Homeಅಂಕಣಗಳುಗೌರಿ ಕಾರ್ನರ್: ಸೋಮಾಲಿಯಾದ ಅರಣ್ಯ ರಕ್ಷಿಸಿದ ಫಾತಿಮಾ

ಗೌರಿ ಕಾರ್ನರ್: ಸೋಮಾಲಿಯಾದ ಅರಣ್ಯ ರಕ್ಷಿಸಿದ ಫಾತಿಮಾ

- Advertisement -
- Advertisement -

ಜಗತ್ತಿನ ಅತಿ ಬಡರಾಷ್ಟ್ರಗಳಲ್ಲಿ ಸೋಮಾಲಿಯಾ ಒಂದು. ಆಫ್ರಿಕಾ ಖಂಡದ ಪೂರ್ವಭಾಗದಲ್ಲಿ ಸೌದಿ ಅರೇಬಿಯಾದಂತಹ ಶ್ರೀಮಂತ ರಾಷ್ಟ್ರಕ್ಕೆ ಹೊಂದಿಕೊಂಡಂತಿರುವ ಸೋಮಾಲಿಯಾ ಬಡತನ, ಅನಕ್ಷರತೆ, ಅಂತರ್ಯುದ್ಧ ಮತ್ತು ದಂಗೆಗಳಿಂದ ತತ್ತರಿಸಿರುವ ದೇಶ.

ಸೋಮಾಲಿಯಾ ಜನರನ್ನು ಒಗ್ಗೂಡಿಸುವುದು ಅವರ ಧರ್ಮ (ಇಸ್ಲಾಂ) ಮತ್ತು ಭಾಷೆ. ಆದರೆ ತಮ್ಮ ಸಾಂಸ್ಕೃತಿಕ ಒಗ್ಗಟ್ಟಿನ ಬಗ್ಗೆ ಹೆಮ್ಮೆ ಪಡುವ ಸೋಮಾಲಿಗಳು ಅವಕಾಶ ಸಿಕ್ಕಾಗಲೆಲ್ಲಾ ತಮ್ಮವರೇ ಆದ ನೆರೆಯ ಬುಡಕಟ್ಟಿನವರೊಂದಿಗೆ ಕಾಳಗಕ್ಕೆ ಇಳಿಯುವುದೇ ಒಂದು ವೈಚಿತ್ರ್ಯ.

ಶೇ.76ರಷ್ಟು ಸೋಮಾಲಿಗಳು ಇವತ್ತಿಗೂ ಅಲೆಮಾರಿ ಗೊಲ್ಲರು. ತಮ್ಮ ಕುರಿ, ಮೇಕೆ, ಒಂಟೆ ಮತ್ತು ಜಾನುವಾರುಗಳೊಂದಿಗೆ ಅಲೆಮಾರಿ ಜೀವನ ಸಾಗಿಸುವ ಸೋಮಾಲಿಗಳು ಇವತ್ತಿಗೂ ಅವಲಂಬಿಸಿರುವುದು ತಮ್ಮ ಸಾಕುಪ್ರಾಣಿಗಳನ್ನೇ. ಅಷ್ಟೇ ಏಕೆ, ಸೋಮಾಲಿಯಾ ದೇಶದ ಆರ್ಥಿಕತೆ ಕೂಡ ಅವಲಂಬಿತವಾಗಿರುವುದು ತನ್ನ ಅಲೆಮಾರಿ ಜನರ ಜೀವನಾಧಾರಗಳನ್ನೇ. ತನ್ನ ಗೊಲ್ಲರ ಸಾಕುಪ್ರಾಣಿಗಳ ಮಾಂಸ, ಚರ್ಮ ಇತ್ಯಾದಿಗಳನ್ನು ಬೇರೆ ದೇಶಗಳಿಗೆ ಮಾರಾಟ ಮಾಡುವುದರಲ್ಲಿಯೇ ಸೋಮಾಲಿಯಾ ದೇಶ ತನ್ನ ವಿದೇಶ ವಿನಿಮಯದ ಶೇ.90ರಷ್ಟನ್ನು ಗಳಿಸುತ್ತದೆ. ಸೋಮಾಲಿಯಾದ ಜೀವನೋತ್ಪನ್ನಗಳು ಹೆಚ್ಚಾಗಿ ರಫ್ತಾಗುತ್ತಿದ್ದದ್ದು ತನ್ನ ನೆರೆಯಲ್ಲಿರುವ ಸೌದಿ ಅರೇಬಿಯಾಕ್ಕೆ.

ಅಲೆಮಾರಿ ಗೊಲ್ಲರ ಸರಳ ಜೀವನ ಮತ್ತು ಅವರ ಉತ್ಪನ್ನವನ್ನೇ ನಂಬಿದ್ದ ಸೋಮಾಲಿಯಾ ದೇಶ ಸಂಕಷ್ಟದ ದಿನಗಳಿಗೆ ಸಿಲುಕಿದ್ದು 90ರ ದಶಕದಲ್ಲಿ ಅಂತರ್ಯುದ್ಧ ಶುರುವಾದಾಗ. ಆ ಯುದ್ಧದ ಪರಿಣಾಮವಾಗಿ ಮೂರು ಲಕ್ಷ ಜನ ಸಾವನ್ನಪ್ಪಿದರಲ್ಲದೆ, 45 ಲಕ್ಷ ಜನ ಕಾಯಿಲೆ ಹಾಗೂ ಉಪವಾಸದಿಂದ ನರಳಿದರು.

ಈ ದುರಂತದಿಂದ ಸೋಮಾಲಿಯಾ ಚೇತರಿಸಿಕೊಳ್ಳುತ್ತಿರುವಾಗಲೇ, ಸೋಮಾಲಿಯಾದ ಗೊಲ್ಲರ ಉತ್ಪನ್ನಗಳನ್ನು ಹೆಚ್ಚು ಪ್ರಮಾಣದಲ್ಲಿ ಖರೀದಿಸುತ್ತಿದ್ದ ಸೌದಿ ಅರೇಬಿಯಾ ಒಂದು ಶಾಕ್ ನೀಡಿತು. ಸೋಮಾಲಿಯಾದ ಪ್ರಾಣಿಗಳು ’ಕಣಿವೆ ಜ್ವರ’ದಿಂದ (Rift valley fever) ಬಳಲುತ್ತಿವೆಯೆಂದು ಅವುಗಳ ರಫ್ತನ್ನು ನಿಷೇಧಿಸಿತು. ಅಷ್ಟೇ ಅಲ್ಲದೆ, ಸೋಮಾಲಿಯಾದ ಪ್ರಾಣಿಗಳಿಗೆ ಬದಲಾಗಿ, ಅಲ್ಲಿನ ಮರಮಟ್ಟುಗಳತ್ತ ಸೌದಿ ಅರೇಬಿಯಾ ಕಣ್ಣುಗಳನ್ನಿಟ್ಟಿತು. ಇದ್ದಲಿನ (ಚಾರ್ಕೋಲ್) ಮುಖ್ಯ ಆಧಾರ ಈ ಮರಗಳು. ಅಷ್ಟು ಹೊತ್ತಿಗಾಗಲೇ ಆರ್ಥಿಕ ಬಿಕ್ಕಟ್ಟಿನಲ್ಲಿ ಸಿಲುಕಿದ್ದ ಸೋಮಾಲಿಗಳು ಕಂಡಕಂಡಲ್ಲಿ ಮರಮಟ್ಟುಗಳನ್ನು ಕೆಡವಲಾರಂಭಿಸಿದ್ದರು. ನಿಧಾನವಾಗಿ ಸೋಮಾಲಿಯಾದ ಅರಣ್ಯಗಳು ನಾಶವಾಗಲಾರಂಭಿಸಿದವು.

ಆಗ, ತನ್ನ ದೇಶದ ಜನರಿಗೆ ಬುದ್ದಿ ಹೇಳಿದವಳು ಫಾತಿಮಾ ಜಿಬ್ರೆಲ್. ಈಕೆ ಸೋಮಾಲಿಯಾದ ಅಲೆಮಾರಿ ಗೊಲ್ಲರ ಕುಟುಂಬವೊಂದರಲ್ಲಿ ಜನಿಸಿದಾಕೆ. ಆದರೆ ಅಮೆರಿಕದಲ್ಲಿ ಪದವಿ ಶಿಕ್ಷಣ ಪಡೆದವಳು. ಸಹಸ್ರಾರು ವರ್ಷಗಳಿಂದ ಪರಿಸರವನ್ನೇ ನಂಬಿ ಬದುಕಿದ್ದ ತನ್ನ ಜನ ಹೀಗೆ ಪರಿಸರಕ್ಕೇ ಕೊಡಲಿ ಹಾಕಿದ್ದನ್ನು ಕಂಡ ಫಾತಿಮಾ ತಕ್ಷಣವೇ ಕ್ರಿಯಾಶೀಲವಾದಳು.

