Homeಸಿನಿಮಾರಾಜಾ ರವಿವರ್ಮನ ಕುಂಚದಂಚಿನ ಕ್ರಾಂತಿಯ ರಂಗು

ರಾಜಾ ರವಿವರ್ಮನ ಕುಂಚದಂಚಿನ ಕ್ರಾಂತಿಯ ರಂಗು

- Advertisement -
- Advertisement -

ತಲುಪಲೇಬೇಕಾದ ಸತ್ಯಕ್ಕೆ ಅಡೆತಡೆಗಳು ಜಾಸ್ತಿ. ಸುಳ್ಳು ಸಮೀಪಿಸಿದಷ್ಟು ಸಲೀಸಾಗಿ ಅದು ನಮ್ಮನ್ನು ತಲುಪದು. ನಮ್ಮ ಜೊತೆಗೇ ಕಾಲುನೀಡಿ ಹೆಜ್ಜೆಹಾಕುತ್ತಿರುವ ವರ್ತಮಾನದ ಸುಳ್ಳು ನಿಜಗಳ ನಡುವಿನ ಅಂತರವೇ ಇಷ್ಟೊಂದು ವಿಪರೀತವಿರುವಾಗ ಆಗಿಹೋದ, ನಾವ್ಯಾರು ಸಾಕ್ಷಿಯಾಗದ ಇತಿಹಾಸದಲ್ಲಿರುವ ಸತ್ಯಗಳಿಗೆ ಅದಿನ್ನೇನೆಲ್ಲಾ ಶೋಷಣೆಗಳಿರಬೇಡ; ತಡೆಗೋಡೆಗಳ ನಿರ್ಬಂಧವಿರಬೇಡ. ಪೂರ್ವಗ್ರಹ ಮತ್ತು ಸ್ವಾರ್ಥಗಳ ಹಳುವಿಗೆ ಸಿಲುಕದ ಚಿತ್ರಿಕೆಗಳು ಮಾತ್ರ ಇತಿಹಾಸಕ್ಕೆ ಪುರಾಣವನ್ನು ಆರೋಪಿಸದೆ ಇತಿಹಾಸವಾಗಿಯೇ ಕಟ್ಟಿಕೊಡಬಲ್ಲವು. ಅಂತಹ ದೃಶ್ಯಕಾವ್ಯದ ಸಾಲಿನಲ್ಲಿ ನಿಲ್ಲುವಂತಹ ಸಿನಿಮಾ ಹಿಂದಿಯ `ರಂಗ್ ರಸಿಯಾ’. ಇದರ ಇಂಗ್ಲಿಷ್ ಅವತರಿಣಿಕೆಯ ಹೆಸರು `ದಿ ಕಲರ್ಸ್ ಆಫ್ ಫ್ಯಾಶನ್’. `ಮಂಗಲ್ ಪಾಂಡೆ-ದಿ ರೈಸಿಂಗ್’ನಂತಹ Pಚಿಣioಣಡಿiಛಿ ಊisಣoಡಿiಛಿಚಿಟ ಸಿನಿಮಾ ನೀಡಿದ್ದ ಕೇತನ್ ಮೆಹ್ತಾ ನಿರ್ದೇಶನದ ಈ ಸಿನಿಮಾದ ಇಂಗ್ಲಿಷ್ ಅವತರಿಣಿಕೆ 2008ರಲ್ಲೇ ಲಂಡನ್ ಸಿನಿಮೋತ್ಸವದಲ್ಲಿ ಬಿಡುಗಡೆಯಾದರು ಹಿಂದಿ ರೂಪ ಇಂಡಿಯಾದಲ್ಲಿ ಬಿಡುಗಡೆಯಾದದ್ದು 2014ರಲ್ಲಿ. ಆ ಕಥೆಯ ಮಡಿಕೆಯಲ್ಲಿರುವ ಸತ್ಯಗಳು ಕಲಾ ಜಗತ್ತಿನ ಕುರಿತಾಗಿ ನಮಗಿರುವ ಇತಿಹಾಸದ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸುತ್ತವೆ.
