ಎಳೆ ಮಕ್ಕಳಿಗೆ ಹೊಡೆಯುವುದು ಬೈಯ್ಯುವುದನ್ನು ಕಾನೂನಿನ ಮೂಲಕ ಭಾರತದಲ್ಲಿ ನಿಷೇಧಿಸಲಾಗಿದೆ. ಸ್ಕೂಲ್‌ಗಳಲ್ಲೂ ಈಗ ಮಕ್ಕಳಿಗೆ ಹೊಡೆಯುವಂತಿಲ್ಲ. ಹೆಚ್ಚಿನ ಪೋಷಕರು ತಮ್ಮ ಸ್ವಂತ ಮಕ್ಕಳನ್ನು ಅತ್ಯಂತ ಮುದ್ದಿನಿಂದಲೇ ಬೆಳೆಸುತ್ತಾರೆ. ಮಕ್ಕಳಿಗೆ ಹೊಡೆಯುವುದು ಬೈಯ್ಯುವುದಿರಲಿ ಸಣ್ಣ ನೋವಾದರೂ ಸಹಿಸುವುದಿಲ್ಲ. ಆದರೆ ಇಲ್ಲೊಂದು ಪೋಷಕರು ಧಾರುಣವಾಗಿ ತಮ್ಮ 3 ವರ್ಷದ ಮಗುವನ್ನು ಥಳಿಸಿರುವ ಘಟನೆ ಹೈದರಾಬಾದ್‌ನ ಜೀಡಿಮೆಟ್ಲಾ ಎಂಬಲ್ಲಿ ನಡೆದಿದೆ. 3 ವರ್ಷದ ಮಗು ಉಮೇಶ ಊಟ ತಿನ್ನುತ್ತಿಲ್ಲವೆಂಬ ಕಾರಣಕ್ಕೆ ಪೋಷಕರು ಮನಸೋ ಇಚ್ಛೆ ಹೊಡಿದ್ದಾರೆ. ಪೋಷಕರ ಥಳಿತಗಳ ಆಘಾತವನ್ನು ತಾಳಲಾರದೇ 3 ವರ್ಷದ ಮಗು ಮೃತಪಟ್ಟಿದೆ.
ಮಗುವಿನ ತಾಯಿ ಉದಯಾ ಮತ್ತು ಆಕೆಯ ಸಂಗಾತಿ ಸೇರಿ ಮಗುವಿನ ಮೇಲೆ ವೈರ್ ಕೇಬಲ್ ನಿಂದ ಹೊಡೆದಿದ್ದಾರೆ. ಮಗು ಪ್ರಜ್ಞೆ ತಪ್ಪಿದೆ. ನಂತರ ಮಗುವನ್ನು ಖಾಸಗಿ ಆಸ್ಪತ್ರೆಗೆ ಕೊಂಡೊಯ್ದರಾರದೂ ಆಸ್ಪತ್ರೆಗೆ ತಲುಪುವ ಮುನ್ನವೇ ಮುಗು ಮೃತಪಟ್ಟಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಹೈದರಾಬಾದ್‌ನ ಈ ಧಾರುಣ ಘಟನೆಗೆ ಸಂಬಂಧ ಪಟ್ಟಂತೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಮಹಿಳೆ ಮತ್ತು ಸಂಗಾತಿಗೆ ಆ ಮಗು ಇಷ್ಟವಿರಲಿಲ್ಲ. ತಮ್ಮ ಸಂಬಂಧಕ್ಕೆ ಮಗು ಹೊರೆಯಾಗಿದೆ ಎಂದು ಎಣಿಸಿ ಮಗುವನ್ನು ದೂರ ಮಾಡಲು ಪ್ರಯತ್ನಿಸಿದಂತೆ ಕಾಣುತ್ತದೆ. ಈ ಸಂಬಂಧ ಅಕ್ಕ ಪಕ್ಕದವರನ್ನು ವಿಚಾರಿಸಿದಾಗ ಮಗು ಕುರಿತು ಮಹಿಳೆ ಮತ್ತು ಆಕೆಯ ಸಂಗಾತಿ ಅತ್ಯಂತ ನಿರ್ಲಕ್ಷ ವಹಿಸುತ್ತಿದ್ದರು ಎಂಬುದು ತಿಳಿದು ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ : ಮರಳುಗಾಡಿನಲ್ಲಿ ಬಾಯಾರಿಕೆಗೆ ಬಲಿಯಾದ 5 ವರ್ಷದ ಬಾಲಕಿ