ಟ್ವಿಟರ್‌ಗೆ ಕೊನೆಯ ನೋಟಿಸ್ ನೀಡಿದ ಒಕ್ಕೂಟ ಸರ್ಕಾರ | Naanu gauri

ಹೊಸ ಐಟಿ ನಿಯಮಗಳನ್ನು “ತಕ್ಷಣ” ಪಾಲಿಸಲು ಕೊನೆಯ ಅವಕಾಶವನ್ನು ನೀಡುತ್ತಿರುವುದಾಗಿ ಒಕ್ಕೂಟ ಸರ್ಕಾರ ಶನಿವಾರ ಟ್ವಿಟರ್‌ಗೆ ನೋಟಿಸ್ ನೀಡಿದ್ದು, ಮಾನದಂಡಗಳನ್ನು ಪಾಲಿಸುವಲ್ಲಿ ವಿಫಲವಾದರೆ ಟ್ವಿಟರ್‌‌ ಐಟಿ ಕಾಯ್ದೆಯಡಿ ಹೊಣೆಗಾರಿಕೆಯಿಂದ ವಿನಾಯಿತಿ ಕಳೆದುಕೊಳ್ಳುತ್ತದೆ ಎಂದು ಎಚ್ಚರಿಸಿದೆ.

ನಿಯಮಗಳನ್ನು ಅನುಸರಿಸಲು ಟ್ವಿಟರ್ ನಿರಾಕರಿಸಿರುವುದಕ್ಕೆ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (MeitY) ವು, “ಟ್ವಿಟರ್‌‌‌ನ ಈ ನಡೆಯು ತನ್ನ ವೇದಿಕೆಯಲ್ಲಿ ಭಾರತದ ಜನರಿಗೆ ಸುರಕ್ಷಿತ ಅನುಭವವನ್ನು ನೀಡುವ ಬಗ್ಗೆಗಿನ ಬದ್ಧತೆ ಮತ್ತು ಪ್ರಯತ್ನಗಳ ಕೊರಯಾಗಿದೆ” ಎಂದು ಹೇಳಿದೆ.

“ಒಂದು ದಶಕಕ್ಕೂ ಹೆಚ್ಚು ಕಾಲ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿದ್ದರೂ, ಟ್ವಿಟರ್‌ ಯಾಂತ್ರಿಕ ವ್ಯವಸ್ಥೆಯನ್ನು ರಚಿಸಲು ನಿರಾಕರಿಸಿದೆ” ಎಂದು ಐಟಿ ಸಚಿವಾಲಯ ತಿಳಿಸಿದೆ.

ಇದನ್ನೂ ಓದಿ: ಹೊಟ್ಟೆಗೆ ಅನ್ನ, ಬದುಕಿಗೆ ಭರವಸೆ ನೀಡುವ ಸಮಗ್ರ ಪ್ಯಾಕೇಜ್ ನೀಡಿ: ಜನಾಗ್ರಹ ಆಂದೋಲನ

ಹೊಸ ಐಟಿ ನಿಯಮಗಳು 2021 ರ ಮೇ 26 ರಿಂದ ಜಾರಿಗೆ ಬಂದರೂ, ಟ್ವಿಟ್ಟರ್ ಈ ನಿಯಮಗಳನ್ನು ಪಾಲಿಸಿಲ್ಲ. ಅದಾಗಿಯು ಸದ್ಭಾವನೆಯ ಸೂಚಕವಾಗಿ, ಟ್ವಿಟರ್‌ಗೆ ನಿಯಮಗಳನ್ನು ಅನುಸರಿಸಲು ಕೊನೆಯ ನೋಟಿಸ್ ನೀಡಲಾಗಿದೆ. ಅದರಲ್ಲಿ ಅವರು ವಿಫಲವಾದರೆ ಲಭ್ಯವಿರುವ ಹೊಣೆಗಾರಿಕೆಯಿಂದ ವಿನಾಯಿತಿ ಹಿಂತೆಗೆದುಕೊಳ್ಳಲಾಗುತ್ತದೆ. ಐಟಿ ಕಾಯ್ದೆ ಮತ್ತು ಭಾರತದ ಇತರ ದಂಡ ಕಾನೂನುಗಳ ಪ್ರಕಾರ ಪರಿಣಾಮಗಳನ್ನು ಟ್ವಿಟರ್ ಎದುರಿಸಬೇಕಾಗುತ್ತದೆ ಎಂದು ಹೇಳಿದೆ.

