ಖ್ಯಾತ ವೆಬ್ ಪೋರ್ಟಲ್ ದಿ ವೈರ್‌ನ ಸಂಸ್ಥಾಪಕ ಸಂಪಾದಕ ಸಿದ್ಧಾರ್ಥ್ ವರದರಾಜನ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಕ್ಕಾಗಿ ಸುಮಾರು 3,500 ನ್ಯಾಯಶಾಸ್ತ್ರಜ್ಞರು, ಶಿಕ್ಷಣ ತಜ್ಞರು, ನಟರು, ಕಲಾವಿದರು, ಬರಹಗಾರರು ಮತ್ತು ಇತರ ವರ್ಗದ ಜನರು ಉತ್ತರ ಪ್ರದೇಶ ಸರ್ಕಾರ ಮತ್ತು ಪೊಲೀಸರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಸಿದ್ಧಾರ್ಥ್ ವರದರಾಜನ್ ವಿರುದ್ಧದ ಎಲ್ಲಾ ಕ್ರಿಮಿನಲ್ ಮೊಕದ್ದಮೆಗಳನ್ನು ಕೈಬಿಡಬೇಕೆಂದು ಒತ್ತಾಯಿಸಿದ್ದಾರೆ.
ಮಂಗಳವಾರ ಬಿಡುಗಡೆ ಮಾಡಿರುವ ಜಂಟಿ ಹೇಳಿಕೆಯಲ್ಲಿ ಅವರು ವರದರಾಜನ್ ವಿರುದ್ಧ ಎಫ್‌ಐಆರ್ ನೋಂದಣಿಯು ಪತ್ರಿಕಾ ಸ್ವಾತಂತ್ರ್ಯದ ಮೇಲಿನ ದಾಳಿ ಎಂದು ಕರೆದಿದ್ದಾರೆ. ಅಲ್ಲದೇ COVID-19 ಸಾಂಕ್ರಾಮಿಕವನ್ನು ಮಾಧ್ಯಮಗಳ ಸ್ವಾತಂತ್ರ್ಯವನ್ನು ಹಾಳುಮಾಡಲು ಒಂದು ಅಸ್ತ್ರವಾಗಿ ಬಳಸಬೇಡಿ ಎಂದು ಅವರು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಒತ್ತಾಯಿಸಿದ್ದಾರೆ.
ವೈದ್ಯಕೀಯ ತುರ್ತುಸ್ಥಿತಿಯನ್ನು ಬಳಸಿಕೊಂಡು ವಾಸ್ತವಿಕ ರಾಜಕೀಯ ತುರ್ತುಸ್ಥಿತಿಯನ್ನು ಹೇರುವ ನೆಪವಾಗಿ ಕಾರ್ಯನಿರ್ವಹಿಸಬಾರದು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇದಕ್ಕೆ ಸಹಿ ಹಾಕಿದವರಲ್ಲಿ ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶ ಮದನ್ ಬಿ ಲೋಕೂರ್, ಮದ್ರಾಸ್ ಹೈಕೋರ್ಟ್ ಮಾಜಿ ನ್ಯಾಯಾಧೀಶ ಕೆ ಚಂದ್ರು ಮತ್ತು ಪಾಟ್ನಾ ಹೈಕೋರ್ಟ್ ಮಾಜಿ ನ್ಯಾಯಾಧೀಶ ಅಂಜನಾ ಪ್ರಕಾಶ್ ಸೇರಿದ್ದಾರೆ.
ಮಾಜಿ ಮಾಜಿ ಹಣಕಾಸು ಸಚಿವ ಯಶ್ವಂತ್ ಸಿನ್ಹಾ ಅವರೊಂದಿಗೆ ಇಬ್ಬರು ಮಾಜಿ ನೌಕಾಪಡೆಯ ಮುಖ್ಯಸ್ಥರಾದ ಅಡ್ಮಿರಲ್ ರಾಮದಾಸ್ ಮತ್ತು ಅಡ್ಮಿರಲ್ ವಿಷ್ಣು ಭಾಗವತ್ ಸಹ ಸಹಿ ಹಾಕಿದ್ದಾರೆ.
“ಮಾಧ್ಯಮ ಸ್ವಾತಂತ್ರ್ಯದ ಮೇಲಿನ ಈ ದಾಳಿ, ವಿಶೇಷವಾಗಿ COVID-19 ಬಿಕ್ಕಟ್ಟಿನ ಸಂದರ್ಭದಲ್ಲಿ, ಕೇವಲ ವಾಕ್ ಸ್ವಾತಂತ್ರ್ಯಕ್ಕೆ ಮಾತ್ರವಲ್ಲ, ಸಾರ್ವಜನಿಕರ ಮಾಹಿತಿಯ ಹಕ್ಕಿಗೆ ಅಪಾಯವನ್ನುಂಟುಮಾಡುತ್ತದೆ” ಎಂದು ಹೇಳಿಕೆ ತಿಳಿಸಿದೆ. ಸಾಂಕ್ರಾಮಿಕ ರೋಗವನ್ನು ಕೋಮುವಾದೀಕರಿಸಬೇಡಿ ಎಂದು ಅವರು ಮಾಧ್ಯಮಗಳಿಗೆ ಕರೆ ನೀಡಿದರು.
