Homeಅಂಕಣಗಳುಸಂಪಾದಕೀಯ | ಕಂಡದ್ದು ಕಂಡಹಾಗೆಉರಿವ ಧರೆ ಮತ್ತು ಸುರಿವ ಮಳೆ

ಉರಿವ ಧರೆ ಮತ್ತು ಸುರಿವ ಮಳೆ

- Advertisement -
- Advertisement -

ಉರಿವ ಧರೆ ಮತ್ತು ಸುರಿವ ಮಳೆ
ಈ ಇಳೆ ಈ ಮಳೆ
ಮುಂದೊಂದು ಭರಣಿಗೆ ಉರಿವ ಈ ಧರೆಗೆ
ಭೋರ್ಗರೆದು ಮಳೆಯು ಸುರಿಯುವುದು
ಆ ನಾಳೆಯು ಬಂದೇ ಬರುವುದು
ಉರಿವ ಧರೆಯಲ್ಲಿ ಬದುಕಿರುವ ಎಲ್ಲರೂ ಮುಂದೊಂದು ಭರಣಿಯಲ್ಲಿ ಸುರಿವ ಮಳೆಯ ಮೇಲೆ ವಿಶ್ವಾಸವಿಟ್ಟು ಜೀವ ಹಿಡಿದಿಟ್ಟುಕೊಳ್ಳಿ ಎಂದು ಜನಾರ್ಧನ್ ಕೆಸರಗದ್ದೆ ಬರೆದಿದ್ದಾರೆ. ಉರಿವ ಧರೆಯು ಈ ಭೂಮಿ ಮಾತ್ರವಲ್ಲ; ಈ ಪದ್ಯದ ನಂತರದ ಸಾಲುಗಳೂ ಸಹಾ ನಿಸರ್ಗದ ಹಲವು ಪಕ್ಷಿ, ನದಿಗಳು, ಸೂರ್ಯ ಕಿರಣಗಳು, ಚಿಗುರಬೇಕಾದ ಬೀಜ ಮಾತ್ರವಲ್ಲದೇ ಕುರಿತೇ ಮಾತನಾಡುತ್ತವೆ. ಆದರೂ, ಕಡು ಕಷ್ಟಕಾಲದಲ್ಲಿ ಬದುಕುತ್ತಿರುವ ಎಲ್ಲರನ್ನೂ ಉದ್ದೇಶಿಸಿ ಕವಿ ಹಾಡುತ್ತಿದ್ದಾರೆಂದು, ಕಷ್ಟಕಾಲದಲ್ಲಿರುವ ಎಲ್ಲರಿಗೂ ಗೊತ್ತಾಗುತ್ತದೆ.
ಇಂತಹ ಎಲ್ಲಾ ಸಂದರ್ಭಗಳಲ್ಲಿ ಮಳೆಯೇ ರೂಪಕವಾಗುವುದು ಏಕೆ? ಉರಿ, ಸುಡು ಬಿಸಿಲು, ಧಗೆ ಇವನ್ನೇ ಸಂಕಷ್ಟಗಳಿಗೆ ರೂಪಕವಾಗಿ ಬಳಸುವುದರಿಂದ. ಹಾಗಾದರೆ ‘ತಣ್ಣನೆಯ ಕ್ರೌರ್ಯ’, ‘ಒಂದೇ ಸಾರಿಗೆ ನನ್ನಿಡೀ ದೇಹ ಮರಗಟ್ಟಿ ಹೋಯಿತು; ಮೈಯ್ಯೆಲ್ಲಾ ತಣ್ಣಗಾಗುತ್ತಿರುವುದರ ಅನುಭವವಾಯಿತು’ ಎಂದು ಹೇಳುವಾಗ ಕಾಣುವ ತಣ್ಣನೆಯ ಅಂಶ ಏನು? ಬಹುಶಃ ಇನ್ನೇನೂ ಮಾಡಲು ಸಾಧ್ಯವಾಗದೇ, ಕುಸಿದೇ ಹೋಗುವುದು ಅಥವಾ ಸಾವಿಗೆ ಹತ್ತಿರ ಹೋಗುವ ಸಂದರ್ಭವನ್ನು ವಿವರಿಸಲು ಮಾತ್ರ ಈ ತಣ್ಣನೆ ಪದ ಬಳಕೆಯಾಗುತ್ತದೆ. ಅಂತಹ ಸಂದರ್ಭದಲ್ಲಿ ಬೆಚ್ಚನೆಯ ಅಪ್ಪುಗೆ, ಹಿತವಾದ ಕಾವಿನ ಮೂಲಕ ಮೇಲೆತ್ತಬೇಕಾಗಬಹುದು.
