Homeದಿಟನಾಗರಫ್ಯಾಕ್ಟ್‌‌ಚೆಕ್‌: ತಾಲಿಬಾನ್‌ಗೆ ಥ್ಯಾಂಕ್ಸ್‌ ಹೇಳಿದ ಈ ಟ್ವಿಟರ್‌ ಅಕೌಂಟ್‌ ದಿಟ್ಟ ವಿದ್ಯಾರ್ಥಿನಿ ಮುಸ್ಕಾನ್‌ ಅವರದ್ದಲ್ಲ, ಅದು...

ಫ್ಯಾಕ್ಟ್‌‌ಚೆಕ್‌: ತಾಲಿಬಾನ್‌ಗೆ ಥ್ಯಾಂಕ್ಸ್‌ ಹೇಳಿದ ಈ ಟ್ವಿಟರ್‌ ಅಕೌಂಟ್‌ ದಿಟ್ಟ ವಿದ್ಯಾರ್ಥಿನಿ ಮುಸ್ಕಾನ್‌ ಅವರದ್ದಲ್ಲ, ಅದು ನಕಲಿ

- Advertisement -
- Advertisement -

ಮಂಡ್ಯದ ಪಿಇಎಸ್‌‌ ಕಾಲೇಜಿನಲ್ಲಿ ಕೇಸರಿ ಶಾಲು ಧರಿಸಿದ್ದ ಬಿಜೆಪಿ ಬೆಂಬಲಿತ ಯುವಕರು, ಜೈಶ್ರೀರಾಂ ಎಂದು ರಾಜಕೀಯ ಘೋಷಣೆ ಕೂಗುತ್ತಾ ವಿದ್ಯಾರ್ಥಿನಿ ಬೀಬಿ ಮುಸ್ಕಾನ್‌ ಖಾನ್‌‌ ಅವರನ್ನು ಬೆನ್ನಟ್ಟಿದ್ದರು. ಈ ವೇಳೆ ಮುಸ್ಕಾನ್ ಅವರು ದುಷ್ಕರ್ಮಿಗಳ ರಾಜಕೀಯ ಘೋಷಣೆಗೆ ವಿರುದ್ದವಾಗಿ, “ಅಲ್ಲಾಹು ಅಕ್ಬರ್‌” ಎಂದು ಕೂಗಿ ಪ್ರತಿರೋಧ ಒಡ್ಡಿದ್ದರು.

ಈ ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಬೀಬಿ ಮುಸ್ಕಾನ್ ಅವರಿಗೆ ವಿಶ್ವದಾದ್ಯಂತ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿತ್ತು. ಈ ವೇಳೆ ಹಲವಾರು ಗಣ್ಯರು, ಹೋರಾಟಗಾರರು ಮುಸ್ಕಾನ್ ಅವರಿಗೆ ಬೆಂಬಲ ವ್ಯಕ್ತಪಡಿಸಿ, ಹಿಜಾಬ್ ಧರಿಸುವ ಅವರ ಧಾರ್ಮಿಕ ಹಕ್ಕಿನ ಪರವಾಗಿ ನಿಂತಿದ್ದರು. ಇದೇ ರೀತಿ, ಬಿಜೆಪಿಯ ಮೋದಿ ನೇತೃತ್ವದ ಸರ್ಕಾರ 200 ಕೋಟಿ ರೂ ನೆರವು ನೀಡುವುದಾಗಿ ಘೋಷಿಸಿರುವ ಅಫ್ಘಾನ್‌ನ ತಾಲಿಬಾನ್‌ ಆಡಳಿತ ಕೂಡಾ ಮುಸ್ಕಾನ್‌‌ಗೆ ಬೆಂಬಲ ವ್ಯಕ್ತಪಡಿಸಿತ್ತು.

ಇದನ್ನೂ ಓದಿ: ಫ್ಯಾಕ್ಟ್‌ಚೆಕ್‌: ರಾಹುಲ್‌ ಗಾಂಧಿ ಜೊತೆಯಲ್ಲಿ ದಿಟ್ಟ ಹುಡುಗಿ ಮುಸ್ಕಾನ್‌ ಫೋಟೋ ತೆಗೆದುಕೊಂಡಿದ್ದರೆ?

