HomeUncategorizedಶಿಕ್ಷಣ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸಿದ ಶಿಕ್ಷಕಿಯರು: ಶೇ.53.3ಕ್ಕೆ ಏರಿಕೆ

ಶಿಕ್ಷಣ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸಿದ ಶಿಕ್ಷಕಿಯರು: ಶೇ.53.3ಕ್ಕೆ ಏರಿಕೆ

- Advertisement -
- Advertisement -

ಹೊಸದಿಲ್ಲಿ: 2023-24ರಲ್ಲಿ ಭಾರತದ್ಯಂತ ಒಟ್ಟು ಶಾಲಾ ಶಿಕ್ಷಕರಲ್ಲಿ ಮಹಿಳಾ ಶಿಕ್ಷಕರು 53.3% ರಷ್ಟಿದ್ದಾರೆ. ಇದು ಇಲ್ಲಿಯವರೆಗಿನ ಶಿಕ್ಷಕಿಯರು ಅತ್ಯಧಿಕವಾಗಿ ದಾಖಲಾದ ಅನುಪಾತವಾಗಿದೆ. ಕಳೆದ ಕೆಲವು ವರ್ಷಗಳಿಂದ ಹೆಚ್ಚಿನ ಲಿಂಗ ವೈವಿಧ್ಯತೆಯಲ್ಲಿ ಬೋಧನಾ ಕ್ಷೇತ್ರವು ಶೀಘ್ರವಾದ ಬದಲಾವಣೆ ಕಾಣುತ್ತಿದೆ ಎಂದು ಇತ್ತೀಚಿನ ಸರ್ಕಾರಿ ಅಂಕಿ-ಅಂಶಗಳು ಹೇಳಿವೆ.

2018-19ರಲ್ಲಿ  50% ರಷ್ಟು ಪುರುಷ ಶಾಲಾ ಶಿಕ್ಷಕರು ಇದ್ದರು. 2018-19ರಲ್ಲಿ 94.3 ಲಕ್ಷ ಒಟ್ಟು ಶಾಲಾ ಶಿಕ್ಷಕರಲ್ಲಿ 47.16 ಲಕ್ಷ (50.01%) ಪುರುಷರು ಮತ್ತು 47.14 ಲಕ್ಷ (49.98%) ಮಹಿಳಾ ಶಿಕ್ಷಕರಿದ್ದರು.  2023-24ರಲ್ಲಿ ಮಹಿಳಾ ಶಿಕ್ಷಕರ ಸಂಖ್ಯೆ 52 ಲಕ್ಷಕ್ಕೆ ಏರಿದೆ, ಪುರುಷ ಶಿಕ್ಷಕರ ಸಂಖ್ಯೆ ಸರಿಸುಮಾರು 45 ಲಕ್ಷಕ್ಕೆ ಇಳಿದಿದೆ.

ಬೇರೆ ರೀತಿಯಲ್ಲಿ ಹೇಳುವುದಾದರೆ, 2018-19 ಮತ್ತು 2023-24ರ ನಡುವೆ, ಶಾಲಾ ಶಿಕ್ಷಕರ ಮಹಿಳಾ ಪ್ರಾತಿನಿಧ್ಯವು ಶೇ.3.3 ಪಾಯಿಂಟ್‌ಗಳಿಂದ 53.3% ಕ್ಕೆ ಜಿಗಿದಿದೆ ಮತ್ತು ಪುರುಷ ಪ್ರಾತಿನಿಧ್ಯವು 46.6% ಕ್ಕೆ ಇಳಿದಿದೆ. ಶಿಕ್ಷಣ ಸಚಿವಾಲಯದಿಂದ ಸಂಕಲಿಸಲ್ಪಟ್ಟ UDISE+ನ ಅಂಕಿ-ಅಂಶವು ಇದನ್ನು ಹೇಳುತ್ತದೆ.  UDISE+ ಎನ್ನುವುದು ಶಾಲಾ ಶಿಕ್ಷಣದ ಕುರಿತು ಭಾರತದಲ್ಲೆಡೆಯ ವ್ಯಾಪಕವಾದ ಅಂಕಿಅಂಶವಾಗಿದೆ ಮತ್ತು ರಾಜ್ಯಗಳು ನೇರವಾಗಿ ಸಲ್ಲಿಸಲಾದ ದತ್ತಾಂಶವನ್ನು ಇದು ಒಳಗೊಂಡಿದೆ. ಸಚಿವಾಲಯವು ಇತ್ತೀಚೆಗೆ 2022-23 ಮತ್ತು 2023-24 ವರ್ಷಗಳ UDISE+ ವರದಿಗಳನ್ನು ಒಟ್ಟಿಗೆ ಬಿಡುಗಡೆ ಮಾಡಿದೆ.

