Homeಚಳವಳಿನಾವೂ ನೋಡುತ್ತೇವೆ, ಸಾಕ್ಷಿಯಾಗುತ್ತೇವೆ: ಈ ದುರಿತ ಕಾಲದಲ್ಲಿ ಮತ್ತೆ ನೆನಪಾಗುವ ಫೈಜ್‌ ಕವನ

ನಾವೂ ನೋಡುತ್ತೇವೆ, ಸಾಕ್ಷಿಯಾಗುತ್ತೇವೆ: ಈ ದುರಿತ ಕಾಲದಲ್ಲಿ ಮತ್ತೆ ನೆನಪಾಗುವ ಫೈಜ್‌ ಕವನ

ಇಂದು ಭಾರತವೂ ಸಹ ಆ ಎಪ್ಪತ್ತು-ಎಂಬತ್ರರ ದಶಕದ ಪಾಕಿಸ್ತಾನದ ನಿರಂಕುಶ ಪ್ರಬುತ್ವದ, ಮತೀಯವಾದದ ವ್ಯವಸ್ಥೆಗೆ ಜಾರುತ್ತಿದೆ. ಸಂಘ ಪರಿವಾರದ ಸುಳ್ಳುಗಳು ತಾಂಡವವಾಡುತ್ತಿವೆ, ಸತ್ಯದ ದನಿ ಕ್ಷೀಣಗೊಂಡಿದೆ.

- Advertisement -
- Advertisement -

(ಪತ್ರಿಕಾ ವರದಿ : ಕಳೆದ ವಾರ ಐಐಟಿ – ಖರಗಪುರನ ವಿದ್ಯಾರ್ಥಿಗಳು ‘ಜಾಮಿಯ ಮಿಲಿಯಾ ಇಸ್ಲಾಮಿಯಾ ಕ್ಯಾಂಪಸ್‌ನಲ್ಲಿ ಸಿಎಎ-ಎನ್‌ಆರ್‌ಸಿ ಪ್ರತಿಭಟನೆ ವಿರುದ್ದ ದಾಳಿ ಮಾಡಿದ ಪೋಲೀಸರ ಕೃತ್ಯದ ವಿರುದ್ದ’ ಪ್ರತಿಭಟಿಸುತ್ತಿದ್ದರು. ಆದರೆ ಇವರು ದ್ವೇಷವನ್ನು ಹರಡುತ್ತಿದ್ದಾರೆ’ ಎಂದು ಅಲ್ಲಿಯ ಪ್ರಾಧ್ಯಾಪಕರೊಬ್ಬರು ಆರೋಪಿಸಿದರು. ಇಲ್ಲಿ ದ್ವೇಷವನ್ನು ಹರಡುತ್ತಿದ್ದಾರೆ ಎನ್ನುವ ಆರೋಪಕ್ಕೆ ಕಾರಣವೇನೆಂದರೆ ಅಹಿಂಸಾತ್ಮಕವಾಗಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳು ಫೈಜ್ ಅವರ ಪ್ರಖ್ಯಾನ ಕವಿತೆ ‘ನಾವೂ ನೋಡುತ್ತೇವೆ’ (ಹಮ್ ಬೀ ದೇಖೇಂಗೆ) ಯ ಕೆಲ ಸಾಲುಗಳನ್ನು ಬಳಸಿಕೊಂಡಿದ್ದರು. ಫೈಜ್ ಈ ಸಾಲುಗಳು ಆ ಪ್ರಾದ್ಯಾಪಕರ ಪ್ರಕಾರ ದ್ವೇಷ ಬಿತ್ತುತ್ತವೆ !!)

ಪಾಕಿಸ್ತಾನದ ಲೇಖಕ, ಕವಿ ಫೈಜ್ ‘ನಾವೂ ನೋಡುತ್ತೇವೆ’ ಕವಿತೆಯನ್ನು ಸರ್ವಾಧಿಕಾರಿ ಜಿಯಾ-ಉಲ್-ಹಕ್ ಆಡಳಿತ ನಡೆಸುತ್ತಿದ್ದ ಸಂದರ್ಭದಲ್ಲಿ 1979ರಲ್ಲಿ ಬರೆದರು. ಇದು ಬಂಡಾಯ ಕವಿತೆ. ಜಿಯಾ ಉಲ್ ಹಕ್ ಸಾಂಪ್ರದಾಯಿಕ ಇಸ್ಲಾಂ ಧರ್ಮವನ್ನು ತನ್ನ ಸರ್ವಾಧಿಕಾರಕ್ಕೆ ಆಯುಧವಾಗಿ ಬಳಸಿಕೊಂಡು ತನ್ನ ನಿರಂಕುಶ ಪ್ರಭುತ್ವದ ಹಿಡಿತ ಗಟ್ಟಿಗೊಳಿಸಿಕೊಂಡ. ಫೈಜ್ ‘ಜಿಯಾ ಅದಿಕಾರದ ಹುಚ್ಚು ಹಿಡಿಸಿಕೊಂಡಿದ್ದಾರೆ, ಅವರು ದೈವ ಭಕ್ತರಲ್ಲ’ ಎಂದು ಹೇಳಲು ತಮ್ಮ ಈ ಕವಿತೆಯಲ್ಲಿ ಧರ್ಮವನ್ನು ಸಾಂಕೇತಿಕವಾಗಿ ಬಳಸಿಕೊಂಡು ನಂಬಿಕೆಯ ಪ್ರತಿಮಾ ಸೃಷ್ಟಿಯ ಮೂಲಕ ಬಂಡಾಯದ ದನಿ ಸಿಡಿಸಿದ್ದಾರೆ

ಈ ಕವಿತೆಯ (ಒರಟಾದ) ಭಾವಾನುವಾದ

ನಾವೂ ನೋಡುತ್ತೇವೆ —

ನಾವು ನೋಡುತ್ತೇವೆ, ನಿಜಕ್ಕೂ, ನಾವೂ  ಸಾಕ್ಷಿಯಾಗಬೇಕು
ಎಲ್ಲಾ ಚಿರಕಾಲದ ಮೇಲೆ ನಾವು ಕೆತ್ತಿದ ವಾಗ್ದಾನದ ದಿನಕ್ಕೆ

ನಿರಂಕುಶದ, ಶೋಷಣೆಯ ಬೆಟ್ಟಗಳು ಹತ್ತಿಯಂತೆ ಹಾರಿ ಹೋಗುವಾಗ  ನಮ್ಮ ಕಾಲ ಕೆಳಗಿರುವ ಶೋಷಿತರ ಭೂಮಿಯು ಕಂಪಿಸಿ ನಡುಗುವಾಗ  ಆರ್ಭಟಿಸುವ ಗುಡುಗು, ಸೀಳುವ ಮಿಂಚು ಆಳುವವರ ಮೇಲೆ ಠಳಾಯಿಸುವಾಗ
ನಾವು ಖಂಡಿತ ಸಾಕ್ಷಿಯಾಗುತ್ತೇವೆ

ಅಸತ್ಯದ ವಿಗ್ರಹಗಳನ್ನು ದೇವರ ಕಾಬಾದ ನೆಲೆಯಿಂದಾಚೆ ಎಸೆದುಬಿಡುವಾಗ
ನಾವು-ಶುದ್ದರು, ಪವಿತ್ರ ಸ್ಥಳದಿಂದ ಹೊರದೂಡಲ್ಪಟ್ಟವರು (ಶೋಷಿತರು) ಸಿಂಹಾಸನಗಳ ಮೇಲೆ ಅದಿಕಾರ ಸ್ಥಾಪಿಸುತ್ತೇವಾಗ
ಕಿರೀಟಗಳನ್ನು ಎಸೆದುಬಿಡುವಾಗ,  ಸಿಂಹಾಸನಗಳನ್ನು ದ್ವಂಸಗೊಳಿಸುವಾಗ

ಆಗ ಹೆಸರು ಮಾತ್ರ ಉಳಿದುಕೊಳ್ಳುತ್ತದೆ, ಅದು ಅಗೋಚರವೂ ಹೌದು ಮತ್ತು ಗೋಚರವೂ ಹೌದು
ಅವೆರೆಡೂ ನೋಟವೂ ಹೌದು, ನೋಡುಗನೂ ಹೌದು, ಸತ್ಯದ ದನಿಯು ಮುಗಿಲೆತ್ತರಕ್ಕೆ

ಅದು ನಾನು ಮತ್ತು ನೀನು, ಮತ್ತು ದೇವರ ಮಕ್ಕಳು ಆಳ್ವಿಕೆ ನಡೆಸುತ್ತಾರೆ
ಅದು ನಾನು ಮತ್ತು ನೀನು
ನಾವು ಸಾಕ್ಷಿಯಾಗುತ್ತೇವೆ, ಖಂಡಿತವಾಗಿ ನಾವೂ ಸಾಕ್ಷಿಯಾಗಬೇಕು