ಆದರೆ ಇದೀಗ ಮುಸ್ಕಾನ್ ಅವರು ತಾಲಿಬಾನ್‌ ನೀಡಿದ ಬೆಂಬಲಕ್ಕೆ ಟ್ವಿಟರ್‌ನಲ್ಲಿ ‘ಧನ್ಯವಾದ’ ಹೇಳಿದ್ದಾರೆ ಎಂದು ಪ್ರತಿಪಾದಿಸಿ ಟ್ವಿಟರ್‌ ಸ್ಕ್ರೀನ್‌ಶಾರ್ಟ್‌ ಒಂದು ಹರಿದಾಡುತ್ತಿದೆ. ಇದನ್ನು ಬಿಜೆಪಿ ಬೆಂಬಲಿಗರು ಮತ್ತು ಬಲಪಂಥೀಯರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದನ್ನು ನೀವು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಫೇಕ್‌ಪ್ಯಾಕ್ಟರಿ ಎಂದೇ ಕುಖ್ಯಾತಿ ಹೊಂದಿರುವ ಪೋಸ್ಟ್‌ಕಾರ್ಡ್‌‌ನ ಯೂಟ್ಯೂಬ್ ಚಾನೆಲ್‌ ವಿಕ್ರಮ ಟಿವಿಯ ನಿರೂಪಕ, ಬಿಜೆಪಿಯ ಬೆಂಬಲಿಗ ಕಿರಿಕ್ ಕೀರ್ತಿ ಅವರು ಈ ಸ್ಕ್ರೀನ್‌ಶಾರ್ಟ್‌ ಹಂಚಿದ್ದಾರೆ. “ಇದೇ ಬೇಡ ಅನ್ನೋದು… ನಿನ್ನ ಧೈರ್ಯ ಕೊಂಡಾಡಿ ನೂರಾರು ಜನ‌ ನಿನ್ನನ್ನು ಹೀರೋಯಿನ್ ಮಾಡ್ತಿದ್ದಾರೆ… ಸಂತೋಷ… ಆದ್ರೆ ತಾಲಿಬಾನಿಯರಿಗೂ ಧನ್ಯವಾದ ಹೇಳೋ ನಿನ್ನ ಈ ಗುಣ ಸರಿಯಲ್ಲ‌… ನಮ್ಮ ಮುಸಲ್ಮಾನ ಬಂಧುಗಳು ಭಾರತದ ಜೊತೆಗಿರುವಾಗ ನೀನು ತಾಲಿಬಾನಿಯರನ್ನು ಅಹುದಹುದೆನ್ನೋದು ಸರಿಯಲ್ಲ…. ಅಂತಹ ಓವೈಸಿಯೇ ಪಾಕಿಸ್ತಾನಕ್ಕೆ ಛೀಮಾರಿ ಹಾಕಿದ್ದಾರೆ… ನೀನ್ಯಾಕೆ ಹೀಗಾದೆ…? ಭಾರತದ ಸರ್ವಧರ್ಮ ಸಮನ್ವಯಕ್ಕೆ ಶಾಪದಂತಿರೋ ತಾಲಿಬಾನಿಗಳು ನಿನ್ನ ಪರವಾಗಿದ್ದರೆ ಅದು ಒಳ್ಳೆಯ ಬೆಳವಣಿಗೆ ಅಲ್ಲ.. ಇದೆಲ್ಲಾ ನಾಲ್ಕು ದಿನದ ಆಟ… Be cool… ‘ಜೈ ಶ್ರೀರಾಮ್… ಅಲ್ಲಾ ಹೋ ಅಕ್ಬರ್…” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಸಿಂಧೂರ ಧರಿಸುವುದು ನನ್ನ ಆಯ್ಕೆ, ಹಿಜಾಬ್ ಧರಿಸುವುದು ಮುಸ್ಕಾನ್ ಆಯ್ಕೆ: ‘ಹಮ್ ಸಬ್ ಹಿಂದೂಸ್ತಾನಿ’ ಎಂದ ತೆಲಂಗಾಣ ಸಿಎಂ ಮಗಳು

