Homeಮುಖಪುಟ“ಡ್ರಿಂಕ್ಸ್‌ಗೆ ಲಾಕ್‍ಡವುನ್ ಇರಬಾರದಿತ್ತು”: ಚಂದ್ರೇಗೌಡರ ಕಟ್ಟೆಪುರಾಣ

“ಡ್ರಿಂಕ್ಸ್‌ಗೆ ಲಾಕ್‍ಡವುನ್ ಇರಬಾರದಿತ್ತು”: ಚಂದ್ರೇಗೌಡರ ಕಟ್ಟೆಪುರಾಣ

- Advertisement -
- Advertisement -

ವಾಟಿಸ್ಸೆ ಬಂದು “ಬ್ಯಾಡಲಕ್ಕು ಕಣಕ್ಕ” ಅಂದ.
“ಯಾಕ್ಲ”
“ಮುಂದಿನ ತಿಂಗಳು ಮೂರನೇ ತಾರಿಕಿನವರಿಗೂ ಲಾಕ್‍ಡೌನು ಮಾಡಿದ ಕಣಕ್ಕ ಮೋದಿ.”
“ಅಯ್ಯೊ ಅಯ್ಯೊ ವಸಿದಿನವೆ. ಆಯ್ತು ಬುಡು.”
“ಇಷ್ಟು ದಿನವೆ ಇದ್ಯಲ್ಲ ಬುಡು” ಎಂದ ಉಗ್ರಿ.
“ಹದುನಾಕು ದಿಸ ವನವಾಸದಂಗೆ ಕಳೆದ ಕಂಡ್ಳ.”
“ಏನು ಲಾಸಗಿಲ್ಲ ತಗಳಕ್ಕ. ಕಲರ್ ಬಂದಿದ್ದಿ, ಹೆಲ್ತ ಇಂಪ್ರೂ ಆಗ್ಯದೆ ಇನ್ನೆನಾಗಬೇಕು. ಬಾಗಲಾಯ್ಕಂಡು ಇರದೆ ಹೆಲ್ತಿಗೊಸ್ಕರ ಗೊತ್ತೇನಕ್ಕ” ಎಂದ ವಾಟಿಸ್ಸೆ.
“ಯಾವ ಸೀಮೆ ಹೆಲ್ತಲ, ಹ್ಯಳುವುದಂಗೆ ಮನೆವಳಗೆ ಕುಂತಿದ್ರೆ ಮನಸುನ ಸರೀಳ ಯಾತಕ್ಕೆ ಬಂದತೂ.”
“ಕೊರೊನಾ ಬರದಿಲ್ಲ ಬುಡು”
“ಬರದಿಲ್ಲ ಅಂತರೆ, ಜನ ಸಾಯ್ತಾ ಅವುರೆ ಅಂತರೆ, ಯಾವುದು ನಂಬಲಿ ಯಾವುದು ಬುಡ್ಳಿ ಅನ್ನಂಗಾಗ್ಯಾದೆ.”
“ಮೋದಿ ಮಾತ ನಂಬಕ್ಕ.”
“ಬೂದಿ ಹುಯ್ಕಳದೆಯ ಕಂಡ್ಳ ಅವುನ ಮಾತ ಕೇಳಿದ್ರೆ.”
“ಯಾಕಪ್ಪ.”
“ಮನೆವಳಗಿರಿ ಅಂತನೆ ವರತು ಇನ್ನೆನು ಹೇಳದಿಲ್ಲ.”
“ಏನೇಳಬೇಕಾಗಿತ್ತು.”
“ಇಪ್ಪತ್ತು ದಿನಾತು ದನ ಕಟ್ಟಿತ್ತಾವುಲೆ ಹುಲ್ಲಾಕ್ತ ಇದ್ದಿನಿ. ಯಮ್ಮೆ ಹಿಡದು ಆಚೆಗೆ ಕಟ್ಟಿದ್ದು ತಿರಗ ವಳಿಕೆ ಹಿಡದು ಕಟ್ಟದಾಗ್ಯದೆ. ಆಡು ಮರಿಗಳು ಸೊಪ್ಪಿಲ್ಲದೆ ಕೂಗ್ತವೆ. ಅದ್‍ಯಂಗ್ಲ ಮನೆವಳಗಿದ್ದೀ.”
