ತಮ್ಮ ವಿರುದ್ಧ ಅವಹೇಳನಕಾರಿ ಸುಳ್ಳು ಸುದ್ದಿ ಪ್ರಕಟಿಸಿದ್ದಾರೆ ಎಂದು ಆರೋಪಿಸಿ ಚಿತ್ರನಟ, ಬಿಜೆಪಿ ಮುಖಂಡ ಜಗ್ಗೇಶ್ ವಿರುದ್ಧ ಯೂತ್ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ರಾಜ್ಯ ಉಸ್ತುವಾರಿ ಸಂದೀಪ್ ಅಣಬೇರುರವರು ಬನಶಂಕರಿ ಪೊಲೀಸ್ ಠಾಣೆಯ ಸೈಬರ್ ಕ್ರೈಂ ವಿಭಾಗದಲ್ಲಿ ದೂರು ದಾಖಲಿಸಿದ್ದಾರೆ.
ಕಾರಣವೇನು?
ಕೊರೊನಾ ವೈರಸ್ ಸಾಂಕ್ರಾಮಿಕ ತಡೆಗಟ್ಟುವ ಹಿನ್ನೆಲೆಯಲ್ಲಿ ಶನಿವಾರದಿಂದ ರಾಜ್ಯದಲ್ಲಿ 33 ಗಂಟೆಗಳ ಲಾಕ್‌ಡೌನ್ ಕರ್ಫ್ಯೂ ವಿಧಿಸಿದ್ದು ಸರಿಯಷ್ಟೇ. ಈ ಹಿನ್ನೆಲೆಯಲ್ಲಿ ಬೆಂಗಳೂರು ತೊರೆದು ಸಾವಿರಾರು ಮಂದಿ ತಮ್ಮ ಹಳ್ಳಿಗಳಿಗೆ ಹಿಂತಿರುತ್ತಿದ್ದುದು ಸರಿಯಷ್ಟೇ. ಈ ಸಮಯದಲ್ಲಿ ಆನ್‌ಲೈನ್ ವಾಹಿನಿಯೊಂದು ಹಳ್ಳಿಗೆ ಹಿಂತಿರುಗುತ್ತಿದ್ದ ಜನರನ್ನು ಮಾತಾಡಿಸಿತ್ತು. ಆ ಸಂದರ್ಭದಲ್ಲಿ ಚಿಕ್ಕಮಗಳೂರಿನ ಕಿಶೋರ್ ಎಂಬ ಯುವಕನೊಬ್ಬ ಕೊರೊನಾ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರದ ವಿಫಲತೆಯನ್ನು ಪ್ರಶ್ನಿಸಿ ಮಾತನಾಡಿದ್ದನು.
ಕೊರೋನಾ ರೋಗ ನಿಯಂತ್ರಿಸುವಲ್ಲಿ ಸರ್ಕಾರ ವಿಫಲ ಆಗಿಲ್ಲ… ಜನ ಸಾಮಾನ್ಯರು ರಾಜ್ಯ ಬಿಜೆಪಿ ಸರಕಾರ ಆಡಳಿತದ ಬಗ್ಗೆ ಎನ್ ಹೇಳತ್ತಾ ಇದ್ದಾರೆ….ಬಿಜೆಪಿ ಸರಕಾರದ ಬಗ್ಗೆ ತಮ್ಮ ಅನಿಸಿಕೆ ತಿಳಿಸಿ ತಪ್ಪದೇ ನೋಡಿ ಶೇರ್ ಮಾಡಿ..
Posted by ರಾಜಶೇಖರ ಎಸ್ ಅಂಗಡಿ on Saturday, July 4, 2020
ಕೊರೊನಾ ಟೆಸ್ಟ್‌ಗೆ 4 ಸಾವಿರ ತಗುಲುತ್ತಿದೆ. ಬಡಜನರು ಹೇಗೆ ಭರಿಸಬೇಕೆಂದು ಪ್ರಶ್ನಿಸಿ ರಾಜ್ಯ ಸರ್ಕಾರವನ್ನು ಟೀಕಿಸಿದ್ದರು.
