ರೈತ ಪ್ರತಿಭಟನೆ ಕುರಿತು ಜಾಗತಿಕ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್‌ಬರ್ಗ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದ ‘ಟೂಲ್‌ಕಿಟ್’ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ 21 ವರ್ಷದ ಪರಿಸರ ಹೋರಾಟಗಾರ್ತಿ ದಿಶಾ ರವಿಯನ್ನು ದೆಹಲಿ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಇದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ದಿಶಾ ಅವರಿಗೆ ಜಾಗತಿಕ ಬೆಂಬಲ ವ್ಯಕ್ತವಾಗುತ್ತಿದೆ.
ಕಮಲಾ ಹ್ಯಾರಿಸ್ ಅವರ ಸಂಬಂಧಿ ಮತ್ತು ಅಮೆರಿಕದ ವಕೀಲೆ ಮೀನಾ ಹ್ಯಾರಿಸ್ ದಿಶಾ ರವಿಗೆ ಬೆಂಬಲ ಸೂಚಿಸಿದ್ದು, “ರೈತರ ಪ್ರತಿಭಟನೆಯನ್ನು ಹೇಗೆ ಬೆಂಬಲಿಸಬೇಕು ಎಂಬ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಟೂಲ್‌ಕಿಟ್ ಅನ್ನು ಹಂಚಿಕೊಂಡಿದ್ದರಿಂದ ಭಾರತೀಯ ಅಧಿಕಾರಿಗಳು ಮತ್ತೊಬ್ಬ ಯುವ ಮಹಿಳಾ ಕಾರ್ಯಕರ್ತೆ 21 ವರ್ಷದ ದಿಶಾ ರವಿ ಅವರನ್ನು ಬಂಧಿಸಿದ್ದಾರೆ. ಇಂತಹ ಹೋರಾಟಗಾರರನ್ನು ಸರ್ಕಾರ ಗುರಿಯಾಗಿಸಿಕೊಂಡು ಏಕೆ ಅವರ ಬಾಯಿಮುಚ್ಚಿಸುತ್ತಿದೆ ಎಂದು ಕೇಳಿ” ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ನನ್ನನ್ನು ಹೆದರಿಸೋಕೆ ನೋಟಿಸ್ ನೀಡಿದ್ದಾರೆ, ಫೆ. 21ರೊಳಗೆ ಹಿಂಪಡೆಯುತ್ತಾರಂತೆ: ಯತ್ನಾಳ್
Indian officials have arrested another young female activist, 21 yo Disha Ravi, because she posted a social media toolkit on how to support the farmers' protest. Read this thread about the sequence of events and ask why activists are being targeted and silenced by the government. https://t.co/ycUgDEqwdF
— Meena Harris (@meenaharris) February 14, 2021
ದಿಶಾ ರವಿಯವರಿಗೆ ಬಹುಭಾಷಾ ನಟ ಸಿದ್ದಾರ್ಥ್ ಬೆಂಬಲ ಸೂಚಿಸಿದ್ದು, “ದಿಶಾ ರವಿಯವರೊಂದಿಗೆ ಬೇಷರತ್ ನಿಲ್ಲುತ್ತೇವೆ. ನಿನಗೆ ಹೀಗಾಗಿರುವುದಕ್ಕೆ ನಮ್ಮನ್ನು ಕ್ಷಮಿಸು ಸಹೋದರಿ. ನಾವೆಲ್ಲರೂ ನಿನ್ನೊಂದಿಗೆ ಇದ್ದೇವೆ. ದೃಢವಾಗಿರು. ಈ ಅನ್ಯಾಯವೂ ಕಳೆದಹೋಗುತ್ತದೆ” ಎಂದು ಟ್ವೀಟ್ ಮಾಡಿದ್ದಾರೆ.
