Homeಮುಖಪುಟ2019ರ ಲೋಕಸಭೆ ಚುನಾವಣೆಯಲ್ಲಿ ಸುಳ್ಳುಸುದ್ದಿಗಳು ಹೆಚ್ಚಾಗಿದ್ದವು: ಫೇಸ್‌ಬುಕ್‌

2019ರ ಲೋಕಸಭೆ ಚುನಾವಣೆಯಲ್ಲಿ ಸುಳ್ಳುಸುದ್ದಿಗಳು ಹೆಚ್ಚಾಗಿದ್ದವು: ಫೇಸ್‌ಬುಕ್‌

- Advertisement -
- Advertisement -

2019ರ ಫೆಬ್ರುವರಿಯಲ್ಲಿ ಹೇಗೆ ಭಾರತದಲ್ಲಿ ಫೇಕ್‌ನ್ಯೂಸ್‌ಗಳು ಶರವೇಗದಲ್ಲಿ ಹರಿದಾಡಿವೆ ಎಂದು ಫೇಸ್‌ಬುಕ್‌ ಹೇಳಿಕೊಂಡಿದೆ. ಕೇವಲ 21 ದಿನಗಳಲ್ಲಿ ಭಾರತದಲ್ಲಿ ಆಲ್ಗರಿದಂ ಹೇಗೆ ವೇಗವಾಗಿ ಬೆಳೆದಿತ್ತು ಎಂಬುದನ್ನು ಫೇಸ್‌ಬುಕ್‌ ಸಂಸ್ಥೆ ಪರಿಶೀಲಿಸಿದ್ದು, ಫೇಸ್‌ಬುಕ್‌ ಸಿಬ್ಬಂದಿ ದಿಗ್ಭ್ರಾಂತರಾಗಿದ್ದಾರೆ ಎನ್ನಲಾಗಿದೆ.

ಕೇವಲ ಮೂರು ವಾರಗಳಲ್ಲಿ ಹೊಸ ಬಳಕೆದಾರರು ಸುಳ್ಳು ಸುದ್ದಿಗಳನ್ನು, ಪ್ರಚೋದನಕಾರಿ ಚಿತ್ರಗಳನ್ನು ಅತಿ ಹೆಚ್ಚು ಹಂಚಿಕೊಂಡಿದ್ದಾರೆ. ಶಿರಚ್ಛೇದದ ಗ್ರಾಫಿಕ್‌ ಫೋಟೋಗಳು, ಪಾಕಿಸ್ತಾನದ ಮೇಲೆ ಭಾರತದ ನಡೆಸಿದೆ ಎನ್ನಲಾದ ವೈಮಾನಿಕ ದಾಳಿಯ, ಹಿಂಸಾಕೃತ್ಯದ ಗ್ರಾಫಿಕ್‌ ಫೋಟೋಗಳನ್ನು ಹರಿಬಿಡಲಾಯಿತು. ಪಾಕಿಸ್ತಾನದಲ್ಲಿ 300 ಭಯೋತ್ಪಾದಕರನ್ನು ಕೊಲ್ಲಲಾಗಿದೆ ಎಂಬ ನಕಲಿ ಸುದ್ದಿಯನ್ನು ಹಂಚಿದ ಒಂದು ಗುಂಪು ನಿಮ್ಮನ್ನು ನಗಿಸುತ್ತದೆ ಎಂದು ಫೇಸ್‌ಬುಕ್‌ ಸಿಬ್ಬಂದಿ ಹೇಳಿದ್ದಾರೆ.

ವಿಷಲ್‌ಬ್ಲೋವರ್‌‌ (ನಕಲಿ ಖಾತೆಗಳನ್ನು ಪತ್ತೆ ಹಚ್ಚುವವವರು) ಫ್ರಾನ್ಸ್‌ ಹೌಗನ್‌ ನೀಡಿರುವ 46 ಪುಟಗಳ ಸಂಶೋಧನಾ ಟಿಪ್ಪಣಿಯಲ್ಲಿ, “ನನ್ನ ಜೀವಿತಾವಧಿಯಲ್ಲಿ ನೋಡಿರದಿದ್ದಷ್ಟು ಸತ್ತವರ ಫೋಟೋಗಳನ್ನು ಕೇವಲ ಮೂರು ವಾರಗಳಲ್ಲಿ ನೋಡಿದೆ” ಎಂದು ಸಿಬ್ಬಂದಿಯೊಬ್ಬರು ಹೇಳಿರುವುದನ್ನು ಉಲ್ಲೇಖಿಸಲಾಗಿದೆ.