ಆ ಯುವಕ ಕಾಂಗ್ರೆಸ್‌ನವನು ಎಂದು ಜಗ್ಗೇಶ್ ಆರೋಪಿಸಿದ್ದರು. “ಕಾಂಗ್ರೆಸ್ಸಿನ ಸೋಶಿಯಲ್ ಮಿಡಿಯಾದ ಉಸ್ತುವಾರಿಯೊಬ್ಬ ಜಿಪ್ಸಿ ವ್ಯಾನಿನಲ್ಲಿ ಬಂದು ತಾನು 15 ಸಾವಿರ ಸಂಬಳ ಪಡೆಯುವ ವಲಸೆ ಕಾರ್ಮಿಕನಂತೆ ಮಾತನಾಡಿ, ಬಿಜೆಪಿಯನ್ನು ತೆಗಳಿ, ಹಳ್ಳಿಗೆ ಹೋಗುವವನಂತೆ ನಟಿಸಿದ್ದಾರೆ” ಎಂದು ಬರೆದಿರುವ ಪೋಸ್ಟರ್ ಅನ್ನು ಜಗ್ಗೇಶ್ ತಮ್ಮ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದರು.
ಮೊನ್ನೆ ಊರು ಬಿಟ್ಟು ಹೋಗುವವನು ನನಗೆ ಪಟ್ಟಣ ಹಾಗು ಭಾಜಪ ಸರ್ಕಾರ ಸಹವಾಸ ಸಾಕು ಊರಿಗೆ ಹೋಗಿ ಜಮೀನಿನಲ್ಲಿ ಜೀವನಮಾಡುವೆ ಎಂದು ಬಿಟ್ಟ!ಅದು viralಆಯಿತು!ಈಗ ನೋಡಿದರೆ
ಈತ well planed!ಅನ್ಯ ಪಕ್ಷದ ಕಾರ್ಯಕರ್ತ!ಆದರು ಸಹೋದರ
ಎಷ್ಟೆ ಯತ್ನಿಸಿದರು @narendramodi @BJP4India @BJP4Karnataka ಜನರ ಮನಸ್ಸಲ್ಲಿ ಜಾಗಪಡೆದಿದೆ!
ಜೈಹಿಂದ್! pic.twitter.com/KMABRKdTtS— ನವರಸನಾಯಕ ಜಗ್ಗೇಶ್ (@Jaggesh2) July 5, 2020
ಅಲ್ಲದೇ “ಮೊನ್ನೆ ಊರು ಬಿಟ್ಟು ಹೋಗುವವನು ನನಗೆ ಪಟ್ಟಣಹಾಗೂ ಭಾಜಪ ಸರ್ಕಾರ ಸಹವಾಸು ಸಾಕು ಊರಿಗೆ ಹೋಗಿ ಜಮೀನಿನಲ್ಲಿ ಜೀವನ ಮಾಡುವೆ ಎಂದುಬಿಟ್ಟ! ಅದು ವೈರಲ್ ಆಯಿತು! ಈಗ ನೋಡಿದರೆ ಆತ ವೆಲ್ ಪ್ಲಾನ್ಡ್! ಅನ್ಯ ಪಕ್ಷದ ಕಾರ್ಯಕರ್ತ! ಆದರೂ ಸಹೋದರ ಎಷ್ಟೇ ಯತ್ನಿಸಿದರು ನರೇಂದ್ರ ಮೋದಿ ಮತ್ತು ಬಿಜೆಪಿಯು ಜನರ ಮನಸ್ಸಿನಲ್ಲಿ ಜಾಗಪಡೆದಿದೆ. ಜೈ ಹಿಂದ್!” ಎಂದು ಜಗ್ಗೇಶ್ ಬರೆದಿದ್ದಾರೆ.
ವಿಡಿಯೋಗೂ ಕಾಂಗ್ರೆಸ್‌ಗೂ ಸಂಬಂಧವಿಲ್ಲ!