ಮಹಿಳಾ ಶಿಕ್ಷಕಿಯರು 2019-20ರಲ್ಲಿ ಈ ಮೊದಲಿನ 50% ದಾಖಲೆಯನ್ನು ಮುರಿದು 50.7%ಕ್ಕೆ ಏರಿದನ್ನು  ಈ ವರದಿ ತೋರಿಸುತ್ತದೆ. ಅಂದಿನಿಂದ, 2022-23 ಮತ್ತು 2023-24ರಲ್ಲಿ ಅವರ ಪ್ರಾತಿನಿಧ್ಯವು ಕ್ರಮವಾಗಿ 51.3% ರಿಂದ 52.3% ಮತ್ತು ನಂತರ 53.3% ಕ್ಕೆ ಏರಿಕೆಯಾಗಿ ಅವರ ಪಾಲು ಸ್ಥಿರವಾಗಿ ಹೆಚ್ಚುತ್ತಲೇ ಇದೆ.

ಉನ್ನತ ಶಿಕ್ಷಣದಲ್ಲಿ ಇದು ವ್ಯತಿರಿಕ್ತವಾಗಿದೆ. ಅಲ್ಲಿ ಬೋಧನೆಯು ಪುರುಷ ಪ್ರಧಾನ ವೃತ್ತಿಯಾಗಿ ಉಳಿದಿದೆ ಅಖಿಲ ಭಾರತ ಸಮೀಕ್ಷೆಯ ಉನ್ನತ ಶಿಕ್ಷಣದ (AISHE) ದತ್ತಾಂಶದ ಪ್ರಕಾರ 2021-22ರಲ್ಲಿ 57% ಪುರುಷ ಬೋಧಕರಿಗೆ ಹೋಲಿಸಿದರೆ ಮಹಿಳಾ ಬೋಧಕಿಯರು 43%ರಷ್ಟು ಇದ್ದರು. 2018-19ರಲ್ಲಿ ಮಹಿಳೆಯರು  42% ಮತ್ತು ಪುರುಷರು 58% ರಷ್ಟು ಇದ್ದರು.

ಆದಾಗ್ಯೂ, UDISE+ ದತ್ತಾಂಶವನ್ನು ಸೂಕ್ಷ್ಮವಾಗಿ ಗಮನಿಸಿದರೆ, ಖಾಸಗಿ ಶಾಲೆಗಳಲ್ಲಿ ಮಹಿಳಾ ಶಿಕ್ಷಕರ ಹೆಚ್ಚಳವು ಹೆಚ್ಚು ತೀಕ್ಷ್ಣವಾಗಿದೆ. ವಾಸ್ತವವಾಗಿ ಸರ್ಕಾರಿ ಶಾಲೆಗಳಲ್ಲಿ ಬೋಧನಾ ವರ್ಗವು ಪುರುಷರ ಪ್ರಾಬಲ್ಯವನ್ನು ಮುಂದುವರೆಸಿದೆ.