ಮರಗಳನ್ನು ಕೆಡವಿದರೆ, ಕಾಡುಗಳನ್ನು ನಾಶಮಾಡಿದರೆ, ಪರಿಸರಕ್ಕೆ ಧಕ್ಕೆ ತಂದರೆ, ಐತಿಹಾಸಿಕವಾಗಿ ಸೋಮಾಲಿಗಳು ನಂಬಿರುವ ಸಾಕುಪ್ರಾಣಿಗಳಿಗೂ ಮತ್ತು ತಮ್ಮ ಅಲೆಮಾರಿ ಜೀವನಶೈಲಿಗೂ ಹಾನಿ ತಂದುಕೊಂಡಂತೆ ಎಂದು ಭಾವಿಸಿದಳು ಫಾತಿಮಾ. “ನಾವು ಅವಲಂಬಿಸಿರುವ ಪರಿಸರವನ್ನು ಒಮ್ಮೆ ನಾಶ ಮಾಡಿದರೆ ಮತ್ತೆ ಲಕ್ಷಾಂತರ ವರ್ಷಗಳಾದರೂ ಅದನ್ನು ಸರಿಪಡಿಸಲಾರೆವು” ಎಂದ ಫಾತಿಮಾ, “ತನಗೆ ಬೇಕಾಗಿರುವ ಇದ್ದಲಿಗಾಗಿ ಸೌದಿ ಅರೇಬಿಯಾ ಸೋಮಾಲಿಯಾಕ್ಕೆ ಮಾಡುತ್ತಿರುವ ಹಾನಿಯನ್ನು ಅರ್ಥೈಸಿಕೊಂಡು ನಮ್ಮ ಬಡದೇಶಕ್ಕೆ ಮಾಡುತ್ತಿರುವ ಅನ್ಯಾಯವನ್ನು ನಿಲ್ಲಿಸಲಿ.” ಎಂದು ಘೋಷಿಸಿದಳು.

ಅಂದಿನಿಂದ ಸೋಮಾಲಿಯಾದ ಪರಿಸರವನ್ನು ರಕ್ಷಿಸುವ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾಳೆ ಫಾತಿಮಾ. ಈಗ ಮುದುಕಿಯಾಗಿರುವ ಫಾತಿಮಾ ಚಿಕ್ಕಪುಟ್ಟ ಗ್ರಾಮಗಳಲ್ಲೂ ಪರಿಸರದ ರಕ್ಷಣೆಯ ಬಗ್ಗೆ ಜಾಗೃತಿ ನೀಡುತ್ತಿದ್ದಾಳೆ. ಇನ್ನು ಸೋಮಾಲಿಯಾದಲ್ಲಿ ಕಾಡುಗಳು ಸುರಕ್ಷಿತವಾಗಿದ್ದರೆ, ಹಳ್ಳಿಗಳಲ್ಲಿ ಸೌರಶಕ್ತಿ ಬಳಕೆ ಆಗುತ್ತಿದ್ದರೆ ಅದಕ್ಕೆ ಫಾತಿಮಾ ಕಾರಣ. ಆದರೆ ಇದು ಫಾತಿಮಾ ಸುಲಭವಾಗಿ ಗಳಿಸಿದ ಸಾಧನೆಯಲ್ಲ.