ಸಹಜವಾಗಿಯೆ ಸರ್ವಾದಿಕಾರಿ ಜಿಯಾ ಈ ಕ್ರಾಂತಿಕಾರಿ ಕವಿತೆಯನ್ನು ನಿಷೇಧಿಸಿದರು. ಆದರೆ 1986ರಲ್ಲಿ ಪಾಕಿಸ್ತಾನದ ಖ್ಯಾತ ಗಜಲ್ ಗಾಯಕಿ ಇಕ್ಬಾಲ್ ಬಾನು ಈ ಕವಿತೆಯನ್ನು ಪ್ರೇಕ್ಷಕರ ಮುಂದೆ ಹಾಡಿದಾಗ ‘ಇಂಕ್ವಿಲಾಬ್ ಜಿಂದಾಬಾದ್’ ಘೋಷಣೆ ಮುಗಿಲು ಮುಟ್ಟಿತು. ಸುಹಾಂತ್ ಸಿಂಗ್ ಬರೆಯುತ್ತಾರೆ ‘ಆದಿನ ಪ್ರೇಕ್ಷಕರು ಕಿರೀಟಗಳನ್ನು ಎಸೆದು ಬಿಡುತ್ತೇವೆ, ಸಿಂಹಾಸನಗಳನ್ನು ಉರುಳಿಸುತ್ತೇವೆ (ಸಬ್ ತಾಜ್ ಉಚಾಲೆ ಜಾಯೆಂಗೆ, ಸಬ್ ತಕ್ತ್ ಗಿರಾಯೆ ಜಾಯೆಂಗೆ) ಎಂದು ಹುರುಪಿನಿಂದ ಹಾಡುತ್ತಿದ್ದರು’

ಇದು ಕವಿತೆಗಿರುವ ಶಕ್ತಿ. ಆದರೆ ಜೊತೆಗೆ ಕವಿ, ಲೇಖಕನ ನೈತಿಕತೆ ಮತ್ತು ಬದ್ದತೆ ಸಹ ಮುಖ್ಯವಾಗುತ್ತದೆ. ಫೈಜ್ ಅವರ ನೈತಿಕತೆ ಮತ್ತು ಮೌಲ್ಯಗಳ ಕುರಿತು ಪಾಕಿಸ್ತಾನ ಪ್ರಜೆಗಳಿಗೆ ಚಿರಪರಿಚಿತವಾಗಿತ್ತು. ಜನರನ್ನು ಬಹುದಿನಗಳ ಕಾಲ ಅದುಮಿಡಲು ಸಾದ್ಯವಿಲ್ಲ. ದಂಗೆಗಾಗಿ ಕಾಯುತ್ತಾರೆ. ಆ ಹೊಳಹು ಕವಿತೆಯ ರೂಪದಲ್ಲಿಯೂ ಇರಬಹುದು ಎಂಬುದಕ್ಕೆ ‘ನಾವೂ ನೋಡುತ್ತೇವೆ’ ಕವಿತೆ ಸಾಕ್ಷಿ. ಆದರೆ ಇಂದು ಭಾರತವೂ ಸಹ ಆ ಎಪ್ಪತ್ತು-ಎಂಬತ್ರರ ದಶಕದ ಪಾಕಿಸ್ತಾನದ ನಿರಂಕುಶ ಪ್ರಬುತ್ವದ, ಮತೀಯವಾದದ ವ್ಯವಸ್ಥೆಗೆ ಜಾರುತ್ತಿದೆ. ಸಂಘ ಪರಿವಾರದ ಸುಳ್ಳುಗಳು ತಾಂಡವವಾಡುತ್ತಿವೆ, ಸತ್ಯದ ದನಿ ಕ್ಷೀಣಗೊಂಡಿದೆ. ಆ ಸತ್ಯದ ದನಿಯನ್ನು ಮುಗಿಲೆತ್ತರಕ್ಕೇರಿಸುವವರೂ ಸಹ ದಿಕ್ಕು ತೋಚದಂತಾಗಿದ್ದಾರೆ. ಫೈಜ್ ಮತ್ತೆ ಮತ್ತೆ ನಮಗೆ ಸಾಕ್ಷಿಪ್ರಜ್ಞೆಯಾಗುತ್ತಾರೆ.

