Homeಮುಖಪುಟನಾನು ಕಂಡತೆ ಸಿನಿಮಾ: ಸಿನಿಯಾನ ಅಂಕಣದಲ್ಲಿ ರಾಜಶೇಖರ್ ಅಕ್ಕಿಯವರ ಬರಹ

ನಾನು ಕಂಡತೆ ಸಿನಿಮಾ: ಸಿನಿಯಾನ ಅಂಕಣದಲ್ಲಿ ರಾಜಶೇಖರ್ ಅಕ್ಕಿಯವರ ಬರಹ

ಇಂತಹ ಸಂದರ್ಭದಲ್ಲಿ ಎಂತ ಚಿತ್ರಗಳನ್ನು ಮಾಡಬೇಕು? ಯಾವ ಕಥೆಗಳನ್ನು ಹೇಳುವುದು? ನನಗೆ ಸಿಕ್ಕಿರುವ ಉತ್ತರ; ನಮ್ಮ ಕಥೆಗಳು, ನಮ್ಮ ಬದುಕು, ನಮ್ಮ ಭಾಷೆ, ಸಂಸ್ಕೃತಿ, ಪ್ರದೇಶದ ನಮ್ಮೊಳಗೆ ಹುದುಗಿರುವ ಕಥೆಗಳು

- Advertisement -
- Advertisement -

ಸಿನಿಯಾನ:10

| ರಾಜಶೇಖರ್ ಅಕ್ಕಿ |

ಸುಮಾರು ನೂರೈವತ್ತು ವರ್ಷಗಳ ಹಿಂದೆ ಶುರುವಾದ ಸಿನೆಮಾ ತನ್ನ ಸುದೀರ್ಘ ಪಯಣವನ್ನು ಕ್ರಮಿಸಿದೆ. ಕಳೆದ ಅರ್ಧ ಶತಮಾನದಲ್ಲಿ ಇಡೀ ವಿಶ್ವವನ್ನೇ ಪ್ರಭಾವಿಸಿದ ಮಾಧ್ಯಮ ಸಿನೆಮಾ. ನಮ್ಮ ದೇಶದಲ್ಲಂತೂ ಸಿನೆಮಾ ಪ್ರಭಾವ ಎಷ್ಟಿದೆಯೆಂದರೆ, ಇತರ ಹಲವು ದೇಶಗಳ ಸಿನೆಮಾಗಳಲ್ಲಿ ಮಾಡುವಂತೆ ಸಿನೆಮಾಕ್ಕೆ ಸಂಬಂಧವಿಲ್ಲದೇ ಯಾರನ್ನೂ ಚಿತ್ರಗಳಲ್ಲಿ ಕಾಸ್ಟಿಂಗ್ ಮಾಡೋದು ತುಂಬಾ ಕಷ್ಟ. ಏಕೆಂದರೆ ಅವರಿಗೆ ಒಂದು ಸೀನ್ ಮಾಡು ಎಂದ ಕೂಡಲೇ ಯಾವುದೋ ಒಬ್ಬ ನಟನನ್ನು ಅನುಕರಿಸತೊಡಗುತ್ತಾರೆ.

ಇರಲಿ, ಸಿನೆಮಾ ಒಂದು ಮಾಧ್ಯಮ, ಕಥೆ ಹೇಳುವ ಮಾಧ್ಯಮ. ಚಲಿಸುವ ಚಿತ್ರಗಳನ್ನು ಜೋಡಿಸಿ (justaposition) ಕಥೆಯನ್ನು ಹೇಳುವ ನೇರ ಮಾಧ್ಯಮವೇ ಸಿನೆಮಾ. ಹೌದು ಸಿನೆಮಾ ನೇರ. ಬೇರೆಲ್ಲ ಕಥೆ ಹೇಳುವ ಮಾಧ್ಯಮಗಳಲ್ಲಿ ಕಥೆ ಪ್ರೇಕ್ಷಕನ ತಲೆಯಲ್ಲಿ ಮೂಡಿಬರುತ್ತದೆ. ಒಂದು ಕಾದಂಬರಿ ಎಂದರೆ ಅಲ್ಲಿರುವುದು ಹಾಳೆ ಮತ್ತು ಅಕ್ಷರಗಳಷ್ಟೇ, ಆದರೆ ಅದರಿಂದ ಕಥೆ ಮೂಡುವುದು ತಮ್ಮ ತಲೆಯೊಳಗೆ. ನಾಟಕಕ್ಕೆ ಬಂದಾಗ ಸಸ್ಪೆನ್ಷನ್ ಆಫ್ ಡಿಸ್‍ಬಿಲೀಫ್ ಎನ್ನುವ ಪ್ರಕ್ರಿಯೆ ನಮ್ಮ ತಲೆಯೊಳಗೆ ನಡೆಯುತ್ತಿರುತ್ತದೆ. ನಮ್ಮೆದುರಿಗೆ ಕಾಣುತ್ತಿರುವುದು ಮನೆಯ ಸೆಟ್ ಎಂದು ಗೊತ್ತಿದ್ದರೂ, ಚೂರಿ ಹಾಕಿಕೊಂಡು ಸಾಯುತ್ತಿರುವ ನಟನ ಹೊಟ್ಟೆಯಿಂದ ಹೊರಬರುತ್ತಿರುವುದು ಕೆಂಪು ಕರ್ಚೀಫ್ ಎಂದು ಗೊತ್ತಿದ್ದರೂ ನಾವು ಅಲ್ಲಿ ಅಪನಂಬಿಕೆಯಿಂದ ನೋಡುವುದಿಲ್ಲ. ನಟರು ಏನು ಹೇಳಬಯಸುತ್ತಿದ್ದಾರೋ ಅದನ್ನೇ ನಂಬುವ ಪ್ರಯತ್ನ ನಾವು ಮಾಡುತ್ತಿರುತ್ತೇವೆ. ಆದರೆ ಸಿನೆಮಾ ಹಾಗಲ್ಲ. ಪರದೆಯ ಮೇಲೆ ನಡೆಯುವುದೇ ಸತ್ಯ.

ಇನ್ನು ಕಥೆ ಅಂದರೆ ಏನು? ಇದನ್ನು ವಿವರಿಸುವುದೇ ಕಷ್ಟ. ಕಥೆ ಎನ್ನುವುದು ಸಾರ್ವತ್ರಿಕವಾಗಿದ್ದರೂ ಸಿನೆಮಾಗೆ ಬರೆಯುವ ಕಥೆಗೆ ಕೆಲವು ಮಿತಿಗಳಿರುತ್ತವೆ. ಕಥೆಯ ಒಂದು ವ್ಯಾಖ್ಯೆಯನ್ನು ರಚಿಸಲು ನನಗೆ ಸಾಧ್ಯವಾಗಿಲ್ಲ. ಅದಕ್ಕೆ ಪ್ರಾರಂಭ, ಮಧ್ಯ ಮತ್ತು ಅಂತ್ಯವಿರುತ್ತದೆಯೆಂತಲೂ, ಅದರಲ್ಲಿ ಸಂಘರ್ಷವಿರುತ್ತದೆಯೆಂತಲೂ ಮತ್ತು ಅದಕ್ಕೊಂದು ಸ್ಟ್ರಕ್ಷರ್ ಇರುತ್ತದೆಯೆಂದೂ ಹೇಳುತ್ತಿರುತ್ತೇನೆ. ಇವುಗಳಲ್ಲಿ ನಾನು ಹೆಚ್ಚು ಒತ್ತು ನೀಡುವುದು ಸ್ಟ್ರಕ್ಚರ್ ಮೇಲೆಯೇ.