ಒಂದು ದಶಕದಿಂದ ಅಂತರ್ಯುದ್ಧವನ್ನು ಎದುರಿಸುತ್ತಿರುವ ಸೋಮಾಲಿಯಾ ಈಗ ಬರಗಾಲದಿಂದ ತತ್ತರಿಸುತ್ತಿದೆ. ಈಗ ಅದು ಅಂತರರಾಷ್ಟ್ರೀಯ ಭಯೋತ್ಪಾದಕರಿಗೆ ಸುರಕ್ಷಿತ ತಾಣ ಕೂಡ ಆಗಿದೆ. ಈ ಎಲ್ಲದರ ಮಧ್ಯೆ ಫಾತಿಮಾ ಪರಿಸರವನ್ನು ರಕ್ಷಿಸುವುದಕ್ಕಾಗಿ, ಮಹಿಳೆಯರನ್ನು ಒಗ್ಗೂಡಿಸುತ್ತಿರುವುದಕ್ಕಾಗಿ ಹಲವಾರು ರೀತಿಯ ಕಷ್ಟಗಳನ್ನು ಎದುರಿಸುತ್ತಿದ್ದಾಳೆ. ಆದರೂ, ಈ ಎಲ್ಲಾ ತೊಂದರೆಗಳ ನಡುವೆಯೂ ಇತ್ತೀಚೆಗೆ ಸೋಮಾಲಿಯಾದ ಒಂದು ರಾಜ್ಯವಾದ ಪುಂಟ್‌ಲ್ಯಾಂಡ್‌ನಿಂದ ಇದ್ದಿಲು ರಫ್ತನ್ನು ನಿಷೇಧ ಮಾಡುವುದರಲ್ಲಿ ಯಶಸ್ವಿಯಾಗಿದ್ದಾಳೆ.

ತನ್ನ ಜನರ ಜೀವನಶೈಲಿಯನ್ನು ಮತ್ತು ಪರಿಸರವನ್ನು ಸಂರಕ್ಷಿಸುವುದರಲ್ಲಿ ಫಾತಿಮಾಳದ್ದು ಏಕಾಂಗಿ ಹೋರಾಟ. ಕಳೆದ ವಾರ ಈ ದಿಟ್ಟ ಮಹಿಳೆಯ ಕೊಡುಗೆಯನ್ನು ಪರಿಗಣಿಸಿ ಪರಿಸರ ಸಂರಕ್ಷಣೆಗಾಗಿ ’ಗೋಲ್ಡ್ ಮ್ಯಾನ್ ಎನ್‌ವೈರ್ನಮೆಂಟ್ ಪ್ರೈಜ’ನ್ನು ಈಕೆಗೆ ನೀಡಲಾಗಿದೆ. ಈ ಪ್ರಶಸ್ತಿ ಬರುವವರೆಗೂ ಫಾತಿಮಾ ಜಿಬ್ರೆಲ್ ಬಗ್ಗೆ ಸೋಮಾಲಿಯಾ ಹೊರತುಪಡಿಸಿ ಹೊರಜಗತ್ತಿಗೆ ಗೊತ್ತಿರಲಿಲ್ಲ. ಆದರೆ ಕಾಳಜಿ ಮತ್ತು ಅರ್ಪಣಾಭಾವ ಇದ್ದರೆ ಯಾರಾದರೂ ತಮ್ಮ ಸಮುದಾಯದ ಅಭಿವೃದ್ಧಿಗೆ ಕೊಡುಗೆ ನೀಡಬಹುದು ಎಂಬುದಕ್ಕೆ ಫಾತಿಮಾ ಜಿಬ್ರೆಲ್ ಒಂದು ಉದಾಹರಣೆ.

(ಇದು ಗೌರಿಯವರ ಕಂಡಹಾಗೆ ಅಂಕಣ ಬರಹವೊಂದರ ಮರುಪ್ರಕಟಣೆ)


ಇದನ್ನೂ ಓದಿ: ಕೋವಿಡ್ ಸವಾಲುಗಳಲ್ಲಿ ಪ್ರತಿ ಹಂತದಲ್ಲೂ ಎಡವುತ್ತುರಿವ ರಾಜ್ಯ ಸರ್ಕಾರ; ಜನರನ್ನು ಮಾರಣಾಂತಿಕ ಪರಿಣಾಮಗಳತ್ತ ದೂಡುತ್ತಿದೆಯೇ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಹೀಗೆ ಉತ್ತಮ ಬರಹಗಳನ್ನು ಮರು ಪ್ರಕಟಣೆ ಮಾಡುತ್ತಿರಿ. ಧನ್ಯವಾದ. ‌