ಇಂದು ಭಾರತದಲ್ಲಿ ಕರಾಳ ಶಾಸನಗಳಾದ ಸಿಎಎ-ಎನ್‌ಆರ್‌ಸಿ ವಿರುದ್ದ ನಾಗರಿಕರು, ವಿದ್ಯಾರ್ಥಿಗಳು ದಂಗೆ ಎದ್ದಿದ್ದಾರೆ. ಇಂದು ಈ ಸಿಎಎ ಶಾಸನವು ಮೂಲಬೂತ ಹಕ್ಕುಗಳಾದ ಸಮಾನತೆ, ಸ್ವಾತಂತ್ರ್‍ಯ ಮತ್ತು ಬಂಧುತ್ವಗಳನ್ನು ಉಲ್ಲಂಘಿಸುತ್ತದೆ. ಆ ಮೂಲಕ ದೇಶದ ಘನತೆ ಸಹ ನಾಶವಾಗುತ್ತಿದೆ. ಮೋದಿ-ಶಾ-ಆರೆಸ್ಸಸ್ ಜೋಡಿಗೆ ಸುಳ್ಳುಗಳನ್ನು ಎತ್ತರದ ದನಿಯಲ್ಲಿ ಮಾತನಾಡಿದರೆ ಅದನ್ನು ಜನರಿಗೆ ತಲುಪಿಸಬಹುದು ಎಂದು ನಂಬಿದ್ದಾರೆ. ಚುನಾವಣೆಗಳಲ್ಲಿ ಅವರ ಗೆಲುವು ಇವರ ಈ ಆತ್ಮವಿಶ್ವಾಸಕ್ಕೆ ಕಾರಣವಾಗಿದೆ. ಇವರ ಸುಳ್ಳುಗಳಿಗೆ, ಮತೀಯವಾದಕ್ಕೆ ತಲೆದೂಗಿಸುವಂತಹ ಬಕ್ತರ ಶೇಕಡಾವಾರು ಪ್ರಮಾಣ ಇಂದಿಗೂ ಕಡಿಮೆಯಾಗಿಲ್ಲ.

ಇಲ್ಲಿ ಆಳುವವರಿಗೂ ಸಂವಿದಾನದ ಪೀಠಿಕೆಯ, ನಿತಿಸಂಹಿತೆಗಳ ಅರಿವಿಲ್ಲ ಮತ್ತು ಅವರು ಅದನ್ನು ತಿರಸ್ಕರಿಸಿದ್ದಾರೆ ಆದರೆ ಆಳಿಸಿಕೊಳ್ಳುವವರೂ ಸಹ ಇದೆ ಹಾದಿಯಲ್ಲಿರುವುದೆ ಇಂದಿನ ಭಾರತದ ದುರಂತ. ‘ಕಿರೀಟಗಳನ್ನು ಎಸೆದು ಬಿಡುತ್ತೇವೆ, ಸಿಂಹಾಸನಗಳನ್ನು ಉರುಳಿಸುತ್ತೇವೆ’ ಎಂದು ಆತ್ಮವಿಶ್ವಾಸದಿಂದ ಮಾತನಾಡುವ ಬಂಡಾಯಗಾರರು ಇಂದಿಗೂ ಅಲ್ಪಸಂಖ್ಯೆಯಲ್ಲಿದ್ದಾರೆ. ಈ ಸಿಎಎ-ಎನ್‌ಆರ್‌ಸಿ ವಿರುದ್ದದ ಹೋರಾಟದ ಬಿರುಸು ದಿನದಿನಕ್ಕೂ ಹೆಚ್ಚುತ್ತಿರುವುದು ನಿಜ. ಆದರೆ ಪೌರತ್ವ, ದೇಶ, ಪ್ರಜೆ ಇವುಗಳ ಸಮಜೋ-ಸಾಂಸ್ಕೃತಿಕ-ರಾಜಕೀಯ ಸಂಕೀರ್ಣತೆಯನ್ನು ಜನತೆಗೆ ಮನದಟ್ಟು ಮಾಡಿಕೊಡದಿದ್ದರೆ ಮುಂದಿನ ದಿನಗಳು ದುರಂತಮಯವಾಗಲಿದೆ

