ರಸ್ತೆ ತುಂಬಾ ಗುಂಡಿಗಳೇ ತುಂಬಿಕೊಂಡಿರುವ ಫೋಟೊವೊಂದನ್ನು ರಾಹುಲ್ ಗಾಂಧಿಯವರ ಲೋಕಸಭಾ ಕ್ಷೇತ್ರ ವಯನಾಡ್ ಎಂಬ ಪ್ರತಿಪಾದನೆಯೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಚಿತ್ರವನ್ನು ಪ್ರತಿ ವರ್ಷ ಬೇರೆ ಬೇರೆ ಸ್ಥಳಗಳೆಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಲಾಗುತ್ತದೆ. ಹಾಗಾದರೆ ವಾಸ್ತವವೇನು ಎಂಬುದನ್ನು ಪರಿಶೀಲಿಸೋಣ.

ಪೋಸ್ಟ್‌ನಲ್ಲಿನ ಫೋಟೊವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಹುಡುಕಿದಾಗ ಟ್ವಿಟರ್‌ನಲ್ಲಿ ಬಳಕೆದಾರರು ಇದೇ ಚಿತ್ರವನ್ನು ಪೋಸ್ಟ್ ಮಾಡಿರುವುದು ಕಂಡುಬಂದಿದೆ. ಪೋಸ್ಟ್ ವಿವರಣೆಯಲ್ಲಿ ಇದು ಭಾಗಲ್ಪುರ್-ಪಿರ್ಪೈಂಟಿ ರಾಷ್ಟ್ರೀಯ ಹೆದ್ದಾರಿ ಎಂದು ಬರೆಯಲಾಗಿದೆ. ಇದನ್ನು ಆಧರಿಸಿ ಹೆಚ್ಚಿನ ಮಾಹಿತಿಗಾಗಿ ಸಂಬಂಧಿತ ಕೀವರ್ಡ್‌ಗಳೊಂದಿಗೆ ಹುಡುಕಾಡಿದಾಗ 2017ರಲ್ಲಿ ಟೈಮ್ಸ್ ಆಫ್ ಇಂಡಿಯಾ ವೆಬ್‌ಸೈಟ್ ಪ್ರಕಟಿಸಿದ ಲೇಖನದಲ್ಲಿ ಇದೇ ಫೋಟೊ ಇರುವುದು ಕಂಡುಬಂದಿದೆ. ಕೆಟ್ಟ ಸ್ಥಿತಿಯಲ್ಲಿರುವ ಭಾಗಲ್ಪುರ್ ರಾಷ್ಟ್ರೀಯ ಹೆದ್ದಾರಿ-80 ಎಂಬ ಶೀರ್ಷಿಕೆಯ ಆ ಲೇಖನದಲ್ಲಿ ಇದು ಬಿಹಾರದ ಭಾಗಲ್ಪುರ್-ಪಿರ್ಪೈಂಟಿ ಮಿರ್ಜಾಚೌಕಿ ರಾಷ್ಟ್ರೀಯ ಹೆದ್ದಾರಿ-80ಯ ದುಸ್ಥಿತಿ ಎಂದು ವಿವರಿಸಲಾಗಿದೆ.
Spot the road contest @MORTHIndia @nitin_gadkari @rsprasad @ShahnawazBJP #NH80 Bhagalpur-Pirpainti @PMOIndia @narendramodi pic.twitter.com/HjpSI1XQlb
— Abhishek Priyadarshi ?? (@gustakhiya) December 15, 2016

ಇದೇ ಚಿತ್ರವು 2017ರಲ್ಲಿ ವೈರಲ್ ಆದಾಗ ಆಗಿನ ಬಿಹಾರದ ರಸ್ತೆ ಸಾರಿಗೆ ಸಚಿವ ತೇಜಸ್ವಿ ಯಾದವ್ ಈ ಚಿತ್ರದೊಂದಿಗೆ ಮತ್ತೊಂದು ಚಿತ್ರವನ್ನು ಟ್ವೀಟ್ ಮಾಡಿ ಆರೋಪಗಳು ವಾಸ್ತವಕ್ಕೆ ದೂರವಾಗಿದೆ ಎಂದು ಸ್ಪಷ್ಟಪಡಿಸಿದ್ದರು. ಎಬಿಪಿ ಲೈವ್ ಸುದ್ದಿ ವಾಹಿನಿಯೂ ಈ ಕುರಿತು ತನಿಖಾ ವರದಿಯೊದನ್ನು ಪ್ರಕಟಿಸಿ ಇದು ಭಾಗಲ್ಪುರ್ ರಾಷ್ಟ್ರೀಯ ಹೆದ್ದಾರಿ ಎಂದು ಖಚಿತಪಡಿಸಿತ್ತು. ಈ ಚಿತ್ರ ವೈರಲ್ ಆಗುವ ವೇಳೆಗಾಗಲೇ ಹೊಸ ರಸ್ತೆ ನಿರ್ಮಾಣವಾಗಿತ್ತು ಎಂದು ಅದು ತನ್ನ ವರದಿಯಲ್ಲಿ ತಿಳಿಸಿತ್ತು.
"Rumours vs Reality" @ShekharGupta Ji, that's hw Bihar is defamed.Hope u will acknowledge reality. One shd validate facts before retweeting pic.twitter.com/Hy3iuoG1Jg
— Tejashwi Yadav (@yadavtejashwi) July 2, 2017

ಒಟ್ಟಿನಲ್ಲಿ ಬಿಹಾರದ ಹದಗೆಟ್ಟ ಹಳೆಯ ರಸ್ತೆಯ ಚಿತ್ರವನ್ನು ರಾಹುಲ್ ಗಾಂಧಿಯ ವಯನಾಡ್ ಕ್ಷೇತ್ರ ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.
ಇದನ್ನೂ ಓದಿ; ಫ್ಯಾಕ್ಟ್‌ಚೆಕ್: ಇದು ಕೊರೊನಾ ಲಸಿಕೆ ಪಡೆದ ವ್ಯಕ್ತಿಯ ಶ್ವಾಸಕೋಶದ ಸಿಟಿ ಸ್ಕ್ಯಾನ್ ಚಿತ್ರವಲ್ಲ


