Homeಮುಖಪುಟಭಾರತದಲ್ಲಿ ಕಾನೂನು ರಕ್ಷಣೆ ಕಳೆದುಕೊಂಡ ಟ್ವಿಟರ್‌!

ಭಾರತದಲ್ಲಿ ಕಾನೂನು ರಕ್ಷಣೆ ಕಳೆದುಕೊಂಡ ಟ್ವಿಟರ್‌!

- Advertisement -
- Advertisement -

ಹೊಸ ಐಟಿ ನಿಯಮಗಳಿಗೆ ಅನುಸಾರವಾಗಿ ಶಾಸನಬದ್ಧ ಅಧಿಕಾರಿಗಳನ್ನು ನೇಮಿಸುವಲ್ಲಿ ವಿಫಲವಾದ ಕಾರಣ ಭಾರತದಲ್ಲಿ ಟ್ವಿಟರ್‌ ಕಾನೂನು ರಕ್ಷಣೆಯನ್ನು ಕಳೆದುಕೊಂಡಿದೆ ಎಂದು ಸರ್ಕಾರದ ಮೂಲಗಳು ಬುಧವಾರ ತಿಳಿಸಿವೆ. ಒಕ್ಕೂಟ ಐಟಿ ಸಚಿವಾಲಯದ ಪತ್ರಗಳ ಹೊರತಾಗಿಯೂ ಟ್ವಿಟರ್ ನಿಯಮಗಳನ್ನು ಪಾಲಿಸಲಿಲ್ಲ ಎಂದು ಒಕ್ಕೂಟ ಸರ್ಕಾರದ ಮೂಲಗಳು ತಿಳಿಸಿದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.

ಆದಾಗ್ಯೂ, ಟ್ವಿಟರ್ ಮಂಗಳವಾರದಂದು ಒಕ್ಕೂಟ ಸರ್ಕಾರದ ಹೊಸ ಐಟಿ ನಿಯಮಗಳನ್ನು ತಾನು ಪಾಲಿಸಿದ್ದು, ಮಧ್ಯಂತರವಾಗಿ ಮುಖ್ಯ ಅನುಸರಣೆ ಅಧಿಕಾರಿಯನ್ನು ನೇಮಿಸಿದ್ದೇನೆ ಎಂದು ಹೇಳಿದೆ.

“ನಾವು ಹೊಸ ನಿಯಮಗಳ ಅನುಸರಣಾ ಪ್ರಕ್ರಿಯೆಯ ಪ್ರತಿಯೊಂದು ಹಂತದ ಪ್ರಗತಿಯನ್ನು ತಿಳಿಸುತ್ತಿದ್ದೇವೆ. ಮಧ್ಯಂತರವಾಗಿ ಮುಖ್ಯ ಅನುಸರಣೆ ಅಧಿಕಾರಿಯನ್ನು ಉಳಿಸಿಕೊಳ್ಳಲಾಗಿದೆ, ಈ ವಿವರಗಳನ್ನು ಶೀಘ್ರದಲ್ಲೇ ಸಚಿವಾಲಯದೊಂದಿಗೆ ಹಂಚಿಕೊಳ್ಳಲಾಗುವುದು. ಹೊಸ ಮಾರ್ಗಸೂಚಿಗಳನ್ನು ಅನುಸರಿಸಲು ಟ್ವಿಟರ್ ಎಲ್ಲಾ ಪ್ರಯತ್ನಗಳನ್ನು ಮುಂದುವರಿಸಿದೆ” ಎಂದು ಟ್ವಿಟರ್‌ನ ಭಾರತದ ವಕ್ತಾರರು ತಿಳಿಸಿದ್ದಾರೆ.

ಇದನ್ನೂ ಓದಿ: ಸುಳ್ಳನ್ನು ಎತ್ತಿ ತೋರಿಸಿದ್ದಕ್ಕೆ ಟ್ವಿಟರ್‌ ಅನ್ನು ಬೆದರಿಸುತ್ತಿರುವ ಒಕ್ಕೂಟ ಸರ್ಕಾರ!