ಸಂವಿಧಾನ ಪ್ರಸ್ತಾವನೆಯಲ್ಲಿನ ಆರಂಬದ ಸಾಲುಗಳಾದ ಸ್ವಾಯತ್ತತೆ, ಸಮಾಜವಾದ, ಪ್ರಜಾಪ್ರಬುತ್ವ ಮತ್ತು ಗಣರಾಜ್ಯ ತತ್ವಗಳು ಭಾರತ ದೇಶದ ಅಡಿಪಾಯಗಳು. ಆದರೆ ಈ ಕುರಿತು ನಮ್ಮ ಜನಮಾನಸದಲ್ಲಿ ಅರಿವು, ಆಳವಾದ ಬದ್ದತೆ ಮತ್ತು ಸಂವೇದನೆಯ ಕೊರತೆ ಇದೆ. ಸಂವಿದಾನದ ಅನುಚ್ಚೇಧ 14, 15, 16, 17, 21 22, 23, 24, 25 ಸಾರ್ವತ್ರಿಕವಾಗಿ ಪ್ರಜೆಗಳ ಮೂಲಭೂತ ಹಕ್ಕುಗಳನ್ನು ಕಾಪಾಡುತ್ತವೆ. ಸಂವಿದಾನದ ಪ್ರಸ್ತಾವನೆ ಮತ್ತು ಅನುಚ್ಚೇಧಗಳ ಅನುಸಾರ ದೇಶವೆಂದರೆ ಒಂದು ಬಹುತ್ವದ ಸಮಾಜ, ನೈತಿಕತೆ, ಐಕ್ಯತೆ. ಅಕ್ರಮ ವಲಸಿಗರು ಎಂದರೆ ಅವರು ಮನುಶ್ಯರು ಎಂದರ್ಥ. ಅವರು ನಾಗರಿಕರು ಎಂಬದೂ ನಿಜ. ಆದರೆ ಅವರ ಘನತೆ ಕುಂದಿಸುವ ಹಕ್ಕು ಯಾವ ಪ್ರಬುತ್ವಕ್ಕೂ ಇಲ್ಲ. ಈ ಮನುಷ್ಯ ಮತ್ತು ಮಾನವೀಯತೆಯನ್ನು ರಾಜಕೀಯಗೊಳಿಸಿ ಅವರನ್ನೆಲ್ಲ ನಿರ್ದಿಷ್ಟ ಪ್ರದೇಶದ ಗಡಿಯೊಳಗೆ ನಾಗರಿಕರೆಂದು ಮೌಲ್ಯಮಾಪನ ಮಾಡುವುದೆ ಸಂವಿದಾನದ ನೀತಿಸಂಹಿತೆಗಳ ಉಲ್ಲಂಘನೆಯಾಗುತ್ತದೆ.

ಇಂದು ಮೋದಿ-ಶಾ ಜೋಡಿಯು ದೇಶವನ್ನು ಇಲ್ಲಿನ ನಾಗರಿಕರನ್ನು ಒಂದು ಬೌಗೋಳಿಕತೆಗೆ ಸೀಮಿತಗೊಳಿಸಿ ಅವರಲ್ಲಿ ಬಹುಸಂಖ್ಯಾತರಿಗೆ ಮಾತ್ರ ಪೌರತ್ವ ಕೊಡಿಸುವ ಮತಾಂಧ ರಾಜಕಾರಣ ಹೇರುತ್ತಿದ್ದಾರೆ. ಮುಸ್ಲಿಂರು ಎನ್ನುವ ಆದಾರದ ಮೇಲೆ ವಲಸಿಗರನ್ನು ವರ್ಗೀಕರಿಸುವ ಮೂಲಕ ಸಂವಿದಾನದ ಆಶಯವಾದ ಬಂದುತ್ವವನ್ನೆ ನಾಶ ಮಾಡಲಾಗುತ್ತಿದೆ. ಆ ಮೂಲಕ ಸೆಕ್ಯುಲರಿಸಂ ಸಹ ಧೂಳಿಪಟವಾಗುತ್ತದೆ. ಬಿಜೆಪಿ ಪಕ್ಷದ ಈ ಸರ್ವಾದಿಕಾರಿ ರಾಜಕಾರಣಕ್ಕೆ ಮುಖಾಮುಖಿಯಾಗುವ ದಿಟ್ಟತೆ, ಬದ್ದತೆ ಇಂಡಿಯಾದ ರಾಜಕೀಯ ಪಕ್ಷಗಳಿಲ್ಲ. ಮತ್ತೊಂದೆಡೆ ಸಂಘ ಪರಿವಾರವು ಈ ದೇಶದ ಬಹುಸಂಖ್ಯಾತರನ್ನು ಈ ಮತೀಯ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿರುವುದನ್ನು ಮನದಟ್ಟು ಮಾಡಿಕೊಡಲು ಪ್ರಗತಿಪರರು ಮತ್ತೆ ಮತ್ತೆ ಸೋಲುತ್ತಿದ್ದಾರೆ. ಇದು ಕೇವಲ ಅದ್ಯಯನದ ಕೊರತೆ ಮಾತ್ರವಲ್ಲ, ಸಮಾಜ, ನಮ್ಮ ಬದುಕಿನ ದೃಷ್ಟಿಕೋನ ಮತ್ತು ನಮ್ಮ ಹೋರಾಟ ಮೂರರ ನಡುವಿನ ಸಂವಹನ, ನಂಬಿಕೆ ಮತ್ತು ತಾಳಮೇಳದ ಕೊರತೆ ಇದೆ. ಇದನ್ನು ಮೀರುವುದು ಹೇಗೆ?