ಜಗತ್ತಿನ ಎಲ್ಲಾ ವಸ್ತುಗಳಿಗೂ ಒಂದು ಸ್ಟ್ರಕ್ಚರ್ ಇರುತ್ತೆ. ಕೆಲವು ವಸ್ತುಗಳ ಸ್ಟ್ರಕ್ಷರ್ ನಾವು ಕಾಣಬಹುದು ಇನ್ನಿತರ ವಸ್ತುಗಳ ಸ್ಟ್ರಕ್ಚರ್ ಕಾಣದೇ ಇರಬಹುದು. ನಮಗೆ ಇಲ್ಲಿ ಬೇಕಿರುವ ಸ್ಟ್ರಕ್ಚರ್ ಎಂದರೆ, ಯಾವುದೇ ಒಂದು ವಸ್ತು ಮನುಷ್ಯನ ಬಳಕೆಗೆ ಬರುತ್ತೆ ಅಂದರೆ ಅದಕ್ಕೆ ಅದರದೇ ಆದ ಸ್ಟ್ರಕ್ಚರ್ ಇರುತ್ತೆ. ಒಂದು ಟೇಬಲ್‍ಗೆ ನಾಲ್ಕು ಕಾಲುಗಳು ಒಂದು ಹಲಗೆಯದ್ದೋ, ಕಟ್ಟಿಗೆಯದ್ದೋ ಟಾಪ್ ಇರುತ್ತೆ, ಕುರ್ಚಿಗೂ ನಾಲ್ಕು ಕಾಲುಗಳು, ಒಂದು ಟಾಪ್ ಜೊತೆಗೆ ಬೆನ್ನೂ ಇರುತ್ತೆ. ಇದು ಅವುಗಳ ಸ್ಟ್ರಕ್ಚರ್. ಕಾಲು, ಟಾಪ್ ಮತ್ತು ಇನ್ನಿತರ ವಸ್ತುಗಳ ಅನುಪಾತವೂ ಸರಿಯಾಗಿರಬೇಕು ಇಲ್ಲದಿದ್ದರೆ ಅದರ ಉದ್ದೇಶಕ್ಕೆ ಅದು ಪೂರಕವಾಗುವುದಿಲ್ಲ; ತನ್ನ ಕಾರ್ಯ ನಿರ್ವಹಿಸಲಾಗುವುದಿಲ್ಲ. ಅದೇ ರೀತಿ ಕತೆಗೂ ತನ್ನದೇ ಆದ ಸ್ಟ್ರಕ್ಚರ್ ಇರುತ್ತೆ. ಆ ಸ್ಟ್ರಕ್ಚರ್ ಕೆಟ್ಟಾಗ ಸಿನೆಮಾ ಪ್ರೇಕ್ಷಕರ ಗಮನವನ್ನು ಹಿಡಿದಿಡಲು ಆಗುವುದಿಲ್ಲ. ಒಂದು ಕುರ್ಚಿಯನ್ನು ಎಷ್ಟೇ ಸುಂದರವಾಗಿ ರಚಿಸಬೇಕೆಂದರೂ ಮೊದಲು ಅದರ ಸ್ಟ್ರಕ್ಚರ್ ಗಟ್ಟಿಗೊಳಿಸಿದ ನಂತರವೇ. ಸಿನೆಮಾ ವಿಷಯದಲ್ಲಿ ಅನೇಕರು ಈ ನಿಟ್ಟಿನಲ್ಲಿ ವಿಫಲರಾಗುತ್ತಾರೆ. ತಮಗಿಷ್ಟವಾದ ಭಾವನೆಗಳು, ವಿಷಯಗಳು, ಪಾತ್ರಗಳು, ಸನ್ನಿವೇಶಗಳನ್ನು ಸುಂದರವಾಗಿ ಬರೆದು ಚಿತ್ರೀಕರಿಸಿದಾಗ ಆ ಸುಂದರತೆಯೇ ಸ್ಟ್ರಕ್ಚರ್‍ಗೆ ಅಡ್ಡಿಯಾಗಿ ಸಿನೆಮಾ ಕುಸಿದು ಬೀಳುವ ಸಾಧ್ಯತೆಯಿರುತ್ತದೆ.