ಆದರೆ ಬಿಸಿ ಹಾಗಲ್ಲ. ಅಲ್ಲಿ ಇನ್ನೂ ಜೀವ ಚೈತನ್ಯವಿದೆ. ಅದಕ್ಕೂ ಹೊರಗಿನ ತಂಪು ಬೇಕು. ಅದು ಸಿಗುತ್ತದೆಂಬ ಭರವಸೆಯೂ ಸಾಕು. ಅಂತಹ ಭರವಸೆಯನ್ನೇ ಜನಾರ್ಧನ್ ಹುಟ್ಟಿಸಲು ಯತ್ನಿಸಿದ್ದಾರೆ. ಕೆಲವು ಯುವಕ ಯುವತಿಯರು ಮೈದುಂಬಿ ಈ ಸಾಲುಗಳನ್ನು ಹಾಡಿದಾಗ ಕೇಳಲು ಚೆಂದ; ನಮ್ಮೊಳಗೂ ಭರವಸೆ ಹುಟ್ಟಿಯೇ ಹುಟ್ಟುತ್ತದೆ, ಚಣಕಾಲವಾದರೂ. ಲಗಾನ್ ಹಿಂದಿ ಸಿನೆಮಾದ ಮೊದ ಮೊದಲ ಭಾಗ ನೋಡಿದರೆ, ಕ್ಷೀಣ ಆಸೆಯೊಂದಿಗೆ ಕಾಯುವ ಬರಪೀಡಿತ ಜನರ ಚಿತ್ರಣ ನಮ್ಮ ಮನಮುಟ್ಟುತ್ತದೆ.
ಕಳೆದ ವರ್ಷಗಳಲ್ಲಿ ಕರ್ನಾಟಕದಲ್ಲಿ ಭೀಕರ ಬರವಿತ್ತು. ಕೇಂದ್ರ ಸರ್ಕಾರದ ತಂಡ ಭೇಟಿಗೆ ಬಂದಾಗ, ಕಳೆದ 16 ವರ್ಷಗಳಲ್ಲಿ ಕರ್ನಾಟಕದ ಅರ್ಧಕ್ಕೂ ಹೆಚ್ಚು ತಾಲೂಕುಗಳು 11 ವರ್ಷಗಳ ಕಾಲ ಬರ ಎದುರಿಸುತ್ತಿತ್ತು ಎಂದು ರಾಜ್ಯ ಸರ್ಕಾರವು ಹೇಳಿತ್ತು. ಇನ್ನುಳಿದ 5 ವರ್ಷಗಳ ಪೈಕಿ ಎರಡು ವರ್ಷ ಪ್ರವಾಹ ಬಂದಿತ್ತು. ಒಂದು ವರ್ಷವಂತೂ ಮನೆ ಮಾರು ಕೊಚ್ಚಿ ಹೋಗಿತ್ತು. ಕೇಂದ್ರ ತಂಡ ಬಂದ ವರ್ಷವೇ ಕರ್ನಾಟಕದಲ್ಲಿ ಬರ ಮತ್ತು ನೆರೆ ಎರಡೂ ಕಂಡಿದ್ದವು.
ಹಿಂದಿನ ವರ್ಷದ ಬರದ ಸಂದರ್ಭದಲ್ಲಿ ಮಲೆನಾಡಿನ ಜನ ಹೇಳಿದ್ದು ‘ಇಂತಹ ಬರ ಮಲೆನಾಡಿಗೆ ಬಂದು ಮೂರ್ನಾಲ್ಕು ದಶಕಗಳೇ ಆಗಿದ್ದವು, ಇನ್ನು ಕಷ್ಟವಿದೆ’. ನಂತರ ಹವಾಮಾನ ತಜ್ಞರ ಅಂಕಿ-ಅಂಶವೂ ಇದನ್ನು ಸಮರ್ಥಿಸಿತ್ತು. ಈ ವರ್ಷ ಇಬ್ಬರೂ ಹೇಳುತ್ತಿದ್ದಾರೆ ‘ಇಂತಹ ಮಳೆ ಬಂದು ಮೂರ್ನಾಲ್ಕು ದಶಕಗಳೇ ಆಗಿದ್ದವು’. ಹಾಗಾದರೆ ಕಳೆದ ವರ್ಷದ ಧಗೆ, ಉರಿ, ಬಾಯಾರಿಕೆಯನ್ನು ಈ ವರ್ಷದ ಮಳೆ ಸರಿದೂಗಿಸಿ ತಂಪು ಮಾಡುತ್ತದೆಯೇ?