ಫ್ಯಾಕ್ಟ್‌ಚೆಕ್‌

ಸ್ಕ್ರೀನ್‌ಶಾರ್ಟ್‌ ವೈರಲ್‌ ಆಗುತ್ತಿದ್ದಂತೆ ಅದನ್ನು ಫ್ಯಾಕ್ಟ್‌‌ಚೆಕ್ ಮಾಡುವಂತೆ ನಾನುಗೌರಿ.ಕಾಂಗೆ ಕೋರಿಕೆಗಳು ಬಂದಿವೆ. ಈ ಬಗ್ಗೆ ನಾನುಗೌರಿ.ಕಾಂ ಹುಡುಕಾಡಿದಾಗ, ಈ ಟ್ವೀಟ್‌ ಅನ್ನು ಮಾಡಿರುವ  ಟ್ವಿಟರ್‌‌ ಹ್ಯಾಂಡಲ್ ನಮಗೆ ಲಭ್ಯವಾಗಿದೆ.

@muskanind3467 ಎಂಬ ಹ್ಯಾಂಡಲ್ ಮೂಲಕ ಈ ಟ್ವೀಟ್ ಮಾಡಲಾಗಿದ್ದು, ಇದನ್ನು 2022ರ ಜನವರಿಯಲ್ಲಿ ಪ್ರಾರಂಭಿಸಲಾಗಿದೆ. ಈಗಾಗಲೇ ಈ ಖಾತೆಗೆ ಆರು ಸಾವಿರಕ್ಕಿಂತಲೂ ಹೆಚ್ಚಿನ ಜನರು ಫಾಲೋವರ್‌ಗಳಾಗಿದ್ದಾರೆ.

ಈ ಖಾತೆಯು ಜನವರಿಯಲ್ಲಿ ಪ್ರಾರಂಭಿಸಲಾಗಿದೆ ಎಂದು ಟ್ವಿಟರ್‌ ಮಾಹಿತಿ ನೀಡುತ್ತಿದೆ ಆದರೆ, ಈ ಖಾತೆಯಲ್ಲಿ ಮೊದಲ ಬಾರಿಗೆ ಫೆಬ್ರವರಿ 8 ರಂದು ಹಿಜಾಬ್ ವಿಚಾರವಾಗಿ ವಿಡಿಯೊವೊಂದನ್ನು ಅಪ್‌ಲೋಡ್ ಮಾಡಲಾಗಿದೆ. ಮಂಡ್ಯದಲ್ಲಿ ಮುಸ್ಕಾನ್ ಅವರನ್ನು ಬಿಜೆಪಿ ಬೆಂಬಲಿಗರು ಬೆನ್ನಟ್ಟಿದ್ದು ಕೂಡಾ ಅಂದೇ ಆಗಿತ್ತು. ಆದರೆ ಈ ಘಟನೆಯ ಬಗ್ಗೆ ಖಾತೆಯು ಫೆಬ್ರವರಿ 9ರ ನಂತರ ಉಲ್ಲೇಖಿಸಿದೆ.

ಇದನ್ನೂ ಓದಿ: ಬೀಬಿ ಮುಸ್ಕಾನ್‌ ಘೋಷಣೆ: ಒಂದೆಡೆ RSS ಮುಸ್ಲಿಂ ಘಟಕದ ಬೆಂಬಲ, ಇನ್ನೊಂದೆಡೆ RSS ಮುಖಂಡರ ಖಂಡನೆ 

@musk_a_n ಹ್ಯಾಂಡಲ್‌ನಲ್ಲಿ ಮತ್ತೊಂದು ಖಾತೆಯನ್ನು ಅವರ ಹೆಸರಿನಲ್ಲಿ ತೆರೆಯಲಾಗಿದೆ. ಅದು ಸಹಾ ಜನವರಿಯಲ್ಲಿ ಪ್ರಾರಂಭಿಸಲಾಗಿದ್ದು, ಫೆಬ್ರವರಿ ಹತ್ತರಿಂದ ಖಾತೆಯಲ್ಲಿ ಚಟುವಟಿಗೆ ಶುರುಮಾಡಲಾಗಿದೆ.