ಅದು ಭಾರತೀಯ ಆಧುನಿಕ ಕಲಾಜಗತ್ತಿನ ಪಿತಾಮಹಾ ರಾಜಾ ರವಿವರ್ಮನ ಬದುಕನ್ನಾಧರಿಸಿದ ಬಯೋಪಿಕ್. ನಮ್ಮ ಇತಿಹಾಸಕ್ಕೊಂದು ಕೆಟ್ಟ ಚಾಳಿ ಇದೆ. ಘಟನಾ ಸರಣಿಗಳನ್ನು ವಸ್ತುನಿಷ್ಠವಾಗಿ ಕಟ್ಟಿಕೊಡದೆ, ತನಗೆ ಬೇಕಾದ್ದನ್ನು ಮಾತ್ರ, ಬೇಕಾದ ಬಗೆಯಲ್ಲಿ ದಾಖಲಿಸಿಕೊಂಡು ಮುಂದಿನ ತಲೆಮಾರುಗಳಿಗೆ ಆ ಅರ್ಧಸತ್ಯವನ್ನಷ್ಟೆ ದಾಟಿಸಿಬಿಡುವ ಚಾಳಿ. ರವಿವರ್ಮನನ್ನು ನಾನು ಇಂತಹುದೇ ಇತಿಹಾಸದ ಮೂಲಕ ಗ್ರಹಿಸಿದ್ದು ಸಹಾ ಅರ್ಧಂಬರ್ಧವಾಗಿಯೇ. ಆತನೊಬ್ಬ ಅದ್ಭುತ ಚಿತ್ರಕಲಾವಿದ, ಭಾರತದ ಕಲಾವಂತಿಕೆಯನ್ನು ವಿದೇಶಿಗರ ಮುಂದೆ ಎತ್ತಿಹಿಡಿದವ, ಬಣ್ಣಗಳನ್ನು ಪಳಗಿಸಿ ಅವುಗಳಿಗೆ ಜೀವ ತುಂಬುವ ಈ ಕುಂಚಬ್ರಹ್ಮನಿಗೆ ಭಾರತೀಯರು ತಮ್ಮ ಅಭಿಮಾನವನ್ನು ಧಾರೆ ಎರೆದಿದ್ದರು, ಇತ್ಯಾದಿಯಾಗಿ ಗ್ರಹಿಸಿದ್ದೆನೆ ಹೊರತು ತನ್ನ ಕಲಾಕೃತಿಗಳ ಮೂಲಕ ಆತ ಹುಟ್ಟುಹಾಕಿದ ಸಾಮಾಜಿಕ ಕ್ರಾಂತಿ, ಸ್ತ್ರೀವಾದದ ಹೊಸ ಮನ್ವಂತರ, ಅದಕ್ಕೆ ಪ್ರತಿಯಾಗಿ ಕಂದಾಚಾರಿಗಳಿಂದ ಆತ ಅನುಭವಿಸಿದ ಯಾತನೆ, ಆಗಿನ ಕಾಲಕ್ಕೆ ಬ್ರಿಟಿಷ್ ಚಮಚಾಗಿರಿಯಲ್ಲೆ ನೆಲೆ ಭದ್ರ ಮಾಡಿಕೊಂಡಿದ್ದ ದೇಸಿ ಬಂಡವಾಳಿಗರು ಆತ ಮತ್ತು ಆತನ ಕಲಾಕೃತಿಗಳಿಗೆ ಮಾಡಿದ ದ್ರೋಹಗಳ ಬಗ್ಗೆ ನನಗೆ ಅಂದಾಜೇ ಇರಲಿಲ್ಲ. ರಂಗ್ ರಸಿಯಾ ಸಿನಿಮಾ ರವಿವರ್ಮನ ಅಂತಹ ಮತ್ತೊಂದು ಮಗ್ಗುಲನ್ನು ಮನೋಜ್ಞವಾಗಿ ಪರಿಚಯಿಸಿದ್ದಲ್ಲದೆ ಇವತ್ತು ಇಂಡಿಯಾದಲ್ಲಿ ನಡೆಯುತ್ತಿರೊ ಯಥಾಸ್ಥಿತಿವಾದಿಗಳ ಅತಿರೇಕಗಳನ್ನು ಸಾರಾಸಗಟಾಗಿ ಅರ್ಥ ಮಾಡಿಕೊಳ್ಳಲು ಐತಿಹ್ಯಪೂರ್ಣ ಹಿನ್ನೋಟವನ್ನೂ ಕಟ್ಟಿಕೊಟ್ಟಿತು.
ರವಿವರ್ಮ, ಇಲ್ಲಿಗೆ ಅಜಮಾಸು ನೂರೈವತ್ತು ವರ್ಷಗಳ ಹಿಂದೆ ಬಾಳಿದ ಮನುಷ್ಯ. ಆಗ ಭಾರತ ಬ್ರಿಟಿಷ್ ವಸಾಹತುಷಾಹಿ ಹಿಡಿತದಲ್ಲಿತ್ತು ಎನ್ನುವುದು ಎಷ್ಟು ಸತ್ಯವೋ, ಮೂಢ ಕಂದಾಚಾರಿಗಳ ಕಪಿಮುಷ್ಟಿಯಲ್ಲಿತ್ತು ಎನ್ನುವುದೂ ಅಷ್ಟೇ ಸತ್ಯ. ಆತ ಕೇರಳದ ಪ್ರಾಂತೀಯ ರಾಜ ಮನೆತನವೊಂದರ ಅಳಿಯ. ಆದರೂ ಅಸ್ಪೃಶ್ಯ ಜಾತಿಯ ಕಾಮಿನಿ ಎಂಬ ಸುಂದರಿಯನ್ನು ತನ್ನ ಕಲಾಕೃತಿಗೆ ರೂಪದರ್ಶಿಯಾಗಿಸಿಕೊಳ್ಳುವ ಮೂಲಕ ಕಂದಾಚಾರವನ್ನು ಧಿಕ್ಕರಿಸಿದ. ಅದಕ್ಕಾಗಿ ತನ್ನ ಮೇಲ್ವರ್ಗದ ಸಮುದಾಯದಿಂದ ಮತ್ತು ಸ್ವತಃ ತನ್ನ ಮಡದಿಯಿಂದ ತಿರಸ್ಕøತನಾದರು ಕಲೆ ಮತ್ತು ಕಲಾಸ್ಫೂರ್ತಿಯ ವಿಚಾರದಲ್ಲಿ ತಾನಿಟ್ಟ ಆ ಕ್ರಾಂತಿಕಾರಿ ಹೆಜ್ಜೆಯ ಬಗ್ಗೆ ಯಾವತ್ತೂ ಅಳುಕು ಪಡಲಿಲ್ಲ. ನಂತರ, ಕಲೆಯ ಕತ್ತುಹಿಸುಕುವ ಅಂಥಾ ವಾತಾವರಣದಲ್ಲಿ ಇರಲಾಗದೆ ಮುಂಬೈ ನಗರಿಯತ್ತ ಮುಖ ಮಾಡುತ್ತಾನೆ.
ಅಲ್ಲೂ ಆತ ತನ್ನ ಕಲಾಕೃತಿಗಳಿಗೆ ಸ್ಫೂರ್ತಿಯಾಗಿ ಅಯ್ಕೆ ಮಾಡಿಕೊಳ್ಳುವುದು, ಈ ಸಮಾಜದ ಬಲಿಪಶುವಾಗಿ ಈ ಸಮಾಜದಿಂದಲೇ ನಿಕೃಷ್ಟವಾಗಿ ಕಾಣಲ್ಪಡುವ ಒಬ್ಬ ವೇಶ್ಯೆಯನ್ನು! ಹೆಸರು ಸುಗಂಧ. ಅವಳನ್ನೇ ತನ್ನ ಕಲಾಕೃತಿಗಳ ಪ್ರೇರಣೆಯಾಗಿಸಿಕೊಂಡು ಸರಸ್ವತಿ, ಲಕ್ಷ್ಮಿಯರಂತಹ ಹಿಂದೂ ಧಾರ್ಮಿಕ ಪುರಾಣದ ದೇವತೆಗಳನ್ನಲ್ಲದೆ ಮಹಾಭಾರತ, ರಾಮಾಯಣದ ಸನ್ನಿವೇಶಗಳನ್ನು ಬಣ್ಣಗಳಲ್ಲಿ ಬಂಧಿಯಾಗಿಸುತ್ತಾನೆ. ತನ್ನ ಕೃತಿಗಳು ಅರಮನೆಯಲ್ಲೊ, ಐಷಾರಾಮಿ ಸಂಗ್ರಹಾಲಯಗಳಲ್ಲೊ ತೂಗುಹಾಕಿಸಿಕೊಂಡು ಕೆಲವೇ ಜನರ ಸ್ವತ್ತಾಗಿ ಶ್ರೇಷ್ಠ ಕಲಾಕೃತಿಗಳು ಅನ್ನಿಸಿಕೊಳ್ಳುವುದಕ್ಕಿಂತ ಸಾಮಾನ್ಯ ಜನರ ಕಣ್ಣುಗಳಿಗು ಎಟಕಿ, ಅವರ ಅಭಿವ್ಯಕ್ತಿಗಳಿಗೆ ತೆರೆದುಕೊಳ್ಳುವ ಸಾರ್ಥಕ ಕೃತಿಗಳಾಗಬೇಕೆನ್ನುವುದು ರವಿವರ್ಮನ ಹಂಬಲ. ಇವತ್ತು ಮನೆಮನೆಗಳಲ್ಲಿ ದೇವಾನುದೇವತೆಗಳ ಮೂರ್ತ ಆಕಾರಗಳುಳ್ಳ ಫೋಟೊಗಳು ರಾರಾಜಿಸುತ್ತಿವೆ. ಆದರೆ ಹಿಂದೂ ಪುರಾಣಗಳಲ್ಲಿ ಕೇವಲ ವರ್ಣನೆಯಾಗಿದ್ದ, ದೇವಾಲಯಗಳ ಮೂರ್ತಿ ಕೆತ್ತನೆಯ ಹೊರತು ಸಾಮಾನ್ಯ ಜನರ ಕಲ್ಪನೆಯಿಂದ ದೇವರ ರೂಪವನ್ನೆ ಕಿತ್ತುಕೊಂಡಿದ್ದ ಆ ಕಾಲಘಟ್ಟದಲ್ಲಿ ಜನರ ಕಲ್ಪನಾ ವಲಯದೊಳಕ್ಕೆ ‘ಮನುಷ್ಯರೂಪಿ’ ದೇವರನ್ನು ರವಿವರ್ಮ ತರಲು ಮುಂದಾದದ್ದು ದೊಡ್ಡ ಕ್ರಾಂತಿಯೇ ಆಗಿತ್ತು. ತನ್ನ ಕಲಾಕೃತಿಗಳ ಮೂಲಕ ಸಾಮಾನ್ಯ ಜನ ಮತ್ತು ದೇವರ ನಡುವಿನ ಅಂತರವನ್ನು ಕಿರಿದುಗೊಳಿಸಿದ ಅವನ ಕ್ರಮ, ಅಷ್ಟೂದಿನ ಮಧ್ಯವರ್ತಿಗಳ ಸೋಗು ಹಾಕಿಕೊಂಡು ಸುಲಿಗೆ ಮಾಡುತ್ತಿದ್ದ ಕಂದಾಚಾರಿಗಳ ಕಣ್ಣು ಕೆಂಪಗಾಗುವಂತೆ ಮಾಡಿತ್ತು. ಹಾಗಾಗಿ ದೇವರನ್ನು ಮನುಷ್ಯ ರೂಪಿನಲ್ಲಿ ಚಿತ್ರಿಸಿದ್ದು ಧರ್ಮನಿಂದನೆ, ಅದರಲ್ಲೂ ಒಬ್ಬ ವೇಶ್ಯೆಯ ರೂಪನ್ನು ಹಿಂದೂ ದೇವತೆಗಳಿಗೆ ಲೇಪಿಸಿದ್ದು ಧರ್ಮದ್ರೋಹ, ಪುರಾಣ ಪಾತ್ರಗಳನ್ನು ಅಶ್ಲೀಲವಾಗಿ ಚಿತ್ರಿಸಿ ಜನರ ಭಾವನೆಗಳನ್ನು ಘಾಸಿಗೊಳಿಸಿದ್ದಾನೆ ಅಂತೆಲ್ಲ ರವಿವರ್ಮನ ಮೇಲೆ ಕೇಸು ದಾಖಲಿಸಿ ನ್ಯಾಯಾಲಯದ ಕಟಕಟೆಗು ತಂದು ನಿಲ್ಲಿಸುತ್ತಾರೆ.
ಕೋರ್ಟ್ ಆವರಣದಲ್ಲೆ ಅವನ ಮೇಲೆ ಹಲ್ಲೆ ಮಾಡುತ್ತಾರೆ, ಅವನ ಪ್ರಿಂಟಿಂಗ್ ಪ್ರೆಸ್ ಗೆ ಬೆಂಕಿಯಿಟ್ಟು ಧ್ವಂಸ ಮಾಡುತ್ತಾರೆ, ಆತ ಮನೆಯಿಂದ ಹೊರಬರುವುದಕ್ಕು ಆಗದಂತೆ ಅವನ ವಿರುದ್ಧ ಪ್ರತಿಭಟನೆಗಳನ್ನು ಹೆಣೆಯುತ್ತಾರೆ. ನಗ್ನತೆ ಎಂದರೆ ಕೇವಲ ಅಶ್ಲೀಲತೆ ಮಾತ್ರವಲ್ಲ, ಅದರಲ್ಲಿ ಸೌಂದರ್ಯದ ರಸಿಕತೆಯೂ ಇರುತ್ತೆ. ಪ್ರಪಂಚಕ್ಕೆ ಕಾಮಶಾಸ್ತ್ರದ ಕೊಡುಗೆ ಕೊಟ್ಟ ನೆಲದ ದೇವಾಲಯಗಳು ತಮ್ಮ ಮೈಮೇಲೆ ‘ಮೈಥುನ’ದ ಕಲಾವಂತಿಕೆಯನ್ನು ಹೊತ್ತುಕೊಂಡರು ಪವಿತ್ರ ಎನಿಸಿಕೊಂಡಿವೆಯೇ ಹೊರತು ಮೈಲಿಗೆಯೆನಿಸಿಲ್ಲ. ಸ್ತ್ರೀಯನ್ನು ತಮ್ಮ ಕಾಮತೃಷೆಯ ವಸ್ತುವಾಗಿಸಿಕೊಂಡವರಿಗೆ ಅವಳ ಸೌಂದರ್ಯ ಅಶ್ಲೀಲತೆಯಾಗಿ ಕಾಣಿಸುತ್ತದೆಯೇ ವಿನಾಃ ಸೌಂದರ್ಯೋಪಾಸಕರಿಗಲ್ಲ. ಇನ್ನು ಶತಶತಮಾನಗಳಿಂದ ಶೂದ್ರ ಸಮುದಾಯಗಳನ್ನು ದೇವಾಲಯಗಳಿಂದ ಹೊರಗಿಟ್ಟು ಅವರ ಮನಸ್ಸಿನಲ್ಲಿ ದೇವರ ಆಕಾರಕ್ಕೆ ಆಸ್ಪದವನ್ನೇ ಕೊಡದ ಸಮಾಜದ ಅಸಮಾನತೆಯನ್ನು ಧಿಕ್ಕರಿಸಿ ದೇವರನ್ನೆ ಅಂತವರ ಬಳಿಹೊಯ್ದ ರವಿವರ್ಮ ಧರ್ಮದ್ರೋಹಿ ಆಗುವುದಕ್ಕೆ ಸಾಧ್ಯವೇ ಇಲ್ಲ. ಹರಿಜನರಿಗೆ ದೇವಾಲಯ ಪ್ರವೇಶವನ್ನು ಮೇಲ್ವರ್ಗಗಳು ನಿರಾಕರಿಸಿದ್ದನ್ನು ಪ್ರತಿಭಟಿಸಿ ಅಂತಹ ದೇವಾಲಯಗಳಿಗೆ ಪ್ರತಿಯಾಗಿ ಹರಿಜನ ದೇವಾಲಯಗಳನ್ನು ನಿರ್ಮಿಸುವ ಮೂಲಕ ದೇವರನ್ನೆ ತಳಸಮುದಾಯದವರ ಬಳಿ ಕರೆತಂದ ನಾರಾಯಣ ಗುರುಗಳ ಧಾರ್ಮಿಕ ರೂಪದ ಸಾಮಾಜಿಕ ಚಳವಳಿ ರವಿವರ್ಮನ ಈ ಹೆಜ್ಜೆಯೊಂದಿಗೆ ಸಾಮ್ಯತೆ ಹೊಂದುತ್ತದೆ. ಇಂತಹ ತರ್ಕಗಳೆಲ್ಲ ವಾದ ಪ್ರತಿವಾದಿಸಲ್ಪಟ್ಟ ನಂತರ ನ್ಯಾಯಾಲಯ ಕೂಡ ಆತನನ್ನು ಆರೋಪಮುಕ್ತ ಗೊಳಿಸುತ್ತದೆ. ಅಷ್ಟರಲ್ಲಾಗಲೆ ರವಿವರ್ಮನೊಳಗಿನ ಕಲಾವಿದ ಈ ಜಂಜಡಗಳಿಂದ ಜರ್ಝರಿತನಾಗಿರುತ್ತಾನೆ. ಇವತ್ತು ಅವನನ್ನು ಕೊಂಡಾಡುವ ಇದೇ ಸಮಾಜ ಅವತ್ತು ಅವನ ಕಲಾಪ್ರೌಢಿಮೆಯನ್ನು ಅರ್ಥ ಮಾಡಿಕೊಂಡಿದ್ದರೆ ಅವನ ಕುಂಚ ಇನ್ನೂ ಎಂತೆಂಥ ಕಲಾಕುಸುಮಗಳನ್ನು ಅರಳಿಸುತ್ತಿತ್ತೊ. ಈ ಸಮಾಜ ಅದೇ ತಪ್ಪನ್ನು ಇವತ್ತಿಗೂ ಪುನರಾವರ್ತಿಸುತ್ತಿದೆ. ಆದರೆ ರವಿವರ್ಮನ ಜಾಗದಲ್ಲಿ ಎಂ.ಎಫ್. ಹುಸೇನೊ, ಅಮೀರ್ ಖಾನೊ, ಶಿಲುಬೆಗೇರುತ್ತಿದ್ದಾರಷ್ಟೆ!
ರಂಜಿತ್ ದೇಸಾಯಿಯವರ ರಾಜಾ ರವಿವರ್ಮ ಕೃತಿಯನ್ನಾಧರಿಸಿದ ಈ ಸಿನಿಮಾವನ್ನು ನಿರ್ದೇಶಕ ಕೇತನ್ ಮೆಹ್ತಾ ರವಿವರ್ಮನ ಕಲಾಕೃತಿಗಳಷ್ಟೆ ನವಿರಾಗಿ ಕಟ್ಟಿಕೊಡಲು ಯತ್ನಿಸಿದ್ದಾರೆ. ರವಿವರ್ಮನ ಪಾತ್ರದಲ್ಲಿ ರಣದೀಪ್ ಹೂಡಾ ಗಮನ ಸೆಳೆಯುವುದು ನಿಜವಾದರು ಇಡೀ ಸಿನಿಮಾವನ್ನು ಆವರಿಸುವುದು ಸುಗಂಧಾ ಪಾತ್ರದ ಒಳಹೊಕ್ಕ ನಂದನಾ ಸೇನ್. ವೇಶ್ಯೆಯ ಪಾತ್ರದಲ್ಲಿ ರವಿವರ್ಮನ ಕಲಾರಸಿಕತೆಗೆ ತನ್ನನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡು, ಆತನ ಊರ್ವಶಿ-ಪುರೂರವ ಪ್ರೇಮಕಾವ್ಯದ ಕಲ್ಪನೆಗೆ ರೂಪವಾಗಲು ತನ್ನ ಸ್ತ್ರೀ ಸೌಂದರ್ಯವನ್ನು ಕ್ಯಾಮೆರಾ ಮುಂದೆ ತೆರೆದಿಟ್ಟು ನಗ್ನಳಾಗುವ ಆಕೆಯ ವೃತ್ತಿಪರತೆ ಸಿನಿಮಾದ ಅದ್ಭುತ ಕ್ಷಣಗಳಲ್ಲಿ ಒಂದು. ಮೂಲ ರವಿವರ್ಮನ ಕಲಾಕೃತಿಗಳಲ್ಲಿ ಕಾಣಸಿಗುವಂತೆ ಈ ದೃಶ್ಯದಲ್ಲು ಅಶ್ಲೀಲತೆಯನ್ನು ಹಿಮ್ಮೆಟ್ಟಿಸಿ ಸೌಂದರ್ಯ ರಸಿಕತೆಯೆ ನೋಡಗರ ಮನಸ್ಸನ್ನು ಆವರಿಸುವಂತೆ ಮಾಡುವಲ್ಲಿ ನಿರ್ದೇಶಕರು ಯಶಸ್ವಿಯಾಗಿದ್ದಾರೆ.
ವಿಚಾರಣೆಯ ವೇಳೆ ವಕೀಲರು ಪ್ರಶ್ನೆಗಳ ಮೂಲಕ ಸುಗಂಧಿಗೆ ಮುಜುಗರ ತಂದಿತ್ತಾಗ ಆಕೆ ನೊಂದು ನುಡಿಯುವ “ನನ್ನಂತ ನತದೃಷ್ಟೆಯನ್ನು ಆ ವ್ಯಕ್ತಿ ದೇವತೆಯಾಗಿಸಿದ. ಆದರೆ ನಿಮ್ಮ ಸಮಾಜ ಏನು ಮಾಡಿತು? ನನ್ನನ್ನು ವೇಶ್ಯೆಯಾಗಿಸಿ ಖುಷಿಪಟ್ಟಿತು!” ಮಾತು ಸಿನಿಮಾದ ವೈಚಾರಿಕ ಸೌಂದರ್ಯವನ್ನು ಕಟ್ಟಿಕೊಡುತ್ತದೆ. ಕೊನೆಗೆ ಆತ್ಮಹತ್ಯೆ ಮಾಡಿಕೊಳ್ಳುವ ಸುಗಂಧಿ ಈ ಸಮಾಜದ ಸ್ತ್ರೀ ಬಲಿಪಶು ಪರಂಪರೆಯ ರೂಪಕವಾಗಿ ಕಾಡುತ್ತಾಳೆ. ಆಕೆಯ ಸಾವಿನ ನಂತರವು ಸಿನಿಮಾ ಕೊಂಚಹೊತ್ತು ಸರಿದಾಡುತ್ತದಾದರು ಗಂಭೀರ ನೋಡುಗರಿಗೆ ಸುಗಂಧಿಯ ಪಾತ್ರ ನಿರ್ಗಮನವೇ ಸಿನಿಮಾದ ದಿ ಎಂಡ್‍ನಂತೆ ಕಾಡುತ್ತದೆ. ಸುಗಂಧಿ ಯಾವ ಪರಿ ಪ್ರೇಕ್ಷಕನನ್ನು ಆವರಿಸುತ್ತಾಳೆಂದರೆ ಒಂದು ಹಂತದಲ್ಲಿ ಸಿನಿಮಾದ ಹೀರೊ ರವಿವರ್ಮನೆ ಆಕೆಯ ಪಾಲಿನ ಖಳನಾಯಕನಂತೆ ಭಾಸವಾಗಿಬಿಡುತ್ತಾನೆ. ನನಗಂತೂ ಹಾಗನ್ನಿಸಿತು. ಬಹುಶ ಸಿನಿಮಾ ನೋಡಿದರೆ ಅಥವಾ ಈಗಾಗಲೇ ನೋಡಿದ್ದರೆ ನಿಮಗೂ ಹಾಗೇ ಅನ್ನಿಸಬಹುದು. ಸಮಯ ಸಿಕ್ಕಾಗ ಒಮ್ಮೆ ಆ ಸಿನಿಮಾ ನೋಡಿ.

