HomeUncategorizedಫ್ಯಾಸಿಸಂನ ಕರಿನೆರಳು: ಪ್ರಭಾತ್ ಪಟ್ನಾಯಕ್ ರವರ ಲೇಖನ (ಎರಡನೇ ಕಂತು)

ಫ್ಯಾಸಿಸಂನ ಕರಿನೆರಳು: ಪ್ರಭಾತ್ ಪಟ್ನಾಯಕ್ ರವರ ಲೇಖನ (ಎರಡನೇ ಕಂತು)

ಮುಂದಿನ ದಿನಗಳಲ್ಲಿ ಈ ಫ್ಯಾಸಿಸ್ಟ್ ಶಕ್ತಿಗಳ ಒತ್ತಡದಿಂದಾಗಿ (ಅವು ಅದಿಕಾರದಲ್ಲಿ ಇರಲಿ ಅಥವಾ ಬಿಡಲಿ) ಸಮಾಜವು ಫ್ಯಾಸಿಸಂಕರಣಗೊಳ್ಳುತ್ತಲೆ ಇರುತ್ತದೆ.

- Advertisement -
ಮೂಲ : ಪ್ರಬಾತ್ ಪಟ್ನಾಯಕ್
ಅನು : ಬಿ. ಶ್ರೀಪಾದ ಭಟ್
ಓದುಗರಿಗೆ ಸೂಚನೆ:
ಈ ಲೇಖನದ ನಿರೂಪಣೆ ಡಿ.ಎನ್.ಶಂಕರಬಟ್ ಅವರ ಬಾಶಾ ಪ್ರಯೋಗಕ್ಕೆ ಒಳಪಟ್ಟಿದೆ. ಮಹಾಪ್ರಾಣದ ಬಳಕೆ, ಷ-ಶ ಬಳಕೆ ಸೇರಿದಂತೆ ಕೆಲವು ಹೊಸ ಸಂಗತಿಗಳನ್ನು ಅವರು ಬಲವಾಗಿ ಪ್ರತಿಪಾದಿಸುತ್ತಿದ್ದು, ಕೆಲವು ಲೇಕಕರು ಅದನ್ನು ಅನುಸರಿಸಲು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ ಈ ಲೇಕನದಲ್ಲಿನ ಬಾಶೆಯ ಬಳಕೆಯಲ್ಲಿ ನಿಮಗೆ ಕಂಡುಬರುವ ವ್ಯತ್ಯಾಸವನ್ನು, ಪ್ರೂಫ್ ವ್ಯತ್ಯಾಸ ಎಂದು ಬಗೆಯಬಾರದೆಂದು ಕೋರುತ್ತೇವೆ.
ಮೊದಲ ಕಂತು ಓದಲು ಇಲ್ಲಿ ಕ್ಲಿಕ್ ಮಾಡಿ
ನಿರಂಕುಶ ಪ್ರಬುತ್ವ ಮತ್ತು ಫ್ಯಾಸಿಸಂ ನಡುವೆ ಒಂದು ಶಬ್ದದ ವ್ಯತ್ಯಾಸವಿದೆ. ತುರ್ತುಪರಿಸ್ಥಿತಿಯ ಸಂದರ್ಬದಲ್ಲಿ ದಬ್ಬಾಳಿಕೆಯ ಅಂಕಿಅಂಶಗಳು ಹೇಳುವಂತೆ ಜನರನ್ನ ಜೈಲಿಗೆ ತಳ್ಳುವುದು ಅತಿಯಾಗಿತ್ತು. ಆದರೆ ಈಗ ದಬ್ಬಾಳಿಕೆಯ ಪ್ರಮಾಣ ಮತ್ತು ಅದರ ಶಕ್ತಿ ಬಹಳ ದೊಡ್ಡದಾಗಿದೆ ಮತ್ತು ಅದನ್ನ ನಿಯಂತ್ರಿಸುವುದು ಸಾದ್ಯವಾಗುತ್ತಿಲ್ಲ