ಇದನ್ನೂ ಓದಿರಿ: ಯೋಗೇಂದ್ರ ಯಾದವ್ ಅಮಾನತು: ಚಾರಿತ್ರಿಕ ರೈತ ಹೋರಾಟದ ವಿಶಿಷ್ಟ ಪ್ರಜಾತಂತ್ರ

ಟ್ರಯಲ್ ಖಾತೆಯು ಜೈಪುರದಲ್ಲಿ ವಾಸಿಸುವ ಮತ್ತು ಹೈದರಾಬಾದ್‌ನ 21 ವರ್ಷದ ಮಹಿಳೆಯ ಪ್ರೊಫೈಲ್ ಅನ್ನು ಬಳಸಿದೆ. ಬಳಕೆದಾರರು ಫೇಸ್‌ಬುಕ್‌ ಶಿಫಾರಸು ಮಾಡಿದ ಅಥವಾ ಆ ಶಿಫಾರಸುಗಳ ಮೂಲಕ ಕಾಣಿಸಿಕೊಂಡ ಪೇಜ್‌ಗಳನ್ನು, ಗುಂಪುಗಳನ್ನು ಮಾತ್ರ ಅನುಸರಿಸಿರುವುದು ತಿಳಿದುಬಂದಿದೆ. ಸಂಶೋಧನಾ ಟಿಪ್ಪಣಿಯ ಲೇಖಕರು ಈ ಅನುಭವವನ್ನು ‘ಸಮಗ್ರತೆಯ ದುಃಸ್ವಪ್ನ’ ಎಂದು ಕರೆದಿದ್ದಾರೆ.

ಕಂಪನಿಯ ಬೆಳವಣಿಗೆಯು ಭಾರತ, ಇಂಡೋನೇಷಿಯ, ಬ್ರೆಜಿಲ್‌ನಂತಹ ದೇಶದಲ್ಲಿ ಹೆಚ್ಚಾಗಿದೆ. ಅಲ್ಲಿ ಮೂಲಭೂತ ಮೇಲ್ವಿಚಾರಣೆಗೆ ಭಾಷಾ ಕೌಶಲ್ಯ ಹೊಂದಿರುವ ಜನರನ್ನು ನೇಮಿಸಿಕೊಳ್ಳಲು ಕಂಪನಿ ಹೆಣಗಾಡುತ್ತಿದೆ. 22 ಅಧಿಕೃತ ಭಾಷೆಗಳನ್ನು ಹೊಂದಿರುವ 1.3 ಬಿಲಿಯನ್ ಜನರಿರುವ ಭಾರತದಲ್ಲಿ ಈ ಸವಾಲು ವಿಶೇಷವಾಗಿ ತೀವ್ರವಾಗಿದೆ. ಫೇಸ್‌ಬುಕ್ ತನ್ನ ಪ್ಲಾಟ್‌ಫಾರ್ಮ್‌ನಲ್ಲಿನ ಕಂಟೆಂಟ್‌ನ ಉಸ್ತುವಾರಿಯನ್ನು ಆಕ್ಸೆಂಚರ್‌ನಂತಹ ಕಂಪನಿಗಳ ಗುತ್ತಿಗೆದಾರರಿಗೆ ಹೊರಗುತ್ತಿಗೆ ನೀಡುತ್ತದೆ.

“ಹಿಂದಿ ಮತ್ತು ಬಂಗಾಳಿ ಸೇರಿದಂತೆ ವಿವಿಧ ಭಾಷೆಗಳಲ್ಲಿ ದ್ವೇಷದ ಭಾಷಣವನ್ನು ಕಂಡುಹಿಡಿಯಲು ತಂತ್ರಜ್ಞಾನದ ಮೇಲೆ ನಾವು ಗಣನೀಯವಾಗಿ ಹೂಡಿಕೆ ಮಾಡಿದ್ದೇವೆ” ಎಂದು ಫೇಸ್‌ಬುಕ್ ವಕ್ತಾರರು ಹೇಳಿದ್ದಾರೆ. “ಪರಿಣಾಮವಾಗಿ ಜನರು ನೋಡುವ ದ್ವೇಷದ ಭಾಷಣದ ಪ್ರಮಾಣವನ್ನು ನಾವು ಈ ವರ್ಷ ಅರ್ಧದಷ್ಟು ಕಡಿಮೆ ಮಾಡಿದ್ದೇವೆ. ಇಂದು ಅದು ಶೇಕಡಾ 0.05 ಕ್ಕೆ ಇಳಿದಿದೆ” ಎಂದು ಕಂಪನಿ ಹೇಳಿಕೊಂಡಿದೆ.

