ವಿಶ್ವದ ಜನಪ್ರಿಯ ಸ್ತ್ರೀವಾದಿ ಲೇಖಕಿ ಬೆಲ್ ಹುಕ್ಸ್ ಅವರು ಬುಧವಾರದಂದು ತನ್ನ 69 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಅವರು ತಮ್ಮ ಬರಹಗಳಲ್ಲಿ ಲಿಂಗ, ಜನಾಂಗ ಮತ್ತು ವರ್ಗ ಚಿಂತನೆಗಳಲ್ಲಿ ಹೊಸ ಮಾರ್ಗಗಳನ್ನು ಹುಟ್ಟುಹಾಕಿದ್ದರು.
ಗ್ಲೋರಿಯಾ ಜೀನ್ ವಾಟ್ಕಿನ್ಸ್‌ನಲ್ಲಿ 1952 ರಲ್ಲಿ ಜನಿಸಿದ ಬೆಲ್ ಹುಕ್ಸ್ ಬುಧವಾರ ಮುಂಜಾನೆ ಅಮೆರಿಕಾದ ಕೆಂಟುಕಿಯ ತನ್ನ ಮನೆಯಲ್ಲಿ ನಿಧನರಾಗಿದ್ದಾರೆ. ಈ ಬಗ್ಗೆ ಅವರ ಸೋದರ ಸೊಸೆ ಎಬೊನಿ ಮೋಟ್ಲಿ ಟ್ವಿಟರ್‌ನಲ್ಲಿ ಬರೆದಿದ್ದಾರೆ.
ತನ್ನ ಮುತ್ತಜ್ಜಿ ಬೆಲ್ ಬ್ಲೇರ್ ಹುಕ್ಸ್ ಅವರ ಗೌರವಾರ್ಥವಾಗಿ ‘ಬೆಲ್ ಹುಕ್ಸ್’ ಎಂಬ ಕಾವ್ಯನಾಮಗಳನ್ನು ಬಳಸಿ ಬರೆಯುತ್ತಿದ್ದ ಅವರು 1978 ರಲ್ಲಿ “ಅಂಡ್ ದೇರ್ ವಿ ವೆಪ್ಟ್” ಕವನಗಳ ಮೊದಲ ಪುಸ್ತಕವನ್ನು ಪ್ರಕಟಿಸಿದ್ದರು.
ಅವರು 1981 ರಲ್ಲಿ “ಆಯ್‌ನ್ಟ್ ಐ ಎ ವುಮನ್? ಬ್ಲ್ಯಾಕ್ ವುಮೆನ್ ಆಂಡ್ ಫೆಮಿನಿಸಂ” ಪುಸ್ತಕಕ್ಕಾಗಿ ಭಾರಿ ಮೆಚ್ಚುಗೆಯನ್ನು ಪಡೆದರು. ಈ ಪುಸ್ತಕದಲ್ಲಿ ಅವರು ಕಪ್ಪು ಮಹಿಳೆಯರ ಮೇಲೆ ಲಿಂಗಭೇದಭಾವ ಮತ್ತು ವರ್ಣಭೇದ ನೀತಿಯ ಪ್ರಭಾವವನ್ನು ಪರಿಶೀಲಿಸಿದ್ದರು. ಜೊತೆಗೆ ಸ್ತ್ರೀವಾದದೊಳಗಿನ ವರ್ಣಭೇದ ನೀತಿಯ ಬಗ್ಗೆ ಚರ್ಚಿಸಿದ್ದರು.
ಅವರು ಕವನ, ಮಕ್ಕಳ ಕಾದಂಬರಿ, ಆತ್ಮಚರಿತ್ರೆ ಮತ್ತು ಸಾಹಿತ್ಯ ವಿಮರ್ಶೆ ಸೇರಿದಂತೆ ಸುಮಾರು 40 ಕೃತಿಗಳನ್ನು ಪ್ರಕಟಿಸಿದ್ದಾರೆ. ಸ್ತ್ರೀವಾದ, ವರ್ಣಭೇದ ನೀತಿ ಮತ್ತು ಇತರ ಸಾಮಾಜಿಕ ನ್ಯಾಯದ ಸಮಸ್ಯೆಗಳ ಬಗ್ಗೆ ಅವರು ತಮ್ಮ ಕೃತಿಗಳಲ್ಲಿ ಚರ್ಚಿಸಿದ್ದಾರೆ.
ವಿಶ್ವದ ಹಲವು ಪ್ರಸಿದ್ದ ಸಾಹಿತಿಗಳು ಅವರ ನಿಧನಕ್ಕೆ ಕಂಬನಿ ಮಿಡಿದಿದ್ದರೆ.
ಅವರ ‘ಫೆಮಿನಿಸಂ ಇಸ್ ಫಾರ್ ಎವೆರಿಬಡಿ: ಪ್ಯಾಶನೇಟ್ ಪಾಲಿಟಿಕ್ಸ್’ (2000) ಎಂಬ ಮಹತ್ವದ ಕೃತಿಯನ್ನು ಕನ್ನಡ ಸ್ತ್ರೀವಾದಿ ಲೇಖಕಿ ಎಚ್.ಎಸ್. ಶ್ರೀಮತಿ ಅವರು ‘ಎಲ್ಲರಿಗಾಗಿ ಸ್ತ್ರೀವಾದ’ ಎಂಬ ಹೆಸರಿನಲ್ಲಿ ಅನುವಾದಿಸಿದ್ದಾರೆ.
ಇದನ್ನೂ ಓದಿ: ದೌರ್ಜನ್ಯವನ್ನು ಕೊನೆಗಾಣಿಸಲು ಸ್ತ್ರೀವಾದೀ ಚಳುವಳಿ “ಸ್ತ್ರೀವಾದ: ಅಂಚಿನಿಂದ ಕೇಂದ್ರದೆಡೆಗೆ” ಪುಸ್ತಕದ ಅಧ್ಯಾಯವೊಂದರ ಆಯ್ದ ಭಾಗ