LEAVE A REPLY

Please enter your comment!
Please enter your name here

- Advertisment -

2020ರ ದೆಹಲಿ ಗಲಭೆ ಪ್ರಕರಣ: ಐವರು ಆರೋಪಿಗಳನ್ನು ಖುಲಾಸೆಗೊಳಿಸಿದ ನ್ಯಾಯಾಲಯ

2020 ರ ದೆಹಲಿ ಗಲಭೆಗೆ ಸಂಬಂಧಿಸಿದಂತೆ ಬೆಂಕಿ ಹಚ್ಚುವಿಕೆ, ಗಲಭೆ ಮತ್ತು ವಿಧ್ವಂಸಕ ಕೃತ್ಯದ ಆರೋಪ ಹೊತ್ತಿರುವ ಐವರನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ. ಅಬ್ದುಲ್ ಸತ್ತಾರ್, ಮುಹಮ್ಮದ್ ಖಾಲಿದ್, ಹುನೈನ್, ತನ್ವೀರ್ ಮತ್ತು ಆರಿಫ್ ವಿರುದ್ಧದ...

ಕಾರ್‌ ಚಲಾಯಿಸುವಾಗ ಫೋನ್‌ನಲ್ಲಿ ಮಾತನಾಡದಂತೆ ಹೇಳಿದ್ದಕ್ಕೆ ಪತ್ರಕರ್ತನ ಮೇಲೆ ರಾಡ್‌ನಿಂದ ಹಲ್ಲೆ

ಆ್ಯಪ್ ಆಧಾರಿತ ಟ್ಯಾಕ್ಸಿ ಬುಕಿಂಗ್‌ ಮಾಡುವ ಪ್ರಯಾಣಿಕರ ಸುರಕ್ಷತೆ ಮತ್ತು ಚಾಲಕರ ನಡವಳಿಕೆಯ ಕುರಿತ ಕಳವಳವಳಕಾರಿ ಘಟನೆಯೊಂದು ಹರಿಯಾಣದ ಫರಿದಾಬಾದ್‌ನಲ್ಲಿ ಬೆಳಕಿಗೆ ಬಂದಿದೆ. ರ್ಯಾಪಿಡೋ ಟ್ಯಾಕ್ಸಿ ಚಾಲಕನೊಬ್ಬ ಪ್ರಯಾಣಿಕನ ಮೇಲೆ ಕಬ್ಬಿಣದ ರಾಡ್‌ನಿಂದ...

ರಾಜಸ್ಥಾನ| ಎಥೆನಾಲ್ ಸ್ಥಾವರದ ವಿರುದ್ಧ ಪ್ರತಿಭಟನೆ: 40 ಜನರ ಬಂಧನ

ರಾಜಸ್ಥಾನದ ಹನುಮಾನ್‌ಗಢ ಜಿಲ್ಲೆಯ ರೈತರು, ಪ್ರಸ್ತಾವಿತ ಎಥೆನಾಲ್ ಕಾರ್ಖಾನೆಯ ವಿರುದ್ಧ ಎರಡನೇ ದಿನವೂ ಪ್ರತಿಭಟನೆ ಮುಂದುವರೆಸಿದ್ದಾರೆ, ಈ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಮತ್ತು ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಗುರುವಾರ ಮುಂಜಾನೆ ಟಿಬ್ಬಿ ಬಳಿಯ ಗುರುದ್ವಾರದಲ್ಲಿ...

ವಿಧಾನಸಭೆಯಲ್ಲಿ ‘ಗೃಹಲಕ್ಷ್ಮಿ’ ಗದ್ದಲ : ಬಿಜೆಪಿ ಸದಸ್ಯರಿಂದ ಸಭಾತ್ಯಾಗ, ಕ್ಷಮೆ ಕೋರಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್

ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು...

ತಂಪು ಪಾನೀಯದಲ್ಲಿ ಮತ್ತು ಬರುವ ಔಷಧ ಬೆರೆಸಿ ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ: ಆರೋಪಿ ಬಂಧನ

ಮುಂಬೈ ನಗರವನ್ನೇ ಬೆಚ್ಚಿಬೀಳಿಸಿದ ಆಘಾತಕಾರಿ ಘಟನೆಯಲ್ಲಿ, ವಕ್ತಿಯೋರ್ವ ಮತ್ತು ಬರುವ ತಂಪು ಪಾನೀಯ ನೀಡಿ ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಪರಾಧದ ಅಶ್ಲೀಲ ವೀಡಿಯೊಗಳನ್ನು ರೆಕಾರ್ಡ್ ಮಾಡಿ, ನಂತರ ವೀಡಿಯೊಗಳನ್ನು...