ಅಣೆಕಟ್ಟುಗಳಿಂದ ಗೇಟುಗಳನ್ನು ತೆರೆದು ನೀರು ಧುಮ್ಮಿಕ್ಕುತ್ತಿರುವ ಫೋಟೋಗಳನ್ನು ಪತ್ರಿಕಾ ಛಾಯಾಗ್ರಾಹಕರು ವಿವಿಧ ಕೋನಗಳಲ್ಲಿ ತೆಗೆದು ಕಳಿಸುತ್ತಿದ್ದಾರೆ. ಜಲಪಾತಗಳೂ ರುದ್ರರಮಣೀಯವಾಗಿ ಕಾಣುತ್ತಿವೆ. ಎಷ್ಟೋ ಕಡೆ ಹುಡುಗ ಹುಡುಗಿಯರು ಈ ಮಳೆಯಲ್ಲಿ, ಜಲಪಾತದ ಧಾರೆಯಡಿಯಲ್ಲಿ ನೆನೆದು ಫೇಸ್‍ಬುಕ್ಕಿನಲ್ಲಿ ಫೋಟೋ ಹಾಕುತ್ತಿದ್ದಾರೆ. ಕೆಆರ್‍ಎಸ್ ಹಿಡಿದಿಟ್ಟುಕೊಳ್ಳಲಾಗದಷ್ಟು ನೀರು ಬಂದು, ಗೇಟು ತೆಗೆದಾಗ ಪಾಂಡವಪುರದ ಹತ್ತಿರ ಅಂತಹುದೇ ಒಂದು ಫೋಟೋ ತೆಗೆದ ಯುವಕನೊಬ್ಬ ತಮಾಷೆಯ ಅಡಿ ಬರಹ ಕೊಟ್ಟು ಎಲ್ಲೆಡೆ ಷೇರ್ ಮಾಡಿದ್ದ. ‘ತಮಿಳುನಾಡಿಗೆ ಹರಿದು ಹೋಗುತ್ತಿರುವ ನೀರನ್ನು ಅಸಹಾಯಕರಾಗಿ ನೋಡುತ್ತಿರುವ ಎಣ್ಣೆಹೊಳೆ ಕೊಪ್ಪಲಿನ ರೈತಯುವಕರು’. ಇದರಲ್ಲಿ ಅರ್ಧ ನೀರು ಕಳೆದ ವರ್ಷ ಹರಿದಿದ್ದರೆ, ನಿಜಕ್ಕೂ ಮಂಡ್ಯದವರು ಅಸಹಾಯಕರಾಗಿಯೇ ನೋಡುತ್ತಿರುತ್ತಿದ್ದರು. ಆದರೆ, ಈ ಸಾರಿ ಇದು ತಮಾಷೆ.
ದೇವಸ್ಥಾನ, ಮಸೀದಿ ಮತ್ತು ಚರ್ಚು ಮೂರೂ ಮುಳುಗಿರುವ ಫೋಟೋಗಳನ್ನು ಒಟ್ಟಿಗೆ ಷೇರ್ ಮಾಡಿ, ‘ದೇವರೂ ಮುಳುಗಿದ’ ಎಂತಲೋ, ‘ನಿಸರ್ಗ ಸಮಾನತೆ ಕಾಪಾಡಿಕೊಂಡಿದೆ’ ಎಂತಲೋ ಹೇಳುವ ಫೋಟೋಗಳೂ ಕಂಡು ಬಂದವು. ಆದರೆ, ವಾಸ್ತವದಲ್ಲಿ ನಿಸರ್ಗದ ವೈಪರೀತ್ಯಗಳು ಹೆಚ್ಚಾಗಿ ಬಡವರನ್ನೇ ಕಾಡುತ್ತವೆ. ದಕ್ಷಿಣ ಭಾರತದ ಹೆಚ್ಚಿನ ಭಾಗ ಬ್ರಾಹ್ಮಣರ ಜಾಗೀರುಗಳಾಗಿದ್ದವು. ಬ್ರಾಹ್ಮಣರ ಜಮೀನುಗಳು ‘ಸೂಕ್ತವಾದ’ ಜಾಗದಲ್ಲೂ, ಉಳಿದವರ ಜಮೀನುಗಳು ‘ಐoತಿ ಟಥಿiಟಿg’ ಆಗಿಯೂ ಇರುತ್ತವೆ. ಹಾಗೆಯೇ ನಗರಗಳಲ್ಲೂ ಐoತಿ ಟಥಿiಟಿg ಆಗಿರುವ ಜಾಗಗಳಲ್ಲೇ ಸ್ಲಂಗಳು ಹೆಚ್ಚಿರುತ್ತವೆಂದು ಸ್ಲಂ ಕಾಯ್ದೆಯೂ ಸೂಚಿಸುತ್ತದೆ.