ಮೋದಿ ಕಾಲದ ಪ್ರತಿಯೊಂದು ಅಂಶ, ಘಟನೆ ಮತ್ತು ನಿರ್ದಾರಗಳು ಫ್ಯಾಸಿಸಂನ ಗುಣಲಕ್ಷಣಗಳನ್ನ ಹೊಂದಿವೆ. ಸದಾ ಉನ್ಮಾದದಲ್ಲಿರುವ ದೊಂಬಿ ಗುಂಪು, “ಪ್ರಬುತ್ವದ ಅದಿಕಾರ ಮತ್ತು ಬಂಡವಾಳಶಾಹಿಗಳ ನಡುವಿನ ಒಂದುಗೂಡುವಿಕೆ” ( ಬೆನಿಟೋ ಮುಸ್ಸಲೋನಿಯ ಫ್ಯಾಸಿಸಂ ಕುರಿತಾದ ವ್ಯಾಖ್ಯಾನ), ಅಸಹಾಯಕ ಅಲ್ಪಸಂಖ್ಯಾತರನ್ನ ಗುರಿಯಾಗಿಸಿ ದೌರ್ಜನ್ಯ ನಡೆಸುವುದು, ವಿವಿಗಳ ನಾಶ, ಇತ್ಯಾದಿ. ಈ ರೀತಿ ಹೇಳುವುದು 1930ರ ಮರು ಸ್ಥಾಪನೆ ಎಂದರ್ಥವಲ್ಲ, ಈಗ ಫ್ಯಾಸಿಸಂನ ಅಂಶಗಳು ಮೇಲೆ ಬರುತ್ತಿವೆ ಆದರೆ ಇಲ್ಲಿ ಫ್ಯಾಸಿಸಂ ಪ್ರಬುತ್ವವಿಲ್ಲ. ಈಗಿನ ಸಂದರ್ಬ 1930ರ ಸಂದರ್ಬಕ್ಕಿಂತಲೂ ಬಿನ್ನವಾಗಿದೆ ಮತ್ತು ಅದು ಈಗ ಮರುಹುಟ್ಟುಪಡೆಯುವ ಸಾದ್ಯತೆಯಂತೂ ಇಲ್ಲ
ಒಂದಂತೂ ನಿಜ, 1930ರಂತೆ ಈ ಕಾಲಘಟ್ಟದಲ್ಲಿಯೂ ಫ್ಯಾಸಿಸಂ ಕುರಿತಾದ ಒಲವು ಒಂದು ಜಾಗತಿಕ ವಿದ್ಯಾಮಾನವಾಗಿದೆ ಮತ್ತು ಬಂಡವಾಳಶಾಹಿಯ ಕಿರುಕಳದಿಂದ ಉಂಟಾದ ಬಿಕ್ಕಟ್ಟಾಗಿದೆ. ಈ ಬಿಕ್ಕಟ್ಟು ತನ್ನೊಂದಿಗೆ ಬಂಡವಾಳಶಾಹಿ-ಆರ್ಥಿಕ oligarchy ಯಾಜಮಾನ್ಯದ ಅಪಾಯವನ್ನ ಕೊಂಡುತರುತ್ತದೆ. ಈ ಯಾಜಮಾನ್ಯವನ್ನ ಉಳಿಸಿಕೊಳ್ಳಲು ದೇಶದ ಗಮನವನ್ನ ಬೇರೆಡೆ ಸೆಳೆಯಲಾಗುತ್ತದೆ ಉದಾಹರಣೆಗೆ ಅಲ್ಪಸಂಖ್ಯಾತರ ವಿರುದ್ದ ಜನಬಿಪ್ರಾಯವನ್ನ ರೂಪಿಸುವುದು. ಇಂತಹ ಸಂದರ್ಬಗಳಲ್ಲಿ ಬಂಡವಾಳಶಾಹಿಗಳ ಬಂಡವಾಳವು ಅಂಚಿನಲ್ಲಿರುವ ಪುಂಡು ಪೋಕರಿಗಳ ಗುಂಪಿಗೆ ಉತ್ತೇಜನ ಕೊಟ್ಟು, ಹಣಕಾಸಿನ ನೆರವನ್ನ ನೀಡಿ ಆವನ್ನ ಕೇಂದ್ರಕ್ಕೆ ತಂದು ನಿಲ್ಲಿಸುತ್ತವೆ (ಇಂದಿನ ಬಹುತೇಕ ಆದುನಿಕ ಸಮಾಜಗಳಲ್ಲಿ ಅಲ್ಪಸಂಖ್ಯಾತರ ವಿರುದ್ದ ದ್ವೇಶದ ಬಾವನೆಗಳು ಯಥೇಚ್ಛವಾಗಿವೆ).
