ರಾಹುಲ್ ಗಾಂಧಿ
PC: Deccan Chronicle

’ಮಹಾತ್ಮಾ ಗಾಂಧಿ ಅವರ ಜೊತೆಯಲ್ಲಿ ಮಹಿಳೆಯರನ್ನು ಕಾಣಬಹುದು ಹೊರತು ನೀವು ಎಂದಾದರೂ ಮೋಹನ್ ಭಾಗವತ್ ಜೊತೆಗೆ ಮಹಿಳೆಯರನ್ನು ನೋಡಿದ್ದೀರಾ..?’ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. “ಮೋಹನ್ ಭಾಗವತ್ ಅವರನ್ನು ತೆಗಳುವ ಭರದಲ್ಲಿ ರಾಹುಲ್ ಗಾಂಧಿ ಮೋಹನದಾಸ ಕರಮಚಂದ್ರ ಗಾಂಧಿಯವರನ್ನು ಅವಮಾನಿಸಿದ್ದು ಗೊತ್ತೇ ಆಗಲಿಲ್ಲ. ಮಹಿಳೆಯರಿಗೆ ಬೇರೆ ಅಸ್ತಿತ್ವ ಇಲ್ಲ ಎಂದಿದ್ದಾರೆ ಎಂದು ಹಲವು ಪೋಸ್ಟ್‌ಗಳನ್ನು ಷೇರ್ ಮಾಡಲಾಗುತ್ತಿದೆ. ಇದು ನಿಜವೇ ಎಂಬುದನ್ನು ಪರಿಶೀಲಿಸೋಣ..

ಈ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ 

ಪ್ರತಿಪಾದನೆ: ಕಾಂಗ್ರೆಸ್ ಪಕ್ಷದ ರಾಜಕೀಯದಲ್ಲಿ’ಪ್ರತಿಯೊಬ್ಬ ಪುರುಷನಿಗೂ ಮಹಿಳೆಯರಿರುವುದು ಅಗತ್ಯ ಮತ್ತು ಸಹಜ’ ಎಂದು ರಾಹುಲ್ ಗಾಂಧಿಯವರು ಭಾಷಣದಲ್ಲಿ ಹೇಳಿದ್ದಾರೆ.

ಫ್ಯಾಕ್ಟ್‌ ಚೆಕ್

2021 ರ ಸೆಪ್ಟೆಂಬರ್ 15 ರಂದು ದೆಹಲಿಯಲ್ಲಿ ಮಹಿಳಾ ಕಾಂಗ್ರೆಸ್ ಸ್ಥಾಪನೆಯ ದಿನದಂದು ನಡೆದ ಸಭೆಯಲ್ಲಿ ರಾಹುಲ್ ಗಾಂಧಿಯವರ ಭಾಷಣದಿಂದ ಈ ಹೇಳಿಕೆಗಳನ್ನು ತೆಗೆದುಕೊಳ್ಳಲಾಗಿದೆ. ಈ ವಿಡಿಯೊದಲ್ಲಿ ನೀವು ರಾಹುಲ್ ಗಾಂಧಿ 17:50 ನಿಮಿಷದಲ್ಲಿ ಈ ಹೇಳಿಕೆಗಳನ್ನು ನೀಡುವುದನ್ನು ನೋಡಬಹುದು.

ರಾಹುಲ್ ಗಾಂಧಿ ಈ ಸಭೆಯಲ್ಲಿ ಮಹಿಳಾ ಸಬಲೀಕರಣವನ್ನು ಉದ್ದೇಶಿಸಿ ಮಾತನಾಡುವಾಗ ಒಂದು ಸಂದರ್ಭದಲ್ಲಿ ‘ಚಿತ್ರಗಳಲ್ಲಿ ಮಹಾತ್ಮ ಗಾಂಧಿಯವರೊಂದಿಗೆ ಮೂರು-ನಾಲ್ಕು ಮಹಿಳೆಯರನ್ನು ನೀವು ನೋಡಬಹುದು. ಆದರೆ, ಮೋಹನ್ ಭಾಗವತ್ ಎಂದಾದರೂ ಮಹಿಳೆಯರನ್ನು ನೋಡಿದ್ದಾರೆಯೇ? ಮೋಹನ್ ಭಾಗವತ್ ಜೊತೆಯಲ್ಲಿ ಮಹಿಳೆಯರನ್ನು ನೋಡಲು ಸಾಧ್ಯವಿಲ್ಲ. ಏಕೆಂದರೆ ಅವರ ಸಂಘಟನೆ (ಆರೆಸ್ಸೆಸ್) ಮಹಿಳೆಯರನ್ನು ತುಳಿಯುತ್ತದೆ, ಆದರೆ ನಮ್ಮ ಸಂಘಟನೆ ಮಹಿಳಾ ಸಬಲೀಕರಣಕ್ಕೆ ವೇದಿಕೆಯನ್ನು ನೀಡುತ್ತದೆ’ಎಂದು ಹೇಳಿದ್ದಾರೆ.