– ಗಿರೀಶ್ ತಾಳಿಕಟ್ಟೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR ಅಕ್ರಮಗಳ ವಿರುದ್ಧ ಜನಪರ ಒಕ್ಕೂಟದ ಸಮರ: ಸೆ.22ರಿಂದ ‘ಪರಿಶೋಧನೆ ಹಾಗೂ ಪ್ರತಿರೋಧ ಪ್ರವಾಸ’

ಎಸ್‌ಐಆರ್ (ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ) ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳನ್ನು ಬಯಲಿಗೆ ತರಲು, ಸಂತ್ರಸ್ತರನ್ನು ನೇರವಾಗಿ ಭೇಟಿಯಾಗಿ ಸಾಕ್ಷ್ಯಗಳನ್ನು ಒಟ್ಟುಗೂಡಿಸುವ ಉದ್ದೇಶದಿಂದ ಸೆಪ್ಟೆಂಬರ್ 22ರಿಂದ 30ರವರೆಗೆ ಎಸ್‌ಐಆರ್ ವಿರೋಧಿ ಜನಪರ ಸಂಘಟನೆಗಳು...

ಮುಂಬೈನಲ್ಲಿ ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನಕ್ಕೆ ತಡೆ ಆರೋಪ: ಪೊಲೀಸ್ ಕಣ್ಗಾವಲು, ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಕಳವಳ

ಮುಂಬೈ: ಜೈಲಿನಲ್ಲಿರುವ ವಿದ್ಯಾರ್ಥಿ ಹೋರಾಟಗಾರ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್ ಸೇರಿದಂತೆ ರಾಜಕೀಯ ಕೈದಿಗಳೊಂದಿಗೆ ಒಗ್ಗಟ್ಟು ವ್ಯಕ್ತಪಡಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ ಖಾಸಗಿ ಸಾಕ್ಷ್ಯಚಿತ್ರ ಪ್ರದರ್ಶನವನ್ನು ರದ್ದುಗೊಳಿಸುವಂತೆ ಮುಂಬೈ ಪೊಲೀಸರು ಪ್ರದರ್ಶನಕ್ಕೆ ಸ್ಥಳ ನೀಡಿದ್ದ...

ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರು ಮತ್ತು ಖಾಸಗಿ ಬಸ್ ನಡುವೆ ಢಿಕ್ಕಿ: ಆಸ್ಪತ್ರೆಗೆ ದಾಖಲು

ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಬಿ. ರಮಾನಾಥ ರೈ ಪ್ರಯಾಣಿಸುತ್ತಿದ್ದ ಕಾರು ಭೀಕರ ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ ಮಾಜಿ ಸಚಿವರು ಹಾಗೂ ಅವರ ಕಾರು ಚಾಲಕ ಗಾಯಗೊಂಡಿದ್ದಾರೆ. ಕಾರ್ಕಳ-ಮೂಡುಬಿದ್ರೆ ಹೆದ್ದಾರಿಯ ಸಾಣೂರು...

ಮೋದಿ ಅಣಕ: ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿ

ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ ‘ಛಾತ್ರೋಂ ಕಿ ಗೂಂಜ್’ ಕಾರ್ಯಕ್ರಮದಲ್ಲಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರೊಂದಿಗೆ ವೇದಿಕೆ ಹಂಚಿಕೊಂಡ ಸ್ಟ್ಯಾಂಡಪ್ ಕಾಮೆಡಿಯನ್‌ ಒಬ್ಬರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಣಕಿಸಿರುವ ವಿಚಾರ...

ಪ.ಬಂಗಾಳ: ನಂದಿಗ್ರಾಮದಲ್ಲಿ ಕಾಂಗ್ರೆಸ್‌ಗೆ ಮಮತಾ ಬೆಂಬಲ: ಬಂಗಾಳದ ವಿರೋಧ ಪಕ್ಷಗಳ ರಾಜಕೀಯದಲ್ಲಿ ಮರುಹೊಂದಾಣಿಕೆಯ ಸುಳಿವು

ಕೋಲ್ಕತ್ತಾ: ಪಶ್ಚಿಮ ಬಂಗಾಳದ ನಂದಿಗ್ರಾಮ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ದಿನದಿಂದ ದಿನಕ್ಕೆ ಹೊಸ ರಾಜಕೀಯ ತಿರುವುಗಳನ್ನು ಪಡೆದುಕೊಳ್ಳುತ್ತಿದ್ದು, ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ಬಣ ಕಾಂಗ್ರೆಸ್ ಅಭ್ಯರ್ಥಿ ಮಿಲನ್ ಪ್ರಧಾನ ಅವರಿಗೆ...

