Homeಅಂತರಾಷ್ಟ್ರೀಯಬುಬೋನಿಕ್ ಪ್ಲೇಗ್: ಚೀನಾದಲ್ಲಿ ಪತ್ತೆಯಾದ ಮತ್ತೊಂದು ಸೋಂಕು

ಬುಬೋನಿಕ್ ಪ್ಲೇಗ್: ಚೀನಾದಲ್ಲಿ ಪತ್ತೆಯಾದ ಮತ್ತೊಂದು ಸೋಂಕು

ಹೆಗ್ಗಣದಂತಹ ಪ್ರಾಣಿಗಳ ಮೈಮೇಲಿರುವ ಚಿಗಟಗಳಿಂದ ಬ್ಯಾಕ್ಟೀರಿಯಾಗಳು ಮನುಷ್ಯನಿಗೆ ರವಾನೆಯಾಗಿ ಆ ಮೂಲಕ ಸೋಂಕು ಹರಡುತ್ತದೆ ಎನ್ನಲಾಗುತ್ತಿದೆ.

- Advertisement -
- Advertisement -

ಕೊರೊನಾ ವೈರಸ್‌ನ ಆರಂಭ ಸ್ಥಳ ಎಂದು ಕರೆಯಲ್ಪಡುವ ಚೀನಾದಲ್ಲಿ ಈಗ ಮತ್ತೊಂದು ಸಾಂಕ್ರಮಿಕ ರೋಗವಾದ ’ಬುಬೋನಿಕ್ ಪ್ಲೇಗ್’ ಪತ್ತೆಯಾಗಿದೆ ಎಂದು ಬಿಬಿಸಿ ವರದಿ ಮಾಡಿದೆ.

ಚೀನಾದ ಸ್ವಾಯತ್ತ ಪ್ರದೇಶವಾದ ಇನ್ನರ್ ಮಂಗೋಲಿಯಾದ ಒಳಭಾಗದಲ್ಲಿ ಬುಬೋನಿಕ್ ಪ್ಲೇಗ್ ಸಾಂಕ್ರಾಮಿಕ ಪತ್ತೆಯಾಗಿದ್ದು, ಜನರಲ್ಲಿ ಭಯವನ್ನು ಉಂಟುಮಾಡಿದೆ. ಇದನ್ನು ಅನುಸರಿಸಿ ಚೀನಾ ಸರ್ಕಾರ ಹಲವಾರು ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡಿದೆ ಎಂದು ವರದಿಯಾಗಿದೆ.

ಪ್ಲೇಗ್ ಹರಡುವ ಸಾಧ್ಯತೆ ಇರುವುದರಿಂದ ಲೆವೆಲ್ 3 ಅಲರ್ಟ್ ಹೊರಡಿಸಲಾಗಿದೆ. ಈ ಪ್ಲೇಗ್ ಕಾಯಿಲೆಗೆ ಬ್ಯಾಕ್ಟೀರಿಯಾಗಳು ಕಾರಣವಾಗುತ್ತವೆ. ಹೆಗ್ಗಣದಂತಹ ಪ್ರಾಣಿಗಳ ಮೈಮೇಲಿರುವ ಚಿಗಟಗಳಿಂದ ಬ್ಯಾಕ್ಟೀರಿಯಾಗಳು ಮನುಷ್ಯನಿಗೆ ರವಾನೆಯಾಗಿ ಆ ಮೂಲಕ ಸೋಂಕು ಹರಡುತ್ತದೆ ಎನ್ನಲಾಗುತ್ತಿದೆ.

21ನೇ ಶತಮಾನಕ್ಕೂ ಮುನ್ನ ಇಡೀ ವಿಶ್ವವನ್ನೇ ಅತಿ ಹೆಚ್ಚು ಬಾಧಿಸಿದ್ದ ಸಾಂಕ್ರಾಮಿಕ ಕಾಯಿಲೆಗಳಲ್ಲಿ ಪ್ಲೇಗ್ ಮತ್ತು ಕಾಲರಾ ಪ್ರಮುಖವಾದವು. ಸೆಪ್ಟಿಸೆಮಿಕ್ ಪ್ಲೇಗ್ ನ್ಯೂಮೋನಿಕ್ ಪ್ಲೇಗ್ ಮತ್ತು ಈಗ ಚೀನಾದಲ್ಲಿ ಪತ್ತೆಯಾದ ಬುಬೋನಿಕ್ ಪ್ಲೇಗ್ ಸೇರಿ ಪ್ಲೇಗ್‌ನಲ್ಲಿ ಒಟ್ಟು ಮೂರು ವಿಧಗಳಿವೆ.

