Homeಮುಖಪುಟದೆಹಲಿ ಗಡಿಗಳಲ್ಲಿನ ಹೋರಾಟಕ್ಕೆ ತೆರೆ: ವಿಜಯೀ ಮೆರವಣಿಗೆ ಮೂಲಕ ಪಂಜಾಬ್‌ಗೆ ತೆರಳಲಿರುವ ರೈತರು

ದೆಹಲಿ ಗಡಿಗಳಲ್ಲಿನ ಹೋರಾಟಕ್ಕೆ ತೆರೆ: ವಿಜಯೀ ಮೆರವಣಿಗೆ ಮೂಲಕ ಪಂಜಾಬ್‌ಗೆ ತೆರಳಲಿರುವ ರೈತರು

ವಿಜಯೀ ಮೆರವಣಿಗೆಗೆ ಹೂವುಗಳನ್ನು ಸುರಿಸುವುದಕ್ಕಾಗಿ ವಿಮಾನ ವ್ಯವಸ್ಥೆ ಮಾಡಬೇಕು. ಎಲ್ಲಾ ಹೆದ್ದಾರಿಗಳಲ್ಲಿ ಸ್ವಾಗತ ಫಲಕಗಳನ್ನು ಹಾಕಬೇಕು ಎಂದು ರೈತರು ಪಂಜಾಬ್‌ ಸಿಎಂಗೆ ಪತ್ರ ಬರೆದಿದ್ದಾರೆ.

- Advertisement -
- Advertisement -

ದೆಹಲಿ ಗಡಿಗಳಲ್ಲಿ ಮತ್ತು ಪಂಜಾಬ್‌- ಹರಿಯಾಣದ ಹಳ್ಳಿ ಹಳ್ಳಿಗಳಲ್ಲಿ ನಡೆಯುತ್ತಿರುವ ರೈತ ಹೋರಾಟಕ್ಕೆ ತೆರೆ ಎಳೆಯಲು ಪಂಜಾಬ್‌ನ 32 ಸಂಘಟನೆಗಳು ನಿರ್ಧರಿಸಿವೆ. ಕೇಂದ್ರ ಸರ್ಕಾರ ರೈತರ ಎಲ್ಲಾ ಹಕ್ಕೊತ್ತಾಯಗಳನ್ನು ಒಪ್ಪಿಕೊಂಡು ಲಿಖಿತ ಭರವಸೆ ನೀಡಿದ ನಂತರ ಸಂಯುಕ್ತ ಕಿಸಾನ್ ಮೋರ್ಚಾ ಸಭೆಯಲ್ಲಿ ರೈತ ಹೋರಾಟ ಕೊನೆಗೊಳಿಸಲು ತೀರ್ಮಾನಿಸಲಾಗಿದೆ.

ಎಂಎಸ್‌ಪಿಗೆ ಶಾಸನಬದ್ಧ ಮಾನ್ಯತೆ, ರೈತರ ಮೇಲಿನ ಎಲ್ಲಾ ಪೊಲೀಸ್ ಪ್ರಕರಣಗಳನ್ನು ವಾಪಸ್ ಪಡೆಯುವುದು, ಹುತಾತ್ಮ ರೈತ ಕುಟುಂಬಕ್ಕೆ ಪರಿಹಾರ ಮತ್ತು ಸರ್ಕಾರಿ ಉದ್ಯೋಗ, ವಿದ್ಯುತ್ ಮಸೂದೆ ಹಿಂಪಡೆಯುವುದು ಮತ್ತು ಕೃಷಿ ತ್ಯಾಜ್ಯ ಸುಡುವುದನ್ನು ಅಪರಾಧೀಕರಿಸುವುದಕ್ಕೆ ತಡೆಗೆ ಕೇಂದ್ರ ಸರ್ಕಾರ ಒಪ್ಪಿಕೊಂಡಿದ್ದು ಇದನ್ನು ಅಧಿಕೃತವಾಗಿ ಲಿಖಿತ ರೂಪದಲ್ಲಿ ಬರೆದು ಸಂಯುಕ್ತ ಕಿಸಾನ್ ಮೋರ್ಚಾಗೆ ನೀಡಿದೆ.

