ಜಾರ್ಖಂಡ್‌ನ ದೇವ್‌ಘರ್‌ನಲ್ಲಿರುವ ಇಂಡಿಯನ್ ಆಯಿಲ್ ಟರ್ಮಿನಲ್ ಬಳಿ ಮಂಗಳವಾರ ಭಾರಿ ಬೆಂಕಿ ಅವಘಡ ಸಂಭವಿಸಿದೆ. ಹತ್ತಿರದ ಹಳ್ಳಿಯ ಜನರನ್ನು ಸ್ಥಳಾಂತರಿಸಲಾಗಿದ್ದು, ಸ್ಥಳಕ್ಕೆ ಹತ್ತಿರದಲ್ಲಿರುವ ಜಸಿಧ್ ನಿಲ್ದಾಣದಲ್ಲಿ ಸರಕು ಮತ್ತು ಪ್ರಯಾಣಿಕ ರೈಲನ್ನು ಸ್ಥಳಾಂತರಿಸಲಾಗಿದೆ.
ದೇವ್‌ಘರ್‌ನ ಜಸಿದಿಹ್‌ನ ಬದಲಾದಿಹ್ ಗ್ರಾಮದ ಪೊದೆಗಳಲ್ಲಿ ಬೆಂಕಿ ಕಾಣಿಸಿಕೊಂಡು ದೊಡ್ಡ ಪ್ರದೇಶಕ್ಕೆ ಹರಡಿತು. ಜಸಿದಿಹ್ ಕೈಗಾರಿಕಾ ಪ್ರದೇಶದಲ್ಲಿ ಇಂಡಿಯನ್ ಆಯಿಲ್ ಟರ್ಮಿನಲ್ ಇದೆ, ಬೆಂಕಿ ಹೊತ್ತಿಕೊಂಡ ಸ್ಥಳಕ್ಕೆ ಸಮೀಪದಲ್ಲಿದೆ. ಇಂಡಿಯನ್ ಆಯಿಲ್ ಡಿಪೋ ಆವರಣಕ್ಕೂ ಬೆಂಕಿ ಹರಡಿದೆ. ಬೆಂಕಿ ಹೊತ್ತಿಕೊಂಡ ಸ್ಥಳದಿಂದ ಕೆಲವು ಗ್ಯಾಸ್ ಪೈಪ್‌ಗಳು ದೂರದಲ್ಲಿವೆ ಎಂದು ವರದಿಯಾಗಿದೆ.
ಸ್ಥಳದಲ್ಲಿ ಅಗ್ನಿಶಾಮಕ ಯಂತ್ರಗಳನ್ನು ನಿಯೋಜಿಸಲಾಗಿದೆ; ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸಹ ಬೆಂಕಿ ಹರಡುವಿಕೆಯನ್ನು ನಿಯಂತ್ರಿಸಲು ಹಾಗೂ ಗ್ಯಾಸ್ ಪೈಪ್‌ಗಳನ್ನು ಬೆಂಕಿಯಿಂದ ರಕ್ಷಿಸಲು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಮುಂಜಾಗ್ರತಾ ಕ್ರಮವಾಗಿ ತೈಲ ಡಿಪೋ ಬಳಿ ಇರುವ ಸಂತಾಲ್ದಿಹ್ ಗ್ರಾಮದ ಜನರನ್ನು ಸ್ಥಳಾಂತರಿಸಲು ತಿಳಿಸಲಾಗಿದೆ.
ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ (ಐಒಸಿಎಲ್) ಕೈಗಾರಿಕಾ ಪ್ರದೇಶದಲ್ಲಿ ಪೆಟ್ರೋಲಿಯಂ ಸಂಗ್ರಹ ಮತ್ತು ವಿತರಣಾ ಕೇಂದ್ರವನ್ನು ಹೊಂದಿದೆ. ಜಾರ್ಖಂಡ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿತರಣೆಗಾಗಿ ಪೆಟ್ರೋಲ್, ಡೀಸೆಲ್ ಮತ್ತು ಇತರ ಪೆಟ್ರೋಲಿಯಂ ಉತ್ಪನ್ನಗಳನ್ನು ಇಲ್ಲಿ ಸಂಗ್ರಹಿಸಲಾಗುತ್ತದೆ.
ಇಂಡಿಯನ್ ಆಯಿಲ್‌ನ ಸಂಗ್ರಹಣಾಗಾರದ ಬಳಿ ಬೆಂಕಿ ಕಾಣಿಸಿಕೊಂಡಿದ್ದು, ಡಿಪೋ ಕಡೆಗೆ ದಟ್ಟವಾದ ಕಪ್ಪು ಹೊಗೆ ಆವರಿಸುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಮತ್ತೊಂದು ವೀಡಿಯೊದಲ್ಲಿ, ಹತ್ತಿರದ ಗ್ರಾಮದಲ್ಲಿ ಪೊಲೀಸ್ ಅಧಿಕಾರಿಗಳು ಹಾಜರಿದ್ದು, ಅನಾಹುತವನ್ನು ತಪ್ಪಿಸಲು ಜನರನ್ನು ಬೇಗನೆ ಸ್ಥಳಾಂತರಿಸುವಂತೆ ಮನವಿ ಮಾಡಿದ್ದಾರೆ. ಗ್ರಾಮಸ್ಥರು ಹಲವಾರು ಅಗ್ನಿಶಾಮಕ ಸಾಧನಗಳೊಂದಿಗೆ ಬೆಂಕಿಯನ್ನು ನಂದಿಸುತ್ತಿದ್ದಾರೆ.
ಉತ್ತರ ಪ್ರದೇಶ| 40 ವರ್ಷಗಳ ಹಿಂದೆ 24 ದಲಿತರನ್ನು ಕೊಂದಿದ್ದ ಮೂವರಿಗೆ ಮರಣದಂಡನೆ