ಅಚನ್ ವೈನಿಕ್ ಅವರು “ಹೋರಾಟದಲ್ಲಿ ರಾಶ್ಟ್ರೀಯತೆ ಕಲ್ಪನೆಯ ಸಂಕೀರ್ಣತೆಯನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಸ್ಪರ್ದಾತ್ಮಕ ರಾಶ್ಟ್ರೀಯತೆಗಳು ಯಾಕಿವೆ ಮತ್ತು ನಾವು ಯಾವ ದಿಕ್ಕೆನೆಡೆಗೆ ಸಾಗಬೇಕು ಎಂದು ನಿರ್ಣಯಿಸಬೇಕಾಗಿದೆ. ರಾಶ್ಟ್ರೀಯತೆಯು ಹಳೆಯದೆ ಅಥವಾ ಹೊಸದೆ? ರಾಶ್ಟ್ರೀಯತೆಯು ವಸ್ತುನಿಶ್ಟ ಪರಿಚೆಗಳ ಮೇಲೆ ಆದಾರವಾಗಿದೆಯೆ? ಅತವಾ ವ್ಯಕ್ತಿನಿಶ್ಟ ಗುಣಲಕ್ಷಣಗಳ ಮೇಲೆ ಆದಾರವಾಗಿದೆಯೆ? ರಾಶ್ಟ್ರೀಯತೆಯು ಪೌರಸಂಬಂದಿತವೆ ಅಥವಾ ಜನಾಂಗೀಯತೆಯೆ? ಅಥವಾ ಅವೆರಡೂ? ರಾಶ್ಟ್ರೀಯತೆಯು ವಿಶ್ವಾವ್ಯಾಪಿಯೆ ಅಥವಾ ವೈಯುಕ್ತಿಕವಾದಿಯೆ? ಅಥವಾ ಅವೆರಡೂ? ರಾಶ್ಟ್ರೀಯತೆ ತತ್ವ ಸಿದ್ದಾಂತವೆ? ಬಾವಾವೇಶವೆ? ಅಥವಾ ಅವೆರಡೂ? ರಾಶ್ಟ್ರೀಯತೆಯು ಒಳಗೊಳ್ಳುವಿಕೆಯೆ? ಹೊರಗಿಡುವಿಕೆಯೆ? ಅಥವಾ ಅವೆರಡೂ? ಅದು ಸಾಂಸ್ಕೃತಿಕವೆ? ರಾಜಕೀಯವೆ? ಅತವಾ ಅವೆರಡೂ? ಅದು ಒಳ್ಳೆಯದೆ? ಕೆಟ್ಟದೆ? ಅಥವಾ ಅವೆರಡೂ? ಕೆಲಸಂದರ್ಬದಲ್ಲಿ ಅದು ಒಳ್ಳೆಯದೆ? ಅದರಲ್ಲಿ ಕೆಲ ಕೆಟ್ಟ ಅಂಶಗಳಿವೆಯೆ? ಅದು ತೀರಾ ಕೆಟ್ಟದಾಗಿದರೂ ಸಹ ಕೆಲವೊಮ್ಮೆ ಅದರಲ್ಲಿ ಒಳ್ಳೆಯ ಅಂಶಗಳಿರುತ್ತದೆಯೆ?” ಎಂದು ಬರೆಯುತ್ತಾರೆ.

