Homeಮುಖಪುಟಲಿಂಗ ಸಮಾನತೆಯತ್ತ ಹೆಜ್ಜೆ: ಕೇರಳದ ಶಾಲೆಯಲ್ಲಿ ಹೆಣ್ಣು-ಗಂಡು ಮಕ್ಕಳೆಲ್ಲರಿಗೂ ಒಂದೇ ಥರದ ಸಮವಸ್ತ್ರ

ಲಿಂಗ ಸಮಾನತೆಯತ್ತ ಹೆಜ್ಜೆ: ಕೇರಳದ ಶಾಲೆಯಲ್ಲಿ ಹೆಣ್ಣು-ಗಂಡು ಮಕ್ಕಳೆಲ್ಲರಿಗೂ ಒಂದೇ ಥರದ ಸಮವಸ್ತ್ರ

- Advertisement -
- Advertisement -

ಕೇರಳದ ಕೋಳಿಕ್ಕೋಡ್‌ನ ಬಲುಸ್ಸೆರಿಯ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯು (ಜಿಎಚ್‌ಎಸ್‌ಎಸ್) ಲಿಂಗ ಸಮಾನತೆಯತ್ತ ಹೆಜ್ಜೆ ಹಾಕಿದ್ದು, ತನ್ನ 11 ನೇ ತರಗತಿ ವಿದ್ಯಾರ್ಥಿಗಳಿಗೆ ಬುಧವಾರ ಲಿಂಗ-ತಟಸ್ಥ (ಹೆಣ್ಣು-ಗಂಡು ಮಕ್ಕಳೆಲ್ಲರಿಗೂ ಒಂದೇ ಥರದ) ಸಮವಸ್ತ್ರವನ್ನು ಅಳವಡಿಸಿಕೊಂಡು ಗಮನ ಸೆಳೆದಿದೆ.

ಬಲುಸ್ಸೆರಿಯ ಶಾಲೆಯಲ್ಲಿ 11 ನೇ ತರಗತಿಯ 200 ಹುಡುಗಿಯರು ಮತ್ತು 60 ಹುಡುಗರು ನೀಲಿ ಪ್ಯಾಂಟ್ ಮತ್ತು ಗೆರೆಗಳುಳ್ಳ ಬಿಳಿ ಶರ್ಟ್‌ ಅನ್ನು ಇನ್ನು ಮುಂದೆ ಹೊಸ ಡ್ರೆಸ್ ಕೋಡ್ ಆಗಿ ಬಳಸಲಿದ್ದಾರೆ.

ಹೆಣ್ಣು ಮತ್ತು ಗಂಡು ಮಕ್ಕಳಿಗೆ ಸಮಾನವಾದ ಸ್ವಾತಂತ್ರ್ಯವನ್ನು ಖಾತ್ರಿಪಡಿಸಲು ಪರಿಚಯಿಸಲಾದ ಹೊಸ ಸಮವಸ್ತ್ರವನ್ನು ಧರಿಸಲು ಶಾಲೆಯ ಯಾವುದೇ ವಿದ್ಯಾರ್ಥಿಗಳಿಗೆ ಒತ್ತಾಯಿಸುವುದಿಲ್ಲ. ವಿದ್ಯಾರ್ಥಿಗಳು ಮುಸುಕು ಅಥವಾ ಸ್ಕಾರ್ಫ್ ಬಳಸಲು ಮುಕ್ತರಾಗಿದ್ದಾರೆ ಎಂದು ಶಾಲೆಯ ದೈಹಿಕ ಶಿಕ್ಷಕರು ತಿಳಿಸಿದ್ದಾರೆ.

ಸರ್ಕಾರಿ ವಲಯದ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಇದೇ ಮೊದಲ ಬಾರಿಗೆ ಬಾಲಕಿಯರು ಮತ್ತು ಬಾಲಕಿಯರಿಗೆ ಸಾಮಾನ್ಯ ಸಮವಸ್ತ್ರವನ್ನು ಜಾರಿಗೊಳಿಸಲಾಗಿದೆ. ರಾಜ್ಯದ ಇತರೆಡೆಗಳಲ್ಲಿ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ವರ್ಗಗಳ ಕೆಲವು ಶಾಲೆಗಳು ಸಹ ಈ ಹಿಂದೆ ಈ ರೀತಿಯ ಸಮವಸ್ತ್ರ ನೀತಿ ಅಳವಡಿಸಿಕೊಂಡಿವೆ.