ಇದು 2018-19 ರಿಂದ 2023-24 ರವರೆಗೆ ಪ್ರತಿ ವರ್ಷವೂ ಹಾಗೆಯೇ ಉಳಿದಿದೆ. 2018-19ರಲ್ಲಿ 49.47 ಲಕ್ಷ ಸರ್ಕಾರಿ ಶಾಲಾ ಶಿಕ್ಷಕರಲ್ಲಿ 28.18 ಲಕ್ಷ (57%) ಪುರುಷರು ಮತ್ತು 21.29 ಲಕ್ಷ (43%) ಮಹಿಳೆಯರಿದ್ದಾರೆ. 2023-24ರಲ್ಲಿ ಮಹಿಳೆಯರ ಸಂಖ್ಯೆಯು ಸುಮಾರು 6%ರಷ್ಟು ಏರಿಕೆ ಕಂಡಿದೆ. 22.65 ಲಕ್ಷ ಮಹಿಳೆಯರು ಸರ್ಕಾರಿ ಶಾಲೆಗಳಲ್ಲಿ ಬೋಧಿಸುತ್ತಿದ್ದರೆ, 27.72 ಲಕ್ಷ ಪುರುಷರಿದ್ದಾರೆ.

ಇದಕ್ಕೆ ವ್ಯತಿರಿಕ್ತವಾಗಿ, ಖಾಸಗಿ ಶಾಲೆಗಳಲ್ಲಿ ಬೋಧನೆ ಮಾಡುವ ಮಹಿಳೆಯರ ಸಂಖ್ಯೆಯಲ್ಲಿ ಸುಮಾರು 20% ರಷ್ಟು ಹೆಚ್ಚಿನ ಏರಿಕೆ ಕಂಡಿದೆ. 2018-19ರಿಂದ 2023-24ರವರೆಗಿನ ಎಲ್ಲಾ ವರ್ಷಗಳಲ್ಲಿ ಖಾಸಗಿ ಶಾಲೆಗಳು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಶಿಕ್ಷಕರನ್ನು ಹೊಂದಿವೆ. 2018-19ರಲ್ಲಿ ಒಟ್ಟು 33.04 ಲಕ್ಷ ಖಾಸಗಿ ಶಾಲಾ ಶಿಕ್ಷಕರಲ್ಲಿ 20.63 ಲಕ್ಷ ಮಹಿಳೆಯರಿದ್ದರು. 2023-24ರಲ್ಲಿ 37.30 ಲಕ್ಷ ಖಾಸಗಿ ಶಾಲಾ ಶಿಕ್ಷಕರಲ್ಲಿ 24.76 (66%) ಮಹಿಳೆಯರಿದ್ದರು.

ಕೆಲವು ರಾಜ್ಯಗಳು ಸರ್ಕಾರಿ ಶಾಲೆಗಳಲ್ಲಿ ಮೇಲಿನ ದತ್ತಾಂಶಗಳಿಗೆ ವ್ಯತಿರಿಕ್ತವಾಗಿವೆ. ಉದಾಹರಣೆಗೆ ಕೇರಳದಲ್ಲಿ 78% ಸರ್ಕಾರಿ ಶಾಲಾ ಶಿಕ್ಷಕರು ಮಹಿಳೆಯರಾಗಿದ್ದರೆ, ತಮಿಳುನಾಡಿನಲ್ಲಿ 67% ಮತ್ತು ಪಂಜಾಬ್‌ನಲ್ಲಿ 64%,  ದೆಹಲಿಯಲ್ಲಿ 61%ರಷ್ಟು ಶಿಕ್ಷಕಿಯರಿದ್ದಾರೆ.

ಹರಿಯಾಣದ 767 ಶಾಲೆಗಳಲ್ಲಿ ಬಾಲಕಿಯರ ಶೌಚಾಲಯವಿಲ್ಲ: ವರದಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಕಾನೂನು ಕ್ರಮ ಜರುಗಿಸಲು ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ತಡೆ

ನವದೆಹಲಿ: ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಅವಧಿಯಲ್ಲಿ ನಡೆದ 2021 ರ "ಬಟ್ಟೆ ಚೀಲ ಹಗರಣ"ಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ರಾಜ್ಯ ಸರ್ಕಾರಕ್ಕೆ ಅನುಮತಿ ನೀಡುವಂತೆ...

