Homeಎಂಟರ್ತೈನ್ಮೆಂಟ್ಮಾಹಿತಿ ಹಕ್ಕು ಕಾಯಿದೆಯಡಿಯಲ್ಲಿ ನನಗೆ ವಿದ್ಯಾ ಬಾಲನ್ ಕೊಡಿ ಎಂದು ಕೇಳಬಹುದೇ?

ಮಾಹಿತಿ ಹಕ್ಕು ಕಾಯಿದೆಯಡಿಯಲ್ಲಿ ನನಗೆ ವಿದ್ಯಾ ಬಾಲನ್ ಕೊಡಿ ಎಂದು ಕೇಳಬಹುದೇ?

- Advertisement -
- Advertisement -

ಇತ್ತೀಚೆಗೆ ದೆಹಲಿ ಉಚ್ಛ ನ್ಯಾಯಾಲಯದಲ್ಲಿ ಇತ್ಯರ್ಥವಾದ ಪ್ರಕರಣವೊಂದರಲ್ಲಿ ಮಾಹಿತಿ ಅರ್ಜಿ ವಜಾಗೊಳಿಸಿದ ನ್ಯಾಯಾಧೀಶರು “ಮಾಡೆಲ್” ಎಂದ ಮಾತ್ರಕ್ಕೆ ಸರಕಾರದ ಎಲ್ಲಾ ಮಾಡೆಲ್‌ಗಳನ್ನೂ ಮಾಹಿತಿ ಹಕ್ಕು ಕಾಯಿದೆಯಡಿಯಲ್ಲಿ ನೀಡಲು ಬರುವುದಿಲ್ಲ ಎಂದು ಸ್ಪಷ್ಟಗೊಳಿಸಿರುತ್ತಾರೆ.

2018ರಲ್ಲಿ ರಝಾಕ್ ಕೆ. ಹೈದರ್ ಎನ್ನುವವರು ಕೇಂದ್ರ ಚುನಾವಣೆ ಆಯೋಗಕ್ಕೆ ಮಾಹಿತಿ ಕೋರಿ ಅರ್ಜಿ ಸಲ್ಲಿಸಿ ತಮಗೆ ಒಂದು ಎಲೆಕ್ಟ್ರಾನಿಕ್ ವೋಟಿಂಗ್ ಮಶೀನನ್ನು ನೀಡಬೇಕೆಂದು ಮತ್ತು ಅದಕ್ಕೆ ತಗಲುವ ವೆಚ್ಚ ಭರಿಸುವುದಾಗಿ ಕೇಳಿಕೊಂಡಿದ್ದರು. ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ ನಮ್ಮಲ್ಲಿ ಯಾವುದೇ ಯಂತ್ರ ಇಲ್ಲ, ನಮ್ಮ ಕಚೇರಿಯಲ್ಲಿರುವುದು ಕೇವಲ ಅದರ ಪ್ರತಿರೂಪ (ಮಾಡೆಲ್) ಮಾತ್ರ, ಅದನ್ನು ನಾವು ಅಧಿಕಾರಿಗಳ ತರಬೇತಿಗೆ ಬಳಸುತ್ತೇವೆ ಎಂದು ಜಾಣತನದ ಉತ್ತರ ನೀಡಿದ್ದರು. ಉತ್ತರದಿಂದ ಸಂತೃಪ್ತರಾಗದ ಹೈದರ್ ಪ್ರಥಮ ಮೇಲ್ಮನವಿ ದಾಖಲಿಸಿದರು. ಮೇಲ್ಮನವಿ ಪ್ರಾಧಿಕಾರ ಅದೇ ಉತ್ತರವನ್ನು ಎತ್ತಿ ಹಿಡಿಯಿತು. ಅದರಿಂದ ಬೇಸತ್ತ ಹೈದರ್ ಕೇಂದ್ರ ಮಾಹಿತಿ ಆಯೋಗಕ್ಕೆ ಎರಡನೆಯ ಮೇಲ್ಮನವಿ ಸಲ್ಲಿಸಿದರು.