ಗಟ್ಟಿಯಾದ ಸ್ಟ್ರಕ್ಚರ್ ಹೊಂದುವುದು ಹೇಗೆ? ಅನೇಕ ಸಿನೆಮಾ ಪಂಡಿತರು ಅನೇಕ ರೀತಿಯಲ್ಲಿ ಉತ್ತರಿಸುವ ಪ್ರಯತ್ನ ಮಾಡಿದ್ದಾರೆ. ನಮ್ಮ ಕಥೆಯನ್ನು ನಾಲ್ಕೇ ನಾಲ್ಕು ಸಾಲುಗಳಲ್ಲಿ ಹೇಳುವುದು, ಕಥೆಯ ಉದ್ದೇಶವನ್ನು ಸ್ಪಷ್ಟಪಡಿಸುವುದು, ಕಥೆಯ ಪ್ರಮುಖ ಅಂಶಕ್ಕೆ ಪೂರಕವಾಗಿದ್ದನ್ನು ಮಾತ್ರ ಇಟ್ಟುಕೊಂಡು ಮಿಕ್ಕಿದನ್ನು ತೆಗೆದು ಬಿಸಾಕುವುದು, ಹೀಗೆ ಹಲವಾರು ರೀತಿಯಲ್ಲಿ ನಮ್ಮ ನಮ್ಮ ಉತ್ತರವನ್ನು ಕಂಡುಕೊಳ್ಳಬಹುದು.

ಸಿನೆಮಾ ಎಂದರೆ ಬೆಳಕು, ನೆರಳು, ಕನಸು, ವಾಸ್ತವಗಳ ಆಟ ಎಂದು ಪಿ. ಲಂಕೇಶ್ ಹೇಳಿದ್ದ ನೆನಪು. ಕಲೆಯ ಇತರ ಮಾಧ್ಯಮಗಳಲ್ಲೂ ಇವು ಇದ್ದರೂ ಸ್ಪಷ್ಟವಾಗಿ ವ್ಯಕ್ತವಾಗುವುದು ಸಿನೆಮಾದಲ್ಲಿಯೇ. ನಮ್ಮ, ನಮ್ಮ ಸಮಾಜದ ಇತಿಹಾಸ, ವರ್ತಮಾನ ಮತ್ತು ಭವಿಷ್ಯಗಳು, ಕಥೆಗಾರ ಗ್ರಹಿಸಿದಂತೆ ಸಿನೆಮಾದಲ್ಲಿ ಮೂಡಿಬರುತ್ತವೆ. ನಮ್ಮ ಸುತ್ತಲಿನ ಕಥೆಗಳು, ನಮ್ಮ ಕನಸುಗಳೇ ಕಥೆಗೆ ಸ್ಫೂರ್ತಿ. ಅಮೆರಿಕದ ಅಂದರೆ ಹಾಲಿವುಡ್ ಸಿನೆಮಾಗಳನ್ನು ನೋಡಿದರೆ, ಅವುಗಳನ್ನು ಪ್ರಭಾವಿಸುವುದು ಅವರುಗಳ ಕನಸುಗಳು. ಅಮೆರಿಕಾ ಹೊಸ ದೇಶವಾದುದರಿಂದ, ಅಲ್ಲಿರುವ ಎಲ್ಲರೂ ವಲಸಿಗರಾದುದರಿಂದ ಅವರ ಕಲ್ಪನೆಗಳೇ ಅವರ ಚಿತ್ರಗಳನ್ನು ರೂಪಿಸುತ್ತವೆ. ಅದರೊಂದಿಗೆ, ಅನೇಕ ನಿರ್ದೇಶಕರು ತಮ್ಮ ಜೀವನದ ಅನೇಕ ಹುಡುಕಾಟಗಳನ್ನು ಅವರ ಚಿತ್ರಗಳಲ್ಲಿಯೇ ಮಾಡುತ್ತಾರೆ. ಕೆಲವರು ಮನುಕುಲದ ಭವಿಷ್ಯದ ಪ್ರಶ್ನೆಗೆ ಉತ್ತರ ಹುಡುಕಿದರೆ, ಕೆಲವರು ಜೀವನದ ಸಾರ್ಥಕತೆಗೂ, ಕೆಲವರು ಮನುಷ್ಯನ, ಸಮಾಜದ ಕೆಡುಕಿನ, ಒಳ್ಳೇತನದ ಆಳದ ಪ್ರಶ್ನೆಗೆ ಉತ್ತರ ಹುಡುಕಿದರೆ, ಇನ್ನಿತರರು ದೇಶಕಾಲಗಳನ್ನು ಮೀರಲು ಪ್ರಯತ್ನಿಸುತ್ತ ಮನುಷ್ಯನ ಕಲ್ಪನಾಶಕ್ತಿಯನ್ನೇ ಒರೆಗೆ ಹಚ್ಚುತ್ತಾರೆ.