ಆದಾಗ್ಯೂ, ನೋಟಿಸ್ ನಿಯಮಗಳನ್ನು ಅನುಸರಿಸಲು ನಿರ್ದಿಷ್ಟ ಗಡುವನ್ನು ನೀಡಿಲ್ಲ.

ಹೊಸ ಐಟಿ ನಿಯಮಗಳು ಫೆಬ್ರವರಿ 25 ರಿಂದ ಜಾರಿಗೆ ಬಂದಿದ್ದು ಫೇಸ್‌ಬುಕ್ ಮತ್ತು ವಾಟ್ಸಪ್ ನಿಯಮಗಳಿಗೆ ಬದ್ದ ಎಂದು ಈಗಾಗಲೆ ತಿಳಿಸಿದೆ. ಟ್ವಿಟರ್‌ ಕೂಡಾ ತಾನು ನಿಯಮಕ್ಕೆ ಬದ್ದ ಎಂದು ಹೇಳಿದ್ದರೂ ಒಕ್ಕೂಟ ಸರ್ಕಾರ ಮಾತ್ರ ಅದನ್ನು ನಿರಾಕರಿಸಿದೆ.

ಅದಾಗ್ಯೂ ಹೊಸ ಐಟಿ ನಿಯಮಗಳು ಮತ್ತು ನಿಬಂಧನೆಗಳನ್ನು ಟ್ವಿಟರ್‌‌ ಟೀಕಿಸಿದ್ದು, “ಭಾರತವು ಮುಕ್ತ ಸಾರ್ವಜನಿಕ ಅಭಿವ್ಯಕ್ತಿಯನ್ನು ತಡೆಯುತ್ತಿದೆ” ಎಂದು ಹೇಳಿತ್ತು. ಟ್ವಿಟರ್‌ನ ಈ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಒಕ್ಕೂಟ ಸರ್ಕಾರವು ಆಧಾರರಹಿತ ಮತ್ತು ಸುಳ್ಳು ಆರೋಪಗಳನ್ನು ಮಾಡುತ್ತಿದೆ ಎಂದು ಹೇಳಿತ್ತು.

ಹೊಸ ಡಿಜಿಟಲ್ ನಿಯಮಗಳ ಪ್ರಕಾರ, ಸಾಮಾಜಿಕ ಮಾಧ್ಯಮ ಕಂಪೆನಿಗಳಾದ ಫೇಸ್‌ಬುಕ್, ವಾಟ್ಸಾಪ್ ಮತ್ತು ಟ್ವಿಟರ್‌ಗಳು, ‘ಸೂಚಿಸಿದ’(ಫ್ಲ್ಯಾಗ್‌ ಮಾಡಲಾಗಿರುವ) ಸಂದೇಶದ ಮೂಲವನ್ನು 36 ಗಂಟೆಗಳಲ್ಲಿ ಗುರುತಿಸುವುದು ಮತ್ತು ಹೆಚ್ಚುವರಿ ಕ್ರಮಗಳನ್ನು ತಗೆದುಕೊಳ್ಳ ಬೇಕಿದೆ. ಮುಖ್ಯ ಪಾಲನೆ ಅಧಿಕಾರಿ, ನೋಡಲ್ ಸಂಪರ್ಕ ವ್ಯಕ್ತಿ ಮತ್ತು ಸ್ಥಳೀಯ ಕುಂದುಕೊರತೆ ಅಧಿಕಾರಿಯನ್ನು ನೇಮಿಸಬೇಕು ಎಂದು ನಿಯಮವು ಹೇಳುತ್ತದೆ.

ಇದನ್ನೂ ಓದಿ: ಸುಳ್ಳನ್ನು ಎತ್ತಿ ತೋರಿಸಿದ್ದಕ್ಕೆ ಟ್ವಿಟರ್‌ ಅನ್ನು ಬೆದರಿಸುತ್ತಿರುವ ಒಕ್ಕೂಟ ಸರ್ಕಾರ!

LEAVE A REPLY

Please enter your comment!
Please enter your name here