ಪೋಲೆಂಡ್‍ನ ಆರ್ಥಿಕತಜ್ಞ ಮೈಕೆಲ್ ಕಲೇಚ್ಕಿ ಇದನ್ನ  ‘ಉದಯಿಸುತ್ತಿರುವ ಫ್ಯಾಸಿಸ್ಟರ ಜೊತೆಗೆ ದೊಡ್ಡ ಉದ್ಯಮದ ಪಾಲುದಾರಿಕೆಯ ಪ್ರಾರಂಬ’ ಎಂದು ಕರೆಯುತ್ತಾನೆ
ಈಗ ಬಾರತದಲ್ಲಿಯೂ ಇದೆ ಸಂಬವಿಸುತ್ತಿದೆ. ಅತಿ ದೊಡ್ಡ ಉದ್ಯಮ ಮತ್ತು ಹಿಂದುತ್ವದ ಪುಂಡರ ನಡುವಿನ ಪಾಲುದಾರಿಕೆ ಕುದುರಿಕೊಳ್ಳಲು ಮೋದಿ ಬಹು ಮುಖ್ಯ ಕಾರಣಕರ್ತರಾಗುತ್ತಿದ್ದಾರೆ. ಆದರೆ 1930ರ ಮತ್ತು ಈಗಿನ ಸಂದರ್ಬದ ನಡುವೆ ಮತ್ತೊಂದು ಮುಖ್ಯ ವ್ಯತ್ಯಾಸವೆಂದರೆ ಆಗ ಬಂಡವಾಳಶಾಹಿ ದೇಶಗಳ ಕಾರ್ಪೋರೇಟ್-ಆರ್ಥಿಕ oligarchyಯು ದೇಶವೊಂದರ ನೀತಿಯಾಗಿರುತ್ತಿತ್ತು ಮತ್ತು ಬೇರೆ ದೇಶಗಳ ಅದೆ ಮಾದರಿಯ ವ್ಯವಸ್ಥೆಯ oligarchy ಗಳ ಜೊತೆಗೆ ಪ್ರತಿಸ್ಪರ್ದೆ ನಡೆಸುತ್ತಿತ್ತು. ಮಿಲಿಟರೀಕರಣವನ್ನ ಸಂಪೂರ್ಣ ಶಸಸ್ತ್ರೀಕರಣಗೊಳಿಸುವುದರ ಮೂಲಕ ಫ್ಯಾಸಿಸಂ ಜೊತೆ ಸಂಬಂದ ಬೆಳೆಸಲಾಗುತ್ತಿತ್ತು ಮತ್ತು ಅನಿವಾರ್ಯವಾಗಿ ಅದು ಆಗ ಯುದ್ದಕ್ಕೆ ಕಾರಣವಾಯಿತು
ಪ್ರಭಾತ್ ಪಟ್ನಾಯಕ್
ಇದು ಎರಡು ಬಗೆಯಲ್ಲಿ ಪರಿಣಾಮಗಳನ್ನ ಬೀರಿತು : ಮೊದಲನೆಯದಾಗಿ ಯುದ್ದದ ತಯಾರಿಗಾಗಿ ಮಿಲಿಟರಿಯ ಖರ್ಚುವೆಚ್ಚಕ್ಕಾಗಿ ಸರಕಾರಗಳ ಸಾಲದ ಮೂಲಕ ಪಡೆದ ಹಣಕಾಸಿನ ಸಹಾಯದಿಂದ ಬಲು ದೊಡ್ಡ ಮುಗ್ಗಟ್ಟಿನಿಂದ, ಸಾಮೂಹಿಕ ನಿರುದ್ಯೋಗದಿಂದ ಹೊರಬರಲು ಸಾದ್ಯವಾಯಿತು (1931ರಲ್ಲಿ ಜಪಾನ್ 1933ರಲ್ಲಿ ಜರ್ಮನಿ ಚೇತರಿಸಿಕೊಂಡವು).  