ಇಷ್ಟೇ ಅಲ್ಲದೆ ಅವರ ಹೆಸರಿನಲ್ಲಿ ಹಲವಾರು ಟ್ವಿಟರ್‌ ಖಾತೆಯನ್ನು ತೆರೆಯಲಾಗಿದೆ.

ಈ ಖಾತೆಯ ಸತ್ಯಾಸತ್ಯತೆಯ ಬಗ್ಗೆ ತಿಳಿಯಲು ನಾನುಗೌರಿ.ಕಾಂ ಮುಸ್ಕಾನ್ ಅವರ ತಂದೆ ಹುಸೈನ್‌ ಖಾನ್ ಅವರನ್ನು ಸಂಪರ್ಕಿಸಿದೆ. ನಾನುಗೌರಿ.ಕಾಂ ಜೊತೆ ಮಾತನಾಡಿದ ಅವರು, “ನನ್ನ ಮಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಏನೆಲ್ಲಾ ಬರೆಯುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರಿಗೆ ಯಾವುದೇ ಖಾತೆಗಳು ಇಲ್ಲ. ಅವೆಲ್ಲವೂ ನಕಲಿಯಾಗಿದೆ” ಎಂದು ಅವರು ಹೇಳಿದ್ದಾರೆ.

ಅಲ್ಲದೆ ಪ್ರಜಾವಾಣಿ ಪತ್ರಿಗೆಗೆ ಸ್ವತಃ ಮುಸ್ಕಾನ್ ಅವರೇ ಸಂದರ್ಶನ ನೀಡಿದ್ದು, ಅದರಲ್ಲಿ ಮಾತನಾಡಿರುವ ಅವರು, “ಘೋಷಣೆ ಕುರಿತಂತೆ ಪರ–ವಿರೋಧ ಚರ್ಚೆಗೆ ಬೇಸರವಿಲ್ಲ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ಅಪಪ್ರಚಾರದಿಂದ ತುಂಬಾ ನೋವಾಗಿದೆ. ನಾನು ಫೇಸ್‌ಬುಕ್‌, ಟ್ವಿಟರ್‌ ಬಳಸುತ್ತಿಲ್ಲ. ಕೆಲವರು ನಕಲಿ ಖಾತೆ ತೆರೆದು ಸುಳ್ಳು ಹಬ್ಬಿಸುತ್ತಿದ್ದಾರೆ. ನನ್ನ ಭಾವಚಿತ್ರ ಎಡಿಟ್‌ ಮಾಡಿ ಕೆಟ್ಟದಾಗಿ ಬರೆಯುತ್ತಿದ್ದಾರೆ” ಎಂದು ಹೇಳಿದ್ದಾರೆ.

“ನನಗೆ ಕಾಲೇಜು, ಮನೆ ಬಿಟ್ಟರೆ ನನಗೆ ಬೇರೆ ಪ್ರಪಂಚವಿಲ್ಲ. ನಾನು ಚಳವಳಿಗಾರರ ಜೊತೆ ಸಂಪರ್ಕದಲ್ಲಿದ್ದೆ, ತರಬೇತಿ ಪಡೆದಿದ್ದೆ ಎಂದೆಲ್ಲಾ ಸುಳ್ಳು ಸುದ್ದಿ ಹರಡಿಸುತ್ತಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿದ್ದಾಳೆ, ನೇಣು ಹಾಕಿದ್ದಾರೆ ಎಂದೆಲ್ಲಾ ಬರೆದಿದ್ದಾರೆ. ಇದರ ವಿರುದ್ಧ ಪೊಲೀಸರಿಗೆ ದೂರು ನೀಡಲು ನಿರ್ಧರಿಸಿದ್ದೇನೆ” ಎಂದು ಅವರು ಪ್ರಜಾವಾಣಿ ಜೊತೆಗೆ ಮಾತನಾಡುತ್ತಾ ಹೇಳಿದ್ದಾರೆ.

ಖ್ಯಾತ ಫ್ಯಾಕ್ಟ್‌ಚೆಕ್ ವೆಬ್‌ಸೈಟ್‌‌ ಆಲ್ಟ್‌ ನ್ಯೂಸ್‌‌ ಸಂಸ್ಥಾಪಕ ಜುಬೈರ್‌ ಅವರು, “ನಕಲಿ ಐಡಿಯಿಂದ ಮಾಡಿದ ಈ ಟ್ವೀಟ್‌ನ ಸ್ಕ್ರೀನ್‌ಶಾಟ್ ಮುಸ್ಕಾನ್ ಅವರನ್ನು ಗುರಿಯಾಗಿಸಿಕೊಂಡು ಫೇಸ್‌ಬುಕ್ ಮತ್ತು ವಾಟ್ಸ್‌ಆಪ್‌ನಲ್ಲಿನಲ್ಲಿ ವೈರಲ್ ಆಗಿದೆ. ಮುಸ್ಕಾನ್‌ ಅವರು ಟ್ವಿಟರ್ ಖಾತೆ ಹೊಂದಿಲ್ಲ. @muskanind3467 ಖಾತೆಯನ್ನು ಪಾಕಿಸ್ತಾನದಿಂದ ಯಾರೋ ರಚಿಸಿದ್ದು, ಈ ಖಾತೆ ಹಿಂದೆ @AmanTweets60 ಆಗಿತ್ತು. ನಂತರ ಅದನ್ನು @muskanind3467 ಎಂದು ಬದಲಾಯಿಸಲಾಗಿದೆ” ಎಂದು ಬರೆದಿದಾರೆ.

ಒಟ್ಟಿನಲ್ಲಿ ಹೇಳಬಹುದಾದರೆ, ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಬೆಂಬಲಿಗರು ಶೇರ್‌ ಮಾಡುತ್ತಿರುವ ಟ್ವಿಟರ್‌ ಸ್ಕ್ರೀನ್‌ ಶಾರ್ಟ್‌ ಬೀಬಿ ಮುಸ್ಕಾನ್ ಅವರದ್ದಲ್ಲ. ಅವರಿಗೆ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌ ಮತ್ತು ಟ್ವಿಟರ್‌ನಲ್ಲಿ ಯಾವುದೇ ಖಾತೆಗಳು ಇಲ್ಲ.

ಇದನ್ನೂ ಓದಿ: ಹಿಜಾಬ್‌‌‌‌‌‌ ವಿರೋಧಿ ಹಿಂಸಾಚಾರವು ರಾಜ್ಯದ ಸಮ್ಮಿಶ್ರ ವೈವಿಧ್ಯ ಸಂಸ್ಕೃತಿಯನ್ನು ನಾಶ ಮಾಡುತ್ತಿದೆ: ‘ಬಹುತ್ವ ಕರ್ನಾಟಕ’ ಆಕ್ರೋಶ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ: ರೇವಣ್ಣ ನಿವಾಸದಲ್ಲಿ ಎಸ್‌ಐಟಿ ತಂಡದಿಂದ ಸ್ಥಳ ಮಹಜರು

0
ಸಂಸದ ಪ್ರಜ್ವಲ್ ರೇವಣ್ಣ ವಿರುದ್ದ ಮಹಿಳೆಯೊಬ್ಬರು ದಾಖಲಿಸಿರುವ ಲೈಂಗಿಕ ದೌರ್ಜನ್ಯ ದೂರಿಗೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿರುವ ಎಸ್‌ಐಟಿ ತಂಡ, ಇಂದು (ಮೇ 4) ಹಾಸನದ ಹೆಚ್‌.ಡಿ ರೇವಣ್ಣ ಅವರ ನಿವಾಸದಲ್ಲಿ ಮಹಜರು ನಡೆಸಿದೆ. ಡಿವೈಎಸ್‌ಪಿ...