ಲಿಂಗ-ತಟಸ್ಥ ಸಮವಸ್ತ್ರವನ್ನು ಜಾರಿಗೆ ತರುವುದಾಗಿ ಘೋಷಿಸಿದ ಉನ್ನತ ಶಿಕ್ಷಣ ಸಚಿವೆ ಪ್ರೊ.ಆರ್.ಬಿಂದು ಮಾತನಾಡಿ, “ಸಮಾಜದಲ್ಲಿನ ಪ್ರಗತಿಪರ ಬದಲಾವಣೆಗಳನ್ನು ಸಂಪ್ರದಾಯವಾದಿಗಳು ವಿರೋಧಿಸುವುದು ಸಹಜ. ಲಿಂಗ-ತಟಸ್ಥ ಸಮವಸ್ತ್ರವು ಗಂಡು ಮತ್ತು ಹೆಣ್ಣು ನಡುವಿನ ಪ್ರತ್ಯೇಕತೆಯನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ ಮತ್ತು ಎಲ್ಲಾ ಮಾನವರು ಒಂದೇ ದಿಕ್ಕಿನಲ್ಲಿ ಮುನ್ನಡೆಯಬೇಕು ಎಂಬ ಸಂದೇಶವನ್ನು ನೀಡುತ್ತದೆ. ಹುಡುಗರಿಗೆ ತಮ್ಮ ಡ್ರೆಸ್ ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಇದ್ದಾಗ ಹುಡುಗಿಯರಿಗೂ ಆ ಸ್ವಾತಂತ್ರ್ಯವಿರಬೇಕು. ಹೊಸ ಸಮವಸ್ತ್ರವು ಹುಡುಗಿಯರು ತಮ್ಮ ದೇಹದ ಬಗ್ಗೆ ಚಿಂತಿಸದೆ ಆತ್ಮವಿಶ್ವಾಸದಿಂದ ತಿರುಗಲು ಸಹಾಯ ಮಾಡುತ್ತದೆ. ಲಿಂಗ-ತಟಸ್ಥ ಸಮವಸ್ತ್ರವು ಉತ್ತಮ ಬದಲಾವಣೆಗಳತ್ತ ಒಂದು ಹೆಜ್ಜೆಯಾಗಿದೆ” ಎಂದು ಹೇಳಿದ್ದಾರೆ.

ಆದರೆ ಪೋಷಕರ ಜೊತೆ ಸಮರ್ಪಕ ಚರ್ಚೆ ನಡೆಸದೆ ಲಿಂಗ-ತಟಸ್ಥ ಸಮವಸ್ತ್ರವನ್ನು ಅಳವಡಿಸಲಾಗಿದೆ ಎಂದು ಆರೋಪಿಸಿ ವಿವಿಧ ಮುಸ್ಲಿಂ ಸಂಘಟನೆಗಳು ಶಾಲೆ ಎದುರು ಪ್ರತಿಭಟನೆ ನಡೆಸಿವೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ನೇತೃತ್ವದ ಸುನ್ನೀ ಬಣದೊಂದಿಗೆ ಸಂಯೋಜಿತವಾಗಿರುವ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಗಿದೆ. ಆದರೆ ಶಾಲೆಯು ತನ್ನ ಹೊಸ ಸಮವಸ್ತ್ರ ಯೋಜನೆಯನ್ನು ಮುಂದುವರೆಸಿದೆ.


ಇದನ್ನೂ ಓದಿ: ನಾವೆಲ್ಲರು ಓದಲೇಬೇಕಾದ ಪುಸ್ತಕ: ‘ಎಲ್ಲರಿಗಾಗಿ ಸ್ತ್ರೀವಾದ – ಆಪ್ತತೆಯ ರಾಜಕಾರಣ’

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ: ರೇವಣ್ಣ ನಿವಾಸದಲ್ಲಿ ಎಸ್‌ಐಟಿ ತಂಡದಿಂದ ಸ್ಥಳ ಮಹಜರು

0
ಸಂಸದ ಪ್ರಜ್ವಲ್ ರೇವಣ್ಣ ವಿರುದ್ದ ಮಹಿಳೆಯೊಬ್ಬರು ದಾಖಲಿಸಿರುವ ಲೈಂಗಿಕ ದೌರ್ಜನ್ಯ ದೂರಿಗೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿರುವ ಎಸ್‌ಐಟಿ ತಂಡ, ಇಂದು (ಮೇ 4) ಹಾಸನದ ಹೆಚ್‌.ಡಿ ರೇವಣ್ಣ ಅವರ ನಿವಾಸದಲ್ಲಿ ಮಹಜರು ನಡೆಸಿದೆ. ಡಿವೈಎಸ್‌ಪಿ...