‘ಯುದ್ಧ ಸೃಷ್ಟಿಸಿದ್ದು ನೀವೇ’: ಹಾರ್ಮುಜ್ ಅಡ್ಡಿಗೆ ಅಮೆರಿಕವನ್ನು ದೂಷಿಸಿದ ಚೀನಾ, ಟ್ರಂಪ್ ಅವರ ‘ಧೈರ್ಯದ ಕೊರತೆ’ ಹೇಳಿಕೆಗೆ ತಿರುಗೇಟು

ಚೀನಾ ಮತ್ತು ಜಪಾನ್‌ನಂತಹ ದೇಶಗಳು ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯಲು "ಧೈರ್ಯ" ಹೊಂದಿಲ್ಲ ಎಂದು ಹೇಳಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗಳನ್ನು ಚೀನಾ ಬಲವಾಗಿ ವಿರೋಧಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಚೀನಾದ ವಿದೇಶಾಂಗ...

ಮೂರನೇ ಅತ್ಯಾಚಾರ ಪ್ರಕರಣ: ಸ್ವ-ಘೋಷಿತ ‘ದೇವಮಾನವ’ ಖರತ್‌ಗೆ ಏಳು ದಿನಗಳ ನ್ಯಾಯಾಂಗ ಬಂಧನ ವಿಧಿಸಿದ ನಾಸಿಕ್ ನ್ಯಾಯಾಲಯ

ನಾಸಿಕ್: ಗರ್ಭಿಣಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ದಾಖಲಾಗಿರುವ ಮೂರನೇ ಅತ್ಯಾಚಾರ ಪ್ರಕರಣದಲ್ಲಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ಅವರನ್ನು ಮಹಾರಾಷ್ಟ್ರದ ನಾಸಿಕ್ ನ್ಯಾಯಾಲಯ ಸೋಮವಾರ ಏಪ್ರಿಲ್...

‘ನನ್ನನ್ನು ಎದುರಿಸಲು 19 ರಾಜ್ಯಗಳು, ಕೇಂದ್ರ ಒಗ್ಗೂಡಿವೆ, ನಾನು ಸಾಮಾನ್ಯ ಜನರಿಗಾಗಿ ಏಕಾಂಗಿಯಾಗಿ ಹೋರಾಡುತ್ತಿದ್ದೇನೆ’: ಮಮತಾ ಬ್ಯಾನರ್ಜಿ

2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ತಮ್ಮ ವಿರುದ್ಧ ಹೋರಾಡಲು 19 ರಾಜ್ಯಗಳು ಮತ್ತು ಕೇಂದ್ರ ಸರ್ಕಾರಗಳು ಒಗ್ಗೂಡಿವೆ ಮತ್ತು ಅವರು ಸಾಮಾನ್ಯ ಜನರಿಗಾಗಿ ಏಕಾಂಗಿಯಾಗಿ...

ಮತಗಟ್ಟೆಗಳಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ : ಕೇಂದ್ರ ಸರ್ಕಾರ, ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ಮತದಾನ ಕೇಂದ್ರಗಳಲ್ಲಿ ಬೆರಳಚ್ಚು ಮತ್ತು ಕಣ್ಣಿನ ಮಣಿ (ಐರಿಸ್) ಆಧಾರಿತ ಬಯೋಮೆಟ್ರಿಕ್ ಗುರುತಿಸುವಿಕೆಯನ್ನು ಜಾರಿಗೆ ತರಬೇಕು ಎಂದು ಕೋರಿ ಸಲ್ಲಿಕೆಯಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್‌) ಸಂಬಂಧ ಸುಪ್ರೀಂ...

‘ಅಸ್ಸಾಂ ಮುಖ್ಯಮಂತ್ರಿ ದೇಶದ ಅತ್ಯಂತ ಭ್ರಷ್ಟ, ತಮ್ಮ ವಿರೋಧಿಗಳನ್ನು ಮುಗಿಸಲು ಅಧಿಕಾರ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ; ರಾಹುಲ್ ಗಾಂಧಿ

ನವದೆಹಲಿ: "ಅಸ್ಸಾಂನ ಪ್ರಸ್ತುತ ಮುಖ್ಯಮಂತ್ರಿ ದೇಶದ ಅತ್ಯಂತ ಭ್ರಷ್ಟ. ಅವರು ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ತಮ್ಮ ರಾಜಕೀಯ ವಿರೋಧಿಗಳು ಮತ್ತು ವಿಮರ್ಶಕರನ್ನು ಕಿರುಕುಳ ನೀಡಲು ಅವರು ರಾಜ್ಯ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವುದು ಸಂವಿಧಾನಕ್ಕೆ ವಿರುದ್ಧವಾಗಿದೆ"...