ಇದು ಹಾಲಿವುಡ್. ವಿಶ್ವದ ಎಲ್ಲೆಡೆ ಪ್ರಸಿದ್ಧವಾಗಿರುವ ಹಾಲಿವುಡ್ ಸಿನೆಮಾಗಳಿಗೆ ಕೆಲವು ದೇಶಗಳಲ್ಲಿ ಪ್ರವೇಶವಿಲ್ಲ. (ಈಗ ಇಂಟರ್‍ನೆಟ್ ಬಂದ ಮೇಲೆ ಪರಿಸ್ಥಿತಿ ಬೇರೆ ಆಗಿರಬಹುದು). ಅಂತಹ ಒಂದು ದೇಶ ಇರಾನ್. ವಿಶ್ವದಲ್ಲಿ ಯುರೋಪಿಯನ್ ಮತ್ತು ಹಾಲಿವುಡ್ ಸಿನೆಮಾಗಳ ನಂತರ ಹೆಚ್ಚು ಪ್ರಸಿದ್ಧವಿರುವ ಸಿನೆಮಾಗಳು ಇರಾನಿನ ಸಿನೆಮಾಗಳು. ಹಾಲಿವುಡ್ ಅಲ್ಲಿಗೆ ತಲುಪದಿರುವುದು ಅಲ್ಲಿ ಒಳ್ಳೇ ಪರಿಣಾಮವೇ ಬೀರಿದೆ. ಆ ಚಿತ್ರಗಳು, ಅಲ್ಲಿಯ ನಿರ್ದೇಶಕರಿಗೆ ಅನುಕರಿಸಲು ಯಾವುದೇ ಚಿತ್ರಗಳಿರಲಿಲ್ಲ. ಅಲ್ಲಿಯ ನೋಡುಗರಿಗೂ ತಮ್ಮ ಚಿತ್ರಗಳಿಂದ ಇಂತಹದ್ದೇ ಆದ ನಿರೀಕ್ಷೆಗಳಿರಲಿಲ್ಲ. ಹಾಗಾಗಿ, ಅವರು ತಮ್ಮ ಕಥೆಗಳನ್ನೇ ಹೇಳಲು ಪ್ರಾರಂಭಿಸಿದರು. ಅಲ್ಲಿ ತಾಂತ್ರಿಕತೆ ಪ್ರದರ್ಶನವಿಲ್ಲ, ಸಾಹಸದೃಶ್ಯಗಳಿಲ್ಲ, ಹಾಡುಗಳಿಲ್ಲ, ಕುಣಿತವಿಲ್ಲ, ಸೆನ್ಸಾರ್ ಕಾರಣದಿಂದ ಲೈಂಗಿಕ ದೃಶ್ಯ ಬಿಡಿ, ತಲೆಗೆ ಸ್ಕಾರ್ಫ್ ಹಾಕದ ಮಹಿಳೆಯರಿಲ್ಲ. ಈ ಇತಿಮಿತಿಗಳೇ ಇರಾನಿನ ಸಿನೆಮಾಗೆ ವರದಾನವಾದವು, ಅಥವಾ ಅಲ್ಲಿಯ ನಿರ್ದೇಶಕರು ವರದಾನವಾಗಿ ಬಳಸಿಕೊಂಡು ಇರಾನಿನ ಸಮಾಜವನ್ನು ಜಗತ್ತಿನೆದುರಿಗೆ ತಂದಿಟ್ಟರು.