Standing unconditionally in solidarity and support with #DishaRavi. I'm so sorry this happened to you sister. We are all with you. Stay strong. This injustice too shall pass. #shameondelhipolice
— Siddharth (@Actor_Siddharth) February 14, 2021
ಇದನ್ನೂ ಓದಿ: ’ದೆಹಲಿ ಗಡಿಗಳಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯಾಟವನ್ನೂ ಸೆರೆಹಿಡಿಯಿರಿ’-ಮೋದಿಗೆ ನೆಟ್ಟಿಗರ ತರಾಟೆ
ರಾಜ್ಯ ಸಭಾ ಸಂಸದರಾದ ಜೈರಾಮ್ ರಮೇಶ್ ಅವರು ಟ್ವೀಟ್ ಮಾಡಿದ್ದು, “ಇದು ದೌರ್ಜನ್ಯದ ಪರಮಾವಧಿ. ಇದು ಕಾನೂನುಬಾಹಿರ ಕಿರುಕುಳ ಮತ್ತು ಬೆದರಿಕೆಯಾಗಿದೆ. ದಿಶಾ ರವಿಯವರಿಗೆ ನನ್ನ ಸಂಪೂರ್ಣ ಬೆಂಬಲವಿದೆ” ಎಂದು ಬರೆದುಕೊಂಡಿದ್ದಾರೆ.
Completely atrocious! This is unwarranted harassment and intimidation. I express my full solidarity with Disha Ravi. https://t.co/bRJOeC9MnK
— Jairam Ramesh (@Jairam_Ramesh) February 14, 2021
ಹಿರಿಯ ಕಾಂಗ್ರೆಸ್ ಮುಖಂಡ ಪಿ ಚಿದಂಬರಂ ಟ್ವೀಟ್ ಮಾಡಿ, “21 ವರ್ಷದ ದಿಶಾ ರವಿ ದೇಶಕ್ಕೆ ತೊಂದರೆಯುಂಟು ಮಾಡುತ್ತಾರೆ ಎನ್ನುವುದಾದರೆ, ದೇಶದ ಬುಡ ಗಟ್ಟಿಯಿಲ್ಲ ಎನಿಸುತ್ತದೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
The Indian state must be standing on very shaky foundations if Disha Ravi, a 22 year old student of Mount Carmel college and a climate activist, has become a threat to the nation
— P. Chidambaram (@PChidambaram_IN) February 14, 2021
ಇದನ್ನೂ ಓದಿ: ಬಿಜೆಪಿಗೆ ಅನುಕೂಲ ಮಾಡಿಕೊಡುವುದಿಲ್ಲ, ಮೂರೂ ಕ್ಷೇತ್ರದ ಉಪಚುನಾವಣೆಯಲ್ಲೂ ಸ್ಪರ್ಧೆ: ನಿರ್ಧಾರ ಬದಲಿಸಿದ HDK
ಸಿಪಿಐ ನ ಮುಖಂಡರಾದ ಸೀತಾರಾಂ ಯೆಚೋರಿ ಟ್ವೀಟ್ ಮಾಡಿ, “ರೈತರ ಮೊಮ್ಮಗಳನ್ನು ದೇಶದ್ರೋಹ ಪ್ರಕರಣದ ಅಡಿಯಲ್ಲಿ ಬಂಧಿಸಿದರೆ ಅದು ರೈತರ ಹೋರಾಟವನ್ನು ದುರ್ಬಲಗೊಳಿಸುತ್ತದೆ ಎಂದು ಮೋದಿ ಸರ್ಕಾರ ಎಣಿಸುತ್ತಿದೆ. ವಾಸ್ತವವಾಗಿ, ಇದು ದೇಶದ ಯುವಕರನ್ನು ಜಾಗೃತಗೊಳಿಸುತ್ತದೆ ಮತ್ತು ಪ್ರಜಾಪ್ರಭುತ್ವದ ಹೋರಾಟಗಳನ್ನು ಬಲಪಡಿಸುತ್ತದೆ” ಎಂದು ಕಿಡಿಕಾರಿದ್ದಾರೆ.
Modi regime thinks by arresting a grand daughter of farmers, under Sedition, it can weaken the farmers’ struggles.
In fact, it will awaken the youth of the country and strengthen the struggles for democracy. #DishaRavihttps://t.co/xRIK1BrU9s— Sitaram Yechury (@SitaramYechury) February 14, 2021
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿ, “ದಿಶಾ ರವಿಯ ಬಂಧನ ಪ್ರಜಾಪ್ರಭುತ್ವದ ಮೇಲಿನ ಅಸಾಂವಿಧಾನಿಕ ದಾಳಿಯಾಗಿದೆ. ರೈತರನ್ನು ಬೆಂಬಲಿಸುವುದು ಅಪರಾಧವಲ್ಲ” ಎಂದು ಬರೆದುಕೊಂಡಿದ್ದಾರೆ.
Arrest of 21 yr old Disha Ravi is an unprecedented attack on Democracy. Supporting our farmers is not a crime.
— Arvind Kejriwal (@ArvindKejriwal) February 15, 2021
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿ, “ಪರಿಸರ ಹೋರಾಟಗಾರ್ತಿ ದಿಶಾ ರವಿಯ ಬಂಧನ ನರೇಂದ್ರ ಮೋದಿ ಆಡಳಿತದಲ್ಲಿ ಭಾರತದ ಪ್ರಜಾಪ್ರಭುತ್ವದಲ್ಲಿ ಬಿಟ್ಟಿರುವ ಬಿರುಕನ್ನು ತೋರಿಸುತ್ತಿದೆ. ರೈತರನ್ನು ಬೆಂಬಲಿಸುವುದು ದೇಶದ್ರೋಹ ಪ್ರಕರಣದ ಅಡಿಯಲ್ಲಿ ಹೇಗೆ ಬರುತ್ತದೆ. ದೆಹಲಿ ಪೊಲೀಸರ ರಾಜಕೀಯ ಪ್ರೇರಿತವಾದ ಈ ಕ್ರಮವನ್ನು ನಾನು ಬಲವಾಗಿ ಖಂಡಿಸುತ್ತೇನೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
The arrest of Disha Ravi, a climate activist, has exposed the cracks in the Indian democracy under @narendramodi.
How can the act of supporting farmers be charged under sedition?
I strongly condemn this politically motivated act by Delhi Police. pic.twitter.com/JLOXsNZIVI
— Siddaramaiah (@siddaramaiah) February 15, 2021
ಹೀಗೆ ಇನ್ನೂ ನೂರಾರು ಜನರು ದಿಶಾ ರವಿಯವರಿಗೆ ಬೆಂಬಲ ಸೂಚಿಸಿದ್ದಾರೆ. ರೈತ ಹೋರಾಟವನ್ನು ದುರ್ಬಲಗೊಳಿಸುವ ಸಲುವಾಗಿ ಕೇಂದ್ರದ ಬಿಜೆಪಿ ಸರ್ಕಾರ ಇಂತಹ ನೀಚ ಕೆಲಸಗಳನ್ನು ಮಾಡುತ್ತಿದೆ ಎಂದು ಹಲವರು ಆರೋಪಿಸಿದ್ದಾರೆ.
