Homeಮುಖಪುಟ’ದೆಹಲಿ ಗಡಿಗಳಲ್ಲಿ ನಡೆಯುತ್ತಿರುವ ಟೆಸ್ಟ್‌ ಪಂದ್ಯಾಟವನ್ನೂ ಸೆರೆಹಿಡಿಯಿರಿ’-ಮೋದಿಗೆ ನೆಟ್ಟಿಗರ ತರಾಟೆ

’ದೆಹಲಿ ಗಡಿಗಳಲ್ಲಿ ನಡೆಯುತ್ತಿರುವ ಟೆಸ್ಟ್‌ ಪಂದ್ಯಾಟವನ್ನೂ ಸೆರೆಹಿಡಿಯಿರಿ’-ಮೋದಿಗೆ ನೆಟ್ಟಿಗರ ತರಾಟೆ

- Advertisement -
- Advertisement -

ಭಾನುವಾರ (ಇಂದು) ಪ್ರಧಾನಿ ಹೆಲಿಕಾಪ್ಟರ್‌ನಲ್ಲಿ ಚೆನ್ನೈಗೆ ತೆರಳುತ್ತಿದ್ದ ವೇಳೆ, ಚೆನ್ನೈ‌ನಲ್ಲಿ ನಡೆಯುತ್ತಿರುವ ಭಾರತ-ಇಂಗ್ಲೆಂಡ್ ನಡುವಿನ ಟೆಸ್ಟ್ ಕ್ರಿಕೆಟ್ ಪಂದ್ಯದ ಚಿತ್ರವನ್ನು ತನ್ನ ವೈಮಾನಿಕ ಹಾರಾಟದಲ್ಲೇ ಕ್ಲಿಕ್ ಮಾಡಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಟ್ವೀಟರ್‌ನಲ್ಲಿ ಚೆನ್ನೈನ ಎಂ.ಎ. ಚಿದಂಬರಂ ಕ್ರೀಂಡಾಂಗಣದ ಚಿತ್ರವನ್ನು ಪೋಸ್ಟ್ ಮಾಡಿರುವ ಮೋದಿ, “ಚೆನ್ನೈನಲ್ಲಿ ನಡೆಯುತ್ತಿರುವ ರೋಚಕ ಟೆಸ್ಟ್ ಪಂದ್ಯಾಟ ನೋಟ” ಎಂದು ಬರೆದಿದ್ದರು.

ಪ್ರಧಾನಿಯ ಈ ಚಿತ್ರವನ್ನು ನೋಡಿದ ಕೆಲವರು ಪ್ರಶಂಸೆ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ದೇಶದಲ್ಲಿ ನಡೆಯುತ್ತಿರುವ ಹೋರಾಟದ ಬಗ್ಗೆಯು ನೋಡುವಂತೆ ಕೇಳಿಕೊಂಡರು. ಅಂತಹ ಕೆಲವು ಟ್ವೀಟ್‌ಗಳು ಇಲ್ಲಿವೆ.

ಸರ್‌ಕಝಮ್ ಅವರು, ಸರ್‌ ದಯವಿಟ್ಟು ದೆಹಲಿಯ ಗಡಿಗಳಲ್ಲಿ ನಡೆಯುತ್ತಿರುವ ರೋಚಕ ಟೆಸ್ಟ್‌ ಮ್ಯಾಚ್‌‌ಗಳನ್ನು ಕೂಡಾ ಸೆರೆ ಹಿಡಿಯಿರಿ ಎಂದು ಪ್ರತಿಭಟನಾ ನಿರತ ಯುವಕರು ಖಾಲಿ ರಸ್ತೆಯಲ್ಲಿ ಆಟವಾಡುತ್ತಿರುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ.

ಮಹಮ್ಮದ್ ಮೆರಿಲ್ ಅವರು,  ಸಿಂಘು ಬಾರ್ಡರ್‌ನಲ್ಲಿ ನಡೆಯುತ್ತಿರವು ರೋಚಕ ರೈತರ ಹೋರಾಟವನ್ನೂ ಸೆರೆಹಿಡಿಯಿರಿ ಎಂದು ಹೇಳಿದ್ದಾರೆ.

ಗುರುಬಾಜು ಅವರು, “ಮೋದಿಯವರೆ ರೈತರ ಸಮಸ್ಯೆಯ ಬಗ್ಗೆ ಕೂಡಾ ಫೋಟೊ ತಗೊಳ್ಳಿ” ಎಂದು ಹೇಳಿದ್ದಾರೆ

ಅಮಿತ್ ಅವರು, ಪೆಟ್ರೋಲ್ ದರ ನೂರರ ಗಡಿ ದಾಟುತ್ತಿದೆ, ಆದರೆ ನೀವು ಹಾರಾಡುತ್ತಾ, ಸಾರ್ವಜನಿಕರ ದುಡ್ಡಿನಲ್ಲಿ ಖುಷಿ ಪಡುತ್ತಿದ್ದೀರಿ. ಚೆನ್ನಾಗಿದೆ ಮೋದಿಯುವರೆ ಎಂದು ಹೇಳಿದ್ದಾರೆ.

ಪ್ರಕಾಶ್ ಗಾಡೆ ಪಾಟಿಲ್ ಅವರು,  ನಿಮ್ಮ ದೃಷ್ಟಿ ಸ್ವಲ್ಪ ರೈತರ ಮೇಲೆ ಕೂಡ ಹಾಕಿ ಮೋದಿಯವರೆ, ಇಲ್ಲಿ 60 ದಿನಗಳಲ್ಲಿ 200 ರೈತರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಾಂಗ್ರೆಸ್‌ ನಾಯಕ ಸುರ್ಜೇವಾಲಾಗೆ ಚುನಾವಣಾ ಪ್ರಚಾರ ಮಾಡದಂತೆ ನಿರ್ಬಂಧ ವಿಧಿಸಿದ ಚುನಾವಣಾ ಆಯೋಗ

0
ಬಿಜೆಪಿ ಸಂಸದೆಯ ವಿರುದ್ಧದ ಅವಹೇಳನಾಕಾರಿ ಹೇಳಿಕೆ ಆರೋಪದಲ್ಲಿ ಕಾಂಗ್ರೆಸ್‌ ಸಂಸದ ರಣದೀಪ್ ಸಿಂಗ್ ಸುರ್ಜೇವಾಲಾ ಅವರಿಗೆ 48 ಗಂಟೆಗಳ ಕಾಲ ಚುನಾವಣಾ ಪ್ರಚಾರ ಮಾಡದಂತೆ ನಿರ್ಬಂಧ ವಿಧಿಸಿ ಚುನಾವಣಾ ಆಯೋಗ ಆದೇಶವನ್ನು ಹೊರಡಿಸಿದೆ....