ನಂತರ ಪಂಜಾಬ್‌ನ 32 ರೈತ ಸಂಘಗಳು ಹೋರಾಟ ಅಂತ್ಯಗೊಳಿಸಿ ವಿಜಯೀ ಮೆರವಣಿಗೆಯ ಮೂಲಕ ಪಂಜಾಬ್‌ಗೆ ತೆರಳಲು ನಿರ್ಧರಿಸಿವೆ. ಇಂದು ಸಂಜೆ ದೆಹಲಿ ಗಡಿಗಳಲ್ಲಿ ವಿಜಯೋತ್ಸವ ಆಚರಿಸಲಿದ್ದು, ಶನಿವಾರದಿಂದ ಪಂಜಾಬ್ ಕಡೆಗೆ ವಿಜಯೀ ಮೆರವಣಿಗೆ ಆರಂಭವಾಗಲಿದೆ ಎಂದು ಟ್ರಾಕ್ಟರ್‌ ಟು ಟ್ವಿಟರ್ ಟ್ವೀಟ್ ಮೂಲಕ ದೃಢಪಡಿಸಿದೆ.

  1. ಇಂದು ಡಿಸೆಂಬರ್ 9 ರಂದು ಸಂಜೆ 5:30 ಕ್ಕೆ ಸಿಂಘು ಗಡಿಯಲ್ಲಿ ಫತೇ ಅರ್ದಾಸ್ (ವಿಜಯೋತ್ಸವ) ನಡೆಯಲಿದೆ.
  2. ಡಿಸೆಂಬರ್ 11 ರ ಶನಿವಾರ ಸಿಂಘು ಮತ್ತು ಟಿಕ್ರಿ ಗಡಿಯಿಂದ ಫತೇಹ್ ಮೆರವಣಿಗೆ (ವಿಜಯೀ ಮೆರವಣಿಗೆ) ಆರಂಭವಾಗುತ್ತದೆ.
  3. ಡಿಸೆಂಬರ್ 13ರಂದು ಅಮೃತಸರದ ಗೋಲ್ಡನ್ ಟೆಂಪಲ್ ಮತ್ತು ದರ್ಬಾರ್ ಸಾಹಿಬ್ ನಮಸ್ಕರಿಸುವ ಕಾರ್ಯಕ್ರಮ.
  4. ಡಿಸೆಂಬರ್ 15 ರಂದು ಪಂಜಾಬ್‌ನಲ್ಲಿ ವಿಜಯೀ ಮೆರವಣಿಗೆ ಅಂತ್ಯವಾಗಲಿದೆ.

ಈ ವಿಜಯೀ ಮೆರವಣಿಗೆಗೆ ಪಂಜಾಬ್ ಸರ್ಕಾರ ಕೆಲವು ಸಿದ್ದತೆಗಳನ್ನು ಮಾಡಿಕೊಡಬೇಕೆಂದು ಪಂಜಾಬ್ ಸರ್ಕಾರಕ್ಕೆ ರೈತರು ಪತ್ರ ಬರೆದಿದ್ದಾರೆ. ಅವುಗಳೆಂದರೆ