ದೆಹಲಿಯಲ್ಲಿ ತಬ್ಲೀಘಿ ಜಮಾಅತ್ ಕಾರ್ಯಕ್ರಮ ನಡೆದ ದಿನ, ಯೋಗಿ ಆದಿತ್ಯನಾಥ್ ಅವರು ಎಂದಿನಂತೆ ರಾಮ್ ನವಮಿ ಜಾತ್ರೆ ನಡೆಯಲಿದೆ ಎಂದು ತಿಳಿಸಿರುವುದಾಗಿ ಉತ್ತರ ಪ್ರದೇಶ ಪೊಲೀಸರು ಟ್ವಿಟ್ಟರ್ ನಲ್ಲಿ ಮಾಡಿದ ಕಾಮೆಂಟ್‌ಗಳ ಕುರಿತು ವರದರಾಜನ್ ರವರ ದಿ ವೈರ್ ವರದಿ ಮಾಡಿತ್ತು.
ಕೊರೋನವೈರಸ್ ಹರಡುವುದನ್ನು ತಡೆಗಟ್ಟಲು ರಾಷ್ಟ್ರವ್ಯಾಪಿ ಲಾಕ್ ಡೌನ್ ಸಮಯದಲ್ಲಿ ಅಯೋಧ್ಯೆಯ ರಾಮ್‌ಜನ್ಮಭೂಮಿ ಸ್ಥಳದಲ್ಲಿ ನಡೆದ ಧಾರ್ಮಿಕ ಸಮಾರಂಭದಲ್ಲಿ ಯೋಗಿ ಆದಿತ್ಯನಾಥ್ ಭಾಗವಹಿಸಿದ್ದನ್ನು ಪ್ರಶ್ನಿಸಿದ್ದಕ್ಕಾಗಿ ವರದರಾಜನ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ವರದರಾಜನ್ ವಿರುದ್ಧದ ಎಫ್ಐಆರ್‌ನಲ್ಲಿ ಅವರು ಮಾಡಿದ ಟ್ವೀಟ್ ಅನ್ನು ಉಲ್ಲೇಖಿಸಿದ್ದಾರೆ, “ತಬ್ಲೀಘಿ ಜಮಾಅತ್ ಕಾರ್ಯಕ್ರಮ ನಡೆದ ದಿನ, ಆದಿತ್ಯನಾಥ್ ಮಾರ್ಚ್ 25 ರಿಂದ ಏಪ್ರಿಲ್ 2 ರವರೆಗೆ ಅಯೋಧ್ಯೆಗಾಗಿ ಯೋಜಿಸಲಾದ ದೊಡ್ಡ ರಾಮ್ ನವಮಿ ಜಾತ್ರೆ ಎಂದಿನಂತೆ ಮುಂದುವರಿಯುತ್ತದೆ ಮತ್ತು ಭಗವಾನ್ ರಾಮ್ ಭಕ್ತರನ್ನು ಕೊರೋನವೈರಸ್‌ನಿಂದ ರಕ್ಷಿಸುತ್ತಾನೆ” ಎಂಬುದು ಆ ಟ್ವೀಟ್‌ನ ಸಾರವಾಗಿದೆ.
ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಶಿವಶಂಕರ್ ಮೆನನ್, ಮಾಜಿ ವಿದೇಶಾಂಗ ಕಾರ್ಯದರ್ಶಿ ಸುಜಾತಾ ಸಿಂಗ್, ಪಂಜಾಬ್ ರಾಜ್ಯಪಾಲರ ಮಾಜಿ ಸಲಹೆಗಾರ ಮತ್ತು ರೊಮೇನಿಯಾದ ಮಾಜಿ ರಾಯಭಾರಿ ಜೂಲಿಯೊ ರಿಬೈರೊ ಮತ್ತು ಮಾಜಿ ಸಿಇಸಿ ಎಂಎಸ್ ಗಿಲ್ ಸೇರಿದಂತೆ ಹಲವಾರು ಮಾಜಿ ಅಧಿಕಾರಿಗಳು ಈ ಹೇಳಿಕೆಗೆ ಸಹಿ ಹಾಕಿದ್ದಾರೆ.
ಲೇಖಕರಾದ ವಿಕ್ರಮ್ ಸೇಠ್, ನಯನತಾರಾ ಸಹಗಲ್, ಅರುಂಧತಿ ರಾಯ್, ಅನಿತಾ ದೇಸಾಯಿ, ಕೆ ಸಚ್ಚಿದಾನಂದನ್ ಮತ್ತು ಕಿರಣ್ ದೇಸಾಯಿ ಇತರ ಸಹಿ ಹಾಕಿದ್ದಾರೆ.
ನಟರು ಮತ್ತು ಕಲಾವಿದರಾದ ಅಮೋಲ್ ಪಾಲೇಕರ್, ನಸೀರುದ್ದೀನ್ ಷಾ, ನಂದಿತಾ ದಾಸ್, ಫರ್ಹಾನ್ ಅಖ್ತರ್ ಮತ್ತು ಮಲ್ಲಿಕಾ ಸಾರಾಭಾಯ್ ಅವರು ಈ ಹೇಳಿಕೆಯನ್ನು ಅನುಮೋದಿಸಿದ್ದಾರೆ. ಚಿತ್ರ ನಿರ್ಮಾಪಕರಲ್ಲಿ ಜೋಯಾ ಅಖ್ತರ್, ಕಿರಣ್ ರಾವ್ ಮತ್ತು ಆನಂದ್ ಪಟ್ವರ್ಧನ್, ಮತ್ತು ದಯಾನಿತಾ ಸಿಂಗ್ ಕೂಡ ಇದ್ದಾರೆ.
ಹಿರಿಯ ಪತ್ರಕರ್ತರು ಮತ್ತು ಜಗತ್ತಿನಾದ್ಯಂತದ ವಿಶ್ವವಿದ್ಯಾಲಯಗಳ ಸಾವಿರಕ್ಕೂ ಹೆಚ್ಚು ಪ್ರಾಧ್ಯಾಪಕರು ಸಹ ಸಹಿ ಹಾಕಿದ್ದಾರೆ.