ಮನರೇಗಾ ಬದಲು ವಿಬಿ-ಜಿ ರಾಮ್ ಜಿ : ಲೋಕಸಭೆಯಲ್ಲಿ ಮಸೂದೆ ಅಂಗೀಕಾರದ ವೇಳೆ ಸಭಾತ್ಯಾಗಕ್ಕೆ ನಿರ್ಧರಿಸಿದ ವಿಪಕ್ಷಗಳು

ನರೇಗಾ ಬದಲು ತಂದಿರುವ ವಿಕಸಿತ್ ಭಾರತ್-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 (ವಿಬಿ–ಜಿ ರಾಮ್ ಜಿ ಮಸೂದೆ) ಲೋಕಸಭೆಯಲ್ಲಿ ಅಂಗೀಕಾರದ ವೇಳೆ ಸಹಕರಿಸದಿರಲು ವಿರೋಧ ಪಕ್ಷಗಳ ಸಂಸದರು...

ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಆರೋಪ: ಮ್ಯೂಸಿಕ್ ಮೈಲಾರಿ ಮೇಲೆ ಪೋಕ್ಸೋ ಪ್ರಕರಣ ದಾಖಲು 

ಬೆಂಗಳೂರು: ಉತ್ತರ ಕರ್ನಾಟಕದ ಜನಪದ ಗಾಯಕ ಹಾಗೂ ಯೂಟ್ಯೂಬ್ ಸ್ಟಾರ್ ಎಂದೇ ಖ್ಯಾತಿ ಪಡೆದಿದ್ದ ‘ಮ್ಯೂಸಿಕ್ ಮೈಲಾರಿ’ಎಂಬಾತನನ್ನು ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಮಹಾಲಿಂಗಪುರ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಲಾರಿ...

ಇಂಧನ ಖರೀದಿಗೆ ‘ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ’ ಕಡ್ಡಾಯಗೊಳಿಸಿದ ದೆಹಲಿ ಸರ್ಕಾರ

ರಾಷ್ಟ್ರ ರಾಜಧಾನಿ ದೆಹಲಿಯ ವಾಹನ ಮಾಲೀಕರು ಕಟ್ಟುನಿಟ್ಟಾದ ಆದೇಶ ಎದುರಿಸುತ್ತಾರೆ. ಡಿಸೆಂಬರ್ 18 ರಿಂದ ನಗರದಾದ್ಯಂತದ ಪೆಟ್ರೋಲ್ ಬಂಕ್‌ಗಳಲ್ಲಿ ಇಂಧನ ಖರೀದಿಗೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (ಪಿಯುಸಿ) ಕಡ್ಡಾಯಗೊಳಿಸಲಾಗಿದೆ. ದೆಹಲಿ ಪರಿಸರ ಸಚಿವ ಮಂಜಿಂದರ್...

ವೈದ್ಯೆಯ ಹಿಜಾಬ್ ಎಳೆದ ಬಿಹಾರ ಸಿಎಂ, ಅವಹೇಳನ ಮಾಡಿದ ಯುಪಿ ಸಚಿವನ ವಿರುದ್ದ ದೂರು ದಾಖಲು

ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್...

1 ಲಕ್ಷ ರೂಪಾಯಿ ಸಾಲ 74 ಲಕ್ಷ ರೂಪಾಯಿಗೆ ಏರಿಕೆ, ಸಾಲ ತೀರಿಸಲು ಕಿಡ್ನಿ ಮಾರಿದ ರೈತ 

ಅಕ್ರಮವಾಗಿ ಸಾಲ ನೀಡುವವರಿಂದ 1 ಲಕ್ಷ ಸಾಲ ಪಡೆದಿದ್ದು, ಅದಕ್ಕೆ ಹೆಚ್ಚಿನ ದಿನದ ಬಡ್ಡಿ ಸೇರಿ 75 ಲಕ್ಷ ಸಾಲ ಏರಿಕೆಯಾದ ಕಾರಣ ವ್ಯಕ್ತಿಯೊಬ್ಬ ತನ್ನ ಕಿಡ್ನಿಯನ್ನೇ ಮಾರಾಟ ಮಾಡಿರುವ ಘಟನೆ ಮಹಾರಾಷ್ಟ್ರದಲ್ಲಿ...