ಈ ಎಲ್ಲಾ ಪ್ರಶ್ನೆಗಳಿಗೆ ನಾವು ಸೂಕ್ತ ಉತ್ತರಗಳನ್ನು ಕಂಡುಕೊಳ್ಳುವುದು ಮಾತ್ರವಲ್ಲ ಇಂದು ಪೌರತ್ವದ ಉಮೇದಿಯಲ್ಲಿ, ಹಪಾಹಪಿತನದಲ್ಲಿರುವ ಬಹುಸಂಖ್ಯಾತರಿಗೂ ಇದರ ಅರಿವು ಸಂವೇದನೆ ಮೂಡಿಸುವ ಜವಬ್ದಾರಿ ಇಲ್ಲಿನ ಪ್ರಜ್ಞಾವಂತರ ಮೇಲಿದೆ. ಇದು ದೊಡ್ಡ ಸವಾಲು. ಈ ಹೊಣೆಗಾರಿಕೆಯನ್ನು ಎಚ್ಚರಿಕೆಯಿಂದ, ಸಾಮಾನ್ಯ ಜ್ಞಾನದಿಂದ ನಿಭಾಯಿಸದಿದ್ದರೆ ಎಲ್ಲಾ ಹೋರಾಟಗಳೂ ವ್ಯರ್ಥವಾಗುತ್ತವೆ. ಇಂದಿನ ಹೋರಾಟಗಳಲ್ಲಿ ‘ಇಂಕ್ವಿಲಾಬ್ ಜಿಂದಾಬಾದ್’ ಘೋಶಣೆ ಮೊಳಗುತ್ತಿದೆ. ಈ ಘೋಶಣೆಗೆ ರಚನಾತ್ಮಕ ಗಾಲಿಗಳನ್ನು ಜೋಡಿಸುವ, ಆ ಮೂಲಕ ಹೊಸ ಪಯಣವನ್ನು ಆರಂಬಿಸುವ ಸವಾಲು ನಮ್ಮ ಮುಂದಿದೆ. ಏಕೆಂದರೆ ನಾವೂ ನೋಡುತ್ತೇವೆ, ನಾವೂ ಸಾಕ್ಷಿಯಾಗುತ್ತೇವೆ ಎನ್ನುವ ಕವಿತೆಯ ಸಾಲುಗಳನ್ನು ಹಾಡುವ, ಗುನುಗುನಿಸುದಕ್ಕೂ ಎದೆಗಾರಿಕೆ ಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಇರಾನ್‌ ಹಿಂಸಾಚಾರ : ಸಾವಿನ ಸಂಖ್ಯೆ 116ಕ್ಕೆ ಏರಿಕೆ

ಕಳೆದ ಎರಡು ವಾರಗಳಿಂದ ಇರಾನ್‌ನಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳಲ್ಲಿ ಕನಿಷ್ಠ 116 ಜನರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಪ್ರತಿಭಟನಾ ನಿರತರ ಮೇಲೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಡಿಸೆಂಬರ್ 28ರಂದು ಪ್ರಾರಂಭವಾದ...

ಪಾಕಿಸ್ತಾನದ ಸಿಂಧ್‌ನಲ್ಲಿ 23 ವರ್ಷದ ಹಿಂದೂ ರೈತನನ್ನು ಗುಂಡಿಕ್ಕಿ ಕೊಂದ ಭೂಮಾಲೀಕರು 

ಕರಾಚಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿ 23 ವರ್ಷದ ಹಿಂದೂ ರೈತನೊಬ್ಬ ತನ್ನ ಜಮೀನಿನಲ್ಲಿ ಆಶ್ರಯ ಮನೆ ನಿರ್ಮಿಸಿದ್ದಕ್ಕಾಗಿ ಆತನ ಮನೆ ಮಾಲೀಕರು ಗುಂಡಿಕ್ಕಿ ಕೊಂದಿದ್ದಾರೆ, ಇದು ಹಿಂದೂ ಸಮುದಾಯದಿಂದ ವ್ಯಾಪಕ ಪ್ರತಿಭಟನೆಗೆ ಎಂದು...

ದ್ವೇಷ ಭಾಷಣ ಮಸೂದೆ ರಾಜ್ಯಪಾಲರಿಂದ ತಿರಸ್ಕೃತವಾಗಿಲ್ಲ: ಸಿಎಂ ಸಿದ್ದರಾಮಯ್ಯ

ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಅದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಲ್ಲ, ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಭಾನುವಾರ (ಜ.11) ಮಂಗಳೂರಿನಲ್ಲಿ...

ಐಸಿಸ್ ಗುರಿ ಮಾಡಿ ಸಿರಿಯಾ ಮೇಲೆ ವೈಮಾನಿಕ ದಾಳಿ ನಡೆಸಿದ ಅಮೆರಿಕ

ಸಿರಿಯಾದ ಇಸ್ಲಾಮಿಕ್ ಸ್ಟೇಟ್ (ಐಎಸ್) ಗುಂಪಿನ ತಾಣಗಳ ಮೇಲೆ ಅಮೆರಿಕ ಮತ್ತು ಅದರ ಪಾಲುದಾರ ಪಡೆಗಳು ದೊಡ್ಡ ಪ್ರಮಾಣದ ದಾಳಿಗಳನ್ನು ನಡೆಸಿವೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ಘೋಷಿಸಿದೆ. ಡಿಸೆಂಬರ್ 13ರಂದು ಸಿರಿಯಾದಲ್ಲಿ...

