Homeಮುಖಪುಟರೈತರ ಎಲ್ಲಾ ಬೇಡಿಕೆಗಳ ಮುಂದೆ ಮಂಡಿಯೂರಿದ ಮೋದಿ ಸರ್ಕಾರ: ಐತಿಹಾಸಿಕ ರೈತ ಹೋರಾಟ ಶನಿವಾರ ಅಂತ್ಯ!

ರೈತರ ಎಲ್ಲಾ ಬೇಡಿಕೆಗಳ ಮುಂದೆ ಮಂಡಿಯೂರಿದ ಮೋದಿ ಸರ್ಕಾರ: ಐತಿಹಾಸಿಕ ರೈತ ಹೋರಾಟ ಶನಿವಾರ ಅಂತ್ಯ!

- Advertisement -
- Advertisement -

ಒಕ್ಕೂಟ ಸರ್ಕಾರದ ಗೃಹ ಸಚಿವಾಲಯದ ಜೊತೆಗೆ ನಡೆದ ಮಾತುಕತೆಗಳ ನಂತರ, ದೆಹಲಿಯ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಅಂತಿಮವಾಗಿ ತಮ್ಮ ಆಂದೋಲನವನ್ನು ಕೊನೆಗೊಳಿಸಲು ನಿರ್ಧರಿಸಿದ್ದಾರೆ. ಆಂದೋಲನಕ್ಕೆ ಸಂಬಂಧಿಸಿದ ಎಲ್ಲಾ ಪ್ರಕರಣಗಳನ್ನು ಹಿಂಪಡೆಯುವುದು ಮತ್ತು ವಿವಾದಿತ ಕೃಷಿ ಕಾನೂನುಗಳ ವಿರುದ್ಧದ ಚಳವಳಿಯ ಸಂದರ್ಭದಲ್ಲಿ ಸಾವನ್ನಪ್ಪಿದ ರೈತರ ಕುಟುಂಬಗಳಿಗೆ ಪರಿಹಾರ ಸೇರಿದಂತೆ ಪ್ರತಿಭಟನಾ ನಿರತ ರೈತರು ಮಂಡಿಸಿದ ಎಲ್ಲಾ ಬೇಡಿಕೆಗಳನ್ನು ಒಕ್ಕೂಟ ಸರ್ಕಾರ ಅಂಗೀಕರಿಸಿದ ಹಿನ್ನೆಲೆಯಲ್ಲಿ ರೈತರು ಈ ನಿರ್ಧಾರ ಕೈಗೊಂಡಿದ್ದಾರೆ.

ರೈತರು ಡಿಸೆಂಬರ್ 11 ರ ಶನಿವಾರದಂದು ತಮ್ಮ ಪ್ರತಿಭಟನೆಯನ್ನು ಕೊನೆಗೊಳಿಸಿ ತಮ್ಮ ಮನೆಗಳಿಗೆ ಮರಳುವುದಾಗಿ ಘೋಷಿಸಿದ್ದಾರೆ. ನವೆಂಬರ್ 21 ರಂದು ಸಂಯುಕ್ತ ಕಿಸಾನ್ ಮೋರ್ಚಾ ಆರು ಬೇಡಿಕೆಗಳನ್ನು ಪಟ್ಟಿ ಮಾಡಿ ಪ್ರಧಾನಿ ಮೋದಿಗೆ ಪತ್ರ ಬರೆದಿತ್ತು. ಇದರ ನಂತರ ಒಕ್ಕೂಟ ಸರ್ಕಾರ ನಿನ್ನೆ ಸಂಯುಕ್ತ ಕಿಸಾನ್ ಮೋರ್ಚಾದ ಐದು ಸದಸ್ಯರ ಸಮಿತಿಗೆ ಲಿಖಿತ ಕರಡು ಪ್ರಸ್ತಾವನೆಯನ್ನು ಕಳುಹಿಸಿದೆ.

ಇದನ್ನೂ ಓದಿ:ಎಲ್ಲಾ ಪ್ರಕರಣಗಳು ತಕ್ಷಣವೇ ಅಮಾನತು: ರೈತರ ಮುಂದೆ ಮತ್ತೇ ಮಂಡಿಯೂರಿದ ಮೋದಿ ಸರ್ಕಾರ

ರೈತರ ಬೇಡಿಕೆಗಳನ್ನು ಒಪ್ಪಿಕೊಂಡಿರುವ ಬಗ್ಗೆ ಒಕ್ಕೂಟ ಸರ್ಕಾರವು ಸಂಯುಕ್ತ ಕಿಸಾನ್ ಮೋರ್ಚಾಗೆ ಅಧಿಕೃತ ಪತ್ರವನ್ನು ಕಳುಹಿಸಿದೆ. ಅದರಲ್ಲಿ, “ಕನಿಷ್ಠ ಬೆಂಬಲ ಬೆಲೆಯ ಕಾನೂನು ರಚನೆಗೆ ಸಮಿತಿ ರಚನೆ, ಹೋರಾಟದ ಸಮಯಲ್ಲಿ ರೈತರ ಮೇಲಿದ್ದ ಪ್ರಕರಣದ ವಾಪಾಸಾತಿ, ಮೃತಪಟ್ಟವರಿಗೆ ಪರಿಹಾರ, ವಿದ್ಯತ್‌ ತಿದ್ದುಪಡಿ ಮಸೂದೆ ವಾಪಾಸ್‌ ಪಡೆಯುವುದು, ಕೊಯ್ದ ಕೊಯ್ಲಿನ ಕೊಳೆ ಸುಡುವುದನ್ನು ನಿರಪರಾಧಿಕರಣ” ಸೇರಿದಂತೆ ರೈತರ ಎಲ್ಲಾ ಬೇಡಿಕೆಗಳಿಗೆ ಸರ್ಕಾರ ಒಪ್ಪಿಕೊಂಡಿದೆ.

ಕೃಷಿ ಕಾನೂನು ವಾಪಾಸು ಪಡೆಯುವುದರ ಹಿಂದೆ ಸರ್ಕಾರಕ್ಕೆ ಬೇರೆ ಉದ್ದೇಶ ಇದೆ ಎಂಬ ರೈತರು ಅನುಮಾನ ವ್ಯಕ್ತಪಡಿಸಿದರು. ಹೀಗಾಗಿ ಜೊತೆಗೆ ಪ್ರತಿಭಟನೆಯ ಸಮಯದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಲ್ಲಾ ಪ್ರಕರಣಗಳು ಮತ್ತು ಹುಲ್ಲು ಸುಡುವಿಕೆಗೆ ಸಂಬಂಧಿಸಿದ ಎಲ್ಲಾ ಪ್ರಕರಣಗಳನ್ನು ರದ್ದುಗೊಳಿಸಿದ ನಂತರವೇ ಹೋರಾಟ ನಿಲ್ಲಿಸುತ್ತೇವೆ ಎಂದು ಪ್ರತಿಪಾದಿಸಿದ್ದರು.

ರೈತರು, 2016 ರಲ್ಲಿ ನಡೆದ ಮೀಸಲಾತಿಗಾಗಿ ಜಾಟ್ ಆಂದೋಲನವನ್ನು ಉಲ್ಲೇಖಿಸಿ, ಭರವಸೆ ನೀಡಿದ ನಂತರವೂ ಕಾನೂನು ಪ್ರಕರಣಗಳನ್ನು ಹಿಂಪಡೆಯಲು ಸರ್ಕಾರ ವಿಫಲವಾಗಿದೆ ಎಂದು ನೆನಪಿಸಿ ಕೊಂಡಿದ್ದಾರೆ. ಮಂಗಳವಾರ ಸಂಜೆ ದೆಹಲಿ-ಹರಿಯಾಣ ಗಡಿಯಲ್ಲಿರುವ ಸಿಂಘು ಗಡಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾದ ರೈತ ಮುಖಂಡರ ಸುದೀರ್ಘ ಸಭೆ ನಡೆದಿತ್ತು.

ಇದನ್ನೂ ಓದಿ:ಪೆಪ್ಸಿ ಕಂಪೆನಿಯ ವಿರುದ್ದ ರೈತರಿಗೆ ಜಯ: ‘ಲೇಸ್‌ ಆಲೂಗಡ್ಡೆ’ಗಳ ಪೇಟೆಂಟ್ ರದ್ದು!

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

Fact Check : ನಿರುದ್ಯೋಗ ಕುರಿತ ಬಿಜೆಪಿ ಸಂಸದನ ಹೇಳಿಕೆಯ ವಿಡಿಯೋ ‘ಡೀಪ್ ಫೇಕ್’...

0
ಯೂಟ್ಯೂಬರ್ ಒಬ್ಬರು ನಿರುದ್ಯೋಗದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಉತ್ತರ ಪ್ರದೇಶದ ಆಝಂಗಢ ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಹಾಗೂ ಬಿಜೆಪಿ ಅಭ್ಯರ್ಥಿ ದಿನೇಶ್ ಲಾಲ್ ಯಾದವ್ ಅಥವಾ ನಿರಹುವಾ ಅವರು "ಪ್ರಧಾನಿ...