ಸೂರ್ಯಗ್ರಹಣ ನಭೋ ಮಂಡಲದಲ್ಲಿ ನಡೆಯುವ ಅತ್ಯಂತ ಕೌತುಕ ಕ್ಷಣ. ಸೂರ್ಯ, ಚಂದ್ರ ಮತ್ತು ಭೂಮಿ ಒಂದೇ ಸರಳ ರೇಖೆಯಲ್ಲಿ ಬಂದಾಗ ನಡೆಯುವ ಈ ಕೌತುಕವನ್ನು ನೋಡಲು ಜಗತ್ತಿನಲ್ಲಿ ಅನೇಕರು ಕಾಯುತ್ತಿರುತ್ತಾರೆ. 2021 ನೇ ವರ್ಷದ ಮೊದಲ ಸೂರ್ಯ ಗ್ರಹಣ ಜೂನ್ 10 ಗುರುವಾರ ಸಂಭವಿಸಲಿದೆ. ಆದರೆ ಭಾರತದ ಹೆಚ್ಚಿನ ಭಾಗಗಳಲ್ಲಿ ಸೂರ್ಯ ಗ್ರಹಣ ಗೋಚರವಾಗುವುದಿಲ್ಲ. ಲಡಾಖ್ ಮತ್ತು ಅರುಣಾಚಲ ಪ್ರದೇಶದಲ್ಲಿ ಮಾತ್ರ ಈ ಸೂರ್ಯಗ್ರಹಣ ಬರಿಗಣ್ಣಿಗೆ ಕಾಣಿಸಲಿದೆ.
ಸೂರ್ಯಸ್ತದ ಸಮಯದಲ್ಲಿ ಈ ಸೂರ್ಯಗ್ರಹಣ ಕಾಣಿಸಲಿದೆ. ಕೇವಲ ಕೆಲವೇ ನಿಮಿಷಗಳಷ್ಟು ಕಾಲ ಸೂರ್ಯಗ್ರಹಣ ಗೋಚರವಾಗಲಿದ್ದು ಸೂರ್ಯನ ಸುತ್ತ ಪ್ರಕಾಶಮಾನವಾದ ಬೆಳಕಿನ ವೃತ್ತವೊಂದು ಕಾಣಿಸಲಿದೆ ಎಂದು ಖಗೋಳ ಶಾಸ್ತ್ರಜ್ಞರು ತಿಳಿಸಿದ್ದಾರೆ.
ಭಾರತೀಯ ಕಾಲಮಾನ 11:42 ಗಂಟೆಯಿಂದ ಭಾಗಶಃ ಗ್ರಹಣ ಕಾಣಿಸಲಿದ್ದು ನಂತರ 3:30 ಗಂಟೆಯ ಹೊತ್ತಿಗೆ ಹೆಚ್ಚಿನ ಸೂರ್ಯಗ್ರಹಣ ಆರಂಭವಾಗಲಿದೆ. 3:30 ಗಂಟೆಯಿಂದ 4:52 ಗಂಟೆಯ ವರೆಗೆ ಖಂಡ ಸೂರ್ಯಗ್ರಹಣ ಮುಂದುವರೆಯಲಿದೆ. ಲಡಾಖ್ ಮತ್ತು ಅರುಣಾಚಲ ಪ್ರದೇಶದಲ್ಲಿ ಸಂಜೆ 6:41 ಗಂಟೆಯ ಹೊತ್ತಿಗೆ ಭಾಗಶಃ ಗ್ರಹಣ ಅಂತ್ಯವಾಗಲಿದೆ.
ಖಗೋಳ ಶಾಸ್ತ್ರದ ಸಂಶೋಧಕರು ಮತ್ತು ಆಸಕ್ತರಿಗೆ ಈ ಸೂರ್ಯಗ್ರಹಣ ಅತ್ಯಂತ ಉತ್ತಮ ಅವಕಾಶವಾಗಿರಲಿದೆ ಎಂದು ಎಂಪಿ ಬಿರ್ಲಾ ಖಗೋಳಶಾಸ್ತ್ರ ಕೇಂದ್ರದ ನಿರ್ದೇಶಕ ದೇವಿ ಪ್ರಸಾದ್ ದುರೈ ತಿಳಿಸಿದ್ದಾರೆ.
ಇದನ್ನೂಓದಿ : ಉತ್ತರಪ್ರದೇಶ : ಜಿತಿನ್ ಪ್ರಸಾದ ಬಿಜೆಪಿ ಸೇರ್ಪಡೆ ಮತ್ತು ಬಿಜೆಪಿಯ ರಾಜಕೀಯ ಲೆಕ್ಕಾಚಾರ