ನಗರಗಳು ನಿಜಕ್ಕೂ ಉರಿವ ಧರೆಗಳು. ಈ ವರ್ಷ ಮಲೆನಾಡಿನಲ್ಲಿ ಬೀಳುತ್ತಿರುವ ಮಳೆಯ ಅರ್ಧದಷ್ಟು ಯಾವುದೇ ಬಯಲುಸೀಮೆಯ ನಗರದ ಮೇಲೆ ಸುರಿದಿದ್ದರೂ, ನಗರಗಳು ಮುಳುಗಿಯೇ ಹೋಗಿರುತ್ತಿದ್ದವು. ಹಿಂದೊಮ್ಮೆ ಬಯಲುಸೀಮೆಯಲ್ಲಿ ಹಲವಾರು ದಿನಗಳ ಕಾಲ ಜಡಿಮಳೆ ಸುರಿದಾಗ ಕುಸಿದ ಮಣ್ಣಿನ ಮನೆಗಳಿಗೆ ಲೆಕ್ಕವಿಲ್ಲ. ಅದೃಷ್ಟವಶಾತ್ ಈಗ ಮಣ್ಣಿನ ಮನೆಗಳು ಕಡಿಮೆಯಾಗುತ್ತಿವೆ. ಆದರೆ, ಬೀದಿಗೆ ಬೀಳುತ್ತಿರುವ ಕಾಂಕ್ರೀಟ್ ಮಣ್ಣಿನೊಳಗೆ ನೀರಿಂಗದಂತೆ ಮಾಡಿ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ. ಈ ನಗರಗಳೆಂಬ ಉರಿವ ಧರೆಯನ್ನು ಯಾವ ಬಗೆಯ ಭರಣಿ ಮಳೆ ಕಾಪಾಡಬಲ್ಲುದು ಎಂಬುದೇ ಪ್ರಶ್ನೆ.
ಮಳೆಯು ಲಕ್ಷಾಂತರ ಜನರ ಬದುಕನ್ನು ಹೈರಾಣಾಗಿಸಿರುವ, ನೂರಾರು ಜೀವಗಳನ್ನು ಬಲಿ ತೆಗೆದುಕೊಂಡಿರುವ ಇದೇ ವರ್ಷದಲ್ಲಿ ಕರ್ನಾಟಕದ ಸುಮಾರು ಮೂರನೇ ಒಂದು ಭಾಗವನ್ನು ಬರಪೀಡಿತ ಎಂದು ಘೋಷಿಸಲಾಗುತ್ತಿದೆ. ಗೆರೆ ಎಳೆದ ರೀತಿಯಲ್ಲಿ ಮಲೆನಾಡು ಮತ್ತು ಕರಾವಳಿಗಳಲ್ಲಿ ಸುರಿಯುತ್ತಿರುವ ಮಳೆಯು ನದಿಗಳು ಮೈ ತುಂಬಿ ಹರಿಯುವಂತೆ ಮಾಡಿದೆ, ಅಣೆಕಟ್ಟುಗಳನ್ನು ಭರ್ತಿ ಮಾಡಿದೆ. ಈ ರೀತಿ ಹೆಚ್ಚಾಗಿ ಮಳೆ ಬಂದಾಗ ಹಿಡಿದಿಟ್ಟುಕೊಳ್ಳಲು ದೊಡ್ಡ ಅಣೆಕಟ್ಟು ಕಟ್ಟುವುದು ಬಿಟ್ಟು ಬೇರೆ ಉಪಾಯಗಳನ್ನು ಹುಡುಕಲು ಸಾಧ್ಯವೇ? ಮಳೆ ಬಾರದಾಗಲೂ ತೇವ ಉಳಿಸಿಕೊಳ್ಳಲು ಸಾಧ್ಯವಿರುವ ನೈಸರ್ಗಿಕ ಕೃಷಿಯ ವಿಧಾನವನ್ನು ಎಲ್ಲೆಡೆ ವ್ಯಾಪಕಗೊಳಿಸಲು ಸಾಧ್ಯವೇ ಎಂಬ ಚಿಂತನೆ ನಡೆಸದಿದ್ದರೆ, ಅತಿವೃಷ್ಟಿ ಅನಾವೃಷ್ಟಿಯ ಸಂಕಟಗಳನ್ನು ಕಡಿಮೆ ಮಾಡಲಾಗದು.