“ಮುಸ್ಲಿಮರು ಸೇರಿದಂತೆ ಹಿಂದುಳಿದ ಗುಂಪುಗಳ ವಿರುದ್ಧ ದ್ವೇಷ ಭಾಷಣವು ಜಾಗತಿಕವಾಗಿ ಹೆಚ್ಚುತ್ತಿದೆ. ಆದ್ದರಿಂದ ನಾವು ನಿಯಮ ಜಾರಿಗೊಳಿಸುವಿಕೆಯನ್ನು ಸುಧಾರಿಸುತ್ತಿದ್ದೇವೆ. ದ್ವೇಷದ ಮಾತುಗಳು ಆನ್‌ಲೈನ್‌ನಲ್ಲಿ ಹುಟ್ಟಿಕೊಳ್ಳುವುತ್ತಿರುವುದರಿಂದ ನಮ್ಮ ನೀತಿಗಳನ್ನು ನವೀಕರಿಸಲು ಬದ್ಧರಾಗಿರುತ್ತೇವೆ” ಎಂದು ಫೇಸ್‌ಬುಕ್‌ ಹೇಳಿದೆ.

ವರದಿಯ ಪ್ರಕಾರ, ಹೊಸ ಬಳಕೆದಾರ ಪರೀಕ್ಷಾ ಖಾತೆಯನ್ನು ಫೆಬ್ರವರಿ 4, 2019ರಂದು ಸಂಶೋಧನಾ ತಂಡವು ಭಾರತದಲ್ಲಿ ಪ್ರವಾಸ ಕೈಗೊಂಡಿದ್ದ ಸಮಯದಲ್ಲಿ ರಚಿಸಲಾಗಿದೆ. ಪರೀಕ್ಷಾ ಬಳಕೆದಾರರು ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯವಾಗಿರುವ ಪೋಸ್ಟ್‌ಗಳನ್ನು ಒಳಗೊಂಡಂತೆ ಫೇಸ್‌ಬುಕ್ ಶಿಫಾರಸು ಮಾಡಿದ ವಿಷಯವನ್ನು ಅನ್ವೇಷಿಸಲು ಆರಂಭಿಸಿದರು.

ಫೆ .14ರಂದು ರಾಜಕೀಯವಾಗಿ ಸೂಕ್ಷ್ಮವಾಗಿರುವ ಕಾಶ್ಮೀರದ ಪುಲ್ವಾಮದಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 40 ಭಾರತೀಯ ಭದ್ರತಾ ಸಿಬ್ಬಂದಿ ಸಾವನ್ನಪ್ಪಿದರು. ಹತ್ತಾರು ಜನರು ಗಾಯಗೊಂಡರು. ಭಾರತ ಸರ್ಕಾರ ಈ ದಾಳಿಯನ್ನು ಪಾಕಿಸ್ತಾನದ ಭಯೋತ್ಪಾದಕ ಗುಂಪು ಮಾಡಿದೆ ಎಂದು ಹೇಳಿತು. ಶೀಘ್ರದಲ್ಲೇ ಪಾಕಿಸ್ತಾನದ ವಿರೋಧಿ ದ್ವೇಷದ ಮಾತಿನ ಸುರಿಮಳೆಯಾಯಿತು. ಇದರಲ್ಲಿ ಶಿರಚ್ಛೇದದ ಚಿತ್ರಗಳು ಮತ್ತು ಪಾಕಿಸ್ತಾನಿಯರ ಗುಂಪನ್ನು ಸೋಲಿಸಲು ಸಿದ್ಧತೆಗಳನ್ನು ತೋರಿಸುವ ಗ್ರಾಫಿಕ್ ಚಿತ್ರಗಳು ಒಳಗೊಂಡಿದ್ದವು.