  1. ‘ಫತೇ ಮಾರ್ಚ್ (ವಿಜಯೀ ಮೆರವಣಿಗೆ)ಗೆ’ ಹೂವುಗಳನ್ನು ಸುರಿಸುವುದಕ್ಕಾಗಿ ವಿಮಾನ ವ್ಯವಸ್ಥೆ ಮಾಡಬೇಕು.
  2. ಎಲ್ಲಾ ಹೆದ್ದಾರಿಗಳಲ್ಲಿ ಸ್ವಾಗತ ಫಲಕಗಳನ್ನು ಹಾಕಬೇಕು.
  3. ಫತೇ ಮಾರ್ಚ್ ಸ್ವಾಗತಿಸಲು ಪಂಜಾಬ್‌ನಲ್ಲಿ ಮೂರು ದಿನಗಳ ರಜೆ ಘೋಷಿಸಬೇಕು.
  4. ಪಂಜಾಬ್‌ನ ಪ್ರತಿ ಜಿಲ್ಲೆಯಲ್ಲಿ ಕಿಸಾನ್ ಘರ್ (ರೈತ ಸಂಪರ್ಕ ಕೇಂದ್ರ) ಸ್ಥಾಪಿಸಬೇಕು.
  5. ಕಿಸಾನ್ ಮೋರ್ಚಾದ ಮ್ಯೂಸಿಯಂ ಸ್ಥಾಪಿಸಬೇಕು.
  6. ಲುಧಿಯಾನದಲ್ಲಿ 200 ಅಡಿ ರಸ್ತೆ (ಫುಲ್ಲನ್ವಾಲ್ ಚೌಕ್‌ನಿಂದ ಗಿಲ್ ರಸ್ತೆ) ‘ಶಹೀದ್ ಕಿಸಾನ್ ರಸ್ತೆ’ ಎಂದು ಘೋಷಿಸಬೇಕು. (ಜನವರಿಯಲ್ಲಿ ಇದೇ ರಸ್ತೆಯಲ್ಲಿ ಕಿಸಾನ್ ಶಹೀದ್ ಮಾರ್ಚ್ ಆಯೋಜಿಸಲಾಗಿತ್ತು)

ಒಟ್ಟಿನಲ್ಲಿ ರೈತರು ಅದ್ವಿತೀಯ ಗೆಲುವು ಸಾಧಿಸಿ ಪಂಜಾಬ್‌ಗೆ ಮರಳಿ ಹೊರಟಿದ್ದಾರೆ. ಐತಿಹಾಸಿಕ ರೈತ ಹೋರಾಟ ಚಿರಸ್ಥಾಯಿಯಾಗಿ ಉಳಿಯುವಂತೆ ಮಾಡಿದ್ದಾರೆ.


ಇದನ್ನೂ ಓದಿ: ಬಾಬರಿ ತೀರ್ಪಿತ್ತ ದಿನ ಇತರ ನ್ಯಾಯಮೂರ್ತಿ‌ಗಳನ್ನು ಡಿನ್ನರ್‌ಗೆ ಕರೆದೊಯ್ದು, ಉತ್ತಮ ವೈನ್‌ ಕೊಡಿಸಿದ್ದೆ: ನಿವೃತ್ತ ಸಿಜೆಐ ರಂಜನ್ ಗೊಗೊಯ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ರಧಾನಿ ಮೋದಿ ಪ್ರಚಾರಕ್ಕೆ ಸಿಂಗಾಪುರದ ರೈಲ್ವೆ ನಿಲ್ದಾಣದ ಫೋಟೋ ಬಳಸಿದ ಬಿಜೆಪಿ

0
ಬಿಜೆಪಿಯ ವಿವಿಧ ರಾಜ್ಯ ಮತ್ತು ಜಿಲ್ಲಾ ಘಟಕಗಳ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಇತ್ತೀಚೆಗೆ ಪೋಸ್ಟರ್ ಒಂದನ್ನು ಹಂಚಿಕೊಳ್ಳಲಾಗಿತ್ತು. ಪ್ರಧಾನಿ ನರೇಂದ್ರ ಮೋದಿಯವರ ಫೋಟೋ ಮತ್ತು ಹಿಂಭಾಗದಲ್ಲಿ ಮೆಟ್ರೋ ರೈಲು ಸಾಗುತ್ತಿರು ಚಿತ್ರವಿರುವ ಈ ಪೋಸ್ಟರ್‌...