ಮುಗ್ಗಟ್ಟಿನಿಂದ ಚೇತರಿಕೆ ಮತ್ತು ಯುದ್ದದಿಂದ ಉಂಟಾದ ಭೀಕರ ಪರಿಣಾಮಗಳು ಈ ಎರಡರ ನಡುವಿನ ಅಲ್ಪಕಾಲದ ವಿರಾಮ ಕಾಲಘಟ್ಟದಲ್ಲಿ ನಿರುದ್ಯೋಗ ಸಮಸ್ಯೆಯನ್ನ ನಿವಾರಿಸಿಕೊಳ್ಳುವುದರ ಮೂಲಕ ಫ್ಯಾಸಿಸ್ಟ್ ಸರಕಾರಗಳು ಜನಪ್ರಿಯತೆಯನ್ನ ಪಡೆದುಕೊಂಡವು. ಎರಡನೆ ಪರಿಣಾಮವೆಂದರೆ ಈ ಪ್ರಕ್ರಿಯೆಯಲ್ಲಿ ಯುದ್ದದ ಕಾರಣಕ್ಕೆ ಫ್ಯಾಸಿಸಂ ಸಹ ಬೆಂದು ಭಸ್ಮವಾಯಿತು. ಈ ನಿರ್ನಾಮಕ್ಕೆ ತೆರಬೇಕಾದ ಬೆಲೆ ಘೋರವಾಗಿದ್ದರೂ ಸಹ ಅದು ಫ್ಯಾಸಿಸಂನ ನಾಶಕ್ಕಾಗಿ ಎಂಬುದಾಗಿತ್ತು
ಇಂದಿನ ವೈದೃಶ್ಯವೆಂದರೆ ಪ್ರತಿಸ್ಪರ್ದಿಗಳಾಗಿರುವ ಕಾರ್ಪೋರೇಟ್-ಹಣಕಾಸಿನ oligarchy ಗಳು ಪರಸ್ಪರ ಸ್ಪರ್ದೆಯಲ್ಲಿ ತೊಡಗಿಕೊಂಡಿರುವುದು ಕಂಡುಬರುವುದಿಲ್ಲ. ಇವೆಲ್ಲವೂ ಜಾಗತಿಕ ಬಂಡವಾಳದ ಚೌಕಟ್ಟಿನಲ್ಲಿ ಏಕೀಕೃತÀಗೊಂಡಿವೆ ಮತ್ತು ಮತ್ತೊಂದು ಯುದ್ದದ ಮೂಲಕ ಜಗತ್ತು ಪ್ರತ್ಯೇಕ “ಆರ್ಥಿಕ ಪ್ರದೇಶ”ಗಳಾಗುವುದನ್ನ ಬಯಸುವುದಿಲ್ಲ. ಬದಲಿಗೆ ಬಂಡವಾಳಕ್ಕೆ, ಹಣಕಾಸಿನ ಹರಿವಿಗೆ ಮಾರುಕಟ್ಟೆ ಜಗತ್ತು ಮುಕ್ತವಾಗಿರಲು ಬಯಸುತ್ತವೆ. ಆದರೆ ಇದರರ್ಥ ಮತ್ತೊಂದು ಯುದ್ದದ ಸಾದ್ಯತೆ ಇಲ್ಲವೆಂದಲ್ಲ. ಪ್ರದಾನ ಶಕ್ತಿಗಳು (ಬಲಿಶ್ಟ ರಾಶ್ಟ್ರಗಳು) ಜಾಗತಿಕ ಹಣಕಾಸಿನ ಯಾಜಮಾನ್ಯದ ಹಂಗಿಲ್ಲದ, ತಮಗೆ ಸವಾಲು ಒಡ್ಡುತ್ತಿರುವ ದೇಶಗಳ ವಿರುದ್ದ ಯುದ್ದವನ್ನ ಕೇಂದ್ರೀಕರಿಸುತ್ತವೆ
ಬಂಡವಾಳ ಹಣಕಾಸು ವ್ಯವಸ್ಥೆ ವಿತ್ತೀಯ ಕೊರತೆಯನ್ನ ಇಶ್ಟಪಡುವುದಿಲ್ಲ. ಆ ಕಾರಣಕ್ಕಾಗಿ ಸರಕಾರದ ವೆಚ್ಚವು ಪ್ರದಾನವಾಗಿರುವ (ಸೈನ್ಯದ ವೆಚ್ಚವಾದರೂ ಸಹ) ದೇಶವೊಂದರ ವಿರುದ್ದ ಜಾಗತಿಕ ಬಂಡವಾಳ ಹಣಕಾಸು ವ್ಯವಸ್ಥೆಯು ವಿತ್ತೀಯ ಕೊರತೆಯಿದ್ದರೆ ಹಣಕಾಸು ನೆರವು ಕೊಡಲು ಸಾದ್ಯವಿಲ್ಲವೆಂದು ಫರ್ಮಾನು ಹೊರಡಿಸುತ್ತದೆ (ಇಲ್ಲವೆಂದರೆ ಆ ದೇಶವನ್ನೆ ತೊರೆದು ಹೊರಬರುತ್ತದೆ ಮತ್ತು ಆ ಮೂಲಕ ಹಣಕಾಸಿನ ಬಿಕ್ಕಟ್ಟಿಗೆ ಕಾರಣವಾಗುತ್ತದೆ). ಬಂಡವಾಳಶಾಹಿಗಳ ಮೇಲೆ ತೆರಿಗೆ ಹೇರುವುದರ ಮೂಲಕ ಆರ್ಥಿಕ ಸ್ಥಿತಿಯನ್ನ ಸಮತೂಗಿಸುವುದನ್ನೂ ಬಂಡವಾಳ ಹಣಕಾಸು ವ್ಯವಸ್ಥೆ ಸಹಜವಾಗಿಯೆ ವಿರೋದಿಸುತ್ತದೆ. ಆದರೆ ಸರಕಾರದ ವೆಚ್ಚಕ್ಕೆ ಧನಸಹಾಯ ಒದಗಿಸುವ ದಾರಿ ಇದೊಂದೆ ಆಗಿರುತ್ತದೆ ಮತ್ತು ಇದು ಉದ್ಯೋಗ ಅವಕಾಶಗಳನ್ನ ಹೆಚ್ಚಿಸುತ್ತದೆ. ನವ ಉದಾರೀಕರಣದ ಬಂಡವಾಳಶಾಹಿಯ ಅಡಿಯಲ್ಲಿ ನಿರುದ್ಯೋಗದ ಸ್ಥಿತಿಯಲ್ಲಿ ಯಾವುದೆ  ಬಗೆಯ ವ್ಯತ್ಯಾಸವನ್ನ ಉಂಟು ಮಾಡಲು ಸಮಕಾಲೀನ ಫ್ಯಾಸಿಸಂಗೆ ಸಾದ್ಯವಾಗುವುದಿಲ್ಲ ಮತ್ತು ಕಾರ್ಪೋರೇಟ್ ಹಣಕಾಸು ಸಹಾಯ ಪಡೆದುಕೊಳ್ಳುವುದರಿಂದ ಈ ಫ್ಯಾಸಿಸಂಗೆ ನವ ಉದಾರೀಕರಣದ ಬಂಡವಾಳಶಾಹಿಗೆ ಸವಾಲು ಒಡ್ಡಲು ಸಹ ಸಾದ್ಯವಿಲ್ಲ
ಇದರರ್ಥವೆಂದರೆ ದುಡಿಯುವ ವರ್ಗದ ಜನರ ಬದುಕನ್ನ ಸಬಲೀಕರಣಗೊಳಿಸುವುದರ ಮೂಲಕ ಈ ಫ್ಯಾಸಿಸಂ ರಾಜಕೀಯ ನ್ಯಾಯಸಮ್ಮತವನ್ನ ಗಳಿಸಲು ಸಾದ್ಯವಿಲ್ಲ ಮತ್ತು ಅದೆ ಸಂದರ್ಭದಲ್ಲಿ 1930ರಲ್ಲಿ ಆದಂತೆ ಯುದ್ದದ ಮೂಲಕವೂ ಈ ಫ್ಯಾಸಿಸಂ ನಾಶವಾಗುವುದಿಲ್ಲ. ಸಂಸದೀಯ ಚುನಾವಣೆಗಳನ್ನ ಬಿಟ್ಟುಕೊಡುವುದರ ಮೂಲಕವೂ ಇದು ಸಾದ್ಯವಾಗುವುದಿಲ್ಲ ಏಕೆಂದರೆ ಈ ಚುನಾವಣೆಗಳು ಜಾಗತಿಕ ಹಣಕಾಸು ವಹಿವಾಟಿಗೆ ನ್ಯಾಯಬದ್ದತೆಯನ್ನ ತಂದುಕೊಡುತ್ತವೆ (ನವ ಉದಾರೀಕರಣದ ನೀತಿಗಳಿಂದ ಹೊರಬರಲು ಪ್ರಯತ್ನಿಸಿದ  ಲ್ಯಾಟೀನ್ ಅಮೇರಿಕಾ ದೇಶಗಳ ಪ್ರಗತಿಪರ ಆಡಳಿತದ ವಿರುದ್ದ ಪ್ರಜಾಪ್ರಬುತ್ವ ಉಳಿಸಿ ಹೆಸರಿನಲ್ಲಿ ಸಂಸದೀಯ ಕ್ಷಿಪ್ರ ಕಾರ್ಯಾಚರಣೆಗಳು ಸಂಬವಿಸಿದವು. ಹಿಂದಿನ ಕಾಲದಲ್ಲಿ ಸಿಐಎ ಏಜೆನ್ಸಿ ಪ್ರಾಯೋಜಿತದಿಂದ ನಡೆದ ಕ್ಷಿಪ್ರ ಪಿತೂರಿಯಲ್ಲಿ ಇರಾನ್‍ನಲ್ಲಿ ಮೋಸ್ಸೇದೇಗ ಅವರನ್ನ ಅಥವಾ ಗ್ವಾಟೆಮಾಲಾದ ಅರ್ಬನೇಜ್ ಅಥವಾ ಚಿಲಿಯ ಅಲೆಂಡೆ ಅವರನ್ನ ಪದಚ್ಯುತಿಗೊಳಿಸಿದ ಮಾದರಿಗೆ ಇಂದಿನದನ್ನ ಹೋಲಿಸಲಾಗುವುದಿಲ್ಲ)
ಈ ಎಲ್ಲಾ ಹಿನ್ನೆಲೆಯಲ್ಲಿ ಈ ಕೆಳಗಿನ ಸಂಬವನೀಯ ಸಾರಾಂಶದ ಸಾದ್ಯತೆ ಇದೆ. ಚುನಾವಣ ಪ್ರಕ್ರಿಯೆಯ ಅನವಶ್ಯಕ ಮದ್ಯಪ್ರವೇಶ ಇದ್ದಾಗ್ಯೂ ಸಹ, ದಿನನಿತ್ಯದ ಬದುಕಿನ ಅಗತ್ಯಗಳ ಕುರಿತ ಕಾಳಜಿ, ಆಸಕ್ತಿ ಕಾಣೆಯಾಗಿ ಹಠಾತ್ ಭಯೋತ್ಪಾದನೆಯ ಕಾರಣಕ್ಕೆ ಹುಟ್ಟಿಕೊಂಡ ಹುಸಿಯಾದ, ಟೊಳ್ಳುತನದ ದೇಶಬಕ್ತಿಯ ಕುರಿತು ಚರ್ಚೆ ನಡೆಯುತ್ತಿದ್ದರೂ ಸಹ (ಇಲ್ಲಿ ಭಯೋತ್ಪಾದನೆ ಮತ್ತು ಪ್ರಬುತ್ವ ಫ್ಯಾಸಿಸಂ ಅಂಶಗಳ ನಡುವೆ ಒಂದು ಡಯಲೆಕ್ಟ್ ಇದೆ. ಇವೆರೆಡೂ ಪರಸ್ಪರ ಬಲಗೊಳ್ಳುವಂತಹ ಕಾರ್ಯಯೋಜನೆ ರೂಪಿಸುತಿರುತ್ತವೆ) ಮೋದಿ ಸರಕಾರವು ಮುಂಬರುವ ಲೋಕಸಬೆ ಚುನಾವಣೆಯಲ್ಲಿ ಸೋಲುತ್ತದೆ. ಆದರೆ ನಂತರ ಅದಿಕಾರಕ್ಕೆ ಬರುವ ಸರಕಾರವು ದುಡಿಯುವ ವರ್ಗಕ್ಕೆ ಉತ್ತೇಜನ ನೀಡಲು ನವಉದಾರೀಕರಣದ ಬಲೆಯಿಂದ ಕಳಚಿಕೊಳ್ಳುವುದಿಲ್ಲ ಮತ್ತು ಕೆಲ ಸಮಯದ ನಂತರ ತನ್ನ ಜನಪ್ರಿಯ ಬೆಂಬಲವನ್ನು ಕಳೆದುಕೊಳ್ಳುತ್ತದೆ. ಇದು ಮತ್ತೆ ಮದ್ಯಂತರ ಚುನಾವಣೆಯಲ್ಲಿ ಫ್ಯಾಸಿಸಂ ಆಡಳಿತ ಮರಳಿ ಅದಿಕಾರಕ್ಕೆ ಬರಲು ಸಹಾಯ ಮಾಡುತ್ತದೆ
ಸಮಾಜದ ಫ್ಯಾಸಿಸಂ 