2019ರಲ್ಲಿ ವಿಚಾರಣೆ ಕೈಗೆತ್ತಿಕೊಂಡ ಕೇಂದ್ರ ಮಾಹಿತಿ ಆಯೋಗವು, ಕಾಯಿದೆಯ ಸೆಕ್ಷನ್ 2(ಎಫ್) ಪ್ರಕಾರ ಸರಕಾರದಲ್ಲಿರುವ “ಮಾಡೆಲ್” ಸಹ ಮಾಹಿತಿ ಆಗುತ್ತದೆ ಎಂಬ ಅರ್ಜಿದಾರರ ವಾದವನ್ನು ಒಪ್ಪಿತು. ಆದರೆ ಸರಕಾರದ ಪರವಾಗಿ ವಾದಿಸಿದ ಮಾಹಿತಿ ಅಧಿಕಾರಿ ಯಂತ್ರದಲ್ಲಿರುವ ತಂತ್ರಾಶ (ಸಾಫ್ಟ್ವೇರ್) ಭೌದ್ಧಿಕ ಆಸ್ತಿಯಾಗಿದ್ದು ಅದನ್ನು ಯಾರಿಗೂ ನೀಡಲು ಸಾಧ್ಯವಿಲ್ಲ ಎಂದರು. ಅರ್ಜಿ ವಿಲೇವಾರಿಗೊಳಿಸಿದ ಆಯೋಗ ಅರ್ಜಿದಾರರಿಗೆ ನಾಲ್ಕು ವಾರದೊಳಗೆ ಮಾಹಿತಿ ಹಕ್ಕು ಕಾಯಿದೆಯಡಿಯಲ್ಲಿ ಸಮಂಜಸ ಉತ್ತರ ನೀಡುವಂತೆ ಆದೇಶಿಸಿತು.

ಅಷ್ಟಕ್ಕೇ ಬಿಡದ ಅರ್ಜಿದಾರ ಹೈಕೋರ್ಟ್ ಮೆಟ್ಟಿಲೇರಿ ರಿಟ್ ಅರ್ಜಿ ದಾಖಲಿಸಿದರು. ಇತ್ತೀಚೆಗೆ ಅರ್ಜಿ ವಿಚಾರಣೆ ನಡೆಸಿದ ಸಾರ್ವಜನಿಕ ಪ್ರಾಧಿಕಾರ ಒಂದು ವಸ್ತುವನ್ನು ದಾಖಲೆ ಮತ್ತು ಪ್ರತಿರೂಪ ಎಂದು ಒಪ್ಪಿಕೊಂಡ ಮಾತ್ರಕ್ಕೆ ಅದನ್ನು ಸಾರ್ವಜನಿಕರಿಗೆ ನೀಡಲು ಬರುವುದಿಲ್ಲ. ಆಕ್ಸ್ಫರ್ಡ್ ಶಬ್ದಕೋಶದ ವಿವರಣೆ ನೀಡುತ್ತಾ “ಮಾಡೆಲ್” ಎಂದರೆ ಒಂದು ವಸ್ತುವಿನ “ಸೂಕ್ಷ್ಮಾಕಾರಕ್ಕೆ ಇಳಿಸಿದ ಪ್ರತಿರೂಪ” ಆಗುತ್ತದೆಯೇ ವಿನಃ ವಸ್ತುವೇ “ಮಾಡೆಲ್” ಆಗುವುದಿಲ್ಲ ಎಂದು ನ್ಯಾಯಾಧೀಶ ಜಯಂತ್ ನಾಥ್ ತೀರ್ಪು ನೀಡಿ ಅರ್ಜಿಯನ್ನು ವಜಾ ಗೊಳಿಸಿರುತ್ತಾರೆ.

ಹಾಗಾಗಿ ಸರಕಾರ ಸ್ವಚ್ಛ ಭಾರತ್ ಅಭಿಯಾನದ “ಮಾಡೆಲ್” ಆಗಿದ್ದ ವಿದ್ಯಾ ಬಾಲನ್, ಅಮಿತಾಭ್ ಬಚ್ಚನ್ ಅಥವಾ ಇತೀಚಿನ ಅನುಶ್ಕ ಶರ್ಮ ಅವರನ್ನು ಯಾರೂ ಮಾಹಿತಿ ಹಕ್ಕು ಕಾಯಿದೆಯಡಿ ನಮಗೆ ಕೊಡಿ ಎಂದು ಕೇಳಲು ಬರುವುದಿಲ್ಲ. ನಿಮ್ಮನ್ನು ನಿರಾಶೆಗೊಳಿಸಿದಕ್ಕಾಗಿ ಕ್ಷಮೆ ಇರಲಿ..

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

‘ಸಾರ್ವಜನಿಕರ ಮೇಲೆ ಸವಾರಿ ಮಾಡಲು ಬಿಡುವುದಿಲ್ಲ..’; ತಪ್ಪುದಾರಿಗೆಳೆಯುವ ಜಾಹೀರಾತುಗಳ ವಿರುದ್ಧ ಸುಪ್ರೀಂ ಕಿಡಿ

0
"ಸಾರ್ವಜನಿಕರ ಮೇಲೆ ಸವಾರಿ ಮಾಡಲು ನಾವು ಬಿಡುವುದಿಲ್ಲ" ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಹೇಳಿದ್ದು, ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ಎದುರಿಸಲು ತಾವು ಸಕ್ರಿಯರಾಗಿರಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳಳಿಗೆ ಸೂಚನೆ ನೀಡಿದೆ. 1945ರ...