ವೆನೆಜುವೆಲಾದ ತೈಲ ಖರೀದಿಗೆ ಅಮೆರಿಕದ ಅನುಮತಿ ಪಡೆಯಲು ರಿಲಯನ್ಸ್ ಮಾತುಕತೆ : ವರದಿ

ಭಾರತದ ರಿಲಯನ್ಸ್ ಇಂಡಸ್ಟ್ರೀಸ್ ವೆನೆಜುವೆಲಾದ ಕಚ್ಚಾ ತೈಲ ಖರೀದಿಯನ್ನು ಪುನರಾರಂಭಿಸಲು ಅಮೆರಿಕದ ಅನುಮೋದನೆಯನ್ನು ಕೋರುತ್ತಿದೆ ಎಂದು ಈ ವಿಷಯದ ಬಗ್ಗೆ ಗೊತ್ತಿರುವ ಎರಡು ಮೂಲಗಳು ಶುಕ್ರವಾರ ತಿಳಿಸಿವೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್...

ಐ-ಪ್ಯಾಕ್‌ ಮೇಲೆ ದಾಳಿ | ಇಡಿ ಅಧಿಕಾರಿಗಳ ವಿರುದ್ಧ ತನಿಖೆ ಪ್ರಾರಂಭಿಸಿದ ಕೋಲ್ಕತ್ತಾ ಪೊಲೀಸರು : ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ ಪ. ಬಂಗಾಳ ಸರ್ಕಾರ

ಐ-ಪ್ಯಾಕ್ ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದ ಸಂದರ್ಭದಲ್ಲಿ ದಾಖಲೆಗಳ ಕಳ್ಳತನದ ಆರೋಪದ ಮೇಲೆ ಕೋಲ್ಕತ್ತಾ ಪೊಲೀಸರು ಶನಿವಾರ (ಜ.10)...

ಟ್ರಂಪ್ ಸಂಚಿಗೆ ತಿರುಗೇಟು : ನಾವು ಯಾರ ಅಡಿಯಾಳಾಗಲು ಸಿದ್ದರಿಲ್ಲ ಎಂದ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು

ವೆನೆಜುವೆಲಾ ಬಳಿಕ ಖನಿಜ-ಸಮೃದ್ಧ ಡ್ಯಾನಿಶ್ (ಡೆನ್ಮಾರ್ಕ್‌) ಸ್ವಾಯತ್ತ ಪ್ರದೇಶವಾದ ಗ್ರೀನ್‌ ಲ್ಯಾಂಡ್‌ ಮೇಲೆ ಬಲಪ್ರಯೋಗ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಯೋಜಿಸುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗ್ರೀನ್‌ಲ್ಯಾಂಡ್‌ನ ರಾಜಕೀಯ ಪಕ್ಷಗಳು...

ಮತ್ತೆ ಒಂದಾದ ಎನ್‌ಸಿಪಿ ಬಣಗಳು : ಸುಪ್ರಿಯಾ ಸುಳೆ ಜೊತೆ ವೇದಿಕೆ ಹಂಚಿಕೊಂಡ ಅಜಿತ್ ಪವಾರ್, ಜಂಟಿ ಪ್ರಣಾಳಿಕೆ ಬಿಡುಗಡೆ

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ...

ಮಹಾರಾಷ್ಟ್ರ : ಲೈಂಗಿಕ ದೌರ್ಜನ್ಯ ಪ್ರಕರಣದ ಆರೋಪಿಯನ್ನು ಕೌನ್ಸಿಲರ್ ಮಾಡಿದ ಬಿಜೆಪಿ

ಬದ್ಲಾಪುರ ಲೈಂಗಿಕ ದೌರ್ಜನ್ಯ ಪ್ರಕರಣದ ಸಹ ಆರೋಪಿ ಮತ್ತು ಶಾಲೆಯೊಂದರ ಮಾಜಿ ಕಾರ್ಯದರ್ಶಿ ತುಷಾರ್ ಆಪ್ಟೆ ಎಂಬಾತನನ್ನು ಥಾಣೆ ಜಿಲ್ಲೆಯ ಕುಲ್ಗಾಂವ್-ಬದ್ಲಾಪುರ ಮುನ್ಸಿಪಲ್ ಕೌನ್ಸಿಲ್‌ಗೆ ಬಿಜೆಪಿ ನಾಮನಿರ್ದೇಶನ ಮಾಡಿದೆ. ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷೆ ರುಚಿತಾ...

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....