“ಮೋದಿಗವ್ಯಲ್ಲ ಗೊತ್ತಿಲ್ಲ ಕಣಕ್ಕ. ಅವುನಿಗೆ ಅಂಗಡಿ, ಆಫೀಸು ಅಷ್ಟೆ ಗೊತ್ತಿರದು. ಅದಕ್ಕೆ ಮನೆಲಿರಿ ಅಂದವುನೆ.”
“ಅಂಗರೆ ರೈತಾಪಿ ಜನ ಗೊತ್ತಿಲವೆ ಅವುನಿಗೆ.”
“ಇಲ್ಲ ಕಣಕ್ಕ. ಗೊತ್ತಿದ್ರೆ ಯಲ್ಲಾ ಸಾಮಾನು ಸರಂಜಾಮು ವದಿಗಿಸಿಗಳಿ, ಲಾಕ್‍ಡವುನ್ ಮಾಡ್ತಿನಿ ಅಂತ ಮೂರು ದಿನ ಮದ್ಲೆ ಹೇಳಿ, ಜನಗಳ ತಯಾರು ಮಾಡನು. ಅವುನ ತಲೆಲಿ ಕೂಲಿ ಮಾಡೋರು ಬಡವುರು ಜಮೀನಿಲ್ಲದೊರು ಇಲವೇ ಇಲ್ಲ.”
“ಜಮೀನು ಅಂದೇಟಿಗೆ ನೆಪ್ತಿಗೆ ಬತ್ತು ಕಂಡ್ಳ ಬಿಜೆಪಿಗಳು ಅದೇನೂ ಕಾನೂನು ಮಾಡಿದ್ರಂತೆ.”
“ಏನಕ್ಕ.”
“ವತುವರಿ ಜಮೀನ್ಯಲ್ಲ ನಿಂದೆಯ ಅಂತ ಮಾಡಿದರಂತೆ.”
“ನಂದಂತೂ ಯಾವ ವತುವರಿನೂ ಇಲ್ಲ ಕಣಕ್ಕ ನನ್ನ ಖಾತೆ ಜಮೀನ್ನ ಹಾಳು ಬಿಟ್ಟಿದ್ದಿನಿ.”
“ನಿಂದಿಲ್ಲ ಕಂಡ್ಳ, ಆ ಕಿಸ್ಣೇಗೌಡ ಒಂದು ಕಾಲಿಲ್ದೆಯಿದ್ರೂವೆ ಮನಿಯೋರನ್ನೆಲ್ಲ ಕರಕಂಡೋಗಿ ಯಕರಿಗಟ್ಳೆ ಬೇಲಿ ಹಾಕ್ಯಂಡನಂತೆ.”
“ನೋಡಪ್ಪ, ಕರೊನಾ ಬಂದು ದೇಸಕ್ಕೆ ದೇಸನೆ ಕೊಚಗಂಡೊಯ್ತಾಯಿರುವಾಗ, ಆ ಕುಂಟಣ್ಣನಿಗೆ ಬಂದಿರೊ ದುರಾಸೆ ನೋಡು ಯಂಗದೆ.”
“ಅದೂ ಊರ್ಯಲ್ಲ ಬಾಗಲಾಯ್ಕಂಡು ಮನೆಲಿದ್ರು ನೋಡು, ಯಾರು ನೋಡದಿಲ್ಲ ಅಂತ ತಿಳಗಂಡು ಬದ ಹಾಕಿ ಬೇಲಿ ಹಾಕಿದ್ದಾನಂತೆ.”
“ಅಲ್ಲಾ ಕಣೊ ಉಗ್ರಿ, ಇಂತ ಟೈಮಲ್ಲಿ ಹಿಂಗೆ ಯೋಚನೆ ಮಾಡ್ತರೆ ಜನ ಅಂತ ನನಿಗೆ ಗೊತ್ತಿರಲೇ ಇಲ್ಲ.”
