ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಇತಿಹಾಸ ಅಧ್ಯಯನ ಕೇಂದ್ರದ ಹದಿನಾಲ್ಕು ಅಧ್ಯಾಪಕರು ’ಮೇಜರ್ ಜನರಲ್ (ನಿವೃತ್ತ) ಜಿ.ಡಿ ಬಕ್ಷಿ ಅವರು ನೀಡಲಿರುವ ‘ಸರಸ್ವತಿ ನಾಗರಿಕತೆ’ಯ ವೆಬಿನಾರ್ ನಡೆಸುವುದರ ವಿರುದ್ಧ’ ಉಪಕುಲಪತಿಗೆ ಪತ್ರ ಬರೆದಿದ್ದಾರೆ.
ಕೇಂದ್ರದ ವಿದ್ಯಾರ್ಥಿ-ಅಧ್ಯಾಪಕ ಸದಸ್ಯ (ಎಸ್‌ಎಫ್‌ಸಿ) ಕೂಡ ಈ ವೆಬಿನಾರ್ ಅನ್ನು ತೀವ್ರವಾಗಿ ಖಂಡಿಸಿದೆ.
ಜೆಎನ್‌ಯು ಉಪಕುಲಪತಿ ಜೂನ್ 8 ರಂದು ನಿವೃತ್ತ ಮೇಜರ್ ಜನರಲ್ ಜಿ.ಡಿ ಬಕ್ಷಿ ಅವರು ‘ಸರಸ್ವತಿ ನಾಗರೀಕತೆ’ ಕುರಿತು ವೆಬಿನಾರ್ ನಲ್ಲಿ ಮಾತನಾಡಲಿದ್ದಾರೆ ಎಂದು ಬರೆದಿದ್ದರು. ಅಲ್ಲದೆ ಈ ಕಾರ್ಯಕ್ರಮವನ್ನು ಜೆಎನ್‌ಯು ಇತಿಹಾಸ ಅಧ್ಯಯನ ಕೇಂದ್ರ, ಸಮಾಜ ವಿಜ್ಞಾನ ಅಧ್ಯಯನ ಕೇಂದ್ರ ಆಯೋಜಿಸುತ್ತಿದೆ ಎಂದು ಬರೆದಿದ್ದರು.
Centre for Historical Studies, School of Social Sciences, JNU invites you to a webinar on "The Saraswati Civilisation: A Paradigm Shift in Indian History" by Retd. Major General G. D. Bakshi. All are welcome. Register at https://t.co/Jo4uv2e4tP pic.twitter.com/zxeCwVW7AJ
— Mamidala Jagadesh Kumar (@mamidala90) June 8, 2020
ವಿವಿಯ ಈ ಕ್ರಮವನ್ನು ಅಧ್ಯಯನ ಕೇಂದ್ರದ 14 ಬೋಧಕ ವರ್ಗದ ಸದಸ್ಯರ ಗುಂಪು ತೀವ್ರವಾಗಿ ವಿರೋಧಿಸಿದೆ. ” ನಿಮ್ಮ ಟ್ವೀಟ್‌ನಲ್ಲಿ ಕಾರ್ಯಕ್ರಮವನ್ನು ಇತಿಹಾಸ ಅಧ್ಯಯನ ಕೇಂದ್ರ ಜೊತೆಗೆ ಪ್ರೊಫೆಸರ್ ಹೀರಾಮನ್ ತಿವಾರಿ, ಪ್ರೊಫೆಸರ್ ಉಮೇಶ್ ಕದಮ್ ಮತ್ತು ಪ್ರೊಫೆಸರ್ ದೀಪೇಂದ್ರ ನಾಥ್ ದಾಸ್ ಸೇರಿ ಆಯೋಜಿಸುತ್ತಾರೆ ಎಂದು ಉಲ್ಲೇಖಿಸಲಾಗಿದೆ. ಆದರೆ ಸೆಮಿನಾರ್‌ಗಳು, ಸಮ್ಮೇಳನಗಳು, ಕಾರ್ಯಾಗಾರಗಳನ್ನು, ವಾಸ್ತವವಾಗಿ ಶೈಕ್ಷಣಿಕ ಕಾರ್ಯಚಟುವಟಿಕೆಯ ವಿಷಯಗಳಲ್ಲಿ ವೃತ್ತಿಪರ ಮತ್ತು ಶ್ರೇಷ್ಠ ವಿದ್ವಾಂಸರನ್ನು ಬೋಧಕವರ್ಗದಿಂದ ಆಹ್ವಾನಿಸಲ್ಪಡುತ್ತಾರೆ. ಇಲ್ಲಿ ನಡೆಯುತ್ತಿರುವ ವೆಬಿನಾರ್ ಗೂ ನಮಗೂ ಸಂಬಂಧವಿಲ್ಲ. ಈ ಅತಿಥಿಯನ್ನು ಕರೆದವರು ಯಾರು” ಎಂದು ಪ್ರಶ್ನಿಸಿದ್ದಾರೆ.
