾಹಿನಿ ಸುದ್ದಿ ಸಂಸ್ಥೆಗಳೂ (ಇಲ್ಲಿ ಮತ್ತು ಇಲ್ಲಿ) ವರದಿ ಮಾಡಿವೆ. ಇವೆಲ್ಲವುಗಳಿಂದ ತಿಳಿಯುವುದೇನೆಂದರೆ ಕಳೆದ ತಿಂಗಳು ಮೋದಿಯವರು ವಿಶ್ವಸಂಸ್ಥೆಯಲ್ಲಿ ಭಾಷಣ ಮಾಡುವ ವೇಳೆ ಖಾಲಿಸ್ಥಾನಿ ಬೆಂಬಲಿಗರು ಪ್ರತಿಭಟಿಸಿರುವುದು ಈ ವಿಡಿಯೋದಲ್ಲಿ ಕಂಡು ಬರುತ್ತದೆ. ಭಾರತ ಅಥವಾ ಲಖಿಂಪುರ್‌ಖೇರಿ ಘಟನೆಗೂ ಇದು ಸಂಬಂಧಿಸಿದ್ದಲ್ಲ.

ಸಂಕ್ಷಿಪ್ತವಾಗಿ ಹೇಳುವುದಾದರೆ, ಪ್ರಧಾನಿ ಮೋದಿಯವರ ವಿಶ್ವಸಂಸ್ಥೆಯ ಭಾಷಣದ ವೇಳೆ ಖಲಿಸ್ತಾನ್ ಬೆಂಬಲಿಗರು ನ್ಯೂಯಾರ್ಕ್‌ನ ವಿಶ್ವಸಂಸ್ಥೆಯ ಕಟ್ಟಡದ ಹೊರಗೆ ಭಾರತೀಯ ರಾಷ್ಟ್ರ ಧ್ವಜವನ್ನು ಹರಿದು ಹಾಕಿದ ವಿಡಿಯೋವನ್ನು ಲಖಿಂಪುರ್ ಖೇರಿ ಘಟನೆಗೆ ಆರೋಪಿಸಲಾಗಿದೆ.

ಇದನ್ನೂ ಓದಿರಿ: ಫ್ಯಾಕ್ಟ್‌ಚೆಕ್: ರಾಹುಲ್ ಗಾಂಧಿ ಮಹಿಳೆಯರನ್ನು ಅವಮಾನಿಸಿಲ್ಲ, ಅರ್ಧ ಭಾಷಣ ಹಂಚಿಕೊಳ್ಳಲಾಗುತ್ತಿದೆ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...