ದಿಶಾ ರವಿ ಅವರು ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಾರೆ. ಫ್ರೈಡೇಸ್ ಫಾರ್ ಫ್ಯೂಚರ್ ಇಂಡಿಯಾದ ಸಂಸ್ಥಾಪಕರಲ್ಲಿ ಒಬ್ಬರಾದ ದಿಶಾ ರವಿ ಅವರು ವಿವಾದಿತ ಟೂಲ್‌ಕಿಟ್ ಅನ್ನು ಸಂಪಾದಿಸಿ ಹಂಚಿಕೊಂಡಿದ್ದಾರೆ ಎಂದು ದೆಹಲಿ ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ಇದನ್ನೂ ಓದಿ: ದೇಶ ಭಕ್ತರು ಯಾರು? ದೇಶ ದ್ರೋಹಿಗಳು ಯಾರು? – ನಟ ಚೇತನ್ ಹೇಳುತ್ತಾರೆ ಕೇಳಿ
ಜನವರಿ 26 ರ ಗಣರಾಜ್ಯೋತ್ಸವದಂದು ರೈತರ ಟ್ರಾಕ್ಟರ್ ರ್‍ಯಾಲಿಯ ಸಂದರ್ಭದಲ್ಲಿ ನಡೆದ ಅಹಿತಕರ ಘಟನೆಯಲ್ಲಿ ಈ ಟೂಲ್‌ಕಿಟ್‌ನ ಪಾತ್ರವಿದೆ ಎಂದು ಪೊಲೀಸರು ಆಪಾದಿಸಿದ್ದಾರೆ. ವಿಶೇಷ ಸಿಪಿ (ಅಪರಾಧ ಶಾಖೆ) ಪ್ರವೀರ್ ರಂಜನ್, ಪ್ರಾಥಮಿಕ ವಿಚಾರಣೆಯಲ್ಲಿ ವಿವಾದಿತ ಟೂಲ್‌ಕಿಟ್ ಅನ್ನು “ಖಲಿಸ್ತಾನಿ ಪರ ಸಂಸ್ಥೆ” ಪೊಯೆಟಿಕ್ ಜಸ್ಟೀಸ್ ಫೌಂಡೇಶನ್ ರಚಿಸಿದೆ ಎಂದು ಸೂಚಿಸಿದೆ ಎಂದು ಹೇಳಿದ್ದಾರೆ.
ಫ್ರೈಡೆ ಫಾರ್ ಫ್ಯೂಚರ್ ಎಂಬುವುದು ಅಂತಾರಾಷ್ಟ್ರೀಯ ಚಳವಳಿಯಾಗಿದ್ದು, ಇದರಲ್ಲಿ ವಿದ್ಯಾರ್ಥಿಗಳು ಶುಕ್ರವಾರದಂದು ತರಗತಿಯನ್ನು ಬಹಿಷ್ಕರಿಸಿ ಹವಾಮಾನ ಬದಲಾವಣೆಗಳ ವಿರುದ್ಧ ರಾಜಕಾರಣಿಗಳು ಮಾತನಾಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಾರೆ. ಗ್ರೇಟಾ ಥನ್ಬರ್ಗ್ ಸ್ವೀಡಿಷ್ ಸಂಸತ್ತಿನ ಹೊರಗೆ ಪ್ರತಿಭಟಿಸಿದ ನಂತರ ಇದು ವ್ಯಾಪಕ ಜನಪ್ರಿಯತೆಯನ್ನು ಗಳಿಸಿತು.
ಫೆಬ್ರವರಿ 4 ರಂದು ವಿವಾದಿತ ಟೂಲ್‌ಕಿಟ್ ತಯಾರಿಸಿದವರ ವಿರುದ್ದ ದೆಹಲಿ ಸೈಬರ್-ಕ್ರೈಮ್ ಸೆಲ್ ಪೊಲೀಸರು, ದೇಶದ್ರೋಹ, ಕ್ರಿಮಿನಲ್ ಪಿತೂರಿ ಮತ್ತು ದ್ವೇಷವನ್ನು ಉತ್ತೇಜಿಸುವ ಆರೋಪದ ಮೇಲೆ ಎಫ್ಐಆರ್ ದಾಖಲಿಸಿದ್ದರು.
ಇದನ್ನೂ ಓದಿ: ಜಮ್ಮುಕಾಶ್ಮೀರದಲ್ಲಿ ಮತ್ತೊಮ್ಮೆ ಗೃಹ ಬಂಧನ: ಮಾಜಿ ಮುಖ್ಯಮಂತ್ರಿ ಆರೋಪ