“ಈ ವೆಬಿನಾರ್ ಅನ್ನು ಸಂಘಟಿಸುವ ಕುರಿತು ಎಲ್ಲಿ ಚರ್ಚಿಸಲಾಯಿತು? ಇದನ್ನು ಯಾರ ಮೂಲಕ ಮಾಡಲಾಗಿದೆ ಎಂದು ತಿಳಿಯಲು ನಾವು ಬಯಸುತ್ತೇವೆ. ಎಲ್ಲಾ ಬೋಧಕವರ್ಗದ ಸದಸ್ಯರು ಇ-ಮೇಲ್ ನಲ್ಲಿ ಸಂಪರ್ಕದಲ್ಲಿರುವುದರಿಂದ ಹಾಗೂ ವಾಟ್ಸಾಪ್ ಗ್ರೂಪ್ ಮತ್ತು ಇತರ ಕಾರ್ಯವಿಧಾನಗಳಲ್ಲಿ ಅನೇಕರು ಸಂವಹನ ನಡೆಸುತ್ತಿರುವುದರಿಂದ, ಅಧ್ಯಾಪಕರಿಗೆ ಈ ಬಗ್ಗೆ ತಿಳಿಸುವುದು ಹಾಗೂ ಶೈಕ್ಷಣಿಕ ವಿಷಯಗಳಲ್ಲಿ ಅದರ ಅನುಮೋದನೆಯನ್ನು ಪಡೆಯುವುದು ಸಾಧ್ಯ, ಅಗತ್ಯ ಹಾಗೂ ಅಪೇಕ್ಷಣೀಯವಾಗಿದೆ”. ನಮ್ಮ ಗಮನಕ್ಕೆ ತಾರದೇ ವೆಬಿನಾರ್ ಹೇಗೆ ಆಯೋಜಿಸುತ್ತೀರಿ ಎಂದು ಪ್ರಾಧ್ಯಾಪಕರು ಕಿಡಿಕಾರಿದ್ದಾರೆ.
ಕಾರ್ಯಕ್ರಮ ಆಯೋಜಿಸುತ್ತಿರುವ ಪ್ರೊಫೆಸರ್ ಹೀರಾಮನ್ ತಿವಾರಿ, ಪ್ರೊಫೆಸರ್ ಉಮೇಶ್ ಕದಮ್ ಹೊರತುಪಡಿಸಿ, ಐತಿಹಾಸಿಕ ಅಧ್ಯಯನ ಕೇಂದ್ರದಲ್ಲಿ 19 ಅಧ್ಯಾಪಕ ಸದಸ್ಯರಿದ್ದಾರೆ.
ಕೇಂದ್ರದ ವಿದ್ಯಾರ್ಥಿ-ಅದ್ಯಾಪಕ ಸದಸ್ಯರು ಕೂಡಾ ಕಾರ್ಯಕ್ರಮವನ್ನು ವಿರೋಧಿಸಿದ್ದಾರೆ. “ಭಾಷಣಕಾರರು ತಮ್ಮ ಕ್ಷೇತ್ರದಲ್ಲಿ ವೃತ್ತಿಪರ ಜ್ಞಾನವನ್ನು ಹೊಂದಿದ್ದಾರೆ ಮತ್ತು ಐತಿಹಾಸಿಕವಾಗಿ ನಿಖರವಾದ ಸಂಗತಿಗಳ ಮೇಲೆ ತಮ್ಮ ವಾದಗಳನ್ನು ಆಧರಿಸಿದ್ದಾರೆ ಎಂದು ಖಚಿತಪಡಿಸಿಕೊಳ್ಳಲು ಕೇಂದ್ರವು ಯಾವಾಗಲೂ ಬದ್ಧವಾಗಿದೆ. ಭಾರತದ ಆರಂಭಿಕ ಇತಿಹಾಸದ ವಿದ್ವಾಂಸರು ಹರಪ್ಪನ್ ನಾಗರೀಕತೆಯನ್ನು ಋಗ್ವೇದ ಸಂಸ್ಕೃತಿಯೊಂದಿಗೆ ಸಂಯೋಜಿಸುವ ಪ್ರಯತ್ನವನ್ನು ತಿರಸ್ಕರಿಸಿದ್ದಾರೆ… ತಮ್ಮ ಕೋಮು ಕಾರ್ಯಸೂಚಿಯನ್ನು ಹರಡುವುದನ್ನು ಹೊರತುಪಡಿಸಿ ಪ್ರಸ್ತುತ ಈ ಚರ್ಚೆಗೆ ಯಾವುದೇ ಮಾನ್ಯತೆಯಿಲ್ಲ ಇಲ್ಲ. ಹರಪ್ಪನ್ ಸಂಸ್ಕೃತಿಯ ಮೇಲೆ ಪೌರಾಣಿಕವಾಗಿರುವ ಸರಸ್ವತಿ ನದಿಯನ್ನು ಮೇಲುಗೈ ಸಾಧಿಸುವ ಪ್ರಯತ್ನವಿದು” ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
“ಈ ಕಾರ್ಯಕ್ರಮವನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ” ಎಂದು ಅವರು ಹೇಳಿದರು.
ಓದಿ: ಸಿಎಎ ವಿರುದ್ಧ ನಿರ್ಣಯವನ್ನು ಅಂಗೀಕರಿಸಿದ ಮೊದಲ ವಿಶ್ವವಿದ್ಯಾಲಯವಿದು.