ಕೃಷಿ ವೆಚ್ಚದ ಆಧಾರದ ಮೇಲೆ ಎಂಎಸ್‌ಪಿ ನಿಗದಿ ಕೋರಿ ರೈತರಿಂದ ಅರ್ಜಿ : ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ನಿಗದಿಪಡಿಸುವಾಗ, ಆಯಾ ರಾಜ್ಯ ಸರ್ಕಾರಗಳು ಪ್ರಸ್ತಾಪಿಸಿದ 'C2' ಎಂದು ಕರೆಯಲಾಗುವ ಕೃಷಿ ವೆಚ್ಚಕ್ಕೆ ಸಮರ್ಪಕ ಪ್ರಾಮುಖ್ಯತೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ...

ದೆಹಲಿ ವಿವಿ: ಅಂಬೇಡ್ಕರ್ ಕಾಲೇಜಿನಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮ ವಿರೋಧಿಸಿ ಪ್ರತಿಭಟಿಸಿದ ವಿದ್ಯಾರ್ಥಿಗಳ ಮೇಲೆ ಹಲ್ಲೆ, ಬಂಧನ

ಸೋಮವಾರ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಆಯೋಜಿಸಿದ್ದ ಕಾರ್ಯಕ್ರಮವನ್ನು ವಿರೋಧಿಸಿ ಪ್ರತಿಭಟಿಸಿದ ದೆಹಲಿ ವಿಶ್ವವಿದ್ಯಾಲಯದ ಡಾ. ಭೀಮ್ ರಾವ್ ಅಂಬೇಡ್ಕರ್ ಕಾಲೇಜಿನ ವಿದ್ಯಾರ್ಥಿಗಳ ಮೇಲೆ ಭದ್ರತಾ ಸಿಬ್ಬಂದಿ ಹಲ್ಲೆ ನಡೆಸಿ, ದೆಹಲಿ ಪೊಲೀಸರು...

ಪವನ್ ಖೇರಾಗೆ ನಿರೀಕ್ಷಣಾ ಜಾಮೀನು : ತೆಲಂಗಾಣ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಅಸ್ಸಾಂ ಸರ್ಕಾರ

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ವಿರುದ್ಧದ ಹೇಳಿಕೆಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರಿಗೆ ತೆಲಂಗಾಣ ಹೈಕೋರ್ಟ್ ಒಂದು ವಾರದ ಟ್ರಾನ್ಸಿಟ್ ನಿರೀಕ್ಷಣಾ ಜಾಮೀನು ನೀಡಿದ...

ಶಾಂತಿಗಾಗಿ ಕರೆ ನೀಡಿದ್ದ ಪೋಪ್ ಲಿಯೋ XIV ವಿರುದ್ಧ ಟ್ರಂಪ್ ವಾಗ್ದಾಳಿ; ತಾನೇ ಯೇಸು ಕ್ರಿಸ್ತ ಎಂಬಂತೆ ಎಐ ಫೋಟೋ ಹಂಚಿಕೊಂಡ ಅಮೆರಿಕ ಅಧ್ಯಕ್ಷ

ವಾಷಿಂಗ್ಟನ್: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ರಾತ್ರಿ ಪೋಪ್ ಲಿಯೋ XIV ವಿರುದ್ಧ ಅಸಾಧಾರಣ ಟೀಕೆಗಳನ್ನು ವ್ಯಕ್ತಪಡಿಸಿದ್ದಾರೆ. ಅಮೆರಿಕದಲ್ಲಿ ಜನಿಸಿದ ಕ್ಯಾಥೋಲಿಕ್ ಚರ್ಚ್‌ನ ಜಾಗತಿಕ ನಾಯಕ "ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ" ಮತ್ತು...