ಈ ರಾಹುಲ್ ಗಾಂಧಿ ಭಾಷಣದ, ‘ಮಹಾತ್ಮ ಗಾಂಧಿಯವರ ಜೊತೆಯಲ್ಲಿ ಮಹಿಳೆಯರು ಕಾಣಿಸಿಕೊಳ್ಳುತ್ತಾರೆ. ನೀವು ಎಂದಾದರೂ ಮೋಹನ್ ಭಾಗವತ್ ಜೊತೆಯಲ್ಲಿ ಮಹಿಳೆಯರನ್ನು ನೋಡಿದ್ದೀರಾ?’ ಎಂಬ ಭಾಗವನ್ನು ಮಾತ್ರ ತೆಗೆದುಕೊಂಡು ಶೇರ್ ಮಾಡಲಾಗುತ್ತಿದೆ. ಭಾಷಣದ ಮುಂದುವರಿದ ಭಾಗವಾದ ಆರೆಸ್ಸೆಸ್ ಮಹಿಳೆಯರನ್ನು ತುಳಿಯುತ್ತದೆ. ಆದರೆ, ನಮ್ಮ ಸಂಸ್ಥೆಯು ಮಹಿಳಾ ಸಬಲೀಕರಣಕ್ಕೆ ವೇದಿಕೆಯನ್ನು ನೀಡುತ್ತದೆ’ ಎಂಬ ಹೇಳಿಕೆಗಳನ್ನು ತೆಗೆದುಹಾಕಿದ್ದಾರೆ. ಆ ವಿಡಿಯೋದ ಪೂರ್ಣ ಭಾಗ ಕಾಂಗ್ರೆಸ್ ಯೂಟ್ಯೂಬ್‌ನಲ್ಲಿದೆ.

 

ಈ ವಿಡಿಯೊ ತಿಳಿಸುವುದೇನೆಂದರೆ, ಮಹಿಳೆಯರಿಗೆ ಅವಕಾಶಗಳನ್ನು ಒದಗಿಸುವ ಬಗ್ಗೆ ರಾಹುಲ್ ಗಾಂಧಿ ಪ್ರಸ್ತಾಪಿಸಿದ್ದಾರೆ ಹೊರತು, ಕಾಂಗ್ರೆಸ್ ಪಕ್ಷದ ರಾಜಕೀಯದಲ್ಲಿ’ಪ್ರತಿಯೊಬ್ಬ ಪುರುಷನಿಗೂ ಮಹಿಳೆಯರಿರುವುದು ಅಗತ್ಯ ಮತ್ತು ಸಹಜ’ ಎಂದು ಹೇಳಿಲ್ಲ.

ಹೀಗಾಗಿ ರಾಹುಲ್ ಗಾಂಧಿ ಅವರ ಭಾಷಣದ ಕೆಲ ಸಾಲುಗಳನ್ನು ಇಟ್ಟುಕೊಂಡು ಮಹಿಳೆಯರು ಮತ್ತು ಮಹಾತ್ಮಾ ಗಾಂಧಿ ಅವರನ್ನು ಅವಮಾನ ಮಾಡುತ್ತಿದ್ದಾರೆ ಎಂದು ಪೋಸ್ಟ್‌ಗಳಲ್ಲಿ ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.


ಇದನ್ನೂ ಓದಿ: ಕಿಸಾನ್ ಮಹಾಪಂಚಾಯತ್‌ನಲ್ಲಿ ಮದ್ಯಕ್ಕಾಗಿ ರೈತರ ಕಿತ್ತಾಟವೆಂದು ತಪ್ಪು ವಿಡಿಯೋವನ್ನು ಹಂಚಿಕೊಳ್ಳಲಾಗುತ್ತಿದೆ

Donate

ನ್ಯಾಯದ ಜೊತೆಗಿರಿ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ

ಜನಪರ ಸ್ವತಂತ್ರ ಪತ್ರಿಕೋದ್ಯಮವೇ ನಮ್ಮ ಆಶಯ. ನಿಮ್ಮಗಳ ಬೆಂಬಲವೇ ನಮಗೆ ಬಲ. ನ್ಯಾಯದ ಜೊತೆಗಿರಲು ಬಯಸುವ, ಸತ್ಯಪಥವನ್ನು ತುಳಿಯಲು ಪ್ರೋತ್ಸಾಹಿಸುವವರು ಬೆಂಬಲಿಸಿ. ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ ಪಾವತಿಸಬಹುದು.
ಧನ್ಯವಾದಗಳು

Independent journalism can’t be independent without your support, contribute by clicking below.

ಪ್ರತಿವಾರದ ವಿದ್ಯಮಾನಗಳ ವಿಶ್ಲೇಷಣೆಗಳು, ಅಂಕಣಗಳು ಹಾಗೂ ವಿಶೇಷ ಬರಹಗಳನ್ನು ಓದಲು ನ್ಯಾಯಪಥ ಪತ್ರಿಕೆಗೆ ಚಂದಾದಾರರಾಗಿ. ಚಂದಾ ಹಣವನ್ನು ಪಾವತಿಸಲು ಈ ಕೆಳಗಿನ ಲಿಂಕ್‌ ಕ್ಲಿಕ್‌ ಮಾಡಿ.
+ posts

LEAVE A REPLY

Please enter your comment!
Please enter your name here