ಭಾರತದಲ್ಲಿ ಹಾಗಾಗಲಿಲ್ಲ. ನಮ್ಮ ಅನೇಕ ಶ್ರೇಷ್ಠ ನಿರ್ದೇಶಕರು ಪಶ್ಚಿಮದಿಂದ ಪ್ರಭಾವಿತರಾದವರು. ಅದರಿಂದ ಅನೇಕ ಒಳ್ಳೆಯ ಚಿತ್ರಗಳೂ, ಅದಕ್ಕಿಂತ ಹೆಚ್ಚು ಕೆಟ್ಟ ಚಿತ್ರಗಳು ಮೂಡಿ ಬಂದವು. ನಮ್ಮ ಅನೇಕ ಚಿತ್ರಗಳಿಗೆ ಇತರ ಚಿತ್ರಗಳೇ ಸ್ಫೂರ್ತಿ. ಜೀವನವು ಕಲೆಗೆ ಸ್ಫೂರ್ತಿಯಾಗಿ, ಕಲೆಯು ಜೀವನಕ್ಕೆ ಸ್ಫೂರ್ತಿಯಾಗಬೇಕು ಎನ್ನುವುದು ನಮ್ಮ ಚಿತ್ರರಂಗಕ್ಕೆ ಅಷ್ಟು ಅನ್ವಯವಾಗಲಿಲ್ಲ. 50 ಅಥವಾ 60ರ ದಶಕದಲ್ಲಿ ಸಿನೆಮಾಗಳು ಜನಪ್ರಿಯವಾಗತೊಡಗಿದಾಗ ನಮ್ಮ ಸಮಾಜವೇ ಭಿನ್ನವಾಗಿತ್ತು. ಮನರಂಜನೆಯ ಸಾಧನಗಳು ಇದ್ದವಾದರೂ ಸಿನೆಮಾದ ಆಗಮನ ಸಮಾಜದಲ್ಲಿ ಸಂಚಲನ ಮೂಡಿಸಿತು. ಬೆಳ್ಳಿ ಪರದೆಯ ಮೇಲೆ ಚಲಿಸುವ ಚಿತ್ರಗಳನ್ನು ನೋಡುವುದೇ ಮನರಂಜನೆಯಾಗಿತ್ತು, ಅಂತಹ ಸಂದರ್ಭದಲ್ಲಿ ಪೌರಾಣಿಕ, ಸಾಮಾಜಿಕ ಚಿತ್ರಗಳೂ, ಸಕಲಗುಣಸಂಪನ್ನ ನಾಯಕನನ್ನು ದೊಡ್ಡ ಪರದೆಯ ಮೇಲೆ ನೋಡುವುದು ಎಷ್ಟು ಖುಷಿ ಕೊಟ್ಟಿರಬಹುದು ಎನ್ನುವುದು ನಮಗೆ ಈಗ ಊಹಿಸಲೂ ಆಗದು. ಆದರೆ ಆ ಕಾಲಘಟ್ಟ ಮುಗಿದಿದೆ. ಮೊಬೈಲ್ ಪರದೆಯ ಮೇಲೇ ಸಿನೆಮಾ ನೋಡಬಹುದು, ವಿಶ್ವದ ಶ್ರೇಷ್ಠ ಸಾಹಸ ದೃಶ್ಯಗಳನ್ನು ನಮ್ಮ ಕೈಅಳತೆಯಲ್ಲಿವೆ, ಎಲ್ಲಾ ಬಗೆಯ ಚಿತ್ರಗಳ ಶ್ರೇಷ್ಠ ಕೊಡುಗೆಗಳನ್ನು ಬೇಕಾದಾಗ ನೋಡಬಹುದಾಗಿದೆ. ಇಂತಹ ಸಂದರ್ಭದಲ್ಲಿ ಎಂತ ಚಿತ್ರಗಳನ್ನು ಮಾಡಬೇಕು? ಯಾವ ಕಥೆಗಳನ್ನು ಹೇಳುವುದು? ನನಗೆ ಸಿಕ್ಕಿರುವ ಉತ್ತರ; ನಮ್ಮ ಕಥೆಗಳು, ನಮ್ಮ ಬದುಕು, ನಮ್ಮ ಭಾಷೆ, ಸಂಸ್ಕೃತಿ, ಪ್ರದೇಶದ ನಮ್ಮೊಳಗೆ ಹುದುಗಿರುವ ಕಥೆಗಳು. ಒಳಗಿನಿಂದ ಬಂದ ಕಥೆಗಳಿಗೆ ಯಾವುದೇ ಕಾಂಪಿಟೇಷನ್ ಇರುವುದಿಲ್ಲ.

ಇದನ್ನು ಓದಿರಿ ಪರದೆಯ ಮೇಲೆ ವರ್ಲ್ಡ್ ವಾರ್

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...