ರಾಷ್ಟ್ರೀಯವಾದ ಸಂದೇಶಗಳು, ಪಾಕಿಸ್ತಾನದಲ್ಲಿ ಭಾರತದ ವಾಯುದಾಳಿಗಳ ಬಗ್ಗೆ ಉತ್ಪ್ರೇಕ್ಷಿತ ಹೇಳಿಕೆಗಳು, ಬಾಂಬ್ ಸ್ಫೋಟಗಳ ನಕಲಿ ಫೋಟೋಗಳು ಮತ್ತು ದಾಳಿಯಲ್ಲಿ ಹೊಸದಾಗಿ ಮದುವೆಯಾದ ಸೇನಾ ಸಿಬ್ಬಂದಿ ತನ್ನ ಕುಟುಂಬಕ್ಕೆ ಮರಳಲು ತಯಾರಿ ನಡೆಸುತ್ತಿದ್ದಾಗ ದಾಳಿಗೆ ತುತ್ತಾಗಿದ್ದನ್ನು ಬಿಂಬಿಸಲಾಗಿತ್ತು.


ಇದನ್ನೂ ಓದಿರಿ: ಯುಪಿ ಚುನಾವಣೆ: 10 ಲಕ್ಷ ರೂ.ವರೆಗೆ ಉಚಿತ ವೈದ್ಯಕೀಯ ಚಿಕಿತ್ಸೆ ಘೋಷಿಸಿದ ಪ್ರಿಯಾಂಕಾ ಗಾಂಧಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಜೈಲಿಗಟ್ಟಿದ ಪೊಲೀಸರು : ಸಂತ್ರಸ್ತಗೆ 14 ಲಕ್ಷ ರೂ. ಪರಿಹಾರ ನೀಡಲು ಕೋರ್ಟ್ ಆದೇಶ

ಕಳ್ಳನೆಂದು ಸುಳ್ಳಾರೋಪ ಹೊರಿಸಿ ಪೊಲೀಸರು ಜೈಲಿಗಟ್ಟಿದ ವ್ಯಕ್ತಿಗೆ 14 ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಕೇರಳ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ. ಕಣ್ಣೂರು ಮೂಲದ ವಿ.ಕೆ ತಾಜುದ್ದೀನ್ ಕಾನೂನು ಹೋರಾಟದಲ್ಲಿ ಗೆದ್ದು ಪರಿಹಾರ ಪಡೆದ ವ್ಯಕ್ತಿ....

ಇರಾನ್‌ನಲ್ಲಿ ತೀವ್ರಗೊಂಡ ಆಡಳಿತ ವಿರೋಧಿ ಪ್ರತಿಭಟನೆ : ಟ್ರಂಪ್ ಮಧ್ಯಪ್ರವೇಶ ಕೋರಿದ ಮಾಜಿ ದೊರೆಯ ಮಗ

ಇರಾನ್‌ನಲ್ಲಿ ಭುಗಿಲೆದ್ದಿರುವ ಆಡಳಿತ ವಿರೋಧಿ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿದೆ. 2025ರ ಡಿಸೆಂಬರ್ 28ರಂದು ಪ್ರಾರಂಭಗೊಂಡ ಪ್ರತಿಭಟನೆಗಳು ಹಿಂಸಾಚಾರ ರೂಪ ಪಡೆದುಕೊಂಡು 13ನೇ ದಿನವೂ ಮುಂದುವರಿದಿದೆ. ಆರ್ಥಿಕ ಬಿಕ್ಕಟ್ಟಿನ ವಿರುದ್ದ (ರಿಯಾಲ್ ಕರೆನ್ಸಿ ಮೌಲ್ಯ...

ಮತದಾರರ ಹೆಸರು ಅಳಿಸಲು ಯತ್ನ : ಬಿಜೆಪಿ ವಿರುದ್ಧ 5 ವಿಪಕ್ಷಗಳಿಂದ ದೂರು ದಾಖಲು

ಅಸ್ಸಾಂನ ಐದು ವಿರೋಧ ಪಕ್ಷಗಳು ಶುಕ್ರವಾರ (ಜ.9) ಪೊಲೀಸ್ ದೂರು ದಾಖಲಿಸಿದ್ದು, ಆಡಳಿತಾರೂಢ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ರಾಜ್ಯದ ಮತದಾರರ ಪಟ್ಟಿಯಿಂದ ಹೆಚ್ಚಿನ ಸಂಖ್ಯೆಯ ನಿಜವಾದ ಮತದಾರರ ಹೆಸರನ್ನು ಅಳಿಸಲು ಸಂಚು...

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...