ಯೆರ್ಸಿನಿಯಾ ಪೆಸ್ಟ್ಸ್ (Yersinia Pests) ಎಂದು ಹೆಸರಿಲಾಗಿರುವ ಬ್ಯಾಕ್ಟೀರಿಯಾಗಳು ಬುಬೋನಿಕ್ ಪ್ಲೇಗ್ ಕಾಯಿಲೆಗೆ ಕಾರಣವಾಗುತ್ತವೆ. ನ್ಯೂಮೋನಿಕ್ ಪ್ಲೇಗ್ ಗಾಳಿಯಲ್ಲು ಹರಡುವುದರಿಂದ ಬಹಳ ಅಪಾಯಕಾರಿ ಎನ್ನಲಾಗಿದೆ. ಆದರೆ, ಬುಬೋನಿಕ್ ಪ್ಲೇಗ್ ಮುಖ್ಯವಾಗಿ ಚಿಗಟಗಳ ಮೂಲಕ ಮನುಷ್ಯರಿಗೆ ರವಾನೆಯಾಗುತ್ತದೆ. ಸೋಂಕಿತ ಮನುಷ್ಯನ ಎಂಜಲು, ಗೊಣ್ಣೆ, ಕಫ, ರಕ್ತ ಇತ್ಯಾದಿ ಸಂಪರ್ಕದ ಮೂಲಕವೂ ಮತ್ತೊಬ್ಬರಿಗೆ ಹರಡುತ್ತದೆ. ಸೋಂಕಿತ ಹೆಗ್ಗಣದ ಮಾಂಸ ತಿಂದವರಿಗೂ ಸೋಂಕು ತಗುಲುತ್ತದೆ.

ಚೀನಾದ ಇನ್ನರ್ ಮಂಗೋಲಿಯಾದ ಕುರಿ ಕಾಯುವ ಒಬ್ಬರಲ್ಲಿ ಪ್ರಸ್ತುತ ಈ ಸೋಂಕು ಇರುವುದು ಪತ್ತೆಯಾಗಿದೆ. ಸೋಂಕಿನ ಕಾರಣವನ್ನು ಇನ್ನೂ ಗುರುತಿಸಲಾಗಿಲ್ಲವಾದರೂ, ರೋಗಿಯು ಪ್ರತ್ಯೇಕವಾಗಿದ್ದಾರೆ ಹಾಗೂ ಆರೋಗ್ಯವಾಗಿದ್ದಾರೆ ಎಂದು ಚೀನಾ ಸರ್ಕಾರ ವರದಿ ಮಾಡಿದೆ.


ಓದಿ: ಬಹುಜನ ಭಾರತ: ಅರುಣಾಚಲದ ಮೇಲೆ ಚೀನಾ ಕಣ್ಣು?


 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ನನ್ನ ತಾಯಿ ದೇಶಕ್ಕಾಗಿ ಮಂಗಳಸೂತ್ರವನ್ನು ತ್ಯಾಗ ಮಾಡಿದ್ದಾರೆ: ಪ್ರಿಯಾಂಕ ಗಾಂಧಿ

0
'ನನ್ನ ತಾಯಿ ದೇಶಕ್ಕಾಗಿ ಮಂಗಳಸೂತ್ರವನ್ನು ತ್ಯಾಗ ಮಾಡಿದ್ದಾರೆ' ಮತ್ತು 'ನನ್ನ ಅಜ್ಜಿ ಆಡಳಿತದಲ್ಲಿ ದೇಶದ ಯುದ್ಧಕ್ಕಾಗಿ ತಮ್ಮ ಚಿನ್ನವನ್ನು ದಾನ ಮಾಡಿದ್ದಾರೆ' ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಹೇಳಿದ್ದು, ಪ್ರಧಾನಿ...