“ಆ ಬಿಜೆಪಿಗಳೇ ಅಂಗೆ ಕಣೊ, ಯಾವಾಗ್ಲೂ ಟೈಂ ನೊಡ್ತರೆ ಜನ ಅಡ್ಡಗ್ಯಾನಾಗಿದ್ದಾಗ ಲಬುಕ್ಕಂತ ಲಪಟಾಯಿಸಿಬುಡ್ತಾರೆ”
“ಈಗ್ಲು ಅಂಗೆ ಆಗ್ಯದೆ ನೋಡೊ, ಊರ್ಯಲ್ಲ ಮನೆಲಿದ್ರೆ ಆ ಕೃಷ್ಣೇಗೌಡ ಬೇಲಿ ಹಾಕ್ಯವುನೆ ಇನ್ನ ಆ ಮಲನಾಡಕಡೆ ಗುಡ್ಡ ಗುಡ್ಡನೆ ನಂದು ಅಂತರೇನೂ.”
“ಹೋಗ್ಲಿ ಬುಡೊ ಉಗ್ರಿ, ಆ ವತ್ತುವರಿ ಮಾತಂಗಿರ್ಲಿ ಡ್ರಿಂಕ್ಸ್ ಬಗ್ಗೆ ಮಾತಾಡನ. ಇಪ್ಪತ್ತು ದಿನಾಯ್ತು ಕಣೊ ಉಗ್ರಿ ನಾನು ಡ್ರಿಂಕ್ಸ್ ಮಾಡಿ.”
“ಯಾಕೆ ಎಂ.ಸಿ ಬ್ರಾಂದಿ ಸಿಗತದಲ್ಲೊ.”
“ಒಂದು ಕ್ವಾಟ್ರಿಗೆ ನಾನೂರ್ರುಪಾಯಿ ಕಣೊ.”
“ಆಟೊಂತರ ದುಡ್ಡೆ.”
“ಯೆಸ್ ಕೊರೋನ ಯಾಕೊ ಡ್ರಿಂಕ್ಸ್ ಆಸೆಗೆ ಬುಡಂಗೆ ಮಾಡ್ತ ಅದೆ ಅಕ್ಚವಲಿ ಲಾಕ್‍ಡೌನು ಡ್ರಿಂಕ್ಸ್‍ಗೆ ಇರಬಾರದಿತ್ತು ಕಣೊ ಉಗ್ರಿ.”
“ಎಡೂರಪ್ಪನಿಗೆ ಫೋನು ಮಾಡು.”

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಪ್ಯಾಲೆಸ್ತೀನ್‌ಗೆ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ನೀಡುವ ಪ್ರಯತ್ನ ಬೆಂಬಲಿಸಿದ ಭಾರತ

0
ವಿಶ್ವಸಂಸ್ಥೆಯ ಸಂಪೂರ್ಣ ಸದಸ್ಯತ್ವ ಪಡೆಯುವ ಪ್ಯಾಲೆಸ್ತೀನ್‌ನ ಮನವಿಯನ್ನು ಮರು ಪರಿಶೀಲಿಸಿ ಅನುಮೋದಿಸುವ ವಿಶ್ವಾಸವಿದೆ ಎಂದು ಭಾರತ ಬುಧವಾರ ಹೇಳಿದೆ. ಈ ಮೂಲಕ ಪ್ಯಾಲೆಸ್ತೀನ್‌ ವಿಶ್ವಸಂಸ್ಥೆಯ ಪೂರ್ಣ ಸದಸ್ಯತ್ವ ಪಡೆಯುವುದಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಇಸ್ರೇಲ್ ಮತ್ತು...