SIR ಎಂದರೆ ‘ಶಾ ಇನ್ಸ್ಟಿಗೇಟೆಡ್ ರಿಮೂವಲ್ʼ : ಕಾಂಗ್ರೆಸ್

ಚುನಾವಣಾ ಆಯೋಗ ಕೈಗೊಂಡಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆಯಲ್ಲಿ (ಎಸ್‌ಐಆರ್) ದೊಡ್ಡ ಪ್ರಮಾಣದಲ್ಲಿ ಮತದಾರರ ಹೆಸರುಗಳನ್ನು ಕೈಬಿಡುತ್ತಿರುವ ವಿಷಯವನ್ನು ಪ್ರಸ್ತಾಪಿಸಿರುವ ಕಾಂಗ್ರೆಸ್, ಈ ಎಸ್‌ಐಆರ್ ಪ್ರಕ್ರಿಯೆಯು ವಾಸ್ತವವಾಗಿ ಮತದಾರರ ಬೃಹತ್ "ಶಾ...

ಟಿ. ನರಸೀಪುರ ಗಣೇಶೋತ್ಸವದಲ್ಲಿ ಪ್ರಚೋದನಕಾರಿ ಭಾಷಣ: ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್‌ಐಆರ್ ದಾಖಲು

ಗಣೇಶೋತ್ಸವ ಮೆರವಣಿಗೆಯ ವೇಳೆ ಪ್ರಚೋದನಕಾರಿ ಭಾಷಣ ಮಾಡಿದ ಮತ್ತು ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿದ ಗಂಭೀರ ಆರೋಪದ ಮೇಲೆ ಬಿಜೆಪಿ ಮುಖಂಡ ಹಾಗೂ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಎಫ್‌ಐಆರ್...

ದೆಹಲಿ ವಿವಿ ಚುನಾವಣಾ ಫಲಿತಾಂಶ: ABVPಯನ್ನು ಸೋಲಿಸಬಹುದಾಗಿದ್ದ ಚುನಾವಣೆಯಲ್ಲಿ ಕಾಂಗ್ರೆಸ್ ಮಾಡಿಕೊಂಡ ಎಡವಟ್ಟು

ಜಂತರ್ ಮಂತರ್‌ನಲ್ಲಿ ಲಕ್ಷಾಂತರ ವಿದ್ಯಾರ್ಥಿಗಳು ಬೀದಿಗಿಳಿದು ನಡೆಸಿದ ಧರಣಿ ಹಾಗೂ ಇನ್‌ಸ್ಟಾಗ್ರಾಮ್‌ ನಂತಹ ಡಿಜಿಟಲ್ ವೇದಿಕೆಗಳಲ್ಲಿ ಹರಿದಾಡಿದ ರೀಲ್ಸ್‌ಗಳು ಬಿಜೆಪಿಯ ಜನಪ್ರಿಯತೆ ಕುಸಿದಿರುವುದನ್ನು ಬಿಂಬಿಸಿದ್ದವು. ಕ್ಯಾಂಪಸ್‌ಗಳಲ್ಲಿ ಬಿಜೆಪಿ ಮತ್ತು ಎಬಿವಿಪಿ ಕಾರ್ಯಕರ್ತರ ದಬ್ಬಾಳಿಕೆ,...

ಐಐಟಿ ಬಾಂಬೆ ವಿದ್ಯಾರ್ಥಿ ಸಾಹಿಲ್ ವಕೋಡ್ ಆತ್ಮಹತ್ಯೆ ಪ್ರಕರಣ: ಜಾತಿ ನಿಂದನೆ, ಬೆದರಿಕೆ ಆರೋಪ: ಪ್ರಾಧ್ಯಾಪಕರ ವಿರುದ್ಧವೂ ಎಫ್‌ಐಆರ್

ಮುಂಬೈ: ಐಐಟಿ ಬಾಂಬೆ ಕ್ಯಾಂಪಸ್‌ನಲ್ಲಿ ಎರಡನೇ ವರ್ಷದ ವಿದ್ಯಾರ್ಥಿ ಸಾಹಿಲ್ ವಕೋಡ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಇದೀಗ ಗಂಭೀರ ತಿರುವು ಪಡೆದುಕೊಂಡಿದ್ದು, ವಿದ್ಯಾರ್ಥಿಯ ಕುಟುಂಬ ಮಾಡಿರುವ ಜಾತಿ ಆಧಾರಿತ ನಿಂದನೆ, ಕಿರುಕುಳ ಮತ್ತು...

SIR : ಕೇಜ್ರಿವಾಲ್, ಧನಕರ್, ಅಡ್ವಾಣಿಗೂ ಬಂತು ಚುನಾವಣಾ ಆಯೋಗದ ನೋಟಿಸ್

ದೇಶದ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಭಾರೀ ವಿವಾದಕ್ಕೆ ಹಾಗೂ ಸಾರ್ವಜನಿಕ ಆತಂಕಕ್ಕೆ ಕಾರಣವಾಗಿದೆ. ದೆಹಲಿಯ ಒಟ್ಟು ಮತದಾರರ ಪೈಕಿ ಬರೋಬ್ಬರಿ ಶೇಕಡಾ 50ರಷ್ಟು...