ಸರಕಾರ ರಚನೆಯ ಕುರಿತು ತೂಗುಯ್ಯಾಲೆ ನಡೆಯುತ್ತಿದೆ, ಫ್ಯಾಸಿಸಂ ಶಕ್ತಿಗಳು ನಾಶವಾಗುತ್ತಿಲ್ಲ ಬದಲಿಗೆ ಈ ಹೊಯ್ದಾಡುವಿಕೆಗಳ ಮೂಲಕ ಹಂತ ಹಂತವಾಗಿ ಸಮಾಜ ಮತ್ತು ರಾಜ್ಯವ್ಯವಸ್ಥೆಯನ್ನೆ ಫ್ಯಾಸಿಸಂಕರಣಗೊಳಿಸಲಾಗುತ್ತಿದೆ. ಉದಾಹರಣೆಗೆ ಮದ್ಯಪ್ರದೇಶದಲ್ಲಿ ಬಿಜೆಪಿ ಪಕ್ಷವನ್ನ ಸೋಲಿಸಿ ಅದಿಕಾರಕ್ಕೆ ಬಂದ ಕಾಂಗ್ರೆಸ್ ಪಕ್ಷವು ಹಿಂದುತ್ವಕ್ಕೆ ಮೊರೆ ಹೋಗುವುದರ ಮೂಲಕ ಸಂಘ ಪರಿವಾರವನ್ನ ಅನುಕರಿಸುತ್ತಿದೆ. ಇದು ಸರಕಾರ ರಚನೆಯಲ್ಲಿನ ಅನಿಶ್ಚತೆಯ ಮೂಲಕ ಉಂಟಾಗುವ ಸಮಾಜದ ಹಂತಹಂತವಾದ ಫ್ಯಾಸಿಸಂಕರಣಕ್ಕೆ ಪ್ರತ್ಯಕ್ಷ ಸಾಕ್ಷಿ.
ಮುಂದಿನ ದಿನಗಳಲ್ಲಿ ಈ ಫ್ಯಾಸಿಸ್ಟ್ ಶಕ್ತಿಗಳ ಒತ್ತಡದಿಂದಾಗಿ (ಅವು ಅದಿಕಾರದಲ್ಲಿ ಇರಲಿ ಅಥವಾ ಬಿಡಲಿ) ಸಮಾಜವು ಫ್ಯಾಸಿಸಂಕರಣಗೊಳ್ಳುತ್ತಲೆ ಇರುತ್ತದೆ.  ಈ ಮಾದರಿಯ ಫ್ಯಾಸಿಸಂಕರಣವು ಫ್ಯಾಸಿಸ್ಟ್ ಪ್ರಬುತ್ವನ್ನ ಹೇರುವುದರ ಮೂಲಕ ಸಮಾಜವನ್ನ ಫ್ಯಾಸಿಸಂಕರಣಗೊಳಿಸುತ್ತಿದ್ದ 1930ರ ಮಾದರಿಗೆ ಸಂಪೂರ್ಣ ವಿರುದ್ದವಾಗಿದೆ. ಯಾವುದೋ ಒಂದು ಸಂದರ್ಬದಲ್ಲಿ ಸ್ವತಃ ತಾನೆ ನಾಶವಾಗುವ ತನಕವೂ ಇದು “ಶಾಶ್ವತ ಫ್ಯಾಸಿಸಂ”ಗೆ ಒಂದು ನಿದರ್ಶನದಂತಿದೆ
ನವಉದಾರೀಕರಣದ ಬಿಕ್ಕಟ್ಟು ಈ ತರಹದ ಸಂದರ್ಬಗಳಲ್ಲೊಂದು. ಇಂಡಿಯಾದಲ್ಲಿ ಈ ಫ್ಯಾಸಿಸಂಕರಣವನ್ನ ಪರಿಣಾಮಕಾರಿಯಾಗಿ ವಿರೋದಿಸಬೇಕೆಂದರೆ ತನ್ನ ಕೊನೆ ತುದಿಯನ್ನ ತಲುಪಿರುವ ಈಗಿನ ನವಉದಾರೀಕರಣದ ಬಂಡವಾಳಶಾಹಿ ಆಡಳಿತವನ್ನ ಮೀರಿ ಚಿಂತಿಸಬೇಕಾಗುತ್ತದೆ. ಈ ನವಉದಾರೀಕರಣವು ಜಗತ್ತನ್ನ ಬಿಕ್ಕಟ್ಟಿನ ಬಲೆಯೊಳಗೆ ಸಿಲುಕಿಸಿದೆ. ಎಶ್ಟರಮಟ್ಟಿಗೆಂದರೆ ಡೊನಾಲ್ಡ್ ಟ್ರಂಪ್‍ಗೆ ಅಮೇರಿಕಾದಲ್ಲಿ ವ್ಯಾಪಾರ ರಕ್ಷಣೆ ಕಾನೂನು ಜಾರಿಗೊಳಿಸದೆ ಬೇರೆ ವಿದಿಯಲ್ಲ ಎನ್ನುವಂತಹ ಸ್ಥಿತಿ ಇದೆ (ಇದು ನವಉದಾರೀಕರಣದ ಕೊಂಚ ಮಟ್ಟಿಗಿನ ನಿರಾಕರಣೆಯಂತಿದೆ). ಸದ್ಯದ ಪರಿಸ್ಥಿತಿಯಲ್ಲಿ ದುಡಿಯುವ ವರ್ಗದ ಜನರ ಬದುಕನ್ನ ಹಸನುಗೊಳಿಸುವ ಸಲುವಾಗಿ ಕನಿಶ್ಟ ಕಾರ್ಯಕ್ರಮಗಳನ್ನ ರೂಪಿಸುವುದರ ಕಡೆಗೆ ಇಡುವ ಹೆಜ್ಜೆಗಳು ಈ ನವಉದಾರಿಕರಣವನ್ನ ಮೀರುವಲ್ಲಿ ಸಹಾಯವಾಗುತ್ತವೆ
ಹೀಗೆಲ್ಲ ಹೇಳುವುದರ ಅರ್ಥ ಈ ಚುನಾವಣೆಯಲ್ಲಿ ಹಿಂದುತ್ವ ಶಕ್ತಿಗಳನ್ನ ಸೋಲಿಸುವುದನ್ನು ಗೌಣಗೊಳಿಸಿದಂತಲ್ಲ ಮತ್ತು ಇದನ್ನ ಸಾದಿಸಲು ಸೆಕ್ಯುಲರ್ ಪಕ್ಷಗಳ ನಡುವೆ ಐಕ್ಯತೆಯ ಅಗತ್ಯವಿದೆ. ಆದರೆ ಇದು ಮೊದಲನೆ ಹೆಜ್ಜೆಯಶ್ಟೆ. ಸಮಾಜ ಮತ್ತು ರಾಜ್ಯವ್ಯವಸ್ಥೆ ಫ್ಯಾಸಿಸಂಕರಣಗೊಳಿಸುವುದನ್ನ ತಡೆಯಲು ಬೇರೆಯದೆ ಚಿಂತನೆಗಳ ಅವಶ್ಯಕತೆ ಇದೆ. ಈ ನವಉದಾರೀಕರಣದ ಸುಲಿಗೆಯಿಂದ ದುಡಿಯುವ ವರ್ಗದ ಜನರನ್ನ ಕಾಪಾಡಲು ಕಾರ್ಯಯೋಜನೆಗಳ ಅವಶ್ಯಕತೆ ಇದೆ. ಈ ತರಹದ ಪರಿಹಾರವನ್ನ ಕಂಡುಕೊಂಡಾಗ ಮಾತ್ರ ಮೋದಿ ವರ್ಶಗಳ ಫ್ಯಾಸಿಸ್ಟ್ ಲೆಗಸಿಯನ್ನ ಮೀರಲು ಸಾದ್ಯವಾಗುತ್ತದೆ
( ಕೃಪೆ : ಫ್ರಂಟ್‍ಲೈನ್ 12, ಎಪ್ರಿಲ್ 2019)
+ posts

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಕಂಗನಾ ಪೋಸ್ಟ್‌ಗಳಿಗೆ ಸೆನ್ಸಾರ್‌ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ

0
ನಟಿ ಕಂಗನಾ ರಣಾವತ್ ಅವರು ಸಾಮಾಜಿಕ ಮಾಧ್ಯಮಗಳಲ್ಲಿ ಮಾಡುವ ಪೋಸ್ಟ್‌ಗಳನ್ನು ಇನ್ನು ಮುಂದೆ ಸೆನ್ಸಾರ್ ಮಾಡಬೇಕು ಎಂದು ಒತ್ತಾಯಿಸಿದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿದೆ ಎಂದು ಬಾರ್ ಅಂಡ್‌‌ ಬೆಂಚ್ ವರದಿ...
Wordpress Social Share Plugin powered by Ultimatelysocial
Shares