ಆ ವಿಡಿಯೋದಲ್ಲಿ ಮಾತನಾಡಿರುವ ವ್ಯಕ್ತಿ ಬೇರೆ, ನಾನು ಬೇರೆ. ಆದರೆ ಬಿಜೆಪಿ ಐಟಿ ಸೆಲ್ ಫೋಟೊಶಾಪ್ ಮಾಡಿ ನಾನೇ ಆ ವಿಡಿಯೋ ಮಾಡಿ ನಾಟಕ ಮಾಡಿದ್ದೇನೆ ಎಂದು ದುರುದ್ದೇಶಪೂರಿತ ಸುಳ್ಳು ಹರಡಿದ್ದಾರೆ. ಅದನ್ನೇ ಚಿತ್ರನಟ ಜಗ್ಗೇಶ್ ಟ್ವಿಟ್ಟರ್‌ನಲ್ಲಿ ಹಂಚಿಕೊಂಡು ಮಾನಹಾನಿ ಮಾಡಿದ್ದಾರೆ. ಅವರಿಗೆ ಪರಿಶೀಲಿಸುವ ಕನಿಷ್ಠ ಸಾಮಾನ್ಯ ಜ್ಞಾನವಿಲ್ಲ. ಬೇಕೆಂತಲೇ ಸುಳ್ಳು ಹರಡಿರುವುದಕ್ಕೆ ದೂರು ದಾಖಲಿಸಿದ್ದೇನೆ ಎಂದು ಯೂತ್ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ರಾಜ್ಯ ಉಸ್ತುವಾರಿ ಸಂದೀಪ್ ಅಣಬೇರು ತಿಳಿಸಿದ್ದಾರೆ.
ಜಗ್ಗೇಶ್ ವಿರುದ್ಧ ದೂರು ದಾಖಲಿಸಿದ ಯುವ ಕಾಂಗ್ರೆಸ್ ನಾಯಕ ಸಂದೀಪ್ಬೆಂಗಳೂರು: ಜಗ್ಗೇಶ್ ವಿರುದ್ಧ ಯುವ ಕಾಂಗ್ರೆಸ್ ನಾಯಕ ಸಂದೀಪ್ ಅಣಬೇರು…
Posted by Malgudi Express on Monday, July 6, 2020
ಈ ಕೂಡಲೇ ಜಗ್ಗೇಶ್‌ರವರು ತಮ್ಮ ದಿಕ್ಕುತಪ್ಪಿಸುವ ಟ್ವೀಟ್ ಅನ್ನು ಡಿಲೀಟ್ ಮಾಡಿ ರಾಜ್ಯದ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಎಲ್ಲಾ ಜಿಲ್ಲೆಗಳಲ್ಲಿಯೂ ದೂರು ದಾಖಲಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಇಷ್ಟೆಲ್ಲಾ ಘಟನೆಗಳು ಜರುಗುತ್ತಿದ್ದಂತೆ ಮೂಲ ವಿಡಿಯೋದಲ್ಲಿ ಮಾತನಾಡಿದ್ದ ಯುವಕ ಕಿಶೋರ್ ಚಿಕ್ಕಮಗಳೂರಿನಿಂದಲೇ ಮತ್ತೊಂದು ವಿಡಿಯೋ ಮಾಡಿ ಪೋಸ್ಟ್ ಮಾಡಿದ್ದಾರೆ. ಆ ವಿಡಿಯೋದಲ್ಲಿ ಮಾತನಾಡಿರುವುದು ನಾನೇ. ಆ ಮಾತುಗಳಿಗೆ ನಾನು ಈಗಲೂ ಬದ್ಧನಾಗಿದ್ದೇನೆ. ವಾಸ್ತವ ಮರೆಸಲು ಬಿಜೆಪಿ ಐಟಿ ಸೆಲ್ ಸುಳ್ಳು ಸುದ್ದಿಗಳನ್ನು ಹರಡುತ್ತಿದೆ. ಜನರ ಜೀವನಕ್ಕಿಂತ ಅದಕ್ಕೆ ರಾಜಕೀಯ ಅಧಿಕಾರವೇ ಹೆಚ್ಚು ಎಂದು ಅವರು ವಿಡಿಯೋದಲ್ಲಿ ಟೀಕಿಸಿದ್ದಾರೆ.
ಕೀಶೋರ್ ಮಾಡಿರುವ ವಿಡಿಯೋ ನೋಡಿ.
ನಿಮ್ಮ ಕಣ್ಣುಗಳನ್ನು ಬಿಟ್ಟು ಈ ವಿಡಿಯೋ ನೋಡಿಕೊಳ್ಳಿ..Lingarajendra Kattimani
Posted by ರಾಜಶೇಖರ ಎಸ್ ಅಂಗಡಿ on Monday, July 6, 2020
ಇದನ್ನೂ ಓದಿ: ವೈದ್ಯಕೀಯ ಸಾಮಗ್ರಿಗಳ ಖರೀದಿಯಲ್ಲಿ ಅಕ್ರಮಗಳು ನಡೆದಿದೆ ಎಂಬುದು ಸುಳ್ಳು: ಯಡಿಯೂರಪ್ಪ