ಫೆಬ್ರವರಿಯಲ್ಲಿ ಸರ್ಕಾರ ಘೋಷಿಸಿದ ಹೊಸ ಐಟಿ ನಿಯಮಗಳಿಗೆ ಅನುಸಾರವಾಗಿ, ವಾಟ್ಸಾಪ್, ಫೇಸ್‌ಬುಕ್, ಗೂಗಲ್ ಮತ್ತು ಇತರ ಭಾರತದ ಟೆಕ್ ಕಂಪೆನಿಗಳು, ‘ಸೂಚಿಸಿದ’(ಫ್ಲ್ಯಾಗ್‌ ಮಾಡಲಾಗಿರುವ) ಸಂದೇಶದ ಮೂಲವನ್ನು 36 ಗಂಟೆಗಳಲ್ಲಿ ಗುರುತಿಸುವುದು ಮತ್ತು ಹೆಚ್ಚುವರಿ ಕ್ರಮಗಳನ್ನು ತಗೆದುಕೊಳ್ಳ ಬೇಕಿದೆ. ಮುಖ್ಯ ಅನುಸರಣೆ ಅಧಿಕಾರಿ, ನೋಡಲ್ ಸಂಪರ್ಕ ವ್ಯಕ್ತಿ ಮತ್ತು ಸ್ಥಳೀಯ ಕುಂದುಕೊರತೆ ಅಧಿಕಾರಿಯನ್ನು ನೇಮಿಸಬೇಕು ಎಂದು ನಿಯಮವು ಹೇಳುತ್ತದೆ.

ವಾಟ್ಸಾಪ್ ಮತ್ತು ಫೇಸ್‌ಬುಕ್ ಈ ತಿಂಗಳ ಆರಂಭದಲ್ಲಿ ತಮ್ಮ ಕುಂದುಕೊರತೆ ಅಧಿಕಾರಿಗಳನ್ನು ಭಾರತಕ್ಕೆ ನೇಮಕ ಮಾಡಿತ್ತು. ಆದರೆ ಮೇ 25 ರಿಂದ ಜಾರಿಗೆ ಬಂದ ಹೊಸ ಐಟಿ ನಿಯಮಗಳನ್ನು ಅನುಸರಿಸಲು ಹೆಚ್ಚಿನ ಸಮಯವನ್ನು ಕೋರಿ ಟ್ವಿಟರ್‌ ಒಕ್ಕೂಟ ಸರ್ಕಾರವನ್ನು ಕೋರಿತ್ತು.

ಹೊಸ ಐಟಿ ನಿಯಮಗಳು ಫೆಬ್ರವರಿ 25 ರಿಂದ ಜಾರಿಗೆ ಬಂದಿದ್ದು ಫೇಸ್‌ಬುಕ್ ಮತ್ತು ವಾಟ್ಸಪ್ ನಿಯಮಗಳಿಗೆ ಬದ್ದ ಎಂದು ಈಗಾಗಲೆ ತಿಳಿಸಿದೆ. ಟ್ವಿಟರ್‌ ಕೂಡಾ ತಾನು ನಿಯಮಕ್ಕೆ ಬದ್ದ ಎಂದು ಹೇಳಿದ್ದರೂ ಒಕ್ಕೂಟ ಸರ್ಕಾರ ಮಾತ್ರ ಅದನ್ನು ನಿರಾಕರಿಸಿದೆ.

ಅದಾಗ್ಯೂ ಹೊಸ ಐಟಿ ನಿಯಮಗಳು ಮತ್ತು ನಿಬಂಧನೆಗಳನ್ನು ಟ್ವಿಟರ್‌‌ ಟೀಕಿಸಿದ್ದು, “ಭಾರತವು ಮುಕ್ತ ಸಾರ್ವಜನಿಕ ಅಭಿವ್ಯಕ್ತಿಯನ್ನು ತಡೆಯುತ್ತಿದೆ” ಎಂದು ಹೇಳಿತ್ತು. ಟ್ವಿಟರ್‌ನ ಈ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಒಕ್ಕೂಟ ಸರ್ಕಾರವು ಆಧಾರರಹಿತ ಮತ್ತು ಸುಳ್ಳು ಆರೋಪಗಳನ್ನು ಮಾಡುತ್ತಿದೆ ಎಂದು ಹೇಳಿತ್ತು.

ಇದನ್ನೂ ಓದಿ: ಟ್ವಿಟರ್‌ಗೆ ಕೊನೆಯ ನೋಟಿಸ್ ನೀಡಿದ ಒಕ್ಕೂಟ ಸರ್ಕಾರ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಹಾಸನ ಪೆನ್‌ಡ್ರೈವ್ ಪ್ರಕರಣ: ಎಸ್‌ಐಟಿ ರಚಿಸಲು ಕೋರಿ ಮಹಿಳಾ ಆಯೋಗದಿಂದ ಸಿಎಂಗೆ ಪತ್ರ

0
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ವಿಶೇಷ ತಂಡ ರಚನೆ ಮಾಡುವಂತೆ ಕೋರಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌದರಿ ಅವರು ಸಿಎಂ ಸಿದ್ದರಾಮಯ್ಯ, ಗೃಹ ಸಚಿವ...