ವಾತಾವರಣವನ್ನು ನಮ್ಮ ಕೈಯ್ಯಲ್ಲಿ ಸಾಧ್ಯವಿರುವಷ್ಟು ನಾರ್ಮಲೈಸ್ ಮಾಡುವುದಕ್ಕೆ ಈಗಲೂ ಕಾಲ ಮಿಂಚಿಲ್ಲ. ಲಾಭಕೋರತನ ಮತ್ತು ತನ್ನಿಷ್ಟ ಹಾಗೂ ಬಯಕೆಗಳೇ ಪ್ರಧಾನ ಎಂದು ಭಾವಿಸುವ ಮನುಷ್ಯರೇ ಇದಕ್ಕೆ ಅಡ್ಡಿಯಾಗಿದ್ದಾರೆ. ಒಂದು ಉದಾಹರಣೆ ಕೊಡಬಹುದಾದರೆ, ಅತ್ಯಂತ ಎತ್ತರದಲ್ಲಿ ಬೆಳೆಯುವ ಟೀ ಸೊಪ್ಪಿನಿಂದಲೇ ಅತ್ಯಂತ ಉತ್ಕøಷ್ಟವಾದ ಟೀ ಮಾಡಬಹುದು. ಆ ಎತ್ತರದಲ್ಲಿ ಟೀ ತೋಟಕ್ಕಿಂತ ಮುಂಚೆ ಏನಿತ್ತು ಎಂಬುದನ್ನು ನೋಡಿದರೆ, ನಿಸರ್ಗದ ಮೇಲೆ ನಾವು ನಡೆಸುತ್ತಿರುವ ದಾಳಿಯ ಅರಿವಾಗುತ್ತದೆ. ಇಂತಹ ದಾಳಿಯು ಮುಂದುವರೆದರೆ, ಈ ಉರಿವ ಧರೆಗೆ ಭರಣಿ ಮಳೆಯೂ ಶಾಪವಾಗಿಯೇ ಒದಗಿ ಬರುತ್ತದೆ.
ಇದಕ್ಕಾಗಿ ರಾಜಕೀಯ ಕಾರ್ಯಕರ್ತರು ಕಾರ್ಪೋರೇಟ್ ಅಭಿವೃದ್ಧಿಯ ಮಾದರಿಯನ್ನು ದೂರುತ್ತಾರೆ. ಮಾಕ್ರ್ಸಿಸ್ಟರು ಬಂಡವಾಳಶಾಹಿಯನ್ನು ದೂರುತ್ತಾರೆ. ತಪ್ಪೇನಿಲ್ಲ; ಸರಿಯೇ. ಜನಸಾಮಾನ್ಯರಿಂದ ಪರಿಸರಕ್ಕೆ ಆಗುತ್ತಿರುವ ಹಾನಿಗೂ, ಲಾಭಕೋರ ಆರ್ಥಿಕ ವ್ಯವಸ್ಥೆಯಿಂದ ಆಗುತ್ತಿರುವ ಹಾನಿಗೂ ಹೋಲಿಕೆಯೇ ಇಲ್ಲ. ಆದರೂ, ಇದು ಕೇವಲ ಪರಿಸರದ ಉಳಿವಿನ ವಿಚಾರ ಮಾತ್ರ ಅಲ್ಲ. ಇದು ಬದುಕಿನ ಮೌಲ್ಯದ ಪ್ರಶ್ನೆ ಸಹಾ ಆಗಿದೆ. ಹಾಗಾಗಿ ಎಲ್ಲರೂ ತಮ್ಮ ತಮ್ಮೊಳಗೆ ನೋಡಿಕೊಳ್ಳಬೇಕಾದ ಸಮಸ್ಯೆ ಇದು. ಆ ರೀತಿ ಜನಸಾಮಾನ್ಯರಷ್ಟೇ ನೋಡಿಕೊಂಡರೂ ಸಾಕು; ಕೊಳ್ಳುಬÁಕ ಮನೋಭಾವವನ್ನು ತೊಡೆದು ಹಾಕಿ, ಪರಿಸರಕ್ಕೆ ಪೂರಕವಾಗಿ ಬದುಕುತ್ತೇನೆ ಎಂದು ಒಂದು ತಿಂಗಳು ಮನಸ್ಸು ಮಾಡಿದರೆ ಸಾಕು. ಅವರಿವರ ಜೇಬಿಗೆ ಮತ್ತು ಮಾಂಸದ ಕಸುವಿಗೆ ಕನ್ನ ಹಾಕಿ ಹೊಟ್ಟೆ ಹಿಗ್ಗಿಸಿಕೊಳ್ಳುವ ಬಂಡವಾಳದಾರರು ಥರಗುಟ್ಟಿ ಹೋಗುತ್ತಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....

ಪಿಟಿಸಿಎಲ್‌ ಕಾಯ್ದೆ ತಿದ್ದುಪಡಿ- ಕೋರ್ಟ್‌ಗಳಲ್ಲಿ ದಲಿತರಿಗೆ ಆಗುತ್ತಿರುವ ಅನ್ಯಾಯ ಖಂಡಿಸಿ ರಾಜ್ಯದಾದ್ಯಂತ ಪ್ರತಿಭಟನೆ

ಪಿಟಿಸಿಎಲ್‌ ಕಾಯ್ದೆ, 1978ರ 2023ರ ತಿದ್ದುಪಡಿ ಕಾಯ್ದೆಯ ವಿರೋಧಿಸಿ ಹಾಗೂ ಕಂದಾಯ ಇಲಾಖೆಯ ಎಸಿ, ಡಿಸಿ ನ್ಯಾಯಾಲಯಗಳು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್‌ಗಳಲ್ಲಿ ಆಗುತ್ತಿರುವ ಅನ್ಯಾಯವನ್ನು ಖಂಡಿಸಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ...

ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್‌ಗೆ ಜಾಮೀನು

ಪತ್ತನಂತಿಟ್ಟ: ಈ ತಿಂಗಳ ಆರಂಭದಲ್ಲಿ ಬಂಧಿಸಲ್ಪಟ್ಟ ಮೂರನೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಉಚ್ಚಾಟಿತ ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಅವರಿಗೆ ಕೇರಳ ನ್ಯಾಯಾಲಯ ಬುಧವಾರ ಜಾಮೀನು ನೀಡಿದೆ. ಶಾಸಕರು ಸಲ್ಲಿಸಿದ್ದ ಮೇಲ್ಮನವಿಯನ್ನು ಪರಿಗಣಿಸಿದ್ದ ಪತ್ತನಂತಿಟ್ಟ...

ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ಸಾವು : ಪಿತೂರಿ ಶಂಕೆ ವ್ಯಕ್ತಪಡಿಸಿದ ಮಮತಾ ಬ್ಯಾನರ್ಜಿ, ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿದ ರಾಜಕೀಯ ನಾಯಕರು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಸಾವಿಗೆ ಕಾರಣವಾದ ಬಾರಾಮತಿ ವಿಮಾನ ಪತನದ ಕುರಿತು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಸಬೇಕೆಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ (ಜ.28) ಒತ್ತಾಯಿಸಿದ್ದಾರೆ....

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ತಾರತಮ್ಯ ತಡೆಯಲು ಯುಜಿಸಿ ಹೊಸ ನಿಯಮ; ಮುಂದುವರೆದ ಪ್ರಬಲಜಾತಿ ಗುಂಪಿನ ವಿರೋಧ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ಪರಿಹರಿಸುವ ಗುರಿಯನ್ನು ಹೊಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಪರಿಷ್ಕೃತ ನಿಯಮಗಳ ಕುರಿತು ದೇಶದಲ್ಲಿ ಭಾರಿ ರಾಜಕೀಯ ವಾಗ್ವಾದ ಭುಗಿಲೆದ್ದಿದೆ. ಹೊಸ ಮಾರ್ಗಸೂಚಿಗಳ ಕುರಿತು...

ಜನಸೇನಾ ಶಾಸಕನಿಂದ ಅತ್ಯಾಚಾರ, ಬಲವಂತದ ಗರ್ಭಪಾತ : ಮಹಿಳೆ ಆರೋಪ

ಆಂಧ್ರ ಪ್ರದೇಶದ ರೈಲ್ವೆ ಕೊಡೂರು ವಿಧಾನಸಭಾ ಕ್ಷೇತ್ರದ ಜನ ಸೇನಾ ಶಾಸಕ ಮತ್ತು ಸರ್ಕಾರಿ ಸಚೇತಕ ಅರವ ಶ್ರೀಧರ್ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಮತ್ತು ಬಲವಂತದ ಗರ್ಭಪಾತ ಆರೋಪ ಮಾಡಿದ್ದಾರೆ. ಈ ಕುರಿತು ವಿಡಿಯೋ...

ಬಾರಾಮತಿ ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ನಿಧನ; ಸಂತಾಪ ಸೂಚಿಸಿದ ಪ್ರಮುಖರು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ಐವರು ಜನರು ಪ್ರಯಾಣಿಸುತ್ತಿದ್ದ ವಿಮಾನ ಬುಧವಾರ ಬೆಳಿಗ್ಗೆ ಪುಣೆ ಜಿಲ್ಲೆಯಲ್ಲಿ ಪತನಗೊಂಡು ಸಾವನ್ನಪ್ಪಿದ್ದಾರೆ. ಎನ್‌ಸಿಪಿ ನಾಯಕರಾದ ಅಜಿತ್ ಪವಾರ್ (66) ಮತ್ತು ಇತರರನ್ನು ಹೊತ್ತೊಯ್ಯುತ್ತಿದ್ದ...

ಗುರುಗ್ರಾಮ ಮತ್ತು ಚಂಡೀಗಢದ ಶಾಲೆಗಳಲ್ಲಿ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ: ವಿದ್ಯಾರ್ಥಿಗಳ ಸ್ಥಳಾಂತರ

ಗುರುಗ್ರಾಮ್‌ನ ಕನಿಷ್ಠ ಆರು ಖಾಸಗಿ ಶಾಲೆಗಳಿಗೆ ಬುಧವಾರ ಬೆಳಿಗ್ಗೆ ಬಾಂಬ್ ಬೆದರಿಕೆ ಇಮೇಲ್‌ಗಳು ಬಂದಿದ್ದು, ದೊಡ್ಡ ಪ್ರಮಾಣದ ಸ್ಥಳಾಂತರ ಮತ್ತು ಭದ್ರತಾ ತಪಾಸಣೆಗಳನ್ನು ನಡೆಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.  ಬೆಳಿಗ್ಗೆ 7:10 ರ ಸುಮಾರಿಗೆ...

ಜಿಲ್ಲಾ ಸಹಕಾರಿ ಬ್ಯಾಂಕ್‌ನಿಂದ ಮಹಾರಾಷ್ಟ್ರ ಡಿಸಿಎಂ ಆಗುವವರೆಗೆ: ಅಜಿತ್ ಪವಾರ್ ರಾಜಕೀಯ ಹೆಜ್ಜೆಗಳು

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಬುಧವಾರ ಬಾರಾಮತಿಯಲ್ಲಿ ಲ್ಯಾಂಡ್‌ ಆಗಲು ಪ್ರಯತ್ನಿಸುವಾಗ ಅವರು ಪ್ರಯಾಣಿಸುತ್ತಿದ್ದ ವಿಮಾನ ಅಪಘಾತಕ್ಕೀಡಾಗಿ ನಿಧನರಾದರು. ಈ ಅಪಘಾತ ಮೂಲಕ, ಮಹಾರಾಷ್ಟ್ರದ ಅತ್ಯಂತ ಪ್ರಭಾವಶಾಲಿ ಮತ್ತು ಶಾಶ್ವತ ರಾಜಕೀಯ ವ್ಯಕ್